ಏಷ್ಯಾಕಪ್: ಹಾಂಕಾಂಗ್ ವಿರುದ್ಧ ಗೆಲ್ಲುವ ವಿಶ್ವಾಸದಲ್ಲಿ ಭಾರತ

ದುಬೈ, ಸೆಪ್ಟೆಂಬರ್ 17: ಏಷ್ಯಾಕಪ್ 2018 ಕ್ರಿಕೆಟ್ ಟೂರ್ನಿಯ ಮೊದಲ ಪಂದ್ಯವನ್ನು ಭಾರತ ನಾಳೆ (ಸೆಪ್ಟೆಂಬರ್ 18) ಆಡಲಿದೆ. ಮೊದಲ ಪಂದ್ಯದಲ್ಲಿ ಸುಲಭ ಎದುರಾಳಿ ಹಾಂಕಾಂಗ್ ಅನ್ನು ಭಾರತ ಎದುರಿಸಲಿದೆ.
ಏಷ್ಯಾಕಪ್ ಟೂರ್ನಿಯ ಗೆಲ್ಲುವ ಕುದುರೆಗಳಾಗಿರುವ ಭಾರತಕ್ಕೆ ಮೊದಲ ಪಂದ್ಯ ಸಾಧಾರಣದ್ದಾಗಿದ್ದು. ಕ್ರಿಕೆಟ್ ಶಿಶು ಹಾಂಕಾಂಗ್ ಎದುರು ಭಾರತ ಗೆಲ್ಲುವುದು ನಿಶ್ಚಿತ. ಆದರೆ ಭಾರತವು ಈ ಪಂದ್ಯವನ್ನು ಉತ್ತಮ ಸರಾಸರಿಯೊಂದಿಗೆ ಗೆಲ್ಲುವ ಪ್ರಯತ್ನ ಮಾಡಲಿದೆ.
ಪಾಕಿಸ್ತಾನವು ನಿನ್ನೆ ಹಾಂಕಾಂಗ್ ತಂಡದ ವಿರುದ್ಧ 8 ವಿಕೆಟ್‌ಗಳ ಅಂತರದಿಂದ ಗೆದ್ದು ಉತ್ತಮ ಸರಾಸರಿ ಪಡೆದುಕೊಂಡಿದೆ. ಹಾಗಾಗಿ ಅದಕ್ಕಿಂತಲೂ ಉತ್ತಮ ಗೆಲುವನ್ನು ಪಡೆಯಲು ಭಾರತ ನಾಳೆ ಯತ್ನಿಸಲಿದೆ.
ಪಾಕಿಸ್ತಾನದ ವಿರುದ್ಧದ ಮೊದಲ ಪಂದ್ಯದಲ್ಲಿ ಚೇತೋಹಾರಿ ಪ್ರದರ್ಶನ ತೋರಿರುವ ಹಾಂಕಾಂಗ್ ತನ್ನ ಪ್ರದರ್ಶನವನ್ನು ಇನ್ನಷ್ಟು ಉತ್ತಮಪಡಿಸಿಕೊಳ್ಳಲು ನಾಳಿನ ಪಂದ್ಯದಲ್ಲಿ ಯತ್ನಿಸಲಿದೆ. ಪಾಕಿಸ್ತಾನ ವಿರುದ್ಧ ಪಂದ್ಯದಲ್ಲಿ ತಾನ್ವಿರ್ ಅಫ್ಜಲ್ ಉತ್ತಮ ಬೌಲಿಂಗ್ ದಾಳಿ ನಡೆಸಿ ಎರಡು ಮೇಡಿನ್ ಹಾಕಿ ಗಮನಸೆಳೆದಿದ್ದರು. ಭಾರತದ ಬ್ಯಾಟ್ಸ್‌ಮನ್‌ಗಳನ್ನೂ ನಾಳಿನ ಪಂದ್ಯದಲ್ಲಿ ಇವರು ಕಾಡಲಿದ್ದಾರೆ.
ಇಶಾನ್ ಖಾನ್ ಸಹ ಪಾಕಿಸ್ತಾನದ ಎರಡು ವಿಕೆಟ್ ಕಬಳಿಸಿ ಗಮನಸೆಳೆದಿದ್ದರು. ನಾಳಿನ ಪಂದ್ಯದಲ್ಲೂ ಇದೇ ಪ್ರದರ್ಶನವನ್ನು ತೋರಲು ತುದಿಗಾಲ ಮೇಲೆ ನಿಂತಿದ್ದಾರೆ. ಕೆ.ಡಿ.ಶಾ, ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ನಿಜಕತ್ ಖಾನ್, ಅಂಶುಮನ್ ರಾತ್, ಹಯಾತ್ ಕೆಲವು ಬ್ಯಾಟ್ಸ್‌ಮನ್‌ಗಳು ಪಾಕ್‌ನ ವೇಗದ ಬೌಲಿಂಗ್ ಅನ್ನು ಕೆಲ ಕಾಲವಾದದರೂ ಎದುರಿಸಿ ಇಂತಿದ್ದರು. ಹಾಗಾಗಿ ಹಾಂಕಾಂಗ್, ಭಾರತಕ್ಕೆ ತೀರಾ ಸುಲಭದ ತುತ್ತೇನೂ ಅಲ್ಲ.
ನಾಳಿನ ಪಂದ್ಯವನ್ನು ಪಿಚ್‌ನ ಅಭ್ಯಾಸಕ್ಕೆ ಹಾಗೂ ಬ್ಯಾಟ್ಸ್‌ಮನ್‌ಗಳ ಕ್ರಮಾಂಕ ಪ್ರಯೋಗಕ್ಕೆ ಭಾರತ ಬಳಸಿಕೊಳ್ಳಲಿದೆ. ಫಾರ್ಮ್ ಕಂಡುಕೊಳ್ಳಲು ಒದ್ದಾಡುತ್ತಿರುವ ಕೆಲವು ಹಿರಿಯ ಬ್ಯಾಟ್ಸ್‌ಮನ್‌ಗಳಿಗೆ ಮರಳಿಗೆ ಫಾರ್ಮ್‌ಗೆ ಮರಳಲು ನಾಳಿನ ಪಂದ್ಯ ಉತ್ತಮ ಅವಕಾಶ ಆಗಲಿದೆ. ಹಾಂಕಾಂಗ್ ವಿರುದ್ಧ ಪಾಕಿಸ್ತಾನ ಗೆದ್ದ ಗೆಲುವಿಗಿಂತಲೂ ಉತ್ತಮ ಸರಾಸರಿಯಲ್ಲಿ ಗೆಲುವು ಸಾಧಿಸುವುದೇ ಭಾರತದ ಗುರಿ ಆಗಿರಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications