Asia Cup 2022:150 ಸಿಕ್ಸರ್ ಸಿಡಿಸುವೆ ಎಂದು ಭಾರತಕ್ಕೆ ಎಚ್ಚರಿಕೆ ನೀಡಿದ ಪಾಕ್ ಕ್ರಿಕೆಟಿಗ!

ಆಗಸ್ಟ್ 27ರ ಶನಿವಾರದಿಂದ ಬಹು ನಿರೀಕ್ಷಿತ ಏಷ್ಯಾ ಕಪ್ ಟೂರ್ನಿ ಆರಂಭಗೊಂಡಿದ್ದು, ಪ್ರಥಮ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಅಫ್ಘಾನಿಸ್ತಾನ ಭರ್ಜರಿ ಜಯ ಸಾಧಿಸುವುದರ ಮೂಲಕ ಗೆಲುವಿನ ಖಾತೆಯನ್ನು ತೆರೆದಿದೆ. ಇನ್ನು ಇದರ ಬೆನ್ನಲ್ಲೇ ಎಲ್ಲರೂ ಎದುರು ನೋಡುತ್ತಿರುವ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯ ನಡೆಯಲಿದೆ. ಈ ಪಂದ್ಯ ಆಗಸ್ಟ್ 28ರ ಭಾನುವಾರದಂದು ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಈಗಾಗಲೇ ಸ್ಟೇಡಿಯಂನಲ್ಲಿ ಟಿಕೆಟ್ ಖರೀದಿಸುವ ಪ್ರೇಕ್ಷಕರು ಪಂದ್ಯ ವೀಕ್ಷಿಸಲು ದುಬೈ ತಲುಪಿದ್ದರೆ, ದೂರದರ್ಶನದ ಮೂಲಕ ಪಂದ್ಯಗಳನ್ನು ವೀಕ್ಷಿಸುವವರು ಗುಂಪಾಗಿ ಪಂದ್ಯಗಳನ್ನು ವೀಕ್ಷಿಸುವ ಯೋಜನೆಯಲ್ಲಿದ್ದಾರೆ ಹಾಗೂ ಭಾರತದ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿಯೂ ಸಹ ಈ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯದ ನೇರಪ್ರಸಾರವನ್ನು ಆಯೋಜಿಸಲಾಗಿದೆ.
ಇನ್ನು ಕಳೆದ ಬಾರಿ ಟಿ ಟ್ವೆಂಟಿ ಪಂದ್ಯದಲ್ಲಿ ಉಭಯ ತಂಡಗಳು ಪರಸ್ಪರ ಮುಖಾಮುಖಿಯಾಗಿದ್ದಾಗ ಭಾರತದ ವಿರುದ್ಧ ಬಾಬರ್ ಅಜಮ್ ಪಡೆ ಹತ್ತು ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತ್ತು ಹಾಗೂ ಇದು ಟಿ ಟ್ವೆಂಟಿ ವಿಶ್ವಕಪ್‌ನ ಮಹತ್ವದ ಪಂದ್ಯವಾಗಿತ್ತು ಹಾಗೂ ಅದೇ ಮೊದಲ ಬಾರಿಗೆ ಪಾಕ್ ಭಾರತವನ್ನು ವಿಶ್ವಕಪ್ ಹಣಾಹಣಿಯಲ್ಲಿ ಸೋಲಿಸಿದ ಸಾಧನೆಯನ್ನು ಮಾಡಿತ್ತು. ಹೀಗೆ ಕಳೆದ ಟಿ ಟ್ವೆಂಟಿ ಮುಖಾಮುಖಿಯಲ್ಲಿ ಸೋತು ಭಾರೀ ಮುಖಭಂಗಕ್ಕೆ ಒಳಗಾಗಿದ್ದ ಟೀಮ್ ಇಂಡಿಯಾ ಈ ಬಾರಿ ಗೆದ್ದು ಪ್ರತೀಕಾರವನ್ನು ತೀರಿಸಿಕೊಳ್ಳುವತ್ತ ಕಣ್ಣಿಟ್ಟಿದೆ. ಹೀಗೆ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿರುವ ಭಾರತ ಮತ್ತು ಪಾಕಿಸ್ತಾನ ತಂಡಗಳ ಕುರಿತು ಉಭಯ ತಂಡಗಳ ಕೆಲ ಆಟಗಾರರು ಮಾತನಾಡಿದ್ದು, ಪಾಕಿಸ್ತಾನದ ಅಸಿಫ್ ಅಲಿ ಕೂಡ ಮಾತನಾಡಿ ಭರ್ಜರಿ ಸಿಕ್ಸರ್ ಸುರಿಮಳೆ ಸುರಿಸುವ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.

ನಾನು ಪ್ರತೀ ದಿನವೂ 100-150 ಸಿಕ್ಸ್ ಸಿಡಿಸುತ್ತೇನೆ ಎಂದ ಅಲಿ
ಏಷ್ಯಾಕಪ್ ಹಣಾಹಣಿಯ ಕುರಿತಾಗಿ ಮಾತನಾಡಿರುವ ಪಾಕಿಸ್ತಾನದ ಪವರ್ ಹಿಟ್ಟರ್ ಅಸಿಫ್ ಅಲಿ "ನಾನು ಅಭ್ಯಾಸ ಮಾಡುವ ವೇಳೆ ಪ್ರತೀ ದಿನವೂ 100-150 ಸಿಕ್ಸರ್ ಸಿಡಿಸುತ್ತೇನೆ, ಹೀಗಾಗಿ ಪಂದ್ಯದಲ್ಲಿ ನಾನು 4ರಿಂದ 5 ಸಿಕ್ಸರ್ ಸಿಡಿಸುವುದು ಖಚಿತ" ಎಂದು ಪಂದ್ಯದಲ್ಲಿ ಸಿಕ್ಸರ್ ಸುರಿಮಳೆ ಸುರಿಸುವ ಎಚ್ಚರಿಕೆಯನ್ನು ಭಾರತಕ್ಕೆ ರವಾನಿಸಿದ್ದಾರೆ.

ಒಂದೇ ರೀತಿಯ ಹೊಡೆತವನ್ನು ಪದೇ ಪದೇ ಬಾರಿಸುವುದಿಲ್ಲ
ಸಿಕ್ಸ್ ಬಾರಿಸುವುದು ಪಂದ್ಯದ ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ ಎಂದಿರುವ ಅಸಿಫ್ ಅಲಿ ತಾನು ಟಿ20ಯಲ್ಲಿ ಬ್ಯಾಟಿಂಗ್‌ಗೆ ಬಂದಾಗ ತನ್ನ ಮೇಲೆ ಯಾವಾಗಲೂ ಒತ್ತಡವಿರುತ್ತದೆ ಎಂದಿದ್ದಾರೆ ಹಾಗೂ ತಾನು ಒಂದೇ ರೀತಿಯ ಶಾಟ್ ಅನ್ನು ಮತ್ತೆ ಮತ್ತೆ ಆಡುವ ಬಗ್ಗೆ ಯೋಚಿಸುವುದಿಲ್ಲ ಎಂದು ಅಸಿಫ್ ಅಲಿ ಹೇಳಿಕೊಂಡಿದ್ದಾರೆ.

ಟೂರ್ನಿಗೆ ಪ್ರಕಟವಾಗಿರುವ ತಂಡಗಳು
ಭಾರತ:ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್-ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್-ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಆರ್.ಅಶ್ವಿನ್, ಯುಜ್ವೇಂದ್ರ ಚಹಾಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್.
ಪಾಕಿಸ್ತಾನ: ಬಾಬರ್ ಆಜಮ್ (ನಾಯಕ), ಶಾದಾಬ್ ಖಾನ್ (ಉಪನಾಯಕ), ಆಸಿಫ್ ಅಲಿ, ಫಖರ್ ಜಮಾನ್, ಹೈದರ್ ಅಲಿ, ಹಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ವಾಸಿಂ ಜೂನಿಯರ್, ನಸೀಮ್ ಶಾ, ಶಹನವಾಜ್ ಖಾದ್ ದಹಾನಿ ಮತ್ತು ಉಸ್ಮಾನ್ .
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications