IND vs AFG Asia Cup 2022: ಇಂದು ಭಾರತ vs ಅಫ್ಘಾನ್ ಮುಖಾಮುಖಿ: ಔಪಚಾರಿಕ ಕಾದಾಟಕ್ಕೆ ವೇದಿಕೆ ಸಿದ್ಧ

ಬುಧವಾರ ರಾತ್ರಿ ನಡೆದ ಮುಖಾಮುಖಿಯಲ್ಲಿ ಅಫ್ಘಾನಿಸ್ತಾನವನ್ನು ಪಾಕಿಸ್ತಾನ ರೋಚಕವಾಗಿ ಮಣಿಸುವ ಮೂಲಕ ಭಾರತ ಹಾಗೂ ಅಫ್ಘಾನಿಸ್ತಾನ ಎರಡೂ ತಂಡಗಳು ಟೂರ್ನಿಯಿಂದ ಹೊರಬಿದ್ದಿದೆ. ಪಾಕಿಸ್ತಾನ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದು ಫೈನಲ್‌ನಲ್ಲಿ ಶ್ರೀಲಂಕಾ ತಂಡವನ್ನು ಎದುರಿಸಲಿದೆ. ಆದರೆ ಇಂದು ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಮುಖಾಮುಖಿ ನಡೆಯಲಿದ್ದು ಎರಡು ತಂಡಗಳಿಗೂ ಇದು ಕೇವಲ ಔಪಚಾರಿಕ ಪಂದ್ಯವಷ್ಟೇ ಆಗಿದೆ.
ಈ ಪಂದ್ಯ ಭಾರತ ಹಾಗೂ ಅಫ್ಘಾನಿಸ್ತಾನ ಎರಡೂ ತಂಡಗಳಿಗೂ ವಿಶ್ವಕಪ್ ದೃಷ್ಟಿಯಿಂದ ಮತ್ತೊಂದು ಪೂರ್ವಸಿದ್ಧತಾ ಪಂದ್ಯವಷ್ಟೇ ಆಗಿರಲಿದೆ ಎಂಬುದು ಗಮನಾರ್ಹ. ಹೀಗಾಗಿ ವಿಶ್ವಕಪ್ ದೃಷ್ಟಿಯಲ್ಲಿಟ್ಟುಕೊಂಡು ಬದಲಾವಣೆ ಮಾಡಿಕೊಂಡರೂ ಅಚ್ಚರಿಯಿಲ್ಲ. ಅಫ್ಘಾನಿಸ್ತಾನ ತಂಡ ಏಷ್ಯಾ ಕಪ್ ಟೂರ್ಬಿಯಲ್ಲಿ ಅಮೋಘ ಪ್ರದರ್ಶನ ನೀಡುವ ಮೂಲಕ ಚುಟುಕು ಕ್ರಿಕೆಟ್‌ನಲ್ಲಿ ಎಲ್ಲಾ ತಂಡಗಳುಗೂ ತಾನು ದೊಡ್ಡ ಸವಾಲು ನೀಡಲು ಸಜ್ಜು ಎಂಬ ಸೂಚನೆಯನ್ನು ರವಾನಿಸಿದ್ದು ಮುಂದಿನ ವಿಶ್ವಕಪ್‌ನಲ್ಲಿ ಎಲ್ಲಾ ತಂಡಗಳಿಗೂ ಇದು ಎಚ್ಚರಿಕೆಯ ಗಂಟೆಯಾಗಿದೆ.

ಪಂದ್ಯದ ಮಾಹಿತಿ
ಅಫ್ಘಾನಿಸ್ತಾನ ಹಾಗೂ ಭಾರತ ತಂಡಗಳು ಸೆಪ್ಟೆಂಬರ್ 8 ಗುರುವಾರದಂದು ಶಾರ್ಜಾ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಲಿದೆ. ಭಾರತೀಯ ಕಾಲಮಾನ ಸಂಜೆ 7:30ಕ್ಕೆ ಪಂದ್ಯ ಆರಂಭವಾಗಲಿದ್ದು 7 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಸ್ಟಾರ್‌ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪಂದ್ಯ ನೇರಪ್ರಸಾರವಾಗಲಿದ್ದು ಹಾಟ್‌ಸ್ಟಾರ್‌ನಲ್ಲಿಯೂ ಪಂದ್ಯವನ್ನು ವೀಕ್ಷಿಸಬಹುದು.

ಹವಾಮಾನ ವರದಿ ಹಾಗೂ ಪಿಚ್ ರಿಪೋರ್ಟ್
ಪಂದ್ಯದ ದಿನ ಶಾರ್ಜಾ ಕ್ರೀಡಾಂಗಣದ ವಾತಾವರಣದ ಉಷ್ಣಾಂಶ 36ಡಿಗ್ರಿ ಸೆಲ್ಸಿಯಸ್‌ನಷ್ಟಿರುತ್ತದೆ. ಈ ಪಂದ್ಯಕ್ಕೂ ಮಳೆಯಿಂದ ಅಡ್ಡಿ ಉಂಟಾಗುವ ಯಾವುದೇ ಆತಂಕವಿಲ್ಲ. ಹೀಗಾಗಿ ಪಂದ್ಯ ಸಂಪೂರ್ಣವಾಗಿ ನಡೆಯುವ ಅವಕಾಶವಿದೆ.
ಪಿಚ್ ರಿಪೋರ್ಟ್: ದಯಬೈ ಪಿಚ್ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವುಭಾಗಗಳಿಗೂ ಉತ್ತಮ ಬೆಂಬಲ ನೀಡುತ್ತದೆ. ಸ್ಪೋಟಕ ಬ್ಯಾಟಿಂಗ್‌ಗೆ ಅವಕಾಶ ನೀಡಲಿದ್ದರೂ 160-170 ರನ್‌ಗಳನ್ನು ಗಳಿಸಿದರೆ ಸವಾಲಿನ ಮೊತ್ತವಾಗಬಹುದು. ನೇರವಾದ ಬೌಂಡರಿ ಗೆರೆ ಹತ್ತರದಲ್ಲಿದ್ದು ಇದರ ಲಾಭವನ್ನು ಬ್ಯಾಟರ್‌ಗಳು ಪಡೆಯಬಹುದು. ಹೆಚ್ಚುವರಿ ಬೌನ್ಸ್ ಪಡೆಯುವುದು ಕೂಡ ಇಲ್ಲಿನ ಪಿಚ್‌ನ ಮತ್ತೊಂದು ಗುಣವಾಗಿದೆ. ಸ್ಪಿನ್ನರ್‌ಗಳಿಗೆ ಸಣ್ಣ ಮಟ್ಟಿನ ನೆರವು ದೊರೆಯಲಿದೆ.

ಸಂಭಾವ್ಯ ಆಡುವ ಬಳಗ
ಭಾರತ: ಕೆಎಲ್ ರಾಹುಲ್, ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಅರ್ಷ್‌ದೀಪ್ ಸಿಂಗ್, ಯುಜ್ವೇಂದ್ರ ಚಾಹಲ್
ಅಫ್ಘಾನಿಸ್ತಾನ: ಹಜರತುಲ್ಲಾ ಝಜೈ, ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಇಬ್ರಾಹಿಂ ಝದ್ರಾನ್, ಮೊಹಮ್ಮದ್ ನಬಿ (ನಾಯಕ), ನಜೀಬುಲ್ಲಾ ಝದ್ರಾನ್, ಕರೀಮ್ ಜನತ್, ರಶೀದ್ ಖಾನ್, ಸಮೀವುಲ್ಲಾ ಶಿನ್ವಾರಿ, ನವೀನ್-ಉಲ್-ಹಕ್, ಮುಜೀಬ್ ಉರ್ ರಹಮಾನ್, ಫಜಲ್ಹಕ್ ಫರೂಕ್

ಇತ್ತಂಡಗಳ ಸಂಪೂರ್ಣ ಸ್ಕ್ವಾಡ್
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಯುಜುವೇಂದ್ರ ಚಾಹಲ್, ಅರ್ಶ್ದೀಪ್ ಸಿಂಗ್, ದಿನೇಶ್ ಕಾರ್ತಿಕ್(ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಆವೇಶ್ ಖಾನ್ , ರವಿ ಬಿಷ್ಣೋಯ್
ಅಫ್ಘಾನಿಸ್ತಾನ ತಂಡ: ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಮೊಹಮ್ಮದ್ ನಬಿ (ನಾಯಕ), ಹಜರತುಲ್ಲಾ ಝಜೈ, ಇಬ್ರಾಹಿಂ ಜದ್ರಾನ್, ನಜಿಬುಲ್ಲಾ ಝದ್ರಾನ್, ಕರೀಮ್ ಜನತ್, ಅಜ್ಮತುಲ್ಲಾ ಒಮರ್ಝೈ, ರಶೀದ್ ಖಾನ್, ಮುಜೀಬ್ ಉರ್ ರಹಮಾನ್, ಫರೀದ್ ಅಹ್ಮದ್ ಮಲಿಕ್, ಫರೀದ್ ಅಹ್ಮದ್ ಮಲಿಕ್, ಫರೀದ್ ಅಹ್ಮದ್ ಮಲಿಕ್, ಅಫ್ಸರ್ ಝಜೈ, ಉಸ್ಮಾನ್ ಘನಿ, ನವೀನ್-ಉಲ್-ಹಕ್, ನೂರ್ ಅಹ್ಮದ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications