For Quick Alerts
ALLOW NOTIFICATIONS  
For Daily Alerts
 

ಏಷ್ಯಾ ಕಪ್‌ನಲ್ಲಿ ಪಾಕಿಸ್ತಾನಕ್ಕೆ ಇದು ದೊಡ್ಡ ಹಿನ್ನಡೆ ಎಂದ ಮಾಜಿ ಕ್ರಿಕೆಟಿಗ ಆಕಿಬ್ ಜಾವೇದ್

Asia cup 2022: former cricketer Aqib Javed said Pakistan will feel Shaheen Afridi’s absense

ಏಷ್ಯಾ ಕಪ್‌ಗೆ ದಿನಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಈ ಟೂರ್ನಿ ಮೇಲೆ ಕುತೂಹಲಗಳು ಹೆಚ್ಚಾಗುತ್ತಿದೆ. ಅದರಲ್ಲೂ ಭಾರತ ಹಾಗೂ ಪಾಕಿಸ್ತಾನ ನಡುವಿನ ಸೆಣೆಸಾಟದ ಮೇಲೆ ಹೆಚ್ಚಿನ ಕ್ರಿಕೆಟ್ ಪ್ರೇಮಿಗಳ ಕುತೂಹಲ ಹೆಚ್ಚಿದೆ. ಈ ಸಂದರ್ಭದಲ್ಲಿ ಪಾಕಿಸ್ತಾನದ ಪ್ರಮುಖ ಬೌಲರ್ ಶಾಹೀನ್ ಅಫ್ರಿದಿ ಗಾಯದ ಕಾರಣದಿಂದಾಗಿ ಈ ಟೂರ್ನಿಯಿಂದ ಹೊರಬಿದ್ದಿರುವುದು ಸ್ಪಷ್ಟವಾಗಿದೆ. ಈ ವಿಚಾರವಾಗಿ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಅಕೀಬ್ ಜಾವೇದ್ ಪ್ರತಿಕ್ರಿಯಿಸಿದ್ದು ಆಟಗಾರನ ಕಾರ್ಯದ ಒತ್ತಡವನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸದಿರುವುದು ಇದಕ್ಕೆ ಕಾರಣ ಎಂದು ದೂರಿದ್ದಾರೆ.

ಪಾಕಿಸ್ತಾನದ ಪ್ರಮುಖ ವೇಗಿಯಾಗಿರುವ ಶಾಹೀನ್ ಅಪ್ರಿದಿಯವರ ಮೇಲೆ ಕಾರ್ಯದ ಒತ್ತಡ ಹೆಚ್ಚಾಗಿರುವ ಕಾರಣದಿಂದಾಗಿಯೇ ಅವರು ಗಾಯಗೊಂಡಿರಬಹುದು ಎಂದಿದ್ದಾರೆ ಅಕೀಬ್ ಜಾವೇದ್. "ಇದು ಅವರ ಮೇಲಿನ ಕೆಲಸದ ಒತ್ತಡದಿಂದಾಗಿಯೇ ಆಗಿರಬಹುದು. ಶಾಹೀನ್ ಸತತವಾಗಿ ಕ್ರಿಕೆಟ್ ಆಡುತ್ತಿದ್ದಾರೆ. ಏಷ್ಯಾ ಕಪ್‌ಗಿಂತ ಮುನ್ನವೇ ಹೀಗಾಗಿರುವುದು ಪಾಕಿಸ್ತಾನಕ್ಕೆ ದೊಡ್ಡ ನಷ್ಟ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಅವರ ಗೈರು ಪಾಕಿಸ್ತಾನಕ್ಕೆ ಅನುಭವವಾಗಲಿದೆ" ಎಂದಿದ್ದಾರೆ ಪಾಕ್ ಮಾಜಿ ಕ್ರಿಕೆಟಿಗ.

ತಾಳ್ಮೆಯಿಂದ ಎದುರಿಸಬೇಕು

ತಾಳ್ಮೆಯಿಂದ ಎದುರಿಸಬೇಕು

ತಂಡದ ಪ್ರಮುಖ ವೇಗಿ ಈ ರೀತಿ ಗಾಯಕ್ಕೆ ಒಳಗಾಗಿ ಹೊರಗುಳಿದಿರುವುದನ್ನು ಪಾಕಿಸ್ತಾನ ಕ್ರಿಕೆಟ್ ತಂಡದ ಮ್ಯಾನೇಜ್‌ಮೆಂಟ್ ಸೂಕ್ತ ರೀತಿಯಲ್ಲಿ ನಿಭಾಯಿಸಬೇಕು ಎಂದಿದ್ದಾರೆ ಆಕಿಬ್ ಜಾವೇದ್. "ಈ ಸ್ಥಿತಿಯನ್ನು ತಂಡದ ಮ್ಯಾನೇಜ್‌ಮೆಂಟ್ ತಾಳ್ಮೆಯಿಂದ ಎದುರಿಸಬೇಕಿದೆ. ಈ ಪರಿಸ್ಥಿತಿಯಿಂದ ಗಲಿಪಿಲಿಗೆ ಒಳಗಾಗಬಾರದು. ಶಾಹೀನ್ ಅವರು ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಅವಕಾಶ ನೀಡಬೇಕಿದೆ. ಅವರ ಮುಂದೆ ಸುದೀರ್ಘವಾದ ಕ್ರಿಕೆಟ್ ಭವಿಷ್ಯವಿದೆ" ಎಂದಿದ್ದಾರೆ.

ಕಳೆದ ವಿಶ್ವಕಪ್‌ನಲ್ಲಿ ಭಾರತಕ್ಕೆ ಆಘಾತ ನೀಡಿದ್ದ ಶಾಹೀನ್

ಕಳೆದ ವಿಶ್ವಕಪ್‌ನಲ್ಲಿ ಭಾರತಕ್ಕೆ ಆಘಾತ ನೀಡಿದ್ದ ಶಾಹೀನ್

ಕಳೆದ ವಿಶ್ವಕಪ್‌ನಲ್ಲಿ ಸೂಪರ್ 12 ಹಂತದಲ್ಲಿ ಪಾಕಿಸ್ತಾನ ತಂಡವನ್ನು ಭಾರತ ಎದುರಿಸಿದ್ದಾಗ ಭಾರತ ತಂಡಕ್ಕೆ ಆರಂಭದಲ್ಲಿಯೇ ಆಘಾತ ನೀಡಿದ್ದರು ಯುವ ವೇಗಿ ಶಾಹೀನ್ ಶಾ ಅಫ್ರಿದಿ. ಭಾರತ ತಂಡದ ಅಗ್ರ ಕ್ರಮಾಂಕದ ಮೂವರು ಆಟಗಾರಿಗೆ ಫೆವಿಲಿಯನ್‌ಗೆ ದಾರಿ ತೋರಿಸುವ ಮೂಲಕ ಪಾಕ್ ತಂಡಕ್ಕೆ ಮೇಲುಗೈ ನೀಡಿದ್ದರು. ಕೆಎಲ್ ರಾಹುಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಈ ಮೂವರು ಕೂಡ ಶಾಹೀನ್ ಅಫ್ರಿದಿಗೆ ವಿಕೆಟ್ ಒಪ್ಪಿಸಿದ್ದರು. ಇದರ ಪರಿಣಾಮವಾಗಿ ಭಾರತ ನಿಗದಿತ 20 ಓವರ್‌ಗಳಲ್ಲಿ 152 ರನ್‌ಗಳ ಸಾಧಾರಣ ಗುರಿಯನ್ನು ನೀಡಲು ಯಶಸ್ವಿಯಾಗಿತ್ತು. ನಾಲ್ಕು ಓವರ್‌ಗಳ ಬೌಲಿಂಗ್‌ನಲ್ಲಿ ಶಾಹಿನ್ 31 ರನ್ ನೀಡಿ 3 ವಿಕೆಟ್ ಪಡೆದುಕೊಂಡಿದ್ದರು.

ಪಾಕಿಸ್ತಾನ ತಂಡದಲ್ಲಿದ್ದಾರೆ ನಾಲ್ವರು ವೇಗಿಗಳು

ಪಾಕಿಸ್ತಾನ ತಂಡದಲ್ಲಿದ್ದಾರೆ ನಾಲ್ವರು ವೇಗಿಗಳು

ಶಾಹಿನ್ ಶಾ ಅಲಭ್ಯತೆಯಲ್ಲಿ ಸದ್ಯ ಪಾಕಿಸ್ತಾನ ಏಷ್ಯಾಕಪ್ ತಂಡದಲ್ಲಿ ಸದ್ಯ ನಾಲ್ವರು ವೇಗಿಗಳು ಇದ್ದಾರೆ. ಶಹ್ನವಾಜ್ ದಹಾನಿ, ಮೊಹಮ್ಮದ್ ವಾಸಿಂ ಜೂನಿಯರ್, ನಸೀಮ್ ಶಾ, ಹ್ಯಾರಿಸ್ ರಾವುಫ್ ಈ ನಾಲ್ವರು ವೇಗಿಗಳು ಪಾಕ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಈ ನಾಲ್ವರ ಪೈಕಿ ನಸೀಮ್ ಶಾ ನೆದರ್ಲೆಂಡ್ಸ್ ವಿರುದ್ಧದ ಸರಣಿಯಲ್ಲಿ ಏಕದಿನ ಮಾದರಿಗೆ ಪದಾರ್ಪಣೆ ಮಾಡಿದ್ದಾರೆ. 2019ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಕಣಕ್ಕಿಳಿಯುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದಾರೆ.

ಭಾರತ ತಂಡದಲ್ಲಿಯೂ ಪ್ರಮುಖ ವೇಗಿ ಅಲಭ್ಯ

ಭಾರತ ತಂಡದಲ್ಲಿಯೂ ಪ್ರಮುಖ ವೇಗಿ ಅಲಭ್ಯ

ಇತ್ತ ಭಾರತ ಕ್ರಿಕೆಟ್ ತಂಡ ಕೂಡ ಈ ಬಾರಿಯ ಏಷ್ಯಾ ಕಪ್‌ಗೆ ತಂಡದ ಪ್ರಮುಖ ವೇಗಿಯ ಗೈರಿನಲ್ಲಿ ಕಣಕ್ಕಿಳಿಯುತ್ತಿದೆ. ತಂಡದ ಪ್ರಮುಖ ಬೌಲಿಂಗ್ ಅಸ್ತ್ರ ಜಸ್ಪ್ರೀತ್ ಬೂಮ್ರಾ ಗಾಯಗೊಂಡಿದ್ದು ಏಷ್ಯಾ ಕಪ್‌ನಿಂದ ಹೊರಗುಳಿದಿದ್ದಾರೆ. ಮತ್ತೋರ್ವ ವೇಗಿ ಹರ್ಷಲ್ ಪಟೇಲ್‌ ಕೂಡ ಗಾಯಗೊಂಡಿದ್ದು ಇವರು ಕೂಡ ಆಯ್ಕೆಯಾಗಿಲ್ಲ. ಅನುಭವಿ ಭುವನೇಶ್ವರ್ ಕುಮಾರ್, ಯುವ ಬೌಲರ್‌ಗಳಾದ ಅರ್ಷ್‌ದೀಪ್ ಸಿಂಗ್ ಹಾಗೂ ಆವೇಶ್ ಖಾನ್ ಭಾರತ ತಂಡದಲ್ಲಿ ಆಯ್ಕೆಯಾಗಿರುವ ವೇಗದ ಬೌಲರ್‌ಗಳಾಗಿದ್ದಾರೆ. ದೀಪಕ್ ಚಾಹರ್ ಮೀಸಲು ಆಟಗಾರನಾಗಿ ಆಯ್ಕೆ ಮಾಡಲಾಗಿದೆ.
ಏಷ್ಯಾ ಕಪ್‌ಗೆ ಆಯ್ಕೆಯಾಗಿರುವ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್, ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಆರ್ ಅಶ್ವಿನ್, ಯುಜ್ವೇಂದ್ರ ಚಾಹಲ್, ಭುವನೇಶ್ವರ್ ಕುಮಾರ್, ಅರ್ಶ್‌ದೀಪ್ ಸಿಂಗ್, ರವಿ ಬಿಷ್ಣೋಯ್, ಆವೇಶ್ ಖಾನ್.
ಸ್ಟ್ಯಾಂಡ್‌ಬೈ: ಅಕ್ಷರ್ ಪಟೇಲ್, ಶ್ರೇಯಸ್ ಅಯ್ಯರ್, ದೀಪಕ್ ಚಹಾರ್.

Story first published: Sunday, August 21, 2022, 16:13 [IST]
Other articles published on Aug 21, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+