
ದುಬೈ, ಸೆಪ್ಟೆಂಬರ್ 28: ಭಾರತ ಮತ್ತು ಬಾಂಗ್ಲಾದೇಶ ನಡುವಿನ 2018ರ ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಬಾಂಗ್ಲಾ ಆಟಗಾರ ಲಿಟನ್ ದಾಸ್ ಅಂತಾರಾಷ್ಟ್ರೀಯ ಚೊಚ್ಚಲ ಏಕದಿನ ಶತಕ ಬಾರಿಸಿದ್ದಾರೆ. ಶುಕ್ರವಾರ (ಸೆ. 28) ಏಷ್ಯಾಕಪ್ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ದಾಸ್ 121 ರನ್ ಬಾರಿಸಿದರು.
ಪಂದ್ಯದ Live Score ಕೆಳಗಿದೆ. ಸ್ಕೋರ್ ಕಾರ್ಡ್ ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಬಾಂಗ್ಲಾಕ್ಕೆ ಆರಂಭಿಕರಾದ ಲಿಟನ್ ಬಲ ತುಂಬಿದರು. ಇನ್ನಿಂಗ್ಸ್ ನಲ್ಲಿ 41 ಓವರ್ ವರೆಗೂ ಕ್ರೀಸ್ ಗೆ ಅಂಟಿ ನಿಂತ ಲಿಟನ್ ದಾಸ್ 117 ಎಸೆತಗಳಲ್ಲಿ 121 ರನ್ ಪೇರಿಸಿ, ಕುಲದೀಪ್ ಯಾದವ್ ಎಸೆತಕ್ಕೆ ವಿಕೆಟ್ ಕೀಪರ್ ಧೋನಿಯಿಂದ ಸ್ಟಂಪ್ಟ್ಡ್ ಆಗಿ ನಿರ್ಗಮಿಸಿದರು.
ಇದರೊಂದಿಗೆ ಲಿಟನ್ ಅವರು ಬಾಂಗ್ಲಾ ಭಾರತ-ಮುಖಾಮುಖಿಯಲ್ಲಿ ಅಧಿಕ ರನ್ ಬಾರಿಸಿದವರ ಸಾಲಿನಲ್ಲಿ ಮೂರನೆಯವರಾಗಿ ಸೇರಿಕೊಂಡಿದ್ದಾರೆ. ಈ ಯಾದಿಯಲ್ಲಿ ವಿರಾಟ್ ಕೊಹ್ಲಿ (136 ರನ್) ಪ್ರಥಮ, ಸೌರವ್ ಗಂಗೂಲಿ (135*) ದ್ವಿತೀಯ, ಲಿಟನ್ ದಾಸ್ (121) ತೃತೀಯ, ಮುಷ್ಫಿಕರ್ ರಹೀಮ್ (117) ನಾಲ್ಕನೇ ಮತ್ತು ಸುರೇಶ್ ರೈನಾ (116) ಐದನೇ ಸ್ಥಾನದಲ್ಲಿದ್ದಾರೆ.