ಆಶಸ್ ಸರಣಿ, ಇಂಗ್ಲೆಂಡ್ vs ಆಸ್ಟ್ರೇಲಿಯಾ 2ನೇ ಪಂದ್ಯ: ದಿನಾಂಕ, ಸಮಯ, ಪಿಚ್ ರಿಪೋರ್ಟ್

ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವಿನ ಆಶಸ್ ಟೆಸ್ಟ್ ಸರಣಿಯ ಎರಡನೇ ಪಂದ್ಯಕ್ಕೆ ಎರಡು ತಂಡಗಳು ಕೂಡ ಸಜ್ಜಾಗಿದೆ. ಅಡೊಲೇಡ್‌ನ ಅಡಿಲೇಡ್ ಓವಲ್‌ನಲ್ಲಿ ನಡೆಯಲಿರುವ ಈ ಪಂದ್ಯ ಅಹರ್ನಿಶಿಯಾಗಿ ನಡೆಯಲಿದ್ದು ಡೇ ನೈಟ್ ಪಂದ್ಯದಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿರುವ ದಾಖಲೆ ಹೊಂದಿರುವ ಆಸ್ಟ್ರೇಲಿಯಾ ಈ ಪಂದ್ಯದಲ್ಲಿಯೂ ಗೆಲ್ಲುವ ಸಂಪೂರ್ಣ ಆತ್ಮ ವಿಶ್ವಾಸದಲ್ಲಿದೆ.
ಈಗಾಗಲೇ ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು 9 ವಿಕೆಟ್‌ಗಳ ಅಂತರದಿಂದ ಸೋಲು ಕಂಡಿರುವ ಇಂಗ್ಲೆಂಡ್ ತಂಡ ಸರಣಿಯಲ್ಲಿ ಹಿನ್ನಡೆಯಲ್ಲಿದೆ. ಆದರೆ ಅಡಿಲೇಡ್‌ನಲ್ಲಿ ನಡೆಯಲಿರುವ ಈ ಟೆಸ್ಟ್‌ನಲ್ಲಿ ಮೇಲುಗೈ ಸಾಧಿಸಲೇಬೇಕೆಂಬ ಹಠತೊಟ್ಟಿದೆ. ಆದರೆ ಈವರೆಗೆ ಆಡಿದ 8 ಅಹರ್ನಿಶಿ ಟೆಸ್ಟ್ ಪಂದ್ಯಗಳಲ್ಲಿ 8ರಲ್ಲಿಯೂ ಗೆಲುವು ಸಾಧಿಸಿರುವ ಆಸ್ಟ್ರೇಲಿಯಾ ತಂಡವನ್ನು ಹಿಮ್ಮೆಟ್ಟಿಸುವುದು ಇಂಗ್ಲಂಡ್ ಪಾಲಿಗೆ ನಿಜಕ್ಕೂ ದೊಡ್ಡ ಸವಾಲಾಗಿದೆ. ಅಲ್ಲದೆ ಇಂಗ್ಲೆಂಡ್ ಆಡಿದ ನಾಲ್ಕು ಡೇನೈಟ್ ಟೆಸ್ಟ್ ಪಂದ್ಯಗಳ ಪೈಕಿ ಮೂರರಲ್ಲಿ ಸೋಲು ಅನುಭವಿಸಿದೆ.
ಪ್ಲೇಯಿಂಗ್ XI ಘೋಷಿಸಿದ ಆಸ್ಟ್ರೇಲಿಯಾ: ಇನ್ನು ಆಡಿಲೇಡ್ ಟೆಸ್ಟ್ ಪಂದ್ಯದ ಆರಂಭಕ್ಕೂ ಮುನ್ನ ಆಸ್ಟ್ರೇಲಿಯಾ ತಂಡದ ಆಡುವ ಬಳಗವನ್ನು ಘೋಷಣೆ ಮಾಡಲಾಗಿದೆ. ಅಡಿಲೇಡ್ ಪಂದ್ಯದಲ್ಲಿ ಆಡುವ ಆಟಗಾರರ ಬಳಗ ಹೀಗಿದೆ: ಮಾರ್ಕಸ್ ಹ್ಯಾರಿಸ್, ಡೇವಿಡ್ ವಾರ್ನರ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮ್ಮಿನ್ಸ್ (ನಾಯಕ), ಝೈ ರಿಚರ್ಡ್ಸನ್, ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್ 11 ಆಟಗಾರರನ್ನು ಆಸ್ಟ್ರೇಲಿಯಾ ಆಡುತ್ತಿದೆ.
ಇಂಗ್ಲೆಂಡ್ ತಂಡದ ಅಂತಿಮ 12 ಆಟಗಾರರ ಬಳಗ ಹೀಗಿದೆ: ಜೋ ರೂಟ್ (ನಾಯಕ), ಜೇಮ್ಸ್ ಆಂಡರ್ಸನ್, ಸ್ಟುವರ್ಟ್ ಬ್ರಾಡ್, ರೋರಿ ಬರ್ನ್ಸ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಹಸೀಬ್ ಹಮೀದ್, ಜ್ಯಾಕ್ ಲೀಚ್, ಡೇವಿಡ್ ಮಲಾನ್, ಆಲಿ ಪೋಪ್, ಒಲ್ಲಿ ರಾಬಿನ್ಸನ್, ಬೆನ್ ಸ್ಟೋಕ್ಸ್, ಕ್ರಿಸ್ ವೋಕ್ಸ್.
ಅಡಿಲೇಡ್ ಪಿಚ್ ರಿಪೋರ್ಟ್: ಅಡಿಲೇಡ್ ಪಿಚ್‌ನಲ್ಲಿ ಮೊದಲ ಮೂರು ದಿನಗಳ ಕಾಲ ಬ್ಯಾಟಿಂಗ್‌ಗೆ ಉತ್ತಮವಾಗಿರಲಿದೆ. ಈ ಅವಧಿಯಲ್ಲಿ ಪಿಚ್ ಹೆಚ್ಚು ಫ್ಲ್ಯಾಟ್ ಆಗಿರುವುದು ಬ್ಯಾಟರ್‌ಗಳಿಗೆ ನೆರವಾಗಬಹುದು. ಜೊತೆಗೆ ಸ್ಪಿನ್ನರ್‌ಗಳಿಗೆ ಕೂಡ ಸ್ವಲ್ಪ ನೆರವನ್ನು ನೀಡುವ ಸಾಧ್ಯತೆಯಿದೆ. ಇನ್ನು ಅಡಿಲೇಡ್ ಮೈದಾನದ ಅಂಕಿಅಂಶವನ್ನು ನೋಡಿದರೆ ಇಲ್ಲಿ ಆಡಿದ 79 ಟೆಸ್ಟ್ ಪಂದ್ಯಗಳ ಪೈಕಿ ಮೊದಲು ಬ್ಯಾಟಿಂಗ್ ಮಾಡಿದ ತಂಡಗಳು 38 ಬಾರಿ ಗೆದ್ದಿದ್ದರೆ ನಂತರ ಬ್ಯಾಟಿಂಗ್ ಮಾಡಿದ ನಂತರ 22 ಬಾರಿ ಗೆಲುವು ಸಾಧಿಸಿದೆ. ಇನ್ನು ಈ ಮೈದಾನದ ಅತ್ಯಧಿಕ ಮೊತ್ತ 674 ಆಗಿದ್ದರೆ, ಕನಿಷ್ಠ ಮೊತ್ತ 82ಕ್ಕೆ ಆಲ್‌ಔಟ್ ಆಗಿದೆ. ಸರಾಸರಿ ಸ್ಕೋರ್‌ಗಳು ಕ್ರಮವಾಗಿ 1ನೇ, 2ನೇ, 3ನೇ ಮತ್ತು 4ನೇ ಇನ್ನಿಂಗ್ಸ್‌ನಲ್ಲಿ 385, 354, 278, 213 ರನ್‌ಗಳಾಗಿದೆ.
ಹವಾಮಾನ ವರದಿ: ಹವಾಮಾನ ವರದಿಯ ಪ್ರಕಾರ ಅಡಿಲೇಡ್ ಟೆಸ್ಟ್ ಪಂದ್ಯ ನಡೆಯಲಿರುವ ಐದು ದಿನಗಳ ಕಾಲ ಸ್ಪಷ್ಟವಾದ ಹವಾಮಾನ ಇರುತ್ತದೆ ಎಂದು ಮುನ್ಸೂಚನೆಗಳಿಂದ ಸ್ಪಷ್ಟವಾಗುತ್ತದೆ. ಹೆಚ್ಚು ಬಿಸಿಲಿನಿಂದ ಕೂಡಿರಲಿದ್ದು 24ರಿಂದ 34 ಡಿಗ್ರಿ ಸೆಲ್ಸಿಯಸ್‌ನಷ್ಟು ತಾಪಮಾನ ಇರಲಿದೆ.
ಆಸ್ಟ್ರೇಲಿಯಾ vs ಇಂಗ್ಲೆಂಡ್ 2ನೇ ಟೆಸ್ಟ್ ಪಂದ್ಯದ ವಿವರ:
ದಿನಾಂಕ: ಡಿಸೆಂಬರ್ 16 ಗುರುವಾರದಿಂದ ಡಿಸೆಂಬರ್ 20 ಸೋಮವಾರದವರೆಗೆ
ಸಮಯ: ಭಾರತೀಯ ಕಾಲಮಾನ ಬೆಳಿಗ್ಗೆ 9:30ಕ್ಕೆ
ಸ್ಥಳ: ಅಡಿಲೇಡ್ ಓವಲ್, ಅಡಿಲೇಡ್
ಭಾರತದಲ್ಲಿ ನೇರಪ್ರಸಾರ: ಸೋನಿ ಸಿಕ್ಸ್ ಮತ್ತು ಸೋನಿ ಸಿಕ್ಸ್ ಎಚ್‌ಡಿ
ಲೈವ್ ಸ್ಟ್ರೀಮಿಂಗ್: ಸೋನಿ ಲಿವ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications