Asia Cup 2022: ಏಷ್ಯಾಕಪ್‌ಗೆ ಪ್ರಕಟವಾದ ತಂಡದಲ್ಲಿ ಬೌಲಿಂಗ್ ಅಸ್ತ್ರ ಬುಮ್ರಾ ಇಲ್ಲದಿರಲು ಇದೇ ಕಾರಣ

ಇದೇ ತಿಂಗಳ 27ರಿಂದ ಪ್ರತಿಷ್ಠಿತ ಏಷ್ಯಾಕಪ್ ಟೂರ್ನಿ ಆರಂಭವಾಗಲಿದ್ದು, ಇಂದು ( ಆಗಸ್ಟ್ 8 ) ಬಿಸಿಸಿಐ ಟೂರ್ನಿಗೆ 15 ಆಟಗಾರರನ್ನೊಳಗೊಂಡ ಭಾರತ ತಂಡವನ್ನು ಪ್ರಕಟಿಸಿದೆ.
ರೋಹಿತ್ ಶರ್ಮಾ ಮುನ್ನಡೆಸಲಿರುವ ಈ ತಂಡದಲ್ಲಿ ಯಾರೂ ನಿರೀಕ್ಷಿಸಿರದ ಹಲವು ಅಂಶಗಳಿದ್ದು, ಕೆಎಲ್ ರಾಹುಲ್ ತಂಡಕ್ಕೆ ಮರಳಿರುವುದು ಮಾತ್ರವಲ್ಲದೇ ಉಪನಾಯಕನ ಸ್ಥಾನವನ್ನು ಅಲಂಕರಿಸಿದ್ದಾರೆ. ಹೌದು, ಸಾಲು ಸಾಲು ಗಾಯದ ಸಮಸ್ಯೆ ಹಾಗೂ ಅನಾರೋಗ್ಯದ ಕಾರಣದಿಂದಾಗಿ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮುಕ್ತಾಯವಾದ ನಂತರ ನಡೆದ ಯಾವುದೇ ಸರಣಿಯಲ್ಲಿಯೂ ಕಣಕ್ಕಿಳಿಯದೇ ಇದ್ದ ಕೆಎಲ್ ರಾಹುಲ್ ಇದೀಗ ಏಷ್ಯಾಕಪ್ ಟೂರ್ನಿಗೆ ಪ್ರಕಟಿಸಲಾಗಿರುವ ತಂಡದಲ್ಲಿ ಸ್ಥಾನ ಪಡೆದುಕೊಳ್ಳುವುದು ಮಾತ್ರವಲ್ಲದೇ ಉಪನಾಯಕನಾಗಿ ತಮ್ಮ ಕಾರ್ಯ ನಿರ್ವಹಿಸಲಿದ್ದಾರೆ.
ಇನ್ನು ಪ್ರಕಟವಾಗಿರುವ ಭಾರತ ತಂಡದಲ್ಲಿ ರವಿಚಂದ್ರನ್ ಅಶ್ವಿನ್ ಹಾಗೂ ಅವೇಶ್ ಖಾನ್ ಸೇರ್ಪಡೆ ಅಚ್ಚರಿ ಮೂಡಿಸಿದ್ದರೆ, ಟೀಮ್ ಇಂಡಿಯಾದ ಪ್ರಮುಖ ಬೌಲಿಂಗ್ ಅಸ್ತ್ರ ಜಸ್ಪ್ರೀತ್ ಬುಮ್ರಾ ಪ್ರಕಟವಾಗಿರುವ ತಂಡದಲ್ಲಿ ಇಲ್ಲದೇ ಇರುವುದು ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳ ಪಾಲಿಗೆ ದೊಡ್ಡ ಶಾಕ್ ನೀಡಿದೆ. ಅಷ್ಟಕ್ಕೂ ಜಸ್ಪ್ರೀತ್ ಬೂಮ್ರಾ ಇಂತಹ ಪ್ರತಿಷ್ಠಿತ ಟೂರ್ನಿಗೆ ತಂಡದಲ್ಲಿ ಇಲ್ಲದೇ ಇರಲು ಕಾರಣವೇನು ಎಂಬುದನ್ನು ಕೂಡ ಬಿಸಿಸಿಐ ಬಹಿರಂಗಪಡಿಸಿದೆ.

ಗಾಯದ ಸಮಸ್ಯೆಗೆ ಒಳಗಾಗಿದ್ದಾರೆ ಜಸ್ಪ್ರೀತ್ ಬುಮ್ರಾ
ಜಸ್ ಪ್ರೀತ್ ಬುಮ್ರಾ ಬೆನ್ನಿನ ಗಾಯದ ಸಮಸ್ಯೆಗೆ ಒಳಗಾಗಿರುವ ಕಾರಣದಿಂದಾಗಿ ಏಷ್ಯಾಕಪ್ ಟೂರ್ನಿಯ ಆಯ್ಕೆಗೆ ಅಲಭ್ಯರಾಗಿದ್ದಾರೆ ಎಂಬ ವಿಷಯವನ್ನು ಬಿಸಿಸಿಐ ಬಹಿರಂಗಪಡಿಸಿದೆ. ಹೀಗೆ ಗಾಯದ ಸಮಸ್ಯೆಯಿಂದಾಗಿ ಏಷ್ಯಾಕಪ್ ಟೂರ್ನಿಯಲ್ಲಿ ಕಣಕ್ಕಿಳಿಯುವ ಅವಕಾಶವನ್ನು ಕೈ ತಪ್ಪಿಸಿಕೊಂಡಿರುವ ಜಸ್ಪ್ರೀತ್ ಬುಮ್ರಾ ಸದ್ಯ ನ್ಯಾಶನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ತಂಡದ ಮತ್ತೋರ್ವ ಆಟಗಾರ ಹರ್ಷಲ್ ಪಟೇಲ್ ಜತೆ ಚೇತರಿಸಿಕೊಳ್ಳುತ್ತಿದ್ದಾರೆ. ಇನ್ನು ಜಸ್ ಪ್ರೀತ್ ಬುಮ್ರಾ ಅಲಭ್ಯತೆಯ ಕುರಿತು ಪ್ರತಿಕ್ರಿಯಿಸಿರುವ ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳು ಹಾಗೂ ಕ್ರಿಕೆಟ್ ಪಂಡಿತರು ಬುಮ್ರಾ ಅಲಭ್ಯತೆ ಟೂರ್ನಿಯಲ್ಲಿ ಭಾರತ ತಂಡದ ಬೌಲಿಂಗ್ ವಿಭಾಗಕ್ಕೆ ಹಿನ್ನಡೆ ಉಂಟುಮಾಡಬಹುದು ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ಪ್ರಕಟವಾದ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ , ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಯುಜುವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್
ಈ ಹದಿನೈದು ಆಟಗಾರರ ಜತೆಗೆ ಶ್ರೇಯಸ್ ಐಯ್ಯರ್, ದೀಪಕ್ ಚಹರ್ ಹಾಗೂ ಅಕ್ಷರ್ ಪಟೇಲ್ ಈ ಮೂವರು ಅಟಗಾರರನ್ನು ಬಿಸಿಸಿಐ ಹೆಚ್ಚುವರಿ ಆಟಗಾರರನ್ನಾಗಿ ಪ್ರಕಟಿಸಿದೆ.

ಏಷ್ಯಾಕಪ್ ವೇಳಾಪಟ್ಟಿ
27 ಆಗಸ್ಟ್: ಶ್ರೀಲಂಕಾ vs ಅಫ್ಘಾನಿಸ್ತಾನ (ದುಬೈ)
28 ಆಗಸ್ಟ್: ಭಾರತ vs ಪಾಕಿಸ್ತಾನ (ದುಬೈ)
30 ಆಗಸ್ಟ್: ಬಾಂಗ್ಲಾದೇಶ vs ಅಫ್ಘಾನಿಸ್ತಾನ (ದುಬೈ)
31 ಆಗಸ್ಟ್: ಭಾರತ vs ಕ್ವಾಲಿಫೈಯರ್ (ದುಬೈ)
1 ಸೆಪ್ಟೆಂಬರ್: ಶ್ರೀಲಂಕಾ vs ಬಾಂಗ್ಲಾದೇಶ (ದುಬೈ)
2 ಸೆಪ್ಟೆಂಬರ್: ಪಾಕಿಸ್ತಾನ vs ಕ್ವಾಲಿಫೈಯರ್ (ಶಾರ್ಜಾ)
3 ಸೆಪ್ಟೆಂಬರ್: B1 vs B2 (ಶಾರ್ಜಾ)
4 ಸೆಪ್ಟೆಂಬರ್: A1 vs A2 (ದುಬೈ)
6 ಸೆಪ್ಟೆಂಬರ್: A1 vs B1 (ದುಬೈ)
7 ಸೆಪ್ಟೆಂಬರ್: A2 vs B2 (ದುಬೈ)
8 ಸೆಪ್ಟೆಂಬರ್: A1 vs B2 (ದುಬೈ)
9 ಸೆಪ್ಟೆಂಬರ್: B1 vs A2 (ದುಬೈ)
11 ಸೆಪ್ಟೆಂಬರ್: ಫೈನಲ್ (ದುಬೈ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications