For Quick Alerts
ALLOW NOTIFICATIONS  
For Daily Alerts
 

Ashes 2023: 100ನೇ ಟೆಸ್ಟ್ ಪಂದ್ಯದಲ್ಲಿ ಅಗ್ಗಕ್ಕೆ ಔಟಾದ ಸ್ಟೀವ್ ಸ್ಮಿತ್: ಸಂಕಷ್ಟದಲ್ಲಿ ಆಸಿಸ್

ಆಶಸ್ ಸರಣಿಯ ಮೂರನೇ ಪಂದ್ಯ ಹೆಡಿಂಗ್ಲೆಯಲ್ಲಿ ನಡೆಯುತ್ತಿದ್ದು ಈ ಪಂದ್ಯದಲ್ಲಿ ಇಂಗ್ಲೆಂಡ್ ಮೊದಲ ಎರಡು ಸೆಶನ್‌ಗಳಲ್ಲಿ ಭರ್ಜರಿ ಮೇಲುಗೈ ಸಾಧಿಸಿದ್ದು ಪಂದ್ಯದಲ್ಲಿ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಅಗ್ರ ಕ್ರಮಾಂಕದ ಆಟಗಾರರು ಅಲ್ಪಮೊತ್ತಕ್ಕೆ ವಿಕೆಟ್ ಕಳೆದುಕೊಂಡಿದ್ದು ಆಸಿಸ್ ಪಡೆ ಸಂಕಷ್ಟದಲ್ಲಿ ಸಿಲುಕಿದೆ. ಇನ್ನು ಈ ಪಂದ್ಯದಲ್ಲಿ ನೂರನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ಸ್ಟೀವ್ ಸ್ಮಿತ್ ಕೂಡ ಮೊದಲ ಇನ್ನಿಂಗ್ಸ್‌ನಲ್ಲಿ ವೈಫಲ್ಯ ಕಂಡಿದ್ದಾರೆ.

ಸ್ಟೀವ್ ಸ್ಮಿತ್ ಆಸ್ಟ್ರೇಲಿಯಾ ತಂಡ 42 ರನ್‌ಗೆ 2 ವಿಕೆಟ್ ಕಳೆದುಕೊಂಡಿದ್ದಾಗ ಕ್ರೀಸ್‌ಗಿಳಿದು ಬ್ಯಾಟಿಂಗ್ ಆರಂಭಿಸಿದರು. ಮಾರ್ನಸ್ ಲ್ಯಾಬುಶೇನ್ ಜೊತೆಗೂಡಿ ಇನ್ನಿಂಗ್ಸ್ ಕಟ್ಟುವ ಜವಾಬ್ಧಾರಿ ಸ್ಟೀವ್ ಸ್ಮಿತ್ ಮೇಲಿತ್ತು. ಆದರೆ ಈ ಜೋಡಿ 19 ರನ್‌ಗಳ ಜೊತೆಯಾಟದ ಬಳಿಕ ಮಾರ್ನಸ್ ತಮ್ಮ ವಿಕೆಟ್ ಕಳೆದುಕೊಂಡರು.ನಂತ ಟ್ರೆವಿಸ್ ಹೆಡ್ ಜೊತೆಗೆ ಜೊತೆಯಾಟದ ಭರವಸೆ ಮೂಡಿಸಿದರಾದರೂ 31 ಎಸೆತಗಳಲ್ಲಿ 22 ರನ್‌ಗಳಿಸಿದ ವೇಳೆ ಸ್ಮಿತ್ ತಮ್ಮ ವಿಕೆಟ್ ಕಳೆದುಕೊಂಡಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾ 84 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದು ಸಂಕಷ್ಟಕ್ಕೆ ಸಿಲುಕಿತು.

Ashes 2023: Steve Smith failed in 100th test 1st innings: Australia in trouble

ಇನ್ನು ಈ ಪಂದ್ಯದಲ್ಲಿಯೂ ಡೇವಿಡ್ ವಾರ್ನರ್ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್‌ಗೆ ವಿಕೆಟ್ ಒಪ್ಪಿಸಿದ್ದಾರೆ. ಈ ಪಂದ್ಯದ ಮೊದಲ ಓವರ್‌ನ ಐದನೇ ಎಸೆತದಲ್ಲಿಯೇ ವಾರ್ನರ್ 4 ರನ್‌ಗಳಿಸಿದಾಗ ಬ್ರಾಡ್‌ಗೆ ವಿಕೆಟ್ ಒಪ್ಪಿಸಿದರು. ಇದು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಾರ್ನರ್ ಅವರ ವಿಕೆಟ್‌ಅನ್ನು 16ನೇ ಬಾರಿಗೆ ಬ್ರಾಡ್ ಪಡೆದಂತಾಗಿದೆ. ಇದಕ್ಕಿಂತ ಹೆಚ್ಚಿನ ಬಾರಿ ಓರ್ವ ಬ್ಯಾಟರ್‌ಅನ್ನು ಒಬ್ಬನೇ ಬೌಲರ್ ಔಟ್ ಮಾಡಿರುವ ಕೇವಲ ನಾಲ್ಕು ದೃಷ್ಟಾಂತ ಮಾತ್ರವೇ ಇದೆ.

ಇಂಗ್ಲೆಂಡ್ ಆಡುವ ಬಳಗ: ಝಾಕ್ ಕ್ರಾಲಿ, ಬೆನ್ ಡಕೆಟ್, ಹ್ಯಾರಿ ಬ್ರೂಕ್, ಜೋ ರೂಟ್, ಜಾನಿ ಬೈರ್‌ಸ್ಟೋವ್ (ವಿಕೆಟ್ ಕೀಪರ್), ಬೆನ್ ಸ್ಟೋಕ್ಸ್ (ನಾಯಕ), ಮೊಯಿನ್ ಅಲಿ, ಕ್ರಿಸ್ ವೋಕ್ಸ್, ಮಾರ್ಕ್ ವುಡ್, ಆಲ್ಲಿ ರಾಬಿನ್ಸನ್, ಸ್ಟುವರ್ಟ್ ಬ್ರಾಡ್
ಬೆಂಚ್: ಜೋಶ್ ಟಂಗ್, ಜೇಮ್ಸ್ ಆಂಡರ್ಸನ್, ಡೇನಿಯಲ್ ಲಾರೆನ್ಸ್, ಮ್ಯಾಥ್ಯೂ ಪಾಟ್ಸ್, ರೆಹಾನ್ ಅಹ್ಮದ್

ಆಸ್ಟ್ರೇಲಿಯಾ ಆಡುವ ಬಳಗ: ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ಟಾಡ್ ಮರ್ಫಿ, ಸ್ಕಾಟ್ ಬೋಲ್ಯಾಂಡ್
ಬೆಂಚ್: ಜೋಶ್ ಹ್ಯಾಜಲ್‌ವುಡ್, ಮಾರ್ಕಸ್ ಹ್ಯಾರಿಸ್, ಮ್ಯಾಟ್ ರೆನ್‌ಶಾ, ಜೋಶ್ ಇಂಗ್ಲಿಸ್, ಕ್ಯಾಮರೂನ್ ಗ್ರೀನ್

Story first published: Thursday, July 6, 2023, 18:52 [IST]
Other articles published on Jul 6, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+