ಏಷ್ಯಾ ಕಪ್ 2018: ಪಾಕಿಸ್ತಾನ- ಹಾಂಕಾಂಗ್ ಪಂದ್ಯ ಇಂದು

ದುಬೈ, ಸೆಪ್ಟೆಂಬರ್ 16: ಯುವ ಆಟಗಾರರಿಂದ ಕೂಡಿರುವ ಬಲಿಷ್ಠ ಪಾಕಿಸ್ತಾನ ತಂಡ, ಏಷ್ಯಾ ಕಪ್‌ನ ಈ ಆವೃತ್ತಿಯ ತನ್ನ ಮೊದಲ ಪಂದ್ಯದಲ್ಲಿ ಕ್ರಿಕೆಟ್‌ನ ಕೂಸು ಹಾಂಕಾಂಗ್ ತಂಡವನ್ನು ಭಾನುವಾರ ಎದುರಿಸಲಿದೆ.
ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ (ಶಾರ್ಜಾ), ದಕ್ಷಿಣ ಆಫ್ರಿಕಾದಲ್ಲಿ ಮತ್ತು ದೇಶಿ ಕ್ರಿಕೆಟ್ ಪಾಕಿಸ್ತಾನ್ ಸೂಪರ್ ಲೀಗ್‌ನಲ್ಲಿ ಬಿಡುವಿಲ್ಲದ ಆಟವಾಡಿದ್ದ ಪಾಕಿಸ್ತಾನ, ಅಲ್ಲಿಂದ ಸುದೀರ್ಘ ವಿಶ್ರಾಂತಿಯ ಬಳಿಕ ಮತ್ತೆ ಮೈದಾನಕ್ಕಿಳಿಯುತ್ತಿದೆ.
ಈ ವರ್ಷದ ಜುಲೈನಲ್ಲಿ ಜಿಂಬಾಬ್ವೆ ವಿರುದ್ಧ ಆಡಿದ ಪಂದ್ಯವೇ ಅದರ ಕೊನೆಯ ಅಂತಾರಾಷ್ಟ್ರೀಯ ಏಕದಿನ ಆಟವಾಗಿತ್ತು. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ಪಾಕಿಸ್ತಾನ ಗಮನಸೆಳೆದಿದೆ.
2017ರ ಚಾಂಪಿಯನ್ಸ್ ಟ್ರೋಫಿ ಫೈನಲ್ಸ್‌ನಿಂದ ಎಲ್ಲರ ಗಮನ ಸೆಳೆದಿರುವ ಆರಂಭಿಕ ಆಟಗಾರ, ಎಡಗೈ ಬ್ಯಾಟ್ಸ್‌ಮನ್ ಫಖರ್ ಜಮಾನ್, ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ 257.5ರ ಸರಾಸರಿಯಲ್ಲಿ 515 ರನ್ ಗಳಿಸಿದ್ದರು. ಇಮಾಮ್ ಉಲ್ ಹಕ್, ಬಾಬರ್ ಅಜಂ, ಶೋಯೆಬ್ ಮಲಿಕ್, ಫಹೀಮ್ ಅಶ್ರಫ್ ಬ್ಯಾಟಿಂಗ್‌ಗೆ ಬಲವನ್ನು ಹೆಚ್ಚಿಸಲಿದ್ದಾರೆ.
ಹಸನ್ ಅಲಿ, ಮೊಹಮದ್ ಅಮೀರ್, ಹ್ಯಾರಿಸ್ ಸೊಹೈಲ್, ಶಹೀನ್ ಅಫ್ರಿದಿ, ಜುನೈದ್ ಖಾನ್ ಬೌಲಿಂಗ್ ಪಡೆಯ ಶಕ್ತಿಯಾಗಿದ್ದಾರೆ.
ಏಷ್ಯಾಕಪ್ ಅರ್ಹತಾ ಸುತ್ತಿನಲ್ಲಿ ಹಾಂಕಾಂಗ್, ಏಕದಿನ ಕ್ರಿಕೆಟ್ ಮಾನ್ಯತೆ ಪಡೆದಿರುವ ನೇಪಾಳ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ತಂಡಗಳನ್ನು ಸೋಲಿಸಿ ತಾನು ಹೆಚ್ಚು ಶಕ್ತಿಯುತವಾಗಿದ್ದೇನೆ ಎಂಬ ಸೂಚನೆ ನೀಡಿದೆ.
ಭಾರತ ಮತ್ತು ಪಾಕಿಸ್ತಾನ ತಂಡಗಳ ಎದುರಿನ ಪಂದ್ಯಗಳು ಅಂತಾರಾಷ್ಟ್ರೀಯ ಪಂದ್ಯಗಳೆಂದು ಪರಿಗಣಿತವಾಗುವುದರಿಂದ ಹಾಂಕಾಂಗ್‌ಗೆ ಇವು ಮಹತ್ವದ್ದಾಗಿದೆ. ಈ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಏಕದಿನ ಮಾನ್ಯತೆ ಪಡೆದುಕೊಳ್ಳುವುದು ಅದರ ಗುರಿಯಾಗಿದೆ.
ಪಂದ್ಯದ ಆರಂಭ: ಸಂಜೆ 5
ಸ್ಥಳ: ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications