Asia cup 2022: ಬಾಂಗ್ಲಾದೇಶ vs ಅಫ್ಘಾನಿಸ್ತಾನ, ಪಿಚ್ ರಿಪೋರ್ಟ್, ಸಂಭಾವ್ಯ ತಂಡ

ಏಷ್ಯಾ ಕಪ್‌ನ 3ನೇ ಪಂದ್ಯದಲ್ಲಿ ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ ತಂಡಗಳು ಮುಖಾಮುಖಿಯಾಗಲಿದೆ. ಶಾರ್ಜಾದ ಅಂತಾರಾಷ್ಟ್ರೀಯ ಕ್ರಿಡಾಂಗಣದಲ್ಲಿ ಈ ಕುತೂಹಲಕಾರಿ ಕದನ ನಡೆಯಲಿದೆ. ಗ್ರೂಪ್ ಬಿಯ ಎರಡನೇ ಪಂದ್ಯ ಇದಾಗಿದ್ದು ಮೊದಲ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ ತಂಡಗಳು ಮುಖಾಮುಖಿಯಾಗಿದ್ದು ಇದರಲ್ಲಿ ಅಫ್ಘನ್ ಪಡೆ ಅಮೋಘ ಗೆಲುವು ಸಾಧಿಸಿತ್ತು.
ಶಕೀಬ್ ಅಲ್ ಹಸನ್ ನೇತೃತ್ವದಲ್ಲಿ ಈ ಪ್ರತಿಷ್ಠಿತ ಟೂರ್ನಿಗೆ ಬಾಂಗ್ಲಾದೇಶ ಕಣಕ್ಕಿಳಿಯುತ್ತಿದ್ದು ಮುಷ್ಫಿಕರ್ ರಹೀಮ್, ಮಹ್ಮದುಲ್ಲಾ, ಮುಸ್ತಫಿಜುರ್ ರಹ್ಮಾನ್, ಅನಮುಲ್ ಹಕ್ ಮೊದಲಾದ ಅನುಭವಿ ಆಟಗಾರರ ಬಲ ಈ ತಂಡಕ್ಕಿದೆ. ಇನ್ನು ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನ ಶ್ರೀಲಂಕಾ ವಿರುದ್ಧ ಗೆಲುವು ಸಾಧಿಸಿದ್ದು ಆತ್ಮವಿಶ್ವಾಸದಲ್ಲಿದೆ.

ಹವಾಮಾನ ವರದಿ ಹಾಗೂ ಪಿಚ್ ರಿಪೋರ್ಟ್
ಶಾರ್ಜಾದಲ್ಲಿ ಈ ಪಂದ್ಯ ನಡೆಯುತ್ತಿದ್ದು 35ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ಪಂದ್ಯದ ದಿನ ಇರಲಿದೆ. ಪಂದ್ಯದ ಅವಧಿಯಲ್ಲಿ ಮಳೆಯಾಗುವ ಯಾವುದೇ ಸಾಧ್ಯತೆಗಳಿಲ್ಲ. ಇನ್ನು ಶಾರ್ಜಾದ ಬೌಂಡರಿ ಗೆರೆಗಳು ಹೆಚ್ಚು ದೊಡ್ಡದಾಗಿಲ್ಲ. ಸ್ಪಿನ್ನರ್‌ಗಳಿಗೆ ನೆರವು ದೊರೆಯುವ ಸಾಧ್ಯತೆಯಿದ್ದು ಬ್ಯಾಟರ್‌ಗಳು ಈ ಪಿಚ್‌ನಲ್ಲಿ ಬ್ಯಾಟಿಂಗ್ ನಡೆಸುವುದನ್ನು ಯಾವಾಗಲೂ ಆನಂದಿಸುತ್ತಾರೆ. ಎರಡನೇ ಅವಧಿಯಲ್ಲಿ ಇಬ್ಬನಿಯ ಸಂಭವ ಇಲ್ಲದಿದ್ದರೆ ಮೊದಲಿಗೆ ಬ್ಯಾಟಿಂಗ್ ನಡೆಸುವುದನ್ನು ತಂಡಗಳು ಬಯಸುತ್ತದೆ.

ಸಂಭಾವ್ಯ ಪ್ಲೇಯಿಂಗ್ ಈ ಹೀಗಿದೆ
ಬಾಂಗ್ಲಾದೇಶ: ಮೊಹಮ್ಮದ್ ನಯಿಮ್, ಸಬ್ಬಿರ್ ರೆಹಮಾನ್, ಅನಾಮುಲ್ ಹಕ್, ಮಹಮ್ಮದುಲ್ಲಾ, ಶಾಕಿಬ್ ಅಲ್ ಹಸನ್, ಮುಶ್ಫಿಕರ್ ರಹೀಮ್, ಮೆಹಿದಿ ಹಸನ್, ಮೊಸದ್ದೆಕ್ ಹೊಸೈನ್, ಮುಸ್ತಾಫಿಜುರ್ ರೆಹಮಾನ್, ತಸ್ಕಿನ್ ಅಹ್ಮದ್, ಎಬಾಡೋಟ್ ಹೊಸೈನ್
ಅಫ್ಘಾನಿಸ್ತಾನ: ನಜಿಬುಲ್ಲಾ ಝದ್ರಾನ್, ಹಜರತುಲ್ಲಾ ಝಜೈ, ಇಬ್ರಾಹಿಂ ಜದ್ರಾನ್, ಉಸ್ಮಾನ್ ಘನಿ, ರಹಮಾನುಲ್ಲಾ ಗುರ್ಬಾಜ್, ಮೊಹಮ್ಮದ್ ನಬಿ, ರಶೀದ್ ಖಾನ್, ಮುಜೀಬ್ ಉರ್ ರಹಮಾನ್, ನವೀನ್-ಉಲ್-ಹಕ್, ನೂರ್ ಅಹ್ಮದ್, ಕರೀಂ ಜನತ್

ಇತ್ತಂಡಗಳ ಸಂಪೂರ್ಣ ಸ್ಕ್ವಾಡ್ ಹೀಗಿದೆ
ಬಾಂಗ್ಲಾದೇಶ: ಮೊಹಮ್ಮದ್ ನಯಿಮ್, ಅನಾಮುಲ್ ಹಕ್, ಶಕೀಬ್ ಅಲ್ ಹಸನ್ (ನಾಯಕ), ಅಫೀಫ್ ಹೊಸೈನ್, ಮುಶ್ಫಿಕರ್ ರಹೀಮ್ (ವಿಕೆಟ್ ಕೀಪರ್), ಮಹಮ್ಮದುಲ್ಲಾ, ಸಬ್ಬೀರ್ ರೆಹಮಾನ್, ಮಹೇದಿ ಹಸನ್, ಮೊಹಮ್ಮದ್ ಸೈಫುದ್ದೀನ್, ನಸುಮ್ ಅಹ್ಮದ್, ಮುಸ್ತಾಫಿಜುರ್ ರೆಹಮಾನ್, ಮೊಸದ್ದೆಕ್ ಹೊಸೈನ್, ತಸ್ಕಿನ್ ಅಹ್ಮದ್, ಮೆಹಿದಿ ಹಸನ್ ಮಿರಾಜ್, ಎಬಾಡೋತ್ ಹೊಸೈನ್, ಪರ್ವೇಜ್ ಹೊಸೈನ್ ಎಮಾನ್.
ಅಫ್ಘಾನಿಸ್ತಾನ: ಹಜರತುಲ್ಲಾ ಝಜೈ, ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಇಬ್ರಾಹಿಂ ಜದ್ರಾನ್, ನಜಿಬುಲ್ಲಾ ಜದ್ರಾನ್, ಕರೀಂ ಜನತ್, ಮೊಹಮ್ಮದ್ ನಬಿ (ನಾಯಕ), ರಶೀದ್ ಖಾನ್, ಅಜ್ಮತುಲ್ಲಾ ಒಮರ್ಜಾಯ್, ನವೀನ್-ಉಲ್-ಹಕ್, ಮುಜೀಬ್ ಉರ್ ರೆಹಮಾನ್, ಫಜಲ್ಹಕ್ ಫಾರೂಕಿ, ಸಮೀವುಲ್ಲಾ ಶಿನ್ವಾರಿ, ಹಶ್ಮತುಲ್ಲಾ ಶಾಹಿದಿ, ಅಫ್ಸರ್ ಝಜೈ, ಫರೀದ್ ಅಹ್ಮದ್ ಮಲಿಕ್, ಉಸ್ಮಾನ್ ಘನಿ, ನೂರ್ ಅಹ್ಮದ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications