
ದುಬೈ, ಸೆಪ್ಟೆಂಬರ್ 17: ಬಾಂಗ್ಲಾದೇಶಿ ಕ್ರಿಕೆಟರ್ ಮುಷ್ಫಿಕರ್ ರಹೀಂ ಅವರು ಭರ್ಜರಿ ಶತಕ ಸಿಡಿಸುವ ಮೂಲಕ ವಿರಾಟ್ ಕೊಹ್ಲಿ, ಯೂನಿಸ್ ಖಾನ್ ರಂಥ ಸ್ಟಾರ್ ನಟರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.
ಏಷ್ಯಾಕಪ್ 2018ರ ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 150 ಎಸೆತಗಳಲ್ಲಿ 144ರನ್ ಚೆಚ್ಚಿ ತಂಡಕ್ಕೆ ಗೆಲುವು ತಂದುಕೊಟ್ಟರು. ಬಾಂಗ್ಲಾದೇಶ 49.3 ಓವರ್ ಗಳಲ್ಲಿ 261ರನ್ ಗಳಿಸಿತ್ತು.
ಶ್ರೀಲಂಕಾ ರನ್ ಚೇಸ್ ನಲ್ಲಿ ಸಂಪೂರ್ಣ ವಿಫಲವಾಗಿ 35.2 ಓವರ್ ಗಳಲ್ಲಿ 124 ಸ್ಕೋರಿಗೆ ಸರ್ವಪತನ ಕಂಡಿತು. ಈ ಮೂಲಕ 137ರನ್ ಗಳ ಅಂತರದ ಸೋಲು ಕಂಡಿತು.
ಇದು ಮುಷ್ಫಿಕರ್ ಅವರ ವೈಯಕ್ತಿಕ ಶ್ರೇಷ್ಠ ಪ್ರದರ್ಶನವೂ ಆಗಿದೆ. ಕಳೆದ ಒಂದು ವರ್ಷದಿಂದ ಉತ್ತಮ ಲಯದಲ್ಲಿದ್ದೆ. ಈ ಟೂರ್ನಮೆಂಟ್ ನಲ್ಲಿ ಉತ್ತಮ ಪ್ರದರ್ಶನ ನೀಡುವ ಆಸೆ ಹೊಂದಿದ್ದೆ ನನ್ನ ಪ್ರದರ್ಶನದಿಂದ ತಂಡಕ್ಕೆ ನೆರವಾಗಿರುವುದು ಸಂತೋಷ ಎಂದು ಮುಷ್ಫಿಕರ್ ಹೇಳಿದ್ದಾರೆ.
ಏಷ್ಯಾಕಪ್ ಇತಿಹಾಸದಲ್ಲಿ ಅತಿ ಹೆಚ್ಚು ವೈಯಕ್ತಿಕ ರನ್ ಗಳಿಕೆ ಮಾಡಿದ ಆಟಗಾರರ ಪಟ್ಟಿಗೆ ಮುಷ್ಫಿಕರ್ ಸೇರಿದ್ದಾರೆ. ಏಷ್ಯಾಕಪ್ ನಲ್ಲಿ ಟಾಪ್ 05 ರನ್ ಗಳಿಕೆ ಪಟ್ಟಿಯಲ್ಲಿ ಟೀಂ ಇಂಡಿಯಾದ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. * ವಿರಾಟ್ ಕೊಹ್ಲಿ (ಪಾಕಿಸ್ತಾನ ವಿರುದ್ಧ) 183 ರನ್, 2012
ಏಷ್ಯಾ ಕಪ್ 2018: ಪಾಕಿಸ್ತಾನಕ್ಕೆ ಸುಲಭವಾಗಿ ಒಲಿದ ಗೆಲುವು
* ಯೂನಿಸ್ ಖಾನ್ (ಹಾಂಗ್ ಕಾಂಗ್ ವಿರುದ್ಧ) 144 ರನ್, 2004.
* ಮುಷ್ಫಿಕರ್ ರಹೀಂ (ಶ್ರೀಲಂಕಾ ವಿರುದ್ಧ) 144 ರನ್ , 2018.
* ಶೋಯಿಬ್ ಮಲೀಕ್ (ಭಾರತ ವಿರುದ್ಧ) 143 ರನ್, 2004.
* ವಿರಾಟ್ ಕೊಹ್ಲಿ (ಬಾಂಗ್ಲಾದೇಶ ವಿರುದ್ಧ) 136 ರನ್, 2014.