ಆಶಸ್ ಸರಣಿ, 2ನೇ ಟೆಸ್ಟ್: ಮೊದಲ ದಿನದಾಟದಲ್ಲಿ ಮೇಲುಗೈ ಸಾಧಿಸಿದ ಆತಿಥೇಯರು

ಆಶಸ್ ಟೆಸ್ಟ್ ಸರಣಿಯ ಎರಡನೇ ಪಂದ್ಯದ ಮೊದಲ ದಿನದಾಟದಲ್ಲಿ ಆಸ್ಟ್ರೇಲಿಯಾ ತಂಡ ಸಂಪೂರ್ಣ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಅಡಿಲೇಡ್‌ನ ಅಡಿಲೇಡ್ ಓವಲ್‌ನಲ್ಲಿ ನಡೆಯುತ್ತಿರುವ ಈ ಡೇ-ನೈಟ್ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಮೊದಲ ದಿನದಾಟದಲ್ಲಿ ಇಂಗ್ಲೆಂಡ್ ಬೌಲರ್‌ಗಳನ್ನು ದಿನವಿಡೀ ದಂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದರಲ್ಲೂ ಡೇವಿಡ್ ವಾರ್ನರ್ ಹಾಗೂ ಮಾರ್ನಾಸ್ ಲ್ಯಾಬುಶೈನ್ ಜೋಡಿ ಇಂಗ್ಲೆಂಡ್ ಬೌಲರ್‌ಗಳ ದಾಳಿಯನ್ನು ಸಮರ್ಥವಾಗಿ ಎದುರಸಿದರು.
ಕೊರೊನಾವೈರಸ್ ಸೋಂಕಿತನೊಂದಿಗೆ ಸಂಪರ್ಕಕ್ಕೆ ಬಂದಿದ್ದರು ಎಂಬ ಕಾರಣಕ್ಕೆ ಆಸಿಸ್ ನಾಯಕ ಪ್ಯಾಟ್ ಕಮ್ಮಿನ್ಸ್ ಅವರು ಕೊನೇ ಕ್ಷಣದಲ್ಲಿ ಪಂದ್ಯದಿಂದ ಹೊರಗುಳಿಯುವಂತಾಯಿತು. ಹೀಗಾಗಿ ಉಪ ನಾಯಕ ಸ್ಟೀವ್ ಸ್ಮಿತ್ ತಂಡವನ್ನು ಮುನ್ನಡೆಸುವ ಜವಾಬ್ಧಾರಿ ಹೊತ್ತಿದ್ದಾರೆ. ಆದರೆ ಆಸ್ಟ್ರೇಲಿಯಾ ತಂಡ ಕೇವಲ ನಾಲ್ಕು ರನ್‌ಗಳಿಸಿದ್ದಾಗ ಮೊದಲ ವಿಕೆಟ್ ಕಳೆದುಕೊಳ್ಳುವ ಮೂಲಕ ಆರಂಭಿಕ ಆಘಾತವನ್ನು ಅನುಭವಿಸಿತು. ಈ ಮೂಲಕ ಇಂಗ್ಲೆಂಡ್ ಬೌಲರ್‌ಗಳು ಮೇಲುಗೈ ಸಾಧಿಸುವ ಮುನ್ಸೂಚನೆ ನೀಡಿದರು. ಆದರೆ ಬಳಿಕ ಆಸಿಸ್ ದಾಂಡಿಗರು ಎಚ್ಚರಿಕೆಯಿಂದ ಇನ್ನಿಂಗ್ಸ್ ಬೆಳೆಸಿದರು.
Live ಸ್ಕೋರ್‌ಪಟ್ಟಿ ಹೀಗಿದೆ:
ಅದ್ಭುತ ಇನ್ನಿಂಗ್ಸ್ ಕಟ್ಟಿದ ವಾರ್ನರ್ ಲ್ಯಾಬುಶೈನ್: ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಹಾಗೂ ಯುವ ಆಟಗಾರ ಮಾರ್ನಾಸ್ ಲ್ಯಾಬುಶೈನ್ ಈ ಪಂದ್ಯದಲ್ಲಿ ಇಂಗ್ಲೆಂಡ್ ಬೌಲರ್‌ಗಳ ವಿರುದ್ಧ ಅದ್ಭುತವಾದ ಪ್ರದರ್ಶನ ನೀಡಿದರು. ಎಲ್ಲಿಯೂ ಎಡವದಂತೆ ಆಡಿದ ಈ ಜೋಡಿ ಎರಡನೇ ವಿಕೆಟ್‌ಗೆ ಭರ್ಜರಿ 172 ರನ್‌ಗಳ ಕೊಡುಗೆಯನ್ನು ನೀಡಿದರು. ಈ ಹಂತದಲ್ಲಿ 95 ರನ್‌ಗಳಿಸಿ ಶತಕದ ಅಂಚಿನಲ್ಲಿ ಎಡವಿದರು ಡೇವಿಡ್ ವಾರ್ನರ್. ಬೆನ್ ಸ್ಟೋಕ್ಸ್ ಎಸೆದ ಎಸೆತದಲ್ಲಿ ಬ್ರಾಡ್‌ಗೆ ಕ್ಯಾಚ್ ನೀಡಿ ಫೆವಿಲಿಯನ್ ಸೇರಿಕೊಂಡರು ವಾರ್ನರ್. ಈ ಇನ್ನಿಂಗ್ಸ್‌ನಲ್ಲಿ ವಾರ್ನರ್ 167 ಎಸೆತಗಳನ್ನು ಎದುರಿಸಿದ್ದಾರೆ.
ಇನ್ನು ವಾರ್ನರ್ ವಿಕೆಟ್ ಕಳೆದುಕೊಂಡ ನಂತರ ಮಾರ್ನಾಸ್ ಲ್ಯಾಬುಶೇನ್ ಹಾಗೂ ಸ್ಟೀವ್ ಸ್ಮಿತ್ ಜೋಡಿ ಮೊದಲ ದಿನ ಆಸ್ಟ್ರೇಲಿಯಾ ಮತ್ತೊಂದು ವಿಕೆಟ್ ಕಲೆದುಕೊಳ್ಳದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾದರು. ಇಬ್ಬರು ಕೂಡ ಅತ್ಯಂತ ನಿಧಾನಗತಿಯಲ್ಲಿ ಬ್ಯಾಟಿಂಗ್ ನಡೆಸಿದ್ದು ಎರಡನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಇನ್ನು ದಿನದಾಟ ಅಂತ್ಯವಾಗುವ ವೇಳೆ ಮಾರ್ನಾಸ್ ಲ್ಯಾಬುಶೈನ್ ಅಜೇಯವಾಗಿ ಉಳಿದಿದ್ದು ಬರೊಬ್ಬರಿ 275 ಎಸೆತಗಳಲ್ಲಿ 95 ರನ್‌ಗಳಿಸಿ ಶತಕದ ಸನಿಹದಲ್ಲಿದ್ದಾರೆ. ಇನ್ನು ಸ್ಟೀವ್ ಸ್ಮಿತ್ 71 ಎಸೆತಗಳಲ್ಲಿ 18 ರನ್‌ಗಳಿಸಿ ಎರಡನೇ ದಿನದಾಟಕ್ಕೆ ಕ್ರೀಸ್ ಕಾಯ್ದಿರಿಸಿದ್ದಾರೆ.
ಇನ್ನು ಆಸ್ಟ್ರೇಲಿಯಾ ಮೊದಲ ದಿನದಾಟದಲ್ಲಿ ಕೇವಲ ಎರಡು ವಿಕೆಟ್‌ಗಳನ್ನು ಮಾತ್ರವೇ ಕಳೆದುಕೊಂಡಿದ್ದು 221 ರನ್ ಗಳಿಸಿದೆ. ಇನ್ನು ಇಂಗ್ಲೆಂಡ್ ತಂಡದ ಪರವಾಗಿ ಕ್ರಿಸ್ ವೋಕ್ಸ್ ಹಾಗೂ ಬೆನ್ ಸ್ಟೋಕ್ಸ್ ,ಆತ್ರ ತಲಾ ಒಂದೊಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಜೇಮ್ಸ್ ಆಂಡರ್ಸನ್ ಹಾಗೂ ಸ್ಟುವರ್ಟ್ ಬ್ರಾಡ್ ಜೋಡಿ ಈ ಪಂದ್ಯದಲ್ಲಿ ಜೊತೆಯಾಗಿ ಕಣಕ್ಕಿಳಿದಿದ್ದರೂ ವಿಕೆಟ್ ಪಡೆಯುವಲ್ಲಿ ವಿಫಲವಾಗಿದ್ದಾರೆ. ಎರಡನೇ ದಿನ ಪ್ರವಾಸಿ ಇಂಗ್ಲೆಂಡ್ ಯಾವ ರೀತಿಯ ಪ್ರದರ್ಶನ ನೀಡಲಿದೆ ಎಂಬುದು ಕುತೂಹಲ ಮೂಡಿಸಿದೆ.
ಆಸ್ಟ್ರೇಲಿಯಾ ಆಡುವ ಬಳಗ: ಡೇವಿಡ್ ವಾರ್ನರ್, ಮಾರ್ಕಸ್ ಹ್ಯಾರಿಸ್, ಮಾರ್ನಸ್ ಲ್ಯಾಬುಶೈನ್, ಸ್ಟೀವನ್ ಸ್ಮಿತ್ (ನಾಯಕ), ಟ್ರಾವಿಸ್ ಹೆಡ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಮೈಕೆಲ್ ನೆಸರ್, ಮಿಚೆಲ್ ಸ್ಟಾರ್ಕ್, ಝೈ ರಿಚರ್ಡ್ಸನ್, ನಾಥನ್ ಲಿಯಾನ್
ಇಂಗ್ಲೆಂಡ್ ಆಡುವ ಬಳಗ: ರೋರಿ ಬರ್ನ್ಸ್, ಹಸೀಬ್ ಹಮೀದ್, ಡೇವಿಡ್ ಮಲನ್, ಜೋ ರೂಟ್ (ನಾಯಕ), ಬೆನ್ ಸ್ಟೋಕ್ಸ್, ಆಲಿ ಪೋಪ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಕ್ರಿಸ್ ವೋಕ್ಸ್, ಆಲಿ ರಾಬಿನ್ಸನ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆಂಡರ್ಸನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications