
ದುಬೈ, ಸೆಪ್ಟೆಂಬರ್ 18: ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ ಅತಿ ವೇಗವಾಗಿ 2 ಸಾವಿರ ರನ್ಗಳಿಕೆ ಮಾಡಿರುವ ಆಟಗಾರರ ಪಟ್ಟಿಯಲ್ಲಿ ಪಾಕಿಸ್ತಾನ ಬಾಬರ್ ಅಜಂ ಅವರು ಈಗ ಎರಡನೇ ಆಟಗಾರ ಎಂದೆನಿಸಿದ್ದಾರೆ. ದಕ್ಷಿಣ ಆಫ್ರಿಕಾದ ಹಶೀಂ ಆಮ್ಲಾ ಅಗ್ರಸ್ಥಾನದಲ್ಲಿ ಮುಂದುವರೆದಿದ್ದಾರೆ.
ಏಷ್ಯಾಕಪ್ 2018ರ ಮೊದಲ ಪಂದ್ಯದಲ್ಲಿ ಅಜಂ ಅವರು ಹಾಂಕಾಂಗ್ ವಿರುದ್ಧ ನಡೆದ ಪಂದ್ಯದಲ್ಲಿ 33ರನ್ಗಳಿಕೆ ಮಾಡಿದ್ದಾಗ ಈ ಸಾಧನೆ ಮಾಡಿದರು. ಹಶೀಂ ಆಮ್ಲಾ ಅವರು 40 ಇನ್ನಿಂಗ್ಸ್ಗಳಿಂದ 2 ಸಾವಿರ ರನ್ಗಳಿಕೆ ಮಾಡಿದ್ದರೆ, ಅಜಂ ಅವರು 45 ಇನ್ನಿಂಗ್ಸ್ ಈ ದಾಖಲೆ ಬರೆದಿದ್ದಾರೆ.
ಟಾಪ್ 05 ಪಟ್ಟಿಯಲ್ಲಿ ಪಾಕಿಸ್ತಾನದ ಬ್ಯಾಟಿಂಗ್ ದಿಗ್ಗಜ ಜಹೀರ್ ಅಬ್ಬಾಸ್ ಕೂಡಾ ಇದ್ದು ಅವರು ಕೂಡಾ 45 ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದರು. ಇಂಗ್ಲೆಂಡ್ನ ಮಾಜಿ ಬ್ಯಾಟ್ಸಮನ್ ಕೇವಿನ್ ಪಿಟರ್ಸನ್ ಸಹ(45) ಇನ್ನಿಂಗ್ಸ್, ಹಾಗೂ ಜೊನಾಥನ್ ಟ್ರಾಟ್ ಅವರು 47 ಇನ್ನಿಂಗ್ಸ್ ನಲ್ಲಿ 2,000ರನ್ ಗಳಿಸಿದ್ದರು.