For Quick Alerts
ALLOW NOTIFICATIONS  
For Daily Alerts
 

IPL 2025: ಗುಜರಾತ್ ಟೈಟನ್ಸ್‌ ಕೋಚ್‌ ಆಗಿ ಆಶೀಶ್‌ ನೆಹ್ರಾ ಮುಂದುವರೆಯುತ್ತಾರಾ?

ಟೀಮ್ ಇಂಡಿಯಾದ ಮಾಜಿ ಆಟಗಾರ ಆಶೀಶ್ ನೆಹ್ರಾ, ಸದ್ಯ ಕೋಚಿಂಗ್ ಕೆಲಸವನ್ನು ಮಾಡುತ್ತಿದ್ದಾರೆ. ಐಪಿಎಲ್‌ಗೆ 10 ತಂಡಗಳು ಸೇರ್ಪಡೆ ಆದಗ, ಆಶೀಶ್‌ ಹೊಸ ತಂಡದ ಕೋಚ್ ಆದರು. ಟೀಮ್ ಇಂಡಿಯಾದ ಮಾಜಿ ಆಟಗಾರ ಆಶೀಶ್ ನೆಹ್ರಾ ಅವರಿಗೆ ಗುಜರಾತ್ ಟೈಟನ್ಸ್‌ ಕೋಚ್ ಸ್ಥಾನ ನೀಡಿತು. ತಾವು ಪ್ರತಿನಿಧಿಸಿದ ಮೊದಲ ಆವೃತ್ತಿಯಲ್ಲೇ ಗುಜರಾತ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಅಲ್ಲದೆ ಚಾಂಪಿಯನ್‌ ತಂಡಗಳ ಸಾಲಿಗೆ ಮೊದಲ ವರ್ಷದಲ್ಲೇ ಸೇರಿತು.

ಮೊದಲ ಆವೃತ್ತಿಯಲ್ಲಿ ಅಮೋಘ ಪ್ರದರ್ಶನವನ್ನು ನೀಡಿದ ನಂತರ ಫ್ರಾಂಚೈಸಿ ಆಶೀಶ್ ನೆಹ್ರಾ ಅವರ ಮೇಲೆ ನಂಬಿಕೆ ಇಟ್ಟಿತು. ಅಲ್ಲದೆ ಮುಖ್ಯ ಕೋಚ್ ಅವರ ಅಧಿಕಾರ ಅವಧಿಯನ್ನು ಮೂರು ವರ್ಷಗಳಿಗೆ ವಿಸ್ತರಿಸಿತು. ಅಂದರೆ ಅವರ ಅಧಿಕಾರ ಅವಧಿ 2025ರ ಆವೃತ್ತಿಯ ವರೆಗೂ ಇರುತ್ತದೆ. ಇನ್ನು ಇತ್ತೀಚಿನ ದಿನಗಳಲ್ಲಿ ಕೆಲವು ವರದಿಗಳು ಬಂದವು. ಆ ವರದಿಗಳ ಅನುಸಾರ ಆಶೀಶ್ ನೆಹ್ರಾ ಅವರು ಗುಜರಾತ್ ಟೈಟನ್ಸ್ ಬಿಡುತ್ತಾರೆ ಎಂಬ ಸುದ್ದಿಗಳು ಹರಿದಾಡಿದವು. ಇದಕ್ಕೆ ಮುಖ್ಯ ಕಾರಣ 2024ರ ಐಪಿಎಲ್‌ನಲ್ಲಿ ಗುಜರಾತ್ ಟೈಟನ್ಸ್‌ ಪ್ರದರ್ಶನ ಸ್ಥಿರವಾಗಿರಲಿಲ್ಲ. ಅಲ್ಲದೆ ತಂಡ ಪ್ಲೇ ಆಫ್‌ಗೂ ಕ್ವಾಲಿಫೈ ಆಗಿರಲಿಲ್ಲ.

Ashish Nehra Set to Continue as Gujarat Titans Head Coach Ending Speculation

ಒಪ್ಪಂದ ಮುಗಿಸಲಿದ್ದಾರೆ ನೆಹ್ರಾ

ಐಪಿಎಲ್‌ 2024ರ ಹರಾಜು ಆರಂಭಕ್ಕೂ ಮುನ್ನವೆ ತಂಡಕ್ಕೆ ಪೆಟ್ಟು ಬಿದ್ದಿತು. ತಂಡದ ನಾಯಕ ಹಾರ್ದಿಕ್ ಪಾಂಡ್ಯರನ್ನು ಮುಂಬೈ ಇಂಡಿಯನ್ಸ್ ಟ್ರೇಡ್ ಮಾಡಿತ್ತು. ಇದಾದ ಬಳಿಕ ತಂಡ ಯುವ ಆಟಗಾರ ಶುಭಮನ್‌ ಗಿಲ್‌ ಅವರಿಗೆ ನಾಯಕತ್ವವನ್ನು ನೀಡಿತು. ಇವರ ಮುಂದಾಳತ್ವದಲ್ಲಿ ತಂಡ ಸ್ಥಿರ ಪ್ರದರ್ಶನವನ್ನು ನೀಡುವಲ್ಲಿ ವಿಫಲವಾಯಿತು.

ಗ್ಯಾರಿ ಕರ್ಸ್ಟನ್ ಔಟ್

ಆಶೀಶ್ ನೆಹ್ರಾ ಅವರು ಗುಜರಾತ್ ಟೈಟನ್ಸ್ ತಂಡವನ್ನು ತೊರೆಯುತ್ತಾರೆ ಎಂಬ ಸುದ್ದಿಗಳು ಇದ್ದವು. ಆದರೆ ಈಗ ಕ್ರಿಕ್‌ ಬಜ್ ವರದಿಯಂತೆ ನೆಹ್ರಾ ತಮ್ಮ ಒಪ್ಪಂದವನ್ನು ಪೂರ್ಣಗೊಳಿಸುತ್ತಾರೆ ಎಂದು ತಿಳಿದು ಬಂದಿದೆ. ಇನ್ನು ಇವರೊಂದಿಗೆ ಕೋಚಿಂಗ್ ಸಿಬ್ಬಂದಿಗಳು ಸಹ ತಮ್ಮ ಒಪ್ಪಂದವನ್ನು ಪೂರ್ಣಗೊಳಿಸುತ್ತಾರೆ ಎಂದು ತಿಳಿದು ಬಂದಿದೆ. ಇನ್ನು ನಿರ್ದೇಶಕ ಹುದ್ದೆಯಲ್ಲಿದ್ದ ವಿಕ್ರಮ್ ಸಾಳುಂಕೆ ಈ ಸ್ಥಾನದಲ್ಲೇ ಮುಂದುವರೆಯಲಿದ್ದಾರೆ ಎಂದು ವರದಿ ಮಾಡಲಾಗಿದೆ. ಗ್ಯಾರಿ ಕರ್ಸ್ಟನ್ ಅವರು ಕಳೆದ ಋತುವಿನ ನಂತರ ತಂಡವನ್ನು ತೊರೆದ ಕಾರಣ ಅವರ ಸ್ಥಾನಕ್ಕಾಗಿ ಹುಡುಕಾಟ ನಡೆದಿದೆ.

Ashish Nehra Set to Continue as Gujarat Titans Head Coach Ending Speculation

ಇನ್ನು ಐಪಿಎಲ್‌ 2025 ಈಗಿನಿಂದಲೇ ಕುತೂಹಲ ಹೆಚ್ಚಿಸಿದೆ. ಹಲವು ಫ್ರಾಂಚೈಸಿಗಳ ಕೋಚಿಂಗ್ ಸ್ಟಾಫ್‌ಗಳಲ್ಲಿ ಚೇಂಜ್ ಕಂಡು ಬಂದಿದೆ. ಎಲ್ಲ ಮಾಲೀಕರು ಬಿಸಿಸಿಐ ನೀಡುವ ರಿಟೇನ್ಶನ್ ಪಾಲಿಸಿಗಾಗಿ ಕಾಯುತ್ತಿದ್ದಾರೆ. ವರದಿಯ ಪ್ರಕಾರ, ಬಿಸಿಸಿಐ ಗರಿಷ್ಠ 5 ಆಟಗಾರರನ್ನು ಉಳಿಸಿಕೊಳ್ಳಲು ಅನುಮತಿ ನೀಡಬಹುದು ಎಂದು ಹೇಳಲಾಗುತ್ತಿದೆ. ಅಲ್ಲದೆ ಈ ಬಾರಿ ಹರಾಜಿನಲ್ಲಿ ಯಾವುದೇ ಆರ್‌ಟಿಎಂ ರೈಟ್‌ ಟು ಮ್ಯಾಚ್ ಕಾರ್ಡ್‌ ಆಕ್ಷನ್ ಇರುವುದಿಲ್ಲ ಎಂಬ ಮಾಹಿತಿ ಸಹ ತಿಳಿದು ಬರುತ್ತಿದೆ.

Story first published: Friday, September 27, 2024, 8:30 [IST]
Other articles published on Sep 27, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+