ಏಷ್ಯಾಕಪ್: ಅಫ್ರಿದಿ ತಂಡಕ್ಕೆ ಸೋಲು, ಪಾಕಿಸ್ತಾನಿ ಆತ್ಮಹತ್ಯೆ
ಇಸ್ಲಾಮಾಬಾದ್, ಮಾರ್ಚ್.04: ಏಷ್ಯಾಕಪ್ ಟ್ವೆಂಟಿ20 ಟೂರ್ನಿಯಲ್ಲಿ ಶಹೀದ್ ಅಫ್ರಿದಿ ನೇತೃತ್ವದ ಟಿ20 ತಂಡ ಸೋತು ಸುಣ್ಣವಾಗಿ ಟೂರ್ನಿಯಿಂದ ಹೊರ ಬಿದ್ದಿರುವುದು ತಿಳಿದಿರಬಹುದು. ಆದರೆ, ಬಾಂಗ್ಲಾದೇಶದ ವಿರುದ್ಧ ಪಾಕಿಸ್ತಾನ ತಂಡ ಸೋತಿದ್ದು ನೋಡಿ 50 ವರ್ಷ ವಯಸ್ಸಿನ ಪಾಕಿಸ್ತಾನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತಪಟ್ಟವರನ್ನು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ನೀರಾವರಿ ಇಲಾಖೆಯಲ್ಲಿ ಜ್ಯೂನಿಯರ್ ಕ್ಲರ್ಕ್ ಆಗಿ ಕಾರ್ಯನಿರ್ವಹಿಸುತ್ತಿದ್ದ 50 ವರ್ಷ ವಯಸ್ಸಿನ ವ್ಯಕ್ತಿ ಮುಹಮ್ಮದ್ ಶಫೀಕ್ ಎಂದು ಗುರುತಿಸಲಾಗಿದೆ.

ಪಾಕಿಸ್ತಾನ ತಂಡದ ಸೋಲಿನ ಆಘಾತವನ್ನು ಸಹಿಸದೆ ಗುರುವಾರ (ಮಾರ್ಚ್ 03) ಪಂಜಾಬ್ ನೀರಾವರಿ ಇಲಾಖೆ ಕಚೇರಿಯಲ್ಲಿ ಫ್ಯಾನಿಗೆ ನೇಣುಬಿಗಿದುಕೊಂಡು ಸಾವನ್ನಪ್ಪಿದ್ದಾರೆ ಎಂದು ಡಾನ್ ಆನ್ ಲೈನ್ ವರದಿ ಮಾಡಿದೆ.
ಆದರೆ, ಮುಹಮ್ಮದ್ ಶಫೀಕ್ ಅವರು ಸಾವನ್ನಪ್ಪಲು ದೇಶದ ಮೇಲಿನ ಪ್ರೇಮವಷ್ಟ ಅಲ್ಲ, ಅದಕ್ಕಿಂತ ಮುಖ್ಯವಾಗಿ ಬೆಟ್ಟಿಂಗ್ ಕಾರಣ ಎಂದು ತಿಳಿದು ಬಂದಿದೆ. ಸೋದರರಾದ ಮುಹಮ್ಮದ್ ಶಫೀಕ್ ಹಾಗೂ ರಮ್ಜಾನ್ ಅವರು ತಮ್ಮ ಸಂಬಳದ ಪೂರ್ತಿ ಮೊತ್ತ (30,000 ರು) ವನ್ನು ಬೆಟ್ಟಿಂಗ್ ನಲ್ಲಿ ತೊಡಗಿಸಿದ್ದರು. ಆದರೆ, ಬಾಂಗ್ಲಾದೇಶ ವಿರುದ್ಧ ಪಾಕಿಸ್ತಾನ ತಂಡ ಸೋಲುತ್ತಿದ್ದಂತೆ ಹೃದಯಾಘಾತಕ್ಕೊಳಗಾದ ಶಫೀಕ್ ಸಾವನ್ನಪ್ಪಿದ್ದಾರೆ. ಸೋದರ ಶಫೀಕ್ ಅವರ ಸಾವಿಗೆ ಬೆಟ್ಟಿಂಗ್ ಕಾರಣ ಎಂಬುದನ್ನು ರಮ್ಜಾನ್ ಕೂಡಾ ಒಪ್ಪಿಕೊಂಡಿದ್ದಾರೆ. (ಐಎಎನ್ಎಸ್)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications