IND vs PAK: ಭಾರತ ಚೆನ್ನಾಗಿ ಆಡಲಿಲ್ಲ ಲಕ್‌ನಿಂದ ಗೆದ್ದಿತಷ್ಟೇ; ಪಾಕ್ ಪತ್ರಕರ್ತನ ಅಹಂಕಾರ!

ಪ್ರಸ್ತುತ ನಡೆಯುತ್ತಿರುವ ಏಷ್ಯಾ ಕಪ್ ಟೂರ್ನಿಯ ಬಹುನಿರೀಕ್ಷಿತ ಪಂದ್ಯ ಎನಿಸಿಕೊಂಡಿದ್ದ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯ ನಿನ್ನೆಯಷ್ಟೇ ( ಆಗಸ್ಟ್ 28 ) ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಜರುಗಿತು. ಈ ಬೃಹತ್ ಕಾಳಗದಲ್ಲಿ ಟೀಮ್ ಇಂಡಿಯಾ ಕೊನೆಯ ಹಂತದಲ್ಲಿ ರೋಚಕ ಜಯ ಸಾಧಿಸುವುದರ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿ ಅಂಕಪಟ್ಟಿಯಲ್ಲಿ ಗೆಲುವಿನ ಖಾತೆ ತೆರೆಯಿತು.
ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಮೊದಲು ಫೀಲ್ಡಿಂಗ್ ಮಾಡುವ ಆಯ್ಕೆಯನ್ನು ಆಯ್ದುಕೊಂಡು ಎದುರಾಳಿ ಪಾಕಿಸ್ತಾನವನ್ನು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿ 19.5 ಓವರ್‌ನಲ್ಲಿ 147 ರನ್‌ಗಳಿಗೆ ಆಲ್ ಔಟ್ ಆಗಿ ಟೀಮ್ ಇಂಡಿಯಾಗೆ 148 ರನ್‌ಗಳ ಸಾಧಾರಣ ಗುರಿಯನ್ನು ನೀಡಿತು. ಭಾರತ ತಂಡಕ್ಕೆ ಕಮ್ ಬ್ಯಾಕ್ ಮಾಡಿರುವ ಭುವನೇಶ್ವರ್ ಕುಮಾರ್ ಹಾಗೂ ಹಾರ್ದಿಕ್ ಪಾಂಡ್ಯ ಅಧಿಕ ವಿಕೆಟ್‍ಗಳನ್ನು ಕಬಳಿಸುವುದರ ಮೂಲಕ ಪಾಕಿಸ್ತಾನ ಹಿನ್ನಡೆ ಅನುಭವಿಸುವಂತೆ ಮಾಡಿದರು.
ಇತ್ತ ಪಾಕಿಸ್ತಾನ ನೀಡಿದ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ಇನ್ನಿಂಗ್ಸ್ ಉದ್ದಕ್ಕೂ ಏಳು ಬೀಳುಗಳನ್ನು ಕಂಡು ಕೊನೆಯ 3 ಎಸೆತಗಳಲ್ಲಿ 6 ರನ್ ಬೇಕಿದ್ದಾಗ ಹಾರ್ದಿಕ್ ಪಾಂಡ್ಯ ಸಿಕ್ಸರ್ ಬಾರಿಸಿದ ಪರಿಣಾಮ ರೋಚಕ ಜಯವನ್ನು ಸಾಧಿಸಿತು. ಭಾರತದ ಪರ ವಿರಾಟ್ ಕೊಹ್ಲಿ 35 ರನ್, ರವೀಂದ್ರ ಜಡೇಜಾ 35 ರನ್ ಹಾಗೂ ಹಾರ್ದಿಕ್ ಪಾಂಡ್ಯ 33 ರನ್ ಸಿಡಿಸಿ ಜವಾಬ್ದಾರಿಯುತ ಆಟವಾಡಿದರು. ಹೀಗಾಗಿ ಟೀಮ್ ಇಂಡಿಯಾ 19.4 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 148 ರನ್ ಕಲೆ ಹಾಕಿ 5 ವಿಕೆಟ್‍ಗಳ ಭರ್ಜರಿ ಜಯ ಸಾಧಿಸಿತು. ಹೀಗೆ ಭಾರತ ತಂಡ ತನ್ನ ಆಟಗಾರರ ಅಮೋಘ ಪ್ರದರ್ಶನದಿಂದ ಜಯ ಸಾಧಿಸಿದ್ದರೆ ಪಾಕಿಸ್ತಾನದ ಪತ್ರಕರ್ತನೋರ್ವ ಭಾರತ ಗೆದ್ದದ್ದು ಅದೃಷ್ಟದಿಂದ ಹೊರತು ಉತ್ತಮ ಆಟದಿಂದಲ್ಲ ಎಂದು ಟ್ವೀಟ್ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟ್ರೋಲ್ ಮತ್ತು ಟೀಕೆಗೆ ಒಳಗಾಗಿದ್ದಾರೆ.

ಅದೃಷ್ಟ ಇಲ್ಲದಿದ್ದರೆ ಭಾರತ ಯಾವ ಪಂದ್ಯವನ್ನೂ ಸಹ ಗೆಲ್ಲಲು ಆಗುತ್ತಿರಲಿಲ್ಲ
ಪಂದ್ಯದ ಕುರಿತಾಗಿ ಟ್ವೀಟ್ ಮಾಡಿರುವ ಪಾಕಿಸ್ತಾನದ ಜಿಯೋ ನ್ಯೂಸ್ ಎಂಬ ಚಾನೆಲ್‌ನ ಪತ್ರಕರ್ತನಾದ ಆರ್ಫ ಫಿರೋಜ್ ಝೇಕ್ ಅದೃಷ್ಟ ಭಾರತಕ್ಕಿಂತ ಚೆನ್ನಾಗಿ ಕ್ರಿಕೆಟ್ ಆಡಿದೆ ಏಕೆಂದರೆ ಅದೃಷ್ಟ ಭಾರತದ ಪರ ಇಲ್ಲದೇ ಇದ್ದಿದ್ದರೆ ಭಾರತ ಪಾಕ್ ವಿರುದ್ಧ ಯಾವುದೇ ಪಂದ್ಯವನ್ನು ಕೂಡ ಗೆಲ್ಲುತ್ತಿರಲಿಲ್ಲ ಎಂದು ಬರೆದುಕೊಂಡಿದ್ದಾನೆ. ಹಾಗೂ ಇಂದು ಪಾಕಿಸ್ತಾನ ಭಾರತಕ್ಕಿಂತ ಉತ್ತಮವಾದ ಕ್ರಿಕೆಟ್ ಆಡಿತು ಎಂದು ಸಹ ಆ ಪತ್ರಕರ್ತ ಬರೆದುಕೊಂಡಿದ್ದಾನೆ.

ಪತ್ರಕರ್ತನ ಸರಣಿ ಟ್ವೀಟ್
ಈ ಟ್ವೀಟ್ ಮಾತ್ರವಲ್ಲದೇ ಈತ ಭಾರತ ಮತ್ತು ಪಾಕ್ ನಡುವಿನ ಪಂದ್ಯದಲ್ಲಿ ಟೀಂ ಇಂಡಿಯಾ ಕಳಪೆ ಪ್ರದರ್ಶನ ನೀಡಿತು ಹಾಗೂ ಕೆಟ್ಟ ಕ್ರಿಕೆಟ್ ಆಡಿತು ಎಂದು ಸಾಲು ಸಾಲು ಟ್ವೀಟ್ ಮಾಡಿದ್ದಾನೆ. ಓರ್ವ ಪತ್ರಕರ್ತನಾಗಿ ಈ ರೀತಿಯ ಕಿಡಿಗೇಡಿ ಟ್ವೀಟ್ ಮಾಡಿದ ಫಿರೋಜ್ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ, ಸ್ವತಃ ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಗಳೇ ಈತನ ಟ್ವೀಟ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಿಡಿಕಾರಿದ ನೆಟ್ಟಿಗರು
ಈತನ ಸರಣಿ ಟ್ವೀಟ್ ನಲ್ಲಿ ಹಲವಾರು ಕ್ರಿಕೆಟ್ ಅಭಿಮಾನಿಗಳು ಕಾಮೆಂಟ್ ಮಾಡಿದ್ದು ಭಿನ್ನ ವಿಭಿನ್ನವಾದ ರೀತಿಯಲ್ಲಿ ಈತನ ಕಾಲೆಳೆದಿದ್ದಾರೆ. ಕೆಲವರು ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ನಡೆದಿರುವ ಟಿಟ್ವೆಂಟಿ ಮುಖಾಮುಖಿ ಅಂಕಿಅಂಶಗಳನ್ನು ಟ್ವೀಟ್ ಮಾಡಿದ್ದಾರೆ ಹಾಗೂ ಇನ್ನೂ ಕೆಲವರು ಭಾರತ ಉತ್ತಮವಾದ ಕ್ರಿಕೆಟ್ ಆಡುವ ಮೂಲಕ ಜಯವನ್ನು ಸಾಧಿಸಿದೆ, ಓರ್ವ ಪತ್ರಕರ್ತನಾಗಿ ಈ ರೀತಿಯ ವರ್ತನೆ ಸರಿಯಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications