ಐಪಿಎಲ್ 2019: ಮಂದ ಗತಿಯ ಬೌಲಿಂಗ್, ಅಶ್ವಿನ್‌ಗೆ ದಂಡ

ಹೊಸದಿಲ್ಲಿ, ಏಪ್ರಿಲ್ 21: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಇಲ್ಲಿನ ಫಿರೋಜ್ ಶಾ ಕೋಟ್ಲಾ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ಮಂದ ಗತಿಯ ಬೌಲಿಂಗ್ ನಡೆಸಿದರ ಪರಿಣಾಮ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ರವಿಚಂದ್ರನ್ ಅಶ್ವಿನ್ ದಂಡ ತೆರುವಂತಾಗಿದೆ.
ಪಂದ್ಯದಲ್ಲಿ ಆತಿಥೇಯ ಕ್ಯಾಪಿಟಲ್ಸ್ ವಿರುದ್ಧ ಪಂಜಾಬ್ ತಂಡ 5 ವಿಕೆಟ್‌ಗಳ ಹೀನಾಯ ಸೋಲುಂಡಿತ್ತು. ಪ್ರಸಕ್ತಐಪಿಎಲ್‌ನಲ್ಲಿ ಕಿಂಗ್ಸ್ ಇಲೆವೆನ್ ತಂಡ ಇದೇ ಮೊದಲ ಬಾರಿ ಮಂದಗತಿಯ ಬೌಲಿಂಗ್ ಪ್ರಮಾದ ಎಸಗಿದ ಕಾರಣ ನಾಯಕ ಅಶ್ವಿನ್‌ಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ.
ಕಳೆದ ನಾಲ್ಕು ಪಂದ್ಯಗಳಲ್ಲಿ ಪಂಜಾಬ್ ತಂಡ ಮೂರು ಪಂದ್ಯಗಳನ್ನು ಸೋತಿದ್ದು, ಸದ್ಯ ಅಂಕಪಟ್ಟಿಯಲ್ಲಿ 10 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದೆ. ಆಡಿದ 10 ಪಂದ್ಯಗಳಲ್ಲಿ ಪಂಜಾಬ್ ತಲಾ ೫ ಸೋಲು ಮತ್ತು ಗೆಲುವು ಕಂಡಿದೆ.
ಮುಂಬಯಿ ಇಂಡಿಯನ್ಸ್‌ನ ರೋಹಿತ್ ಶರ್ಮಾ, ಆರ್‌ಸಿಬಿ ತಂಡದ ವಿರಾಟ್ ಕೊಹ್ಲಿ ಮತ್ತು ಇತ್ತೀಚೆಗೆ ನಾಯಕನ ಸ್ಥಾನ ಕಳೆದುಕೊಂಡ ರಾಜಸ್ಥಾನ್ ರಾಯಲ್ಸ್ ತಂಡದ ಅಜಿಂಕ್ಯ ರಹಾನೆ ಕೂಡ ಈ ಬಾರಿಯ ಐಪಿಎಲ್‌ನಲ್ಲಿ ಮಂದಗತಿಯ ಬೌಲಿಂಗ್ ಪ್ರಮಾದವೆಸಗಿ ದಂಡಕ್ಕೆ ಗುರಿಯಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications