Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಏಷ್ಯಾ ಕಪ್: ಕೊಹ್ಲಿ ಬಗ್ಗೆ ನನಗೆ ಅನುಮಾನವೇ ಇಲ್ಲ: ಕೊಹ್ಲಿ ಬೆಂಬಲಕ್ಕೆ ಮಾಜಿ ಕ್ರಿಕೆಟಿಗ

Asia Cup 2022: Harbhajan Singh said Virat Kohli will rise again, i have no doubt it

ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಕಳಪೆ ಫಾರ್ಮ್‌ನ ಕಾರಣದಿಂದ ಒಂದು ತಿಂಹಳ ವಿಶ್ರಾಂತಿ ಪಡೆದು ಮತ್ತೆ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಪಾಕಿಸ್ತಾನದ ವಿರುದ್ಧದ ಏಷ್ಯಾ ಕಪ್‌ನ ಹೈವೋಲ್ಟೇಜ್ ಪಂದ್ಯದ ಮೂಲಕ ಕೊಹ್ಲಿ ಕಮ್‌ಬ್ಯಾಕ್‌ಗೆ ಸಿದ್ಧವಾಗಿದ್ದಾರೆ. ಈ ಕುತೂಹಲಕಾರಿ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಫಾರ್ಮ್‌ಗೆ ಮರಳಲಿ ಎಂದು ಅಭಿಮಾನಿಗಳು ಕುಡ ಆಶಿಸುತ್ತಿದ್ದಾರೆ. ಭಾರತದ ಮಾಜಿ ನಾಯಕನಿಗೆ ಸಾಕಷ್ಟು ಬೆಂಬಲಗಳು ಅಭಿಮಾನಿಗಳು ಹಾಗೂ ಮಾಜಿ ಕ್ರಿಕೆಟಿಗರಿಂದ ದೊರೆಯುತ್ತಿದೆ.

ಈ ಸಂದರ್ಭದಲ್ಲಿ ಭಾರತದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಕೂಡ ಪ್ರತಿಕ್ರಿಯೆ ನಿಡಿದ್ದು ಕೊಹ್ಲಿ ಬಗ್ಗೆ ತಮ್ಮ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. ವಿರಾಟ್ ಕೊಹ್ಲಿ ಖಂಡಿತವಾಗಿಯೂ ಮತ್ತೆ ಫಾರ್ಮ್ ಕಂಡುಕೊಳ್ಳುವ ಮೂಲಕ ವಿಶ್ವ ಕ್ರಿಕೆಟ್‌ನಲ್ಲಿ ಅಬ್ಬರಿಸಲಿದ್ದಾರೆ ಎಂಬ ವಿಶ್ವಾಸದ ಮಾತುಗಳನ್ನಾಡಿದ್ದಾರೆ ಹರ್ಭಜನ್ ಸಿಂಗ್.

ಮತ್ತೆ ಪ್ರಕಾಶಿಸಲಿದ್ದಾರೆ, ಅನುಮಾನವೇ ಇಲ್ಲ

ಮತ್ತೆ ಪ್ರಕಾಶಿಸಲಿದ್ದಾರೆ, ಅನುಮಾನವೇ ಇಲ್ಲ

ವಿರಾಟ್ ಕೊಹ್ಲಿ ಫಾರ್ಮ್ ಕಂಡುಕೊಳ್ಳುವ ಬಗ್ಗೆ ಹರ್ಭಜನ್ ಸಿಂಗ್ ಭಾರೀ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಮತ್ತೆ ಖಂಡಿತವಾಗಿಯೂ ಪ್ರಕಾಶಿಸಲಿದ್ದು ಅವರು ತಮ್ಮ ಫಾರ್ಮ್ ಕಂಡುಕೊಳ್ಳಲಿದ್ದಾರೆ ಎಂದಿದ್ದಾರೆ. ನಾಯಕತ್ವದಿಂದ ಕೆಳಗಿಳಿದ ಬಳಿಕ ವಿರಾಟ್ ಕೊಹ್ಲಿ ಮೇಲಿನ ಒತ್ತಡ ಸಾಕಷ್ಟು ಕಡಿಮೆಯಾಗಿದ್ದು ಅದನ್ನು ಅವರು ಬ್ಯಾಟಿಂಗ್‌ನಲ್ಲಿ ವ್ಯಕ್ತಪಡಿಸಿಲಿದ್ದಾರೆ ಎಂದಿದ್ದಾರೆ. ಖಾಸಗಿ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಪ್ರತಿಕ್ರಿಯೆಯಲ್ಲಿ ಹರ್ಭಜನ್ ಈ ಮಾತುಗಳನ್ನಾಡಿದ್ದಾರೆ.

ನಾಯಕನಾಗಿ ಮುನ್ನಡೆಸುವುದು ದೊಡ್ಡ ಜವಾಬ್ಧಾರಿ

ನಾಯಕನಾಗಿ ಮುನ್ನಡೆಸುವುದು ದೊಡ್ಡ ಜವಾಬ್ಧಾರಿ

"ತಂಡವೊಂದನ್ನು ನಾಯಕನಾಗಿ ಮುನ್ನಡೆಸುವುದು ಆಟಗಾರನೊಬ್ಬನಿಗೆ ಅತ್ಯಂತ ದೊಡ್ಡದಾದ ಜವಾಬ್ಧಾರಿ. ವಿರಾಟ್ ಕೊಹ್ಲಿ ಸಾಕಷ್ಟು ಪ್ರಮಾಣದಲ್ಲಿ ರನ್‌ಗಳನ್ನು ಗಳಿಸಿದ್ದಾರೆ. ಆದರೆ ಕಳೆದ ಕೆಲ ವರ್ಷಗಳಿಂದ ಅವರ ಮೇಲೆ ಒತ್ತಡಗಳು ಇರುವುದು ಸ್ಪಷ್ಟವಾಗಿ ಕಾಣಿಸಿತ್ತು. ಅವರು ಶತಕಗಳನ್ನು ಬಾರಿಸಲು ವಿಫಲವಾದರು. ನಂತರ ನಾಯಕತ್ವದಿಂದ ಅವರು ಕೆಳಗಿಳಿದಿದ್ದಾರೆ. ಹೀಗಾಗಿ ಅವರ ಮೇಲಿನ ಒತ್ತಡ ಸ್ವಲ್ಪ ಕಡಿಮೆಯಾಗಿದೆ. ಈಗ ಅವರು ನಿರಾಳರಾದಂತೆ ಕಂಡುಬರುತ್ತಿದ್ದಾರೆ. ನನ್ನನ್ನು ಕೂಡ ಅವರು ಭೇಟಿಯಾಗಿದ್ದು ತಂಡವನ್ನು ಗೆಲುನಿನತ್ತ ನುಮ್ಮಡೆಸುವ ಆತ್ಮವಿಶ್ವಾಸದಲ್ಲಿದ್ದಾರೆ" ಎಂದಿದ್ದಾರೆ ಹರ್ಭಜನ್ ಸಿಂಗ್.

ಎಲ್ಲಾ ಆಟಗಾರರು ಇಂಥಾ ಸಂದರ್ಭವನ್ನು ಎದುರಿಸುವುದು ಸಾಮಾನ್ಯ

ಎಲ್ಲಾ ಆಟಗಾರರು ಇಂಥಾ ಸಂದರ್ಭವನ್ನು ಎದುರಿಸುವುದು ಸಾಮಾನ್ಯ

ಇನ್ನು ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿಯ ಅಭ್ಯಾಸದ ವಿಧಾನದ ಬಗ್ಗೆಯೂ ಮಾತನಾಡಿದ್ದಾರೆ. "ಅವರು ಈ ಹಿಂದಿನಂತೆಯೇ ತಮ್ಮ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಅಭ್ಯಾಸಕ್ಕೆ ಇಳಿಯುವ ಮುನ್ನ 1-2 ಗಂಟೆಗಳ ಕಾಲ ಜಿಮ್‌ನಲ್ಲಿ ತಾಲೀಮು ನಡೆಸುತ್ತಾರೆ. ಯಾವುದೇ ಆಟಗಾರರನ್ನು ತೆಗೆದುಕೊಳ್ಳಿ. ಅವರು ತಮ್ಮ ವೃತ್ತಿ ಜೀವನದಲ್ಲಿ ಒಂದಲ್ಲಾ ಒಂದ ಬಾರಿ ಈ ರೀತಿ ಕಠಿಣ ಪರಿಸ್ಥಿತಿಯನ್ನು ಎದುರಿಸಿರುತ್ತಾರೆ. ವಿರಾಟ್ ಕೊಹ್ಲಿ ಮತ್ತೆ ಪ್ರಕಾಶಿಸುತ್ತಾರೆ ಎಂಬುದರಲ್ಲಿ ನನಗೆ ಯಾವುದೇ ಅನುಮಾನವಿಲ್ಲ" ಎಂದಿದ್ದಾರೆ ಹರ್ಭಜನ್ ಸಿಂಗ್.

100ನೇ ಟಿ20 ಪಂದ್ಯವನ್ನಾಡುತ್ತಿರುವ ಕೊಹ್ಲಿ

100ನೇ ಟಿ20 ಪಂದ್ಯವನ್ನಾಡುತ್ತಿರುವ ಕೊಹ್ಲಿ

ಭಾನುವಾರ ಪಾಕಿಸ್ತಾನದ ವಿರುದ್ಧದ ಹೈವೋಲ್ಟೇಜ್ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಮಹತ್ವದ ಮೈಲಿಗಲ್ಲನ್ನು ಸಾಧಿಸಲಿದ್ದಾರೆ ವಿರಾಟ್ ಕೊಹ್ಲಿ. ಈ ಸಾಧನೆಯ ಮೂಲಕ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಎಲ್ಲಾ ಮಾದರಿಯಲ್ಲಿಯೂ 100 ಪಂದ್ಯಗಳ ಮೈಲಿಗಲ್ಲು ದಾಟಿದ ಮೊದಲ ಭಾರತೀಯ ಕ್ರಿಕೆಟಿಗ ಎನಿಸಿಕೊಳ್ಳಲಿದ್ದಾರೆ.

Story first published: Sunday, August 28, 2022, 14:03 [IST]
Other articles published on Aug 28, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+