ಏಷ್ಯಾ ಕಪ್ ಫೈನಲ್: ಟ್ರೋಫಿಗಾಗಿ ಸೆಣೆಸಾಡಲು ಸಜ್ಜಾದ ಶ್ರೀಲಂಕಾ ಹಾಗೂ ಪಾಕಿಸ್ತಾನ

ಏಷ್ಯಾ ಕಪ್ ಟೂರ್ನಿಯ ಫೈನಲ್ ಪಂದ್ಯ ಇಂದು ನಡೆಯಲಿದೆ. ಟಿ20 ವಿಶ್ವಕಪ್ ಹಿನ್ನೆಲೆಯಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದ ಈ ಟೂರ್ನಿಯಲ್ಲಿ ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳು ಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದು ಚಾಂಪಿಯನ್ ಪಟ್ಟಕ್ಕಾಗಿ ಇಂದು ತೀವ್ರ ಸೆಣೆಸಾಟವನ್ನು ನಡೆಸಲು ಸಜ್ಜಾಗಿದೆ.
ಶ್ರೀಲಂಕಾ ಹಾಗೂ ಪಾಕಿಸ್ತಾನ ತಂಡಗಳ ಈ ಬಾರಿಯ ಏಷ್ಯಾ ಕಪ್ ಆರಂಭ ಉತ್ತಮವಾಗಿರಲಿಲ್ಲ. ಆರಂಭಿಕ ಪಂದ್ಯದಲ್ಲಿಯೇ ಈ ಎರಡು ತಂಡಗಳು ಕೂಡ ಸೋಲು ಅನುಭವಿಸಿದ್ದವು. ಅದರಲ್ಲೂ ಶ್ರೀಲಂಕಾ ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನದ ವಿರುದ್ಧ ಹೀನಾಯ ಸೋಲು ಅನುಭವಿಸುವ ಮೂಲಕ ದೊಡ್ಡ ನಿರಾಸೆ ಮೂಡಿಸಿತ್ತು. ಆದರೆ ಅದಾದ ಬಳಿಕ ಅದ್ಭುತ ರೀತಿಯಲ್ಲಿ ತಿರುಗಿಬೀಳಲು ಯಶಸ್ವಿಯಾಗಿದ್ದು ಫೈನಲ್ ಹಂತಕ್ಕೆ ಪ್ರವೇಶ ಪಡೆದುಕೊಂಡಿದೆ.

ಆತ್ಮವಿಶ್ವಾಸದಲ್ಲಿ ಲಂಕಾ ಪಡೆ
ಇನ್ನು ಈ ಫೈನಲ್ ಪಂದ್ಯಕ್ಕೂ ಮುನ್ನ ಸೂಪರ್ 4 ಹಂತದ ಅಂತಿಮ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ಶ್ರೀಲಂಕಾ ಈ ಎರಡು ತಂಡಗಳೇ ಮುಖಾಮುಖಿಯಾಗಿದ್ದ ಕಾರಣ ಫೈನಲ್ ಸೆಣೆಸಾಟಕ್ಕೂ ಮುನ್ನ ಉತ್ತಮ ಸಿದ್ಧತೆಯನ್ನಜು ಮಾಡಿಕೊಂಡಂತಾಗಿದೆ. ಆ ಪಂದ್ಯದಲ್ಲಿ ಶ್ರೀಲಂಕಾ ತಂಡ ಅಮೋಘ ಪ್ರದರ್ಶನ ನೀಡಿದ್ದು ಭರ್ಜರಿ ಗೆಲುವು ಸಾಧಿಸುವ ಮೂಲಕ ಫೈನಲ್ ಪಂದ್ಯಕ್ಕೆ ಆತ್ಮವಿಶ್ವಾಸದಿಂದ ಕಣಕ್ಕಿಳಿದಿದೆ.

ಸವಾಲು ಮೆಟ್ಟಿ ನಿಲ್ಲಲಿದೆಯಾ ಪಾಕಿಸ್ತಾನ
ಇನ್ನು ಇತ್ತ ಪಾಕಿಸ್ತಾನ ತಂಡ ಉತ್ತಮ ಆಟಗಾರರ ಪಡೆಯನ್ನೇ ಹೊಂದಿದ್ದರೂ ತಂಡದಲ್ಲಿ ಕೆಲ ಹುಳುಕುಗಳು ಗೋಚರವಾಗುತ್ತಿದೆ. ಅಗ್ರ ಕ್ರಮಾಂಕದ ಆಟಗಾರರು ವೈಫಲ್ಯ ಅನುಭವಿಸಿದರೆ ಮಧ್ಯ ಕ್ರಮಾಂಕದ ಆಟಗಾರರು ತಂಡದ ನೆರವಿಗೆ ಬರುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ. ಧ್ಯಮ ಕ್ರಾಂಕದ ಆಟಗಾರರಿಂದ ಜವಾಬ್ಧಾರಿಯುತ ಪ್ರದರ್ಶನ ಬಾರದಿರುವುದು ಅಗ್ರ ಕ್ರಮಾಂದ ಆಟಗಾರರ ಮೇಲಿನ ಒತ್ತಡ ಹೆಚ್ಚಿಸಿದೆ. ಇನ್ನು ಪಾಕಿಸಸ್ತಾನದ ನಾಯಕ ಬಾಬರ್ ಅಜಂ ಈ ಬಾರಿಯ ಏಷ್ಯಾ ಕಪ್ ಟೂರ್ನಿಯಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿದ್ದಾರೆ. ಫೈನಲ್ ಹಂತದಲ್ಲಿ ಬಾಬರ್ ಅಜಂ ಬ್ಯಾಟ್‌ನಿಂದ ರನ್ ಹರಿದು ಬರುವುದನ್ನು ಆ ತಂಡ ನಿರೀಕ್ಷಿಸುತ್ತದೆ.

ಲಂಕಾಗೆ ಸ್ಪಿನ್ನರ್‌ಗಳು ಆಧಾರ
ಇನ್ನು ಶ್ರೀಲಂಕಾ ತಂಡ ತನ್ನ ಸ್ಪಿನ್ನರ್‌ಗಳ ಮೇಲೆ ಹೆಚ್ಚಿನ ನಿರೀಕ್ಷೆಯನ್ನು ಇಟ್ಟುಕೊಂಡಿದೆ. ವನಿಂದು ಹಸರಂಗ ಹಾಗೂ ಮಹೀಶ ತೀಕ್ಷಣ ಜೋಡಿ ಅದ್ಭುತ ಪ್ರದರ್ಶನ ನೀಡುತ್ತಿದ್ದು ಫೈನಲ್ ಪಂದ್ಯದಲ್ಲಿಯೂ ಆ ಪ್ರದರ್ಶನದ ನಿರೀಕ್ಷೆಯಲ್ಲಿದೆ ಲಂಕಾ ಪಡೆ. ಸೂಪರ್ 4 ಹಂತದಲ್ಲಿ ಈ ಇಬ್ಬರು ಬೌಲರ್‌ಗಳೇ ಪಾಕಿಸ್ತಾನಕ್ಕೆ ಖೆಡ್ಡಾ ತೋಡಿದ್ದರು. ಹೀಗಾಗಿ ಪಾಕಿಸ್ತಾನ ತಂಡ ಕೇವಲ 121 ರನ್‌ಗಳಿಗೆ ಆಲೌಟ್ ಆಗಿತ್ತು. ಈ ಪಂದ್ಯವನ್ನು ಐದು ವಿಕೆಟ್‌ಗಳ ಅಂತರದಿಂದ ಸುಲಭವಾಗಿ ಗೆದ್ದುಕೊಂಡಿತ್ತು ಶ್ರೀಲಂಕಾ.

ಸಂಪೂರ್ಣ ಸ್ಕ್ವಾಡ್ ಹೀಗಿದೆ
ಶ್ರೀಲಂಕಾ: ದಸುನ್ ಶನಕಾ (ನಾಯಕ), ದನುಷ್ಕ ಗುಣತಿಲಕ, ಪಾತುಂ ನಿಸ್ಸಾಂಕ, ಕುಸಲ್ ಮೆಂಡಿಸ್, ಚರಿತ್ ಅಸಲಂಕ, ಭಾನುಕ ರಾಜಪಕ್ಸೆ, ಅಶೇನ್ ಬಂಡಾರ, ಧನಂಜಯ ಡಿ ಸಿಲ್ವ, ವನಿಂದು ಹಸರಂಗ, ಮಹೀಶ್ ತೀಕ್ಷಣ, ಜೆಫ್ರಿ ವಂಡರ್ಸೆ, ಪ್ರವೀಣ್ ಜಯವಿಕ್ರಮ, ಚಾಮಿಕ ಕರುಣಾರತ್ನೆ, ಡಿ.ಡಿ. ಚಂಡಿಮಲ್, ನುವಾನಿಡು ಫೆರ್ನಾಂಡೊ, ಅಸಿತ ಫೆರ್ನಾಂಡೊ, ಪ್ರಮೋದ್ ಮದುಶನ್, ನುವಾನ್ ತುಷಾರ
ಪಾಕಿಸ್ತಾನ: ಬಾಬರ್ ಅಜಮ್ (ನಾಯಕ), ಶಾದಾಬ್ ಖಾನ್, ಫಖರ್ ಜಮಾನ್, ಹೈದರ್ ಅಲಿ, ಹಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ನಸೀಮ್ ಶಾ, ಶಹನವಾಜ್ ದಹಾನಿ, ಉಸ್ಮಾನ್ ಖಾದಿರ್, ಆಸಿಫ್ ಅಲಿ, ಮೊಹಮ್ಮದ್ ಹಸನೈನ್, ಹಸನ್ ಅಲಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications