
ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವಿನ ಆ್ಯಶಸ್ ಸರಣಿಯ 3ನೇ ದಿನದಾಟ ನಡೆಯುತ್ತಿದೆ. ಎರಡನೇ ದಿನವೂ ಸಂಪೂರ್ಣ ಮೇಲುಗೈ ಸಾಧಿಸಿರುವ ಆಸ್ಟ್ರೇಲಿಯಾ ಮೂರನೇ ಮೊದಲ ಸೆಶನ್‌ನಲ್ಲಿ 425 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಬೃಹತ್ ಮೊತ್ತವನ್ನು ಗಳಿಸಿದೆ. ಆಸ್ಟ್ರೇಲಿಯಾ ಪರವಾಗಿ ಎರಡನೇ ದಿನದಾಟದಲ್ಲಿ ಭರ್ಜರಿ ಶತಕ ಗಳಿಸಿದ್ದ ಟ್ರೇವಿಸ್ ಹೆಡ್ ಇಂದು ಆಟವನ್ನು ಮುಂದುವರಿಸಿ 152 ರನ್‌ಗಳನ್ನು ಗಳಿಸಿ ಔಟಾಗಿದ್ದಾರೆ. ಸ್ಟಾರ್ಕ್ 35 ರನ್‌ಗಳಿಸಿ ಉತ್ತಮ ಸಾಥ್ ನಿಡಿದರು. ನಂತರ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ತಂಡ ಭೊಜನ ವಿರಾಮಕ್ಕೆ ಮುನ್ನ 23 ರನ್‌ಗಳಿಸಿದೆ.
ಎರಡನೇ ದಿನವೂ ಪಂದ್ಯದಲ್ಲಿ ಆಸ್ಟ್ರೇಲಿಯಾ ಉತ್ತಮ ಪ್ರದರ್ಶನ ನೀಡುವ ಮೂಲಕ ಪಂದ್ಯದಲ್ಲಿ ಬಿಗಿ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಆಸ್ಟ್ರೇಲಿಯಾ ಪರವಾಗಿ ಡೇವಿಡ್ ವಾರ್ನರ್ 94 ರನ್‌ಗಳಿಸಿ ಶತಕದಂಚಿನಲ್ಲಿ ಎಡವಿದರೆ ಟ್ರೇವಿಸ್ ಹೆಡ್ ಭರ್ಜರಿ ಶತಕ ಸಿಡಿಸಿ ಅಜೇಯವಾಗುಳಿದಿದ್ದಾರೆ. 196 ರನ್‌ಗಳ ಮುನ್ನಡೆಯೊಂದಿಗೆ ಆಸ್ಟ್ರೇಲಿಯಾ ಮೂರನೇ ದಿನಕ್ಕೆ ಆಟವನ್ನು ಕಾಯ್ದಿರಿಸಿದೆ.
Live ಸ್ಕೋರ್‌ಕಾರ್ಡ್ ಹೀಗಿದೆ
ಇಂಗ್ಲೆಂಡ್ ತಂಡವನ್ನು 147 ರನ್‌ಗಳಿಗೆ ಆಲೌಟ್ ಮಾಡಿದ ಆಸ್ಟ್ರೇಲಿಯಾ ಇಂದು ಬ್ಯಾಟಿಂಗ್‌ಗೆ ಇಳಿಯಿತು. ಆದರೆ ಮೊದಲ ವಿಕೆಟ್‌ಅನ್ನು ಆಸ್ಟ್ರೇಲಿಯಾ 10 ರನ್ ಆಗುವಷ್ಟರಲ್ಲಿ ಕಳೆದುಕೊಂಡಿತ್ತು. ಈ ಮೂಲಕ ಇಂಗ್ಲೆಂಡ್ ಬೌಲರ್‌ಗಳು ಆಸಿಸ್ ದಾಂಡಿಗರಿಗೆ ಕಂಠಕವಾಗುವ ಲಕ್ಷಣ ತೋರಿಸಿದರು. ಆದರೆ ಡೇವಿಡ್ ವಾರ್ನರ್ ಹಾಗೂ ಮರ್ನಾಸ್ ಲ್ಯಾಬುಶೈನ್ ಇಂಗ್ಲೆಂಡ್ ಬೌಲರ್‌ಗಳ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿದರು. ಈ ಇಬ್ಬರು ಆಟಗಾರರು 156 ರನ್‌ಗಳ ಜೊತೆಯಾಟವನ್ನಾಡುವ ಮೂಲಕ ಆಸಿಸ್‌ಗೆ ಮೇಲುಗೈ ಒದಗಿಸಿದರು.
ನಂತರ ಯುವ ಆಟಗಾರ ಮಾರ್ನಾಸ್ ಲ್ಯಾಬುಶೈನ್ 74 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು. ನಂತರ ಸ್ಟೀವ್ ಸ್ಮಿತ್ ಕೂಡ 12 ರನ್‌ಗಳಿಗೆ ಔಟಾದರು. ಈ ಹಂತದಲ್ಲಿ ಆಸ್ಟ್ರೇಲಿಯಾ ಸಣ್ಣ ಕುಸಿತವೊಂದನ್ನು ಕಂಡಿತು. 94 ರನ್‌ಗಳಿಸಿ ಶತಕದತ್ತ ತೆರಳುತ್ತಿದ್ದ ಆಸ್ಟ್ರೇಲಿಯಾ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ರಾಬಿನ್ಸನ್‌ಗೆ ಬಲಿಯಾಗುವ ಮೂಲಕ ನಿರಾಸೆ ಅನುಭವಿಸಿದರು. ನಂತರ ಕ್ಯಾಮರೂನ್ ಗ್ರೀನ್ ಮೊಸಲ ಎಸೆತಕ್ಕೆ ಔಟಾಗುವ ಮೂಲಕ ಶೂನ್ಯ ಸುತ್ತಿ ನಿರ್ಗಮಿಸಿದರು.
ಆದರೆ ಈ ಸಂದರ್ಭದಲ್ಲಿ ಮತ್ತೊಂದು ತುದಿಯಲ್ಲಿ ಬ್ಯಾಟಿಂಗ್‌ಗೆ ಇಳಿದಿದ್ದ ಟ್ರೇವಿಸ್ ಹೆಡ್ ಭರ್ಜರಿ ಪ್ರದರ್ಶನ ನೀಡಿದರು. ಸ್ಪೋಟಕವಾಗಿ ಆಡುತ್ತಾ ಸಾಗಿದ ಹೆಡ್ ಆಸ್ಟ್ರೇಲಿಯಾ ತಂಡಕ್ಕೆ ಮತ್ತೊಮ್ಮೆ ಚೇತರಿಕೆ ನೀಡಿದರು. ಕೇವಲ 85 ಎಸೆತಗಳನ್ನು ಎದುರಿಸಿ ಭರ್ಜರಿ ಶತಕ ಸಿಡಿಸಿ ಮಿಂಚಿದರು. ಇಂದು ಈ ಮೊತ್ತವನ್ನು 152 ರನ್‌ಗಳಿಗೆ ಏರಿಸಿದ್ದಾರೆ.
ಆಶಸ್ ಸರಣಿಯ ಮೊದಲ ಪಂದ್ಯದ ಮೂರನೇ ದಿನದಾಟ ಅಂತ್ಯವಾಗಿದ್ದು ಪಂದ್ಯ ರೋಚಕ ಘಟ್ಟದತ್ತ ಸಾಗಿದೆ. ಮೊದಲ ಎರಡು ದಿನಗಳ ಕಾಲ ಸಂಪೂರ್ಣ ಆಸ್ಟ್ರೇಲಿಯಾ ಬಿಗಿ ಹಿಡಿತ ಸಾಧಿಸಿದ್ದ ಪಂದ್ಯದಲ್ಲಿ ಮೂರನೇ ದಿನ ಇಂಗ್ಲೆಂಡ್ ಅದ್ಭುತ ಹೋರಾಟವನ್ನು ಪ್ರದರ್ಶಿಸಿದೆ. ಈ ಮೂಲಕ ಗಾಬಾ ಕ್ರೀಡಾಂಗಣದಲ್ಲಿ ಆಸಿಸ್ ಪಡೆಗೆ ಸುಲಭ ತುತ್ತಾಗುವುದಿಲ್ಲ ಎಂಬುದನ್ನು ಖಚಿತಪಡಿಸಿದೆ. ಅದರಲ್ಲೂ ಡೇಬಿಡ್ ಮಲನ್ ಹಾಗೂ ನಾಯಕ ಜೋ ರೂಟ್ ಮುರಿಯದ ಮೂರನೇ ವಿಕೆಟ್‌ಗೆ 159 ರನ್‌ಗಳ ಜೊತೆಯಾಟವನ್ನು ನೀಡಿದ್ದಾರೆ.
ಎರಡನೇ ಇನ್ನಿಂಗ್ಸ್‌ನ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ಪರವಾಗಿ ಆರಂಭಿಕರು ಮತ್ತೊಮ್ಮೆ ಕಳಪೆ ಪ್ರದರ್ಶನ ನೀಡಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಮೊದಲ ಎಸೆತಕ್ಕೇ ಔಟಾಗಿದ್ದ ರೋರಿ ಬರ್ನ್ಸ್ ಎರಡನೇ ಇನ್ನಿಂಗ್ಸ್‌ನಲ್ಲಿ 13 ರನ್‌ಗಳಿಸಿ ಪ್ಯಾಟ್ ಕಮ್ಮಿನ್ಸ್‌ಗೆ ವಿಕೆಟ್ ಒಪ್ಪಿಸಿದರು. ಇನ್ನೋರ್ವ ಆರಂಭಿಕ ಆಟಗಾರ ಹಸೀಬ್ ಹಮೀದ್ 27 ರನ್‌ಗಳ ಕೊಡುಗೆ ನೀಡಿದರು.
ಅದಾದ ಬಳಿಕ ಜೊತೆಯಾಗಿದ್ದು ಡೇವಿಡ್ ಮಲನ್ ಹಾಗೂ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್. ಇಬ್ಬರು ಕೂಡ ಆಸ್ಟ್ರೇಲುಯಾದ ಬೌಲರ್‌ಗಳಿಗೆ ಯಾವುದೇ ಅವಕಾಶವನ್ನು ನೀಡದೆ ಅದ್ಭುತವಾಗಿ ಬ್ಯಾಟಿಂಗ್ ನಡೆಸುತ್ತಾ ಮುನ್ನುಗ್ಗಿದ್ದಾರೆ. 177 ಎಸೆತಗಳನ್ನು ಎದುರಿಸಿರುವ ಡೇವಿಡ್ ಮಲನ್ 80 ರನ್‌ಗಳಿಸಿ ಅಜೇವಾಗಿದ್ದರೆ ನಾಯಕ ಜೋ ರೂಟ್ 158 ಎಸೆತಗಳನ್ನು ಎದುರಿಸಿ 86 ರನ್‌ಗಳಿಸಿ ನಾಲ್ಕನೇ ದಿನಕ್ಕೆ ಕ್ರೀಸ್ ಕಾಯ್ದಿರಿಸಿದ್ದಾರೆ. ಇನ್ನು ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ ಇನ್ನು ಕೂಡ 58 ರನ್‌ಗಳಿಂದ ಹಿನ್ನಡೆಯಲ್ಲಿದೆ. ಹೀಗಾಗಿ ಈ ಪ್ರದರ್ಶನವನ್ನು ನಾಲ್ಕನೇ ದಿನವೂ ಮುಂದಿವರಿಸಿದರೆ ಮಾತ್ರವೇ ಇಂಗ್ಲೆಂಡ್‌ಗೆ ಈ ಪಂದ್ಯದಲ್ಲಿ ಅವಕಾಶವಿರಲಿದೆ. ಹೀಗಾಗಿ ನಾಲ್ಕನೇ ದಿನದಾಟ ಈಗ ಸಾಕಷ್ಟು ಕುತೂಹಲ ಮೂಡಿಸಿದೆ.
ಆಸ್ಟ್ರೇಲಿಯಾ ಆಡುವ ಬಳಗ: ಡೇವಿಡ್ ವಾರ್ನರ್, ಮಾರ್ಕಸ್ ಹ್ಯಾರಿಸ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಜೋಶ್ ಹ್ಯಾಜಲ್‌ವುಡ್
ಬೆಂಚ್: ಉಸ್ಮಾನ್ ಖವಾಜಾ, ಮೈಕೆಲ್ ನೆಸರ್, ಝೈ ರಿಚರ್ಡ್ಸನ್, ಮಿಚೆಲ್ ಸ್ವೆಪ್ಸನ್
ಇಂಗ್ಲೆಂಡ್ ಆಡುವ ಬಳಗ: ರೋರಿ ಬರ್ನ್ಸ್, ಹಸೀಬ್ ಹಮೀದ್, ಡೇವಿಡ್ ಮಲನ್, ಜೋ ರೂಟ್ (ನಾಯಕ), ಬೆನ್ ಸ್ಟೋಕ್ಸ್, ಆಲಿ ಪೋಪ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಕ್ರಿಸ್ ವೋಕ್ಸ್, ಆಲಿ ರಾಬಿನ್ಸನ್, ಮಾರ್ಕ್ ವುಡ್, ಜ್ಯಾಕ್ ಲೀಚ್
ಬೆಂಚ್: ಜಾನಿ ಬೈರ್ಸ್ಟೋವ್, ಕ್ರೇಗ್ ಓವರ್ಟನ್, ಡೇನಿಯಲ್ ಲಾರೆನ್ಸ್, ಡೊಮಿನಿಕ್ ಬೆಸ್, ಝಾಕ್ ಕ್ರಾಲಿ, ಸ್ಟುವರ್ಟ್ ಬ್ರಾಡ್