For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ & ರೋಹಿತ್‌ ಮೇಲಿನ ಒತ್ತಡದಿಂದ ತಂಡದ ಸಮತೋಲನ ಹಾಳಾಗ್ತಿದೆ:ಇಂಜಮಾಮ್ ಉಲ್ ಹಕ್

Rohit and Kohli

ಏಷ್ಯಾಕಪ್‌ನ ಸೂಪರ್ 4 ಹಂತದಲ್ಲಿ ಗೆಲ್ಲಲೇಬೇಕಾದ ಮಹತ್ವದ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭಾರತ ಆರು ವಿಕೆಟ್‌ಗಳ ಸೋಲನ್ನು ಎದುರಿಸಬೇಕಾಯಿತು. ಮೊದಲು ಬ್ಯಾಟಿಂಗ್ ಮಾಡಿದ ಬಾರತ 173 ರನ್‌ಗಳ ಸವಾಲಿನ ಸ್ಕೋರ್ ಅನ್ನು ಕಲೆ ಹಾಕಿತು.ಆದರೆ ಶ್ರೀಲಂಕಾ ಆಟಗಾರರು ಒಂದು ಎಸೆತ ಬಾಕಿ ಉಳಿದಿರುವಂತೆ ಸುಲಭವಾಗಿ ಗೆಲುವನ್ನ ದಾಖಲಿಸಿದ್ರು.

ಏಷ್ಯಾಕಪ್‌ನ ಹಾಟ್ ಫೇವರಿಟ್ ಆಗಿದ್ದ ಭಾರತದ ಈ ಸೋಲನ್ನು ಕಂಡು ವಿಶ್ವದಾದ್ಯಂತ ಕ್ರಿಕೆಟ್ ದಿಗ್ಗಜರು ಅಚ್ಚರಿಗೊಂಡಿದ್ದರು. ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಕಾರಿದ್ರು. ಇದರ ಜೊತೆಗೆ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಇಂಜಮಾಮ್ ಉಲ್ ಹಕ್ ಭಾರತದ ಹಿರಿಯ ಆಟಗಾರರ ಮೇಲೆ ಅಸಮಧಾನ ಹೊರಹಾಕಿದ್ದಾರೆ.

ಕೊಹ್ಲಿ ಬ್ಯಾಟಿಂಗ್ ಪ್ರಶ್ನಿಸಿದ ಇಂಜಮಾಮ್ ಉಲ್ ಹಕ್

ಕೊಹ್ಲಿ ಬ್ಯಾಟಿಂಗ್ ಪ್ರಶ್ನಿಸಿದ ಇಂಜಮಾಮ್ ಉಲ್ ಹಕ್

ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್-ಉಲ್-ಹಕ್ ಭಾರತದ ಸೋಲಿನ ಬಗ್ಗೆ ಕೆಲವು ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ನೋಡಿ ನನಗೆ ಆಶ್ಚರ್ಯವಾಯಿತು ಎಂದು ಇಂಜಮಾಮ್-ಉಲ್-ಹಕ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ. ವಿರಾಟ್ ಕೊಹ್ಲಿಯಂತಹ ಆಟಗಾರ ಕೇವಲ ನಾಲ್ಕು ಬಾಲ್ ಡಾಟ್ ಆಡಿದ ನಂತರ ಇಷ್ಟು ಒತ್ತಡಕ್ಕೆ ಒಳಗಾಗುತ್ತಾನೆ ಎಂದು ನಾನು ಊಹಿಸಿರಲಿಲ್ಲ. ಸರಿಯಾದ ಸಮಯಕ್ಕೆ ಕೊಹ್ಲಿ ವಿಕೆಟ್ ಕಳೆದುಕೊಂಡಿದ್ದು ತಂಡಕ್ಕೆ ಮತ್ತಷ್ಟು ಸಂಕಷ್ಟ ತಂದಿದೆ ಎಂದಿದ್ದಾರೆ.

ಒತ್ತಡವು ರೋಹಿತ್ ಮುಖದಲ್ಲಿ ಕಾಣುತ್ತಿದೆ

ಒತ್ತಡವು ರೋಹಿತ್ ಮುಖದಲ್ಲಿ ಕಾಣುತ್ತಿದೆ

ಇಂಜಮಾಮ್-ಉಲ್-ಹಕ್ ಪ್ರಕಾರ, ಕೆಎಲ್ ರಾಹುಲ್ ಔಟಾದ ನಂತರ ರೋಹಿತ್ ಶರ್ಮಾ ಅವರ ಪ್ರತಿಕ್ರಿಯೆಯು ಭಾರತ ತಂಡವು ಒತ್ತಡಕ್ಕೆ ಸಿಲುಕಿದೆ ಎಂದು ಸ್ಪಷ್ಟಪಡಿಸಿದೆ. ಇಂತಹ ಸಮಯದಲ್ಲಿ ತಂಡದ ಅನುಭವಿ ಆಟಗಾರ ವಿರಾಟ್ ಕೊಹ್ಲಿ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕಿತ್ತು. ಆದರೆ ಆತ ಬಂದ ಕೂಡಲೇ ದೊಡ್ಡ ತಪ್ಪು ಮಾಡಿದ. ತಂಡದ ಹಿರಿಯ ಆಟಗಾರರು ಇಂತಹ ಒತ್ತಡದಲ್ಲಿ ಸಿಲುಕಿದ್ರೆ ಜೂನಿಯರ್ ಆಟಗಾರರು ತಮ್ಮನ್ನು ಹೇಗೆ ನಿಭಾಯಿಸುತ್ತಾರೆ ಎಂದು ಇಂಜಮಾಮ್-ಉಲ್-ಹಕ್ ಹೇಳಿದ್ದಾರೆ.

ಹಿರಿಯ ಆಟಗಾರರ ಒತ್ತಡದಿಂದ ತಂಡದ ಸಮತೋಲನ ಹಾಳು

ಹಿರಿಯ ಆಟಗಾರರ ಒತ್ತಡದಿಂದ ತಂಡದ ಸಮತೋಲನ ಹಾಳು

ಹಿರಿಯ ಆಟಗಾರರು ತಮ್ಮ ಒತ್ತಡವನ್ನು ಮರೆಮಾಚಬೇಕು. ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯದಲ್ಲಿ ವೇಗದ ಬೌಲರ್‌ಗಳು ಆಗಮಿಸುತ್ತಿದ್ದಂತೆಯೇ ಭಾರತ ದಾಳಿ ಆರಂಭಿಸಿತು ಎಂದು ಇಂಜಮಾಮ್ ಉಲ್ ಹಕ್ ಹೇಳಿದ್ದಾರೆ. ಶ್ರೀಲಂಕಾದ ಬಗ್ಗೆ ಮಾತನಾಡಿದ ಇಂಜಮಾಮ್-ಉಲ್-ಹಕ್, ಶ್ರೀಲಂಕಾ ತನ್ನ ಕೊನೆಯ ಎರಡು ಪಂದ್ಯಗಳನ್ನು ಗೆದ್ದಿರಬಹುದು, ಆದರೆ ಇಲ್ಲಿ ಭಾರತವೇ ನೆಚ್ಚಿನದು ಎಂದು ಹೇಳಿದರು.

ತಂಡದಲ್ಲಿ ರವೀಂದ್ರ ಜಡೇಜಾ ಕೊರತೆ ಎದ್ದು ಕಾಣ್ತಿದೆ

ತಂಡದಲ್ಲಿ ರವೀಂದ್ರ ಜಡೇಜಾ ಕೊರತೆ ಎದ್ದು ಕಾಣ್ತಿದೆ

ರವೀಂದ್ರ ಜಡೇಜಾ ಇಂಜ್ಯುರಿಯಿಂದ ಟೂರ್ನಿಯಿಂದಲೇ ಹೊರಬಿದ್ದ ಹಿನ್ನೆಲೆಯಲ್ಲಿ ತಂಡವನ್ನು ಬದಲಾಯಿಸಬೇಕಿತ್ತು ಎಂದು ಇಂಜಮಾಮ್ ಉಲ್ ಹಕ್ ಹೇಳಿದ್ದಾರೆ. ಆದರೆ ಭಾರತ ತಲಾ ಮೂವರು ಆಟಗಾರರನ್ನು ಬದಲಾಯಿಸಿದೆ. ಜಡೇಜಾ ಬದಲಿಗೆ ಅವರಂತಹ ಆಟಗಾರ ಮಾತ್ರ ತಂಡದಲ್ಲಿ ಬರಬೇಕಿತ್ತು. ಆದರೆ ನಾಯಕ ರೋಹಿತ್ ಶರ್ಮಾಗೆ ಸರಿಯಾದ ಸಂಯೋಜನೆಯನ್ನು ಕಂಡುಕೊಳ್ಳುವಲ್ಲಿ ಯಶಸ್ವಿಯಾಗಲಿಲ್ಲ, ಏಷ್ಯಾ ಕಪ್‌ನೊಂದಿಗೆ ಭಾರತದ ಪಯಣ ಬಹುತೇಕ ಮುಗಿದಿದೆ ಎಂಬುದನ್ನ ಕಾಣಬಹುದು.

ಜಡೇಜಾ ಬದಲು ಅಕ್ಷರ್ ಪಟೇಲ್ ಸ್ಕ್ವಾಡ್‌ನಲ್ಲಿದ್ರೂ ಸಹ ಅವಕಾಶ ಏಕೆ ನೀಡಲಿಲ್ಲ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಇನ್ನು ಯುವ ಸ್ಪಿನ್ನರ್ ರವಿ ಬಿಷ್ಣೋಯಿ ಹೊರಗಿಟ್ಟು ಅಶ್ವಿನ್‌ಗೆ ಮಣೆ ಹಾಕಿದ್ದು ಭಾರೀ ಚರ್ಚೆಗೆ ಎಡೆಮಾಡಿಕೊಟ್ಟಿದೆ.

Story first published: Wednesday, September 7, 2022, 23:11 [IST]
Other articles published on Sep 7, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+