ಏಷ್ಯಾ ಕಪ್ 2018 : ಪಾಕಿಸ್ತಾನ ತಂಡ ಪ್ರಕಟ, ಸರ್ಫರಾಜ್ ನಾಯಕ

ಇಸ್ಲಾಮಾಬಾದ್, ಸೆಪ್ಟೆಂಬರ್ 04: 2018ರ ಏಷ್ಯಾ ಕಪ್ ಟೂರ್ನಮೆಂಟ್ ಗೆ ಪಾಕಿಸ್ತಾನ ತಂಡವನ್ನು ಪ್ರಕಟಿಸಲಾಗಿದೆ. ಇಮಾದ್ ವಾಸಿಂ ಕೊನೆ ಕ್ಷಣದಲ್ಲಿ ಯೋ ಯೋ ಟೆಸ್ಟ್ ನಲ್ಲಿ ಫೇಲಾಗಿ, ತಂಡಕ್ಕೆ ಆಯ್ಕೆಯಾಗುವುದರಲ್ಲಿ ವಿಫಲರಾಗಿದ್ದಾರೆ. ಸಫರಾಜ್ ಅಹ್ಮದ್ ನಾಯಕರಾಗಿದ್ದಾರೆ.
ಯುಎಇಯ ಅಬುದಾಭಿಯ ಶೇಕ್ ಜಾಯೇದ್ ಸ್ಟೇಡಿಯಂನಲ್ಲಿ ಸೆಪ್ಟೆಂಬರ್ 15ರಿಂದ ಸೆಪ್ಟೆಂಬರ್ 28ರ ತನಕ ಆರು ರಾಷ್ಟ್ರಗಳ ಏಷ್ಯಾಕಪ್ ಟೂರ್ನಮೆಂಟ್ ನಡೆಯಲಿದೆ.
ತಂಡದಲ್ಲಿ ಶಾನ್ ಮಸೂದ್ ಅವರು ಹೊಸ ಮುಖವಾಗಿದ್ದಾರೆ. ಮೊಹಮ್ಮದ್ ಅಮೀರ್, ಜುನೈದ್ ಖಾನ್, ಫಹೀಂ ಅಶ್ರಫ್, ಉಸ್ಮಾನ್ ಶಿನ್ವಾರಿ, ಹಸನ್ ಅಲಿ ಅಲ್ಲದೆ, ಶಹೀನ್ ಶಾ ಅಫ್ರಿದಿ ಬೌಲಿಂಗ್ ಬಲ ತುಂಬಲಿದ್ದಾರೆ. ಶಬಾದ್ ಖಾನ್, ಮೊಹಮ್ಮದ್ ನವಾಜ್ ಸ್ಪಿನ್ನರ್ ಗಳಾಗಿದ್ದಾರೆ.
ಫಕಾರ್ ಜಮಾನ್, ಆಸಿಫ್ ಅಲಿ ಅಲ್ಲದೆ ಅನುಭವಿ ಶೋಯೆಬ್ ಮಲ್ಲಿಕ್, ಬಾಬರ್ ಅಜಮ್ ಬ್ಯಾಟಿಂಗ್ ಬಲ ತುಂಬಲಿದ್ದಾರೆ. ನಾಲ್ಕು ಶತಕ ಬಾರಿಸಿರುವ ಇಮಾಮ್ ಉಲ್ ಹಕ್ ತಂಡಕ್ಕೆ ಆಸರೆಯಾಗಬಹುದು.
ತಂಡ ಇಂತಿದೆ: ಫಕಾರ್ ಜಮಾನ್, ಇಮಾಮ್ ಉಲ್ ಹಕ್, ಶಾನ್ ಮಸೂದ್, ಬಾಬರ್ ಅಜಮ್, ಶೋಯೆಬ್ ಮಲೀಕ್, ಸಫ್ರಾಜ್ ಅಹ್ಮದ್ (ನಾಯಕ), ಆಸಿಫ್ ಅಲಿ, ಹಾರೀಸ್ ಸೊಹೈಲ್, ಶಾಬಾದ್ ಖಾನ್, ಮೊಹಮ್ಮದ್ ನವಾಜ್, ಫಹೀಂ ಅಶ್ರಫ್,ಹಸನ್ ಅಲಿ, ಮೊಹಮ್ಮದ್ ಆಮೀರ್, ಜುನೈದ್ ಖಾನ್, ಉಸ್ಮಾನ್ ಶಿನ್ವಾರಿ ಹಾಗೂ ಶಾಹೀನ್ ಶಾ ಅಫ್ರಿದಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications