ಆ್ಯಷಸ್: ಲಾರ್ಡ್ಸ್ ಟೆಸ್ಟ್‌ಗೂ ಮೊದಲೇ ಆತಿಥೇಯ ಇಂಗ್ಲೆಂಡ್‌ಗೆ ಭಾರಿ ಆಘಾತ

ಲಂಡನ್, ಆಗಸ್ಟ್ 06: ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಆ್ಯಷಸ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ 251 ರನ್‌ಗಳ ಹೀನಾಯ ಸೋಲುಂಡ ಆತಿಥೇಯ ಇಂಗ್ಲೆಂಡ್ ತಂಡಕ್ಕೆ ಇದೀಗ ಲಾರ್ಡ್ಸ್‌ನಲ್ಲಿ ಆಗಸ್ಟ್ 14ರಂದು ಆರಂಭವಾಗಲಿರುವ 2ನೇ ಟೆಸ್ಟ್ ಪಂದ್ಯಕ್ಕು ಮುನ್ನ ಭಾರಿ ಆಘಾತವೇ ಎದುರಾಗಿದೆ.
ಇಂಗ್ಲೆಂಡ್ ತಂಡದ ಸಾರ್ವಕಾಲಿಕ ಶ್ರೇಷ್ಠ ಬೌಲರ್ ಹಾಗೂ ಟೆಸ್ಟ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ಪರ ಅತ್ಯಧಿಕ ವಿಕೆಟ್ ಪಡೆದಿರುವ ಅನುಭವಿ ಜೇಮ್ಸ್ ಆಂಡರ್ಸನ್, ಆಸೀಸ್ ವಿರುದ್ಧದ ದ್ವಿತೀಯ ಟೆಸ್ಟ್‌ನಿಂದ ಹೊರಗುಳಿದಿದ್ದಾರೆ. ಬಲಗಾಲಿನ ಮೀನಖಂಡದ ಗಾಯದ ಸಮಸ್ಯೆಗೆ ತುತ್ತಾಗಿರುವ ಜಿಮ್ಮಿ ಲಾರ್ಡ್ಸ್ ಟೆಸ್ಟ್‌ಗೆ ಅಲಭ್ಯರಾಗಿದ್ದಾರೆ.
37 ವರ್ಷದ ವೇಗದ ಬೌಲರ್ ಆ್ಯಷಸ್ ಟೆಸ್ಟ್ ಸರಣಿಗೂ ಮುನ್ನ ಕಂಟಿ ಕ್ರಿಕೆಟ್‌ನಲ್ಲಿ ಲ್ಯಾಂಕಶೈರ್ ಪರ ಆಡುವಾಗ ಜುಲೈ ರಂದು ಮೊದಲ ಬಾರಿ ಮೀನಖಂಡದ ಗಾಯದ ಸಮಸ್ಯೆಗೆ ತುತ್ತಾಗಿದ್ದರು. ಬಳಿಕ ಆಸೀಸ್ ವಿರುದ್ಧದ ಮೊದಲ ಪಂದ್ಯದಲ್ಲಿ ತಮ್ಮ ನಾಲ್ಕನೇ ಓವರ್ ಬೌಲಿಂಗ್ ಮಾಡುವ ಸಂದರ್ಭದಲ್ಲಿ ಮರಳಿ ಗಾಯದ ಸಮಸ್ಯೆಗೆ ತುತ್ತಾದರು.
ಎಂಆರ್‌ಐ ಪರೀಕ್ಷೆಯಲ್ಲಿ ಆಂಡರ್ಸನ್ ಅವರ ಗಾಯದ ಸಮಸ್ಯೆಯ ತೀವ್ರತೆ ತಿಳಿದುಬಂದಿದೆ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. "ಗಾಯದ ಸಮಸ್ಯೆ ಕಾರಣ ಆಂಡರ್ಸನ್ ಇಂಗ್ಲೆಂಡ್ ಮತ್ತು ಲ್ಯಾಂಕಶೈರ್‌ನ ವೈದ್ಯಕೀಯ ತಂಡದ ಜೊತೆಗೆ ಪುನಶ್ಚೇತನದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದಾದ ಬಳಿಕ ಸರಣಿಯ ಮುಂದಿನ ಪಂದ್ಯಗಳಿಗೆ ಅವರು ಲಭ್ಯರಾಗಲಿದ್ದಾರೆಯೇ ಎಂಬುದನ್ನು ಪರೀಕ್ಷಿಸಲಾಗುವುದು," ಎಂದು ಇಸಿಬಿ ಹೇಳಿದೆ.
ಜೇಮ್ಸ್ ಆಂಡರ್ಸನ್ ಅವರ ಸ್ಥಾನದಲ್ಲಿ ಇಂಗ್ಲೆಂಡ್‌ನ ವಿಶ್ವಕಪ್ ಹೀರೊ ಜೋಫ್ರಾ ಆರ್ಚರ್ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವ ಸಾಧ್ಯತೆ ಹಚ್ಚಿದೆ. ಆರ್ಚರ್ ಕಳೆದ ತಿಂಗಳು ನಡೆದ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications