Asia Cup 2022: ಪಾಕ್ ವಿರುದ್ಧದ ಪಂದ್ಯದ ಬೆನ್ನಲ್ಲೇ ಅರ್ಷ್‌ದೀಪ್ ಭಾರತೀಯನಲ್ಲ ಎಂದ ವಿಕಿಪಿಡಿಯಾ!

ನಿನ್ನೆಯಷ್ಟೇ ( ಸೆಪ್ಟಂಬರ್ 4 ) ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಈ ಬಾರಿಯ ಏಷ್ಯಾಕಪ್ ಟೂರ್ನಿಯ ಎರಡನೇ ಮುಖಾಮುಖಿ ಪಂದ್ಯ ಜರುಗಿತು. ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯ ಈ ಬಾರಿಯ ಏಷ್ಯಾಕಪ್ ಟೂರ್ನಿಯ ಸೂಪರ್ 4 ಹಂತದ ಎರಡನೇ ಪಂದ್ಯವಾಗಿತ್ತು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 181 ರನ್ ಕಲೆಹಾಕಿ ಪಾಕಿಸ್ತಾನಕ್ಕೆ 182 ರನ್‌ಗಳ ಗುರಿಯನ್ನು ನೀಡಿತ್ತು.
ಹೀಗೆ ಟೀಂ ಇಂಡಿಯಾ ನೀಡಿದ ಗುರಿಯನ್ನು ಮೊಹಮ್ಮದ್ ರಿಜ್ವಾನ್ ಹಾಗೂ ಮೊಹಮ್ಮದ್ ನವಾಜ್ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಬೆನ್ನತ್ತುವಲ್ಲಿ ಯಶಸ್ವಿಯಾದ ಪಾಕಿಸ್ತಾನ 19.5 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 182 ರನ್ ಕಲೆಹಾಕಿ 5 ವಿಕೆಟ್‌ಗಳ ರೋಚಕ ಗೆಲುವನ್ನು ಕಂಡಿತು. ಹೀಗೆ ಟೀಮ್ ಇಂಡಿಯಾ ಈ ಪಂದ್ಯದಲ್ಲಿ ಬೃಹತ್ ಮೊತ್ತ ಕಲೆಹಾಕಿದ್ದರ ಹೊರತಾಗಿಯೂ ಕಳಪೆ ಬೌಲಿಂಗ್ ಕಾರಣದಿಂದಾಗಿ ಸೋಲನ್ನು ಅನುಭವಿಸಿತು.
ಇನ್ನು ಈ ಪಂದ್ಯದಲ್ಲಿ ಸೋಲಿಗೆ ಟೀಮ್ ಇಂಡಿಯಾದ ಬೌಲಿಂಗ್ ವಿಭಾಗ ಕಾರಣ ಎಂದು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಟ್ರೋಲ್ ಮಾಡಲಾಯಿತು ಮತ್ತು ಪಂದ್ಯದಲ್ಲಿ ಅಸಿಫ್ ಅಲಿ ಕ್ಯಾಚ್ ಬಿಟ್ಟ ಟೀಮ್ ಇಂಡಿಯಾದ ಅರ್ಷ್‌ದೀಪ್ ಸಿಂಗ್ ವಿರುದ್ಧವೂ ಸಹ ಬೃಹತ್ ಪ್ರಮಾಣದಲ್ಲಿ ಟೀಕೆಗಳು ವ್ಯಕ್ತವಾದವು. ಇನ್ನು ಭಾರತ ತಂಡದ ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧದ ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡುವ ಆಟಗಾರರನ್ನು ಗುರಿಯನ್ನಾಗಿಸಿ ಸಾಮಾಜಿಕ ಜಾಲತಾಣಗಳಲ್ಲಿ ನಿಂದಿಸಿರುವ ಹಲವಾರು ಉದಾಹರಣೆಗಿವೆ. ಇದೀಗ ಅದೇ ಸಾಲಿಗೆ ಅರ್ಷ್‌ದೀಪ್ ಸಿಂಗ್ ಕೂಡ ಸೇರ್ಪಡೆಗೊಂಡಿದ್ದು, ಪಾಕ್ ವಿರುದ್ಧದ ಪಂದ್ಯ ಮುಗಿದ ನಂತರ ಅರ್ಷ್‌ದೀಪ್ ಸಿಂಗ್ ವಿಕಿಪಿಡಿಯಾ ಪುಟವನ್ನು ಕಿಡಿಗೇಡಿಗಳು ತಿದ್ದಿದ್ದು, ಆತ ಅಸ್ತಿತ್ವವಿಲ್ಲದ ಖಲಿಸ್ತಾನ ದೇಶದ ಕ್ರಿಕೆಟಿಗ ಎಂದು ಬದಲಾಯಿಸಿದ್ದಾರೆ. ಹೀಗೆ ತಿದ್ದಲ್ಪಟ್ಟ ಅರ್ಷ್‌ದೀಪ್ ಸಿಂಗ್ ವಿಕಿಪಿಡಿಯಾ ಪುಟ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿವಾದ ಹುಟ್ಟುಹಾಕಿದೆ.
Wikipedia page of Indian Player Arshdeep Singh has been edited & deliberately Khalistan is added.
— Anshul Saxena (AskAnshul) September 4, 2022
Who is behind this editing & targeting Arshdeep Singh?
Someone from Pakistan.
Here are the IP details of editor. pic.twitter.com/CErervW3Q2
ವಿಕಿಪಿಡಿಯಾ ತಿದ್ದಿದ್ದು ಪಾಕಿಸ್ತಾನದವರು
ಇನ್ನು ಅರ್ಷ್‌ದೀಪ್ ಸಿಂಗ್ ಅವರ ವಿಕಿಪಿಡಿಯಾ ಪ್ರೊಫೈಲ್ ಪುಟವನ್ನು ಭಾರತದಿಂದ ಖಲಿಸ್ತಾನ ಎಂದು ತಿದ್ದಿದ್ದು ಪಾಕಿಸ್ತಾನ ಮೂಲದ ವ್ಯಕ್ತಿ ಎಂಬುದನ್ನು ಅನ್ಶುಲ್ ಸಕ್ಸೇನಾ ಬಿಚ್ಚಿಟ್ಟಿದ್ದಾರೆ. ಈ ಪುಟವನ್ನು ತಿದ್ದಿರುವ ವ್ಯಕ್ತಿ ಬಳಸಿರುವ ಸಾಧನದ ಐಪಿ ಅಡ್ರೆಸ್ ಪತ್ತೆಹಚ್ಚಿ ಅದರ ಸ್ಕ್ರೀನ್ ಶಾಟ್ ಅನ್ನು ಅನ್ಶುಲ್ ಸಕ್ಸೇನಾ ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ಆ ವ್ಯಕ್ತಿ ಬಳಸುತ್ತಿರುವ ನೆಟ್‌ವರ್ಕ್ ಕಂಪೆನಿ ಹೆಸರು ಪಾಕಿಸ್ತಾನ ಟೆಲಿ ಕಮ್ಯೂನಿಕೇಶನ್ ಕಂಪೆನಿ ಲಿಮಿಟೆಡ್ ಎಂಬುದನ್ನು ಕಾಣಬಹುದಾಗಿದೆ. ಇನ್ನು ಈತ ಈ ಕೆಲಸ ಮಾಡಿರುವುದು ಮತ್ತೆ ಖಲಿಸ್ತಾನ ವಿವಾದ ಎಬ್ಬಿಸುವುದಕ್ಕಾಗಿ ಹಾಗೂ ಕ್ರಿಕೆಟ್ ಜತೆ ಖಲಿಸ್ತಾನವನ್ನು ಜೋಡಿಸಿದರೆ ವಿವಾದ ದೊಡ್ಡ ರೂಪ ಪಡೆದುಕೊಳ್ಳಲಿದೆ ಎಂಬ ಉದ್ದೇಶದಿಂದ ಎನ್ನುವುದಕ್ಕಾಗಿ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.

ಏನಿದು ಖಲಿಸ್ತಾನ ವಿವಾದ?
ಈ ಹಿಂದೆ ಪಂಜಾಬ್‌ನ ರಾಜ್ಯವನ್ನು ಪ್ರತ್ಯೇಕ ದೇಶವೆಂದು ಘೋಷಿಸಬೇಕೆಂದು ಕೂಗು ಎದ್ದಿತ್ತು ಹಾಗೂ ಈ ದೇಶಕ್ಕೆ ಖಲಿಸ್ತಾನ ಎಂದು ಹೆಸರಿಡಬೇಕು ಎಂಬ ಬೇಡಿಕೆಯೂ ಇತ್ತು ಮತ್ತ ಇದಕ್ಕಾಗಿ ಹಲವು ಚಳುವಳಿಗಳು ಸಹ ನಡೆದಿದ್ದವಾದರೂ ಇದ್ಯಾವುದೂ ಯಶಸ್ವಿಯಾಗಿರಲಿಲ್ಲ. ಇನ್ನು ಸದ್ಯಕ್ಕೆ ಈ ಖಲಿಸ್ತಾನ ಎಂಬ ವಿಚಾರ ಅತಿ ಸೂಕ್ಷ್ಮ ವಿಚಾರವಾಗಿ ಬದಲಾಗಿದ್ದು, ವಿವಾದಾತ್ಮಕ ಅಂಶವಾಗಿದೆ. ಹೀಗಾಗಿಯೇ ಪಾಕ್‌ನ ಆ ವ್ಯಕ್ತಿ ಪಂಜಾಬ್ ಮೂಲದ ಕ್ರಿಕೆಟಿಗ ಅರ್ಷ್‌ದೀಪ್ ಸಿಂಗ್ ಅವರ ವಿಕಿಪಿಡಿಯಾ ಪ್ರೊಫೈಲ್ ಪುಟದಲ್ಲಿ ಭಾರತ ಎಂಬುದನ್ನು ತೆಗೆದು ಹಾಕಿ ಖಲಿಸ್ತಾನ ಎಂದು ಬದಲಿಸಿದ್ದಾನೆ. ಇನ್ನು ಈ ಬಾರಿಯ ಏಷ್ಯಾಕಪ್‌ನಲ್ಲಿ ಅರ್ಷ್‌ದೀಪ್ ಸಿಂಗ್ ಖಲಿಸ್ತಾನದ ಪರ ಹಾಗೂ ಈ ಹಿಂದೆ ಖಲಿಸ್ತಾನ ಅಂಡರ್ 19 ತಂಡದ ಪರ ಆಡಿದ್ದಾರೆ ಎಂದೂ ಸಹ ಬದಲಿಸಿರುವ ಈ ವ್ಯಕ್ತಿ ಟೈಮ್ಸ್ ಆಫ್ ಇಂಡಿಯಾ ಎಂದಿದ್ದ ಪತ್ರಿಕೆಯ ಹೆಸರನ್ನೂ ಸಹ ಟೈಮ್ಸ್ ಆಫ್ ಖಲಿಸ್ತಾನ ಎಂದು ಬದಲಿಸಿ ವಿಕೃತಿ ಮೆರೆದಿದ್ದಾನೆ.

ವಿಕಿಪಿಡಿಯಾಗೆ ಐಟಿ ಸಚಿವಾಲಯದ ಆಜ್ಞೆ
ಇನ್ನು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಐಟಿ ಸಚಿವಾಲಯ ಭಾರತದ ವಿಕಿಪಿಡಿಯಾ ಮುಖ್ಯಸ್ಥರಿಗೆ ತಮ್ಮನ್ನು ಭೇಟಿ ಮಾಡಲು ಆಜ್ಞೆ ಹೊರಡಿಸಿದೆ. ಹಾಗೂ ಈ ಸಭೆಯಲ್ಲಿ ಭಾರತದ ಕ್ರಿಕೆಟಿಗನನ್ನು ಖಲಿಸ್ತಾನದ ಕ್ರಿಕೆಟಿಗ ಎಂದು ಬದಲಾಯಿಸಲು ಹೇಗೆ ಅನುವು ಮಾಡಿಕೊಟ್ಟಿರಿ ಎಂಬ ಪ್ರಶ್ನೆಯನ್ನು ವಿಕಿಪಿಡಿಯಾಗೆ ಕೇಂದ್ರ ಐಟಿ ಸಚಿವಾಲಯ ಹಾಕಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications