For Quick Alerts
ALLOW NOTIFICATIONS  
For Daily Alerts
 

ಏಷ್ಯಾ ಕಪ್ ವೇಳಾಪಟ್ಟಿ ಪ್ರಕಟ: ಸೆ.19ಕ್ಕೆ ಭಾರತ-ಪಾಕಿಸ್ತಾನ ಕದನ

By Malenadiga
Asia Cup 2018: India to face Pakistan in marquee clash on September 19, heres full schedule

ದುಬೈ, ಜುಲೈ 25: ಪ್ರತಿಷ್ಠಿತ ಏಷ್ಯಾಕಪ್ ಟೂರ್ನಮೆಂಟ್ ಈ ಬಾರಿ ಭಾರತದಿಂದ ಸ್ಥಳಾಂತರಗೊಂಡಿದೆ. 14ನೇ ಆವೃತ್ತಿಯ ಏಷ್ಯಾಕಪ್ ಟಿ20ಐ ಟೂರ್ನಮೆಂಟ್ ದುಬೈನಲ್ಲಿ ನಡೆಯಲಿದೆ. ಈ ಬಾರಿ ಟಿ20ಐ ಮಾದರಿ ಬದಲಿಗೆ ಏಕದಿನ ಅಂತಾರಾಷ್ಟ್ರೀಯ ಮಾದರಿಯಲ್ಲಿ ಟೂರ್ನಮೆಂಟ್ ಆಯೋಜನೆಯಾಗಲಿದೆ.

ಏಷ್ಯಾಕಪ್​ನ ವೇಳಾಪಟ್ಟಿ ಪ್ರಕಟಗೊಂಡಿದ್ದು, ಸೆಪ್ಟೆಂಬರ್ 15 ರಿಂದ 13 ದಿನಗಳ ಕಾಲ ಟೂರ್ನಮೆಂಟ್ ನಡೆಯಲಿದ್ದು, ಸೆ. 19ರಂದು ಭಾರತ-ಪಾಕಿಸ್ತಾನ ಲೀಗ್ ಪಂದ್ಯ ನಡೆಯಲಿದೆ. ಪಂದ್ಯಗಳು ಸಂಜೆ 5 ಗಂಟೆಗೆ (ಭಾರತೀಯ ಕಾಲ ಮಾನ ಪ್ರಕಾರ) ಆರಂಭವಾಗಲಿದ್ದು, ಸ್ಟಾರ್ ನೆಟ್ವರ್ಕ್ ಹಾಗೂ ಹಾಟ್ ಸ್ಟಾರ್ ನಲ್ಲಿ ಪ್ರಸಾರವಾಗಲಿದೆ.

ಲೀಗ್ ಹಂತದಲ್ಲಿ ಅರ್ಹತಾ ತಂಡವಾಗಿ ಸೇರಿರುವ ಹಾಂಗ್ ಕಾಂಗ್ ಜತೆ ಪ್ರಮುಖ ತಂಡಗಳು ಆಡಲಿವೆ. ಸೂಪರ್-4 ಹಂತದಲ್ಲಿ ತಲಾ 3 ಪಂದ್ಯವಾಡಲಿದ್ದು, ಅಗ್ರಸ್ಥಾನ ಪಡೆದ 2 ತಂಡಗಳು ಸೆಪ್ಟೆಂಬರ್ 28 ರಂದು ಫೈನಲ್​ನಲ್ಲಿ ಸೆಣಸಲಿವೆ.

ಏಷ್ಯಾಕಪ್ 2018 ವೇಳಾಪಟ್ಟಿ:
ಗುಂಪು ಹಂತ:
ಸೆಪ್ಟೆಂಬರ್ 15: ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾ (ದುಬೈ),
ಸೆಪ್ಟೆಂಬರ್ 16: ಪಾಕಿಸ್ತಾನ ವಿರುದ್ಧ ಹಾಂಗ್ ಕಾಂಗ್ (ದುಬೈ),

ಸೆಪ್ಟೆಂಬರ್ 17: ಶ್ರೀಲಂಕಾ ವಿರುದ್ಧ ಅಫ್ಘಾನಿಸ್ತಾನ (ಅಬುಧಾಬಿ),

ಸೆಪ್ಟೆಂಬರ್ 18: ಭಾರತ ವಿರುದ್ಧ ಹಾಂಗ್ ಕಾಂಗ್ (ದುಬೈ),
ಸೆಪ್ಟೆಂಬರ್ 19: ಭಾರತ ವಿರುದ್ಧ ಪಾಕಿಸ್ತಾನ (ದುಬೈ),
ಸೆಪ್ಟೆಂಬರ್ 20: ಬಾಂಗ್ಲಾದೇಶ ವಿರುದ್ಧ ಅಫ್ಘಾನಿಸ್ತಾನ (ಅಬುಧಾಬಿ);

ಸೂಪರ್-4 ಹಂತ:
ಸೆಪ್ಟೆಂಬರ್ 21:
ಎ ಗುಂಪು ಅಗ್ರಸ್ಥಾನಿ ವಿರುದ್ಧ ಬಿ ಗುಂಪು ರನ್ನರ್​ಅಪ್ (ದುಬೈ),
ಬಿ ಗುಂಪು ಅಗ್ರಸ್ಥಾನಿ ವಿರುದ್ಧ ಎ ಗುಂಪು ರನ್ನರ್​ಅಪ್ (ಅಬುಧಾಬಿ),

ಸೆಪ್ಟೆಂಬರ್ 23:
ಎ ಗುಂಪು ಅಗ್ರಸ್ಥಾನಿ-ಎ ಗುಂಪು ರನ್ನರ್​ಅಪ್ (ದುಬೈ),

ಬಿ ಗುಂಪು ಅಗ್ರಸ್ಥಾನಿ-ಬಿ ಗುಂಪು ರನ್ನರ್​ಅಪ್ (ಅಬುಧಾಬಿ),

ಸೆಪ್ಟೆಂಬರ್ 25: ಎ ಗುಂಪು ಅಗ್ರಸ್ಥಾನಿ ವಿರುದ್ಧ ಬಿ ಗುಂಪು ಅಗ್ರಸ್ಥಾನಿ (ದುಬೈ),

ಸೆಪ್ಟೆಂಬರ್ 26: ಎ ಗುಂಪು ರನ್ನರ್​ಅಪ್ ವಿರುದ್ಧ ಬಿ ಗುಂಪು ರನ್ನರ್​ಅಪ್(ಅಬುಧಾಬಿ).
ಸೆಪ್ಟೆಂಬರ್ 28: ಫೈನಲ್ (ದುಬೈ).

Story first published: Saturday, September 15, 2018, 17:21 [IST]
Other articles published on Sep 15, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+