'ಧೋನಿ ಮತ್ತೆ ಕ್ಯಾಪ್ಟನ್' ಎಂದಿದ್ದಕ್ಕೆ ಕೋಮಾದಲ್ಲಿದ್ದವ ಎದ್ದು ಕುಳಿತ!


ಬೆಂಗಳೂರು, ಸೆಪ್ಟೆಂಬರ್ 25: ಎಂಎಸ್ ಧೋನಿ ಮತ್ತೆ ಕ್ಯಾಪ್ಟನ್ ಆಗಿ ಕಣಕ್ಕೆ ಎಂಬುದನ್ನು ನೋಡುತ್ತಿದ್ದಂತೆ, ಅಭಿಮಾನಿಗಳು ಸಕತ್ ಸಂತಸದಿಂದ ಟ್ವೀಟ್ ಮಾಡಲು ಆರಂಭಿಸಿದ್ದಾರೆ. ಏಷ್ಯಾ ಕಪ್ 2018ರ ಸೂಪರ್ 4 ಹಂತದ ಇಂದಿನ ಪಂದ್ಯದಲ್ಲಿ ಅಫ್ಘಾನಿಸ್ತಾನದ ವಿರುದ್ಧ ನಾಯಕರಾಗಿ ಎಂಎಸ್ ಧೋನಿ ಮೈದಾನಕ್ಕಿಳಿದರು.
ನಾಯಕ ರೋಹಿತ್ ಶರ್ಮ, ಉಪ ನಾಯಕ ಶಿಖರ್ ಧವನ್ ಇಬ್ಬರೂ ಈ ಪಂದ್ಯದಲ್ಲಿ ಆಡುತ್ತಿಲ್ಲ. ಭಾರತ ತಂಡದಲ್ಲಿ ಭಾರಿ ಬದಲಾವಣೆ ಮಾಡಲಾಗಿದ್ದು, ಬೆಂಚ್ ನಲ್ಲಿ ಕುಳಿತಿದ್ದ ಅನೇಕ ಆಟಗಾರರು ಇಂದು ಆಡುವ ಅವಕಾಶ ಪಡೆದುಕೊಂಡಿದ್ದಾರೆ. ವೇಗಿ ದೀಪಕ್ ಚಾಹರ್ ಅವರು ಚೊಚ್ಚಲ ಪಂದ್ಯವಾಡುತ್ತಿದ್ದಾರೆ.
2017ರಲ್ಲಿ ನಾಯಕರಾಗಿ ತಂಡವನ್ನು ಮುನ್ನಡೆಸಿದ್ದ ಧೋನಿ ಅವರು, ಈ ಬಗ್ಗೆ ಪ್ರತಿಕ್ರಿಯಿಸಿ 200ನೇ ಪಂದ್ಯಕ್ಕೆ ನಾಯಕನಾಗಿ ಕಣಕ್ಕಿಳಿಯುವುದು ಖುಷಿಕೊಟ್ಟಿದೆ ಎಂದಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ಫ್ಯಾನ್ಸ್
'ವಾವ್... ತಾ ಈಸ್ ಬ್ಯಾಕ್' ಎಂದು ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿ ಸರವಣ ಹರಿ. ತಮಿಳುನಾಡಿನ ಕ್ರಿಕೆಟ್ ಪ್ರೇಮಿಗಳು ಧೋನಿಯನ್ನು ಪ್ರೀತಿಯಿಂದ 'ತಲಾ' ಎಂದು ಕರೆಯುತ್ತಾರೆ. ತಲಾ ಎಂದರೆ ಮಹಾನಾಯಕ.
ಧೋನಿ ನಿಜಕ್ಕೂ ಗ್ರೇಟ್
ಎಂಎಸ್ ಧೋನಿ ಅವರು 13 ವಿವಿಧ ತಂಡದ ವಿರುದ್ಧ ನಾಯಕರಾಗಿದ್ದು, ಇಂದು ಅಫ್ಘಾನಿಸ್ತಾನ ವಿರುದ್ಧ 14ನೇ ತಂಡವಾಗಿದೆ.
ಕೋಮಾದಲ್ಲಿದ್ದವ ಎದ್ದು ಕುಳಿತ!
ನನ್ನ ಗೆಳೆಯ ಕೋಮಾದಲ್ಲಿದ್ದ 'ಧೋನಿ ಮತ್ತೆ ಕ್ಯಾಪ್ಟನ್' ಎಂದಿದ್ದಕ್ಕೆ ಕೋಮಾದಲ್ಲಿದ್ದವ ಎದ್ದು ಕುಳಿತ! ಮುಂದಿನ ವಾರ ಮ್ಯಾರಥಾನ್ ಗೆ ಸಿದ್ಧನಾಗುತ್ತಿದ್ದಾನೆ.
696ದಿನಗಳ ಬಳಿಕ ನಾಯಕ
696 ದಿನಗಳ ಬಳಿಕ ಧೋನಿ ಮತ್ತೊಮ್ಮೆ ನಾಯಕನಾಗಿದ್ದಾನೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications