For Quick Alerts
ALLOW NOTIFICATIONS  
For Daily Alerts
 

Asia Cup 2022 PAK vs SL Final Live: ಪಾಕಿಸ್ತಾನ ಮಣಿಸಿ 6ನೇ ಬಾರಿ ಚಾಂಪಿಯನ್ ಆದ ಶ್ರೀಲಂಕಾ

Pakistan vs Srilanka

ಏಷ್ಯಾ ಕಪ್ ಟೂರ್ನಿಯ ಫೈನಲ್ ಪಂದ್ಯ ಇಂದು ನಡೆಯಲಿದೆ. ಟಿ20 ವಿಶ್ವಕಪ್ ಹಿನ್ನೆಲೆಯಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದ ಈ ಟೂರ್ನಿಯಲ್ಲಿ ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳು ಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದು ಚಾಂಪಿಯನ್ ಪಟ್ಟಕ್ಕಾಗಿ ಇಂದು ತೀವ್ರ ಸೆಣೆಸಾಟವನ್ನು ನಡೆಸಲು ಸಜ್ಜಾಗಿದೆ.

ಶ್ರೀಲಂಕಾ ಹಾಗೂ ಪಾಕಿಸ್ತಾನ ತಂಡಗಳ ಈ ಬಾರಿಯ ಏಷ್ಯಾ ಕಪ್ ಆರಂಭ ಉತ್ತಮವಾಗಿರಲಿಲ್ಲ. ಆರಂಭಿಕ ಪಂದ್ಯದಲ್ಲಿಯೇ ಈ ಎರಡು ತಂಡಗಳು ಕೂಡ ಸೋಲು ಅನುಭವಿಸಿದ್ದವು. ಅದರಲ್ಲೂ ಶ್ರೀಲಂಕಾ ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನದ ವಿರುದ್ಧ ಹೀನಾಯ ಸೋಲು ಅನುಭವಿಸುವ ಮೂಲಕ ದೊಡ್ಡ ನಿರಾಸೆ ಮೂಡಿಸಿತ್ತು. ಆದರೆ ಅದಾದ ಬಳಿಕ ಅದ್ಭುತ ರೀತಿಯಲ್ಲಿ ತಿರುಗಿಬೀಳಲು ಯಶಸ್ವಿಯಾಗಿದ್ದು ಫೈನಲ್ ಹಂತಕ್ಕೆ ಪ್ರವೇಶ ಪಡೆದುಕೊಂಡಿದೆ.

Sep 11, 2022, 11:59 pm IST

171 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡ 20 ಓವರ್‌ಗಳಲ್ಲಿ 147 ರನ್ ಗಳಿಸಿ ಆಲೌಟ್ ಆಗಿ ಮುಖಭಂಗ ಅನುಭವಿಸಿತು. ಈ ಮೂಲಕ ಅಂತಿಮವಾಗಿ ಟೂರ್ನಿ ಆಯೋಜಕ ಶ್ರೀಲಂಕಾ ತಂಡ 23 ರನ್‌ಗಳಿಂದ ಜಯಭೇರಿ ಬಾರಿಸಿತು.

Sep 11, 2022, 11:59 pm IST

ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 170 ರನ್ ಕಲೆ ಹಾಕಿದ್ದು, ಎದುರಾಳಿ ಪಾಕಿಸ್ತಾನ ತಂಡಕ್ಕೆ ಗೆಲ್ಲಲು 171 ರನ್‌ಗಳ ಗುರಿಯನ್ನು ನೀಡಿತ್ತು.

Sep 11, 2022, 11:59 pm IST

ಏಷ್ಯಾ ಕಪ್‌ 2022ರ ಫೈನಲ್ ಪಂದ್ಯದಲ್ಲಿ ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ ತಂಡದ ವಿರುದ್ಧ ದಸುನ್ ಶನಕ ನಾಯಕತ್ವದ ಶ್ರೀಲಂಕಾ ತಂಡ 23 ರನ್‌ಗಳ ಜಯ ದಾಖಲಿಸಿ, 6ನೇ ಬಾರಿ ಏಷ್ಯಾ ಕಪ್ ಚಾಂಪಿಯನ್ ಪಟ್ಟ ಅಂಲಂಕರಿಸಿತು.

Sep 11, 2022, 11:01 pm IST

2022ರ ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 171 ರನ್‌ಗಳ ಗುರಿ ಬೆನ್ನತ್ತಿರುವ ಪಾಕಿಸ್ತಾನ ತಂಡ 16.2 ಓವರ್ ಮುಕ್ತಾಯಕ್ಕೆ 5 ವಿಕೆಟ್ ಕಳೆದುಕೊಂಡು 111 ರನ್ ಗಳಿಸಿದೆ.

Sep 11, 2022, 10:52 pm IST

2022ರ ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 171 ರನ್‌ಗಳ ಗುರಿ ಬೆನ್ನತ್ತಿರುವ ಪಾಕಿಸ್ತಾನ ತಂಡ 15 ಓವರ್ ಮುಕ್ತಾಯಕ್ಕೆ 3 ವಿಕೆಟ್ ಕಳೆದುಕೊಂಡು 102 ರನ್ ಗಳಿಸಿದೆ.

Sep 11, 2022, 10:33 pm IST

2022ರ ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 171 ರನ್‌ಗಳ ಗುರಿ ಬೆನ್ನತ್ತಿರುವ ಪಾಕಿಸ್ತಾನ ತಂಡ 11.2 ಓವರ್ ಮುಕ್ತಾಯಕ್ಕೆ 2 ವಿಕೆಟ್ ಕಳೆದುಕೊಂಡು 80 ರನ್ ಗಳಿಸಿದೆ.

Sep 11, 2022, 10:06 pm IST

2022ರ ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 171 ರನ್‌ಗಳ ಗುರಿ ಬೆನ್ನತ್ತಿರುವ ಪಾಕಿಸ್ತಾನ ತಂಡ 6 ಓವರ್ ಮುಕ್ತಾಯಕ್ಕೆ 2 ವಿಕೆಟ್ ಕಳೆದುಕೊಂಡು 37 ರನ್ ಗಳಿಸಿದೆ.

Sep 11, 2022, 9:51 pm IST

2022ರ ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 171 ರನ್‌ಗಳ ಗುರಿ ಬೆನ್ನತ್ತಿರುವ ಪಾಕಿಸ್ತಾನ ತಂಡ 3.2 ಓವರ್ ಮುಕ್ತಾಯಕ್ಕೆ 1 ವಿಕೆಟ್ ಕಳೆದುಕೊಂಡು 22 ರನ್ ಗಳಿಸಿದೆ.

Sep 11, 2022, 9:46 pm IST

2022ರ ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 171 ರನ್‌ಗಳ ಗುರಿ ಬೆನ್ನತ್ತಿರುವ ಪಾಕಿಸ್ತಾನ ತಂಡ 2 ಓವರ್ ಮುಕ್ತಾಯಕ್ಕೆ ವಿಕೆಟ್ ನಷ್ಟವಿಲ್ಲದೆ 16 ರನ್ ಗಳಿಸಿದೆ.

Sep 11, 2022, 9:24 pm IST

ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 170 ರನ್ ಕಲೆ ಹಾಕಿದ್ದು, ಎದುರಾಳಿ ಪಾಕಿಸ್ತಾನ ತಂಡಕ್ಕೆ ಗೆಲ್ಲಲು 171 ರನ್‌ಗಳ ಗುರಿಯನ್ನು ನೀಡಿದೆ.

Sep 11, 2022, 9:11 pm IST

2022ರ ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಶ್ರೀಲಂಕಾ ತಂಡ 19 ಓವರ್ ಮುಕ್ತಾಯಕ್ಕೆ 155 ರನ್ ಗಳಿಸಿ 6 ವಿಕೆಟ್ ಕಳೆದುಕೊಂಡಿದೆ.

Sep 11, 2022, 9:00 pm IST

2022ರ ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಶ್ರೀಲಂಕಾ ತಂಡ 17 ಓವರ್ ಮುಕ್ತಾಯಕ್ಕೆ 136 ರನ್ ಗಳಿಸಿ 6 ವಿಕೆಟ್ ಕಳೆದುಕೊಂಡಿದೆ.

Sep 11, 2022, 8:44 pm IST

2022ರ ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಶ್ರೀಲಂಕಾ ತಂಡ 13.2 ಓವರ್ ಮುಕ್ತಾಯಕ್ಕೆ 104 ರನ್ ಗಳಿಸಿ 5 ವಿಕೆಟ್ ಕಳೆದುಕೊಂಡಿದೆ.

Sep 11, 2022, 8:27 pm IST

2022ರ ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಶ್ರೀಲಂಕಾ ತಂಡ 10 ಓವರ್ ಮುಕ್ತಾಯಕ್ಕೆ 67 ರನ್ ಗಳಿಸಿ 5 ವಿಕೆಟ್ ಕಳೆದುಕೊಂಡಿದೆ.

Sep 11, 2022, 8:17 pm IST

2022ರ ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಶ್ರೀಲಂಕಾ ತಂಡ 7.4 ಓವರ್ ಮುಕ್ತಾಯಕ್ಕೆ 53 ರನ್ ಗಳಿಸಿ 4 ವಿಕೆಟ್ ಕಳೆದುಕೊಂಡಿದೆ.

Sep 11, 2022, 8:04 pm IST

2022ರ ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಶ್ರೀಲಂಕಾ ತಂಡ 5.2 ಓವರ್ ಮುಕ್ತಾಯಕ್ಕೆ 40 ರನ್ ಗಳಿಸಿ 3 ವಿಕೆಟ್ ಕಳೆದುಕೊಂಡಿದೆ.

Sep 11, 2022, 7:38 pm IST

2022ರ ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಶ್ರೀಲಂಕಾ ತಂಡ 1 ಓವರ್ ಮುಕ್ತಾಯಕ್ಕೆ 4 ರನ್ ಗಳಿಸಿ 1 ವಿಕೆಟ್ ಕಳೆದುಕೊಂಡಿದೆ.

Sep 11, 2022, 7:11 pm IST

ಪಾಕಿಸ್ತಾನದ ಆಡುವ ಹನ್ನೊಂದರ ಬಳಗ: ಮೊಹಮ್ಮದ್ ರಿಜ್ವಾನ್(ವಿಕೆಟ್ ಕೀಪರ್), ಬಾಬರ್ ಅಜಮ್(ನಾಯಕ), ಫಖರ್ ಜಮಾನ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಮೊಹಮ್ಮದ್ ನವಾಜ್, ಶಾದಾಬ್ ಖಾನ್, ಆಸಿಫ್ ಅಲಿ, ಹ್ಯಾರಿಸ್ ರೌಫ್, ನಸೀಮ್ ಶಾ, ಮೊಹಮ್ಮದ್ ಹಸ್ನೇನ್

Sep 11, 2022, 7:09 pm IST

ಶ್ರೀಲಂಕಾದ ಆಡುವ ಹನ್ನೊಂದರ ಬಳಗ: ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್(ವಿಕೆಟ್ ಕೀಪರ್), ಧನಂಜಯ ಡಿ ಸಿಲ್ವಾ, ದನುಷ್ಕ ಗುಣತಿಲಕ, ಭಾನುಕ ರಾಜಪಕ್ಸೆ, ದಸುನ್ ಶನಕ(ನಾಯಕ), ವನಿಂದು ಹಸರಂಗ, ಚಮಿಕಾ ಕರುಣಾರತ್ನೆ, ಪ್ರಮೋದ್ ಮದುಶನ್, ಮಹೀಶ್ ತೀಕ್ಷಣ, ದಿಲ್ಶನ್ ಮಧುಶಂಕ

Sep 11, 2022, 7:09 pm IST

ಏಷ್ಯಾ ಕಪ್ ಪಂದ್ಯಾವಳಿಯ ಗುಂಪು ಹಂತದಲ್ಲಿ, ಎರಡೂ ತಂಡಗಳು ಮೂರರಲ್ಲಿ ಒಂದು ಪಂದ್ಯವನ್ನು ಸೋತಿವೆ ಮತ್ತು ಸೂಪರ್ 4ರ ಹಂತದಲ್ಲಿ ಎರಡು ತಂಡಗಳು ಭಾರತ ಮತ್ತು ಅಫ್ಘಾನಿಸ್ತಾನವನ್ನು ಸೋಲಿಸಿ ಫೈನಲ್‌ಗೆ ಪ್ರವೇಶಿಸಿದರು.

Sep 11, 2022, 7:09 pm IST

ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡರು. ಹೀಗಾಗಿ ದಸುನ್ ಶನಕ ನಾಯಕತ್ವದ ಶ್ರೀಲಂಕಾ ತಂಡ ಮೊದಲು ಬ್ಯಾಟಿಂಗ್‌ಗೆ ಇಳಿಯಲಿದೆ.

Sep 11, 2022, 7:09 pm IST

ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಭಾನುವಾರ ನಡೆಯಲಿರುವ 2022ರ ಏಷ್ಯಾ ಕಪ್ ಫೈನಲ್ ಹಾಗೂ ಅಂತಿಮ ಪಂದ್ಯದಲ್ಲಿ ಶ್ರೀಲಂಕಾ ಮತ್ತು ಪಾಕಿಸ್ತಾನ ತಂಡಗಳು ಪರಸ್ಪರ ಸೆಣಸಲಿವೆ.

Sep 11, 2022, 2:30 pm IST

ದುಬೈ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ಸಾಮಾನ್ಯವಾಗಿ 160-170ರಷ್ಟು ರನ್‌ಗಳಿಸಿದೆ ಸ್ಪರ್ಧಾತ್ಮಕ ಸ್ಕೋರ್ ಗಳಿಸಿದಂತಾಗುತ್ತದೆ. ಆದರೆ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಭಾರತ 182 ರನ್‌ಗಳ ಗುರಿ ನೀಡಿಯೂ ಅದನ್ನು ರಕ್ಷಿಸಲು ವಿಫಲವಾಗಿರುವುದು ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ಇನ್ನು ನೇರ ಬೌಂಡರಿಗಳು ಚಿಕ್ಕದಾಗಿದ್ದು ಅದರ ಲಾಭವನ್ನು ಬ್ಯಾಟರ್‌ಗಳು ಪಡೆದುಕೊಳ್ಳಬಹುದು. ಇನ್ನು ಸೀಮ್ ಹಾಗೂ ಬೌನ್ಸ್‌ಗೆ ಅನುಕೂಲವಾಗಲಿದ್ದು ಸ್ಪಿನ್ನರ್‌ಗಳಿಗೆ ಕಡಿಮೆ ನೆರವು ದೊರೆಯಲಿದೆ. ಹವಾಮಾನ ವರದಿ: ಇನ್ನು ಪಂದ್ಯದ ಸಮಯದಲ್ಲಿ ಮಳೆಯಾಗುವ ಯಾವುದೇ ಸಂಭವವಿಲ್ಲ. 35 ಡಿಗ್ರಿ ಉಷ್ಣಾಂಶವಿರಲಿದ್ದು ಬೌಲಿಂಗ್ ನಡೆಸುವ ಸಂದರ್ಭದಲ್ಲಿ ಸವಾಲೆನಿಸಲಿದೆ.

Sep 11, 2022, 2:30 pm IST

ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳು ಸೆಪ್ಟೆಂಬರ್ 11 ಭಾನುವಾರದಂದು ದುಬೈನ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಲಿದೆ. ಭಾರತೀಯ ಕಾಲಮಾನ ಸಂಜೆ 7:30ಕ್ಕೆ ಪಂದ್ಯ ಆರಂಭವಾಗಲಿದ್ದು 7 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಸ್ಟಾರ್‌ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪಂದ್ಯ ನೇರಪ್ರಸಾರವಾಗಲಿದ್ದು ಹಾಟ್‌ಸ್ಟಾರ್‌ನಲ್ಲಿಯೂ ಪಂದ್ಯವನ್ನು ವೀಕ್ಷಿಸಬಹುದು.

Sep 11, 2022, 2:29 pm IST

ಸಂಪೂರ್ಣ ಸ್ಕ್ವಾಡ್ ಹೀಗಿದೆ ಪಾಕಿಸ್ತಾನ: ಬಾಬರ್ ಅಜಮ್ (ನಾಯಕ), ಶಾದಾಬ್ ಖಾನ್, ಫಖರ್ ಜಮಾನ್, ಹೈದರ್ ಅಲಿ, ಹಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ನಸೀಮ್ ಶಾ, ಶಹನವಾಜ್ ದಹಾನಿ, ಉಸ್ಮಾನ್ ಖಾದಿರ್, ಆಸಿಫ್ ಅಲಿ, ಮೊಹಮ್ಮದ್ ಹಸನೈನ್, ಹಸನ್ ಅಲಿ

Sep 11, 2022, 2:29 pm IST

ಸಂಪೂರ್ಣ ಸ್ಕ್ವಾಡ್ ಹೀಗಿದೆ ಶ್ರೀಲಂಕಾ: ದಸುನ್ ಶನಕಾ (ನಾಯಕ), ದನುಷ್ಕ ಗುಣತಿಲಕ, ಪಾತುಂ ನಿಸ್ಸಾಂಕ, ಕುಸಲ್ ಮೆಂಡಿಸ್, ಚರಿತ್ ಅಸಲಂಕ, ಭಾನುಕ ರಾಜಪಕ್ಸೆ, ಅಶೇನ್ ಬಂಡಾರ, ಧನಂಜಯ ಡಿ ಸಿಲ್ವ, ವನಿಂದು ಹಸರಂಗ, ಮಹೀಶ್ ತೀಕ್ಷಣ, ಜೆಫ್ರಿ ವಂಡರ್ಸೆ, ಪ್ರವೀಣ್ ಜಯವಿಕ್ರಮ, ಚಾಮಿಕ ಕರುಣಾರತ್ನೆ, ಡಿ.ಡಿ. ಚಂಡಿಮಲ್, ನುವಾನಿಡು ಫೆರ್ನಾಂಡೊ, ಅಸಿತ ಫೆರ್ನಾಂಡೊ, ಪ್ರಮೋದ್ ಮದುಶನ್, ನುವಾನ್ ತುಷಾರ

Sep 11, 2022, 2:28 pm IST

ಈ ಫೈನಲ್ ಪಂದ್ಯಕ್ಕೂ ಮುನ್ನ ಸೂಪರ್ 4 ಹಂತದ ಅಂತಿಮ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ಶ್ರೀಲಂಕಾ ಈ ಎರಡು ತಂಡಗಳೇ ಮುಖಾಮುಖಿಯಾಗಿದ್ದ ಕಾರಣ ಫೈನಲ್ ಸೆಣೆಸಾಟಕ್ಕೂ ಮುನ್ನ ಉತ್ತಮ ಸಿದ್ಧತೆಯನ್ನು ಮಾಡಿಕೊಂಡಂತಾಗಿದೆ. ಆ ಪಂದ್ಯದಲ್ಲಿ ಶ್ರೀಲಂಕಾ ತಂಡ ಅಮೋಘ ಪ್ರದರ್ಶನ ನೀಡಿದ್ದು ಭರ್ಜರಿ ಗೆಲುವು ಸಾಧಿಸುವ ಮೂಲಕ ಫೈನಲ್‌ ಪಂದ್ಯಕ್ಕೆ ಆತ್ಮವಿಶ್ವಾಸದಿಂದ ಕಣಕ್ಕಿಳಿದಿದೆ.

Sep 09, 2022, 10:44 pm IST

2022ರ ಏಷ್ಯಾ ಕಪ್ ಸೂಪರ್ 4ರ ಅಂತಿಮ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಅರ್ಧಶತಕ ಗಳಿಸಿದ ಶ್ರೀಲಂಕಾದ ಪಾತುಮ್ ನಿಸ್ಸಾಂಕ.

Sep 09, 2022, 10:44 pm IST

2022ರ ಏಷ್ಯಾ ಕಪ್ ಸೂಪರ್ 4ರ ಅಂತಿಮ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಶ್ರೀಲಂಕಾ 17 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 124 ರನ್ ಗಳಿಸಿ ಗೆಲುವಿನ ಬೀರಿತು.

Sep 09, 2022, 9:56 pm IST

2022ರ ಏಷ್ಯಾ ಕಪ್ ಸೂಪರ್ 4ರ ಅಂತಿಮ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಶ್ರೀಲಂಕಾ 7 ಓವರ್‌ಗಳಲ್ಲಿ 46 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿದೆ.

Sep 09, 2022, 9:31 pm IST

2022ರ ಏಷ್ಯಾ ಕಪ್ ಸೂಪರ್ 4ರ ಅಂತಿಮ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಶ್ರೀಲಂಕಾ 2 ಓವರ್‌ಗಳಲ್ಲಿ 3 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿದೆ.

Sep 09, 2022, 9:18 pm IST

ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಪರ ಆರಂಭಿಕರಾಗಿ ಮೊಹಮ್ಮದ್ ರಿಜ್ವಾನ್ ಮತ್ತು ನಾಯಕ ಬಾಬರ್ ಅಜಂ ಕಣಕ್ಕಿಳಿದರು. ಆದರೆ ತಂಡದ ಮೊತ್ತ 28 ರನ್‌ಗಳಾಗಿದ್ದಾಗ 14 ರನ್ ಗಳಿಸಿ ಆಡುತ್ತಿದ್ದ ಮೊಹಮ್ಮದ್ ರಿಜ್ವಾನ್ ಔಟಾದರು. ನಂತರ ಬಂದ ಫಖರ್ ಜಮಾನ್ 13 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

Sep 09, 2022, 9:17 pm IST

ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 19.1 ಓವರ್‌ಗಳಲ್ಲಿ 10 ವಿಕೆಟ್ ನಷ್ಟಕ್ಕೆ 121 ರನ್ ಕಲೆ ಹಾಕಿದ್ದು, ಎದುರಾಳಿ ಶ್ರೀಲಂಕಾ ತಂಡಕ್ಕೆ ಗೆಲ್ಲಲು 122 ರನ್‌ಗಳ ಗುರಿಯನ್ನು ನೀಡಿದೆ.

Sep 09, 2022, 8:50 pm IST

2022ರ ಏಷ್ಯಾ ಕಪ್ ಸೂಪರ್ 4ರ ಅಂತಿಮ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಪಾಕಿಸ್ತಾನ 16 ಓವರ್‌ಗಳಲ್ಲಿ 95 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡಿದೆ.

Sep 09, 2022, 8:38 pm IST

2022ರ ಏಷ್ಯಾ ಕಪ್ ಸೂಪರ್ 4ರ ಅಂತಿಮ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಪಾಕಿಸ್ತಾನ 13.3 ಓವರ್‌ಗಳಲ್ಲಿ 82 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿದೆ.

Sep 09, 2022, 8:21 pm IST

2022ರ ಏಷ್ಯಾ ಕಪ್ ಸೂಪರ್ 4ರ ಅಂತಿಮ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಪಾಕಿಸ್ತಾನ 10 ಓವರ್‌ಗಳಲ್ಲಿ 66 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿದೆ.

Sep 09, 2022, 8:04 pm IST

2022ರ ಏಷ್ಯಾ ಕಪ್ ಸೂಪರ್ 4ರ ಅಂತಿಮ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಪಾಕಿಸ್ತಾನ 6 ಓವರ್‌ಗಳಲ್ಲಿ 49 ರನ್‌ಗಳಿಗೆ 1 ವಿಕೆಟ್ ಕಳೆದುಕೊಂಡಿದೆ.

Sep 09, 2022, 7:54 pm IST

ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಶುಕ್ರವಾರ ನಡೆಯುತ್ತಿರುವ 2022ರ ಏಷ್ಯಾ ಕಪ್ ಸೂಪರ್ 4ರ ಅಂತಿಮ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಪಾಕಿಸ್ತಾನ 4 ಓವರ್‌ಗಳಲ್ಲಿ 34 ರನ್‌ಗಳಿಗೆ 1 ವಿಕೆಟ್ ಕಳೆದುಕೊಂಡಿದೆ.

Sep 09, 2022, 7:14 pm IST

ಏಷ್ಯಾ ಕಪ್‌ 2022: ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವಿನ ಸೂಪರ್ 4 ಪಂದ್ಯದ ಟಾಸ್ ವರದಿ, ಆಡುವ ಬಳಗ ಮತ್ತು ಲೈವ್ ಸ್ಕೋರ್‌ಗೆ ಇಲ್ಲಿ ಮಾಹಿತಿ ಪಡೆಯಿರಿ.

Sep 09, 2022, 7:13 pm IST

ಶ್ರೀಲಂಕಾದ ಆಡುವ ಹನ್ನೊಂದರ ಬಳಗ: ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್(ವಿಕೆಟ್ ಕೀಪರ್), ಧನಂಜಯ ಡಿ ಸಿಲ್ವಾ, ದನುಷ್ಕ ಗುಣತಿಲಕ, ಭಾನುಕ ರಾಜಪಕ್ಸೆ, ದಸುನ್ ಶನಕ(ನಾಯಕ), ವನಿಂದು ಹಸರಂಗ, ಚಮಿಕಾ ಕರುಣಾರತ್ನೆ, ಪ್ರಮೋದ್ ಮದುಶನ್, ಮಹೀಶ್ ತೀಕ್ಷಣ, ದಿಲ್ಶನ್ ಮಧುಶಂಕ

Sep 09, 2022, 7:13 pm IST

ಪಾಕಿಸ್ತಾನದ ಆಡುವ ಹನ್ನೊಂದರ ಬಳಗ: ಮೊಹಮ್ಮದ್ ರಿಜ್ವಾನ್(ವಿಕೆಟ್ ಕೀಪರ್), ಬಾಬರ್ ಅಜಂ(ನಾಯಕ), ಫಖರ್ ಜಮಾನ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಆಸಿಫ್ ಅಲಿ, ಮೊಹಮ್ಮದ್ ನವಾಜ್, ಉಸ್ಮಾನ್ ಖಾದಿರ್, ಹ್ಯಾರಿಸ್ ರೌಫ್, ಮೊಹಮ್ಮದ್ ಹಸನೈನ್, ಹಸನ್ ಅಲಿ

Sep 09, 2022, 7:13 pm IST

ಶುಕ್ರವಾರದ ಪಂದ್ಯವು ಶ್ರೀಲಂಕಾ ಮತ್ತು ಪಾಕಿಸ್ತಾನ ತಂಡಗಳಿಗೆ ಸೂಪರ್ 4ರ ಕೊನೆಯ ಪಂದ್ಯವು ಅನೌಪಚಾರಿಕ ಪಂದ್ಯವಾಗಿದ್ದು, ಎರಡು ತಂಡಗಳು ಫೈನಲ್‌ಗೂ ಮುನ್ನ ತಮ್ಮ ಆಟಗಾರರ ಪ್ರದರ್ಶನ ಸುಧಾರಿಸಲು ಎದುರು ನೋಡುತ್ತಿವೆ. ಸೆಪ್ಟೆಂಬರ್ 11ರಂದು ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ 2022 ಏಷ್ಯಾ ಕಪ್ ಫೈನಲ್ ಪಂದ್ಯ ನಡೆಯಲಿದೆ.

Sep 09, 2022, 7:13 pm IST

ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಶ್ರೀಲಂಕಾ ನಾಯಕ ದಸುನ್ ಶನಕ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡರು. ಹೀಗಾಗಿ ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ ತಂಡ ಮೊದಲು ಬ್ಯಾಟಿಂಗ್‌ಗೆ ಇಳಿಯಲಿದೆ.

Sep 09, 2022, 6:20 pm IST

ದುಬೈ ಸೂಪರ್ ಫೋರ್‌ನಲ್ಲಿ ಉತ್ತಮ ಬ್ಯಾಟಿಂಗ್ ಪಿಚ್‌ಗಳನ್ನು ಪೂರೈಸಿದೆ, ಎರಡನೇ ಬ್ಯಾಟಿಂಗ್ ಮಾಡುವ ತಂಡಗಳು ವಿಶೇಷವಾಗಿ ಆಡಲು ಉತ್ತಮ ಪರಿಸ್ಥಿತಿಗಳನ್ನು ಪಡೆಯುತ್ತವೆ. ಜೊತೆಗೆ ಎರಡನೇ ಬ್ಯಾಟಿಂಗ್ ಮಾಡಿದ ತಂಡಗಳೇ ಹೆಚ್ಚು ಪಂದ್ಯ ಜಯಿಸಿವೆ.

Sep 09, 2022, 5:28 pm IST

ಪಾಕಿಸ್ತಾನ ಮತ್ತು ಶ್ರೀಲಂಕಾ ಹೆಡ್ ಟು ಹೆಡ್‌ ರೆಕಾರ್ಡ್‌: ಪಾಕಿಸ್ತಾನ 13 - 8 ಶ್ರೀಲಂಕಾ. 2019ರಲ್ಲಿ ಪಾಕಿಸ್ತಾನದಲ್ಲಿ ಉಭಯ ತಂಡಗಳು ಕೊನೆಯ ಬಾರಿಗೆ ಮುಖಾಮುಖಿಯಾದಾಗ, ಶ್ರೀಲಂಕಾ ತವರಿನ ತಂಡವನ್ನು 3-0 ಅಂತರದಿಂದ ಸೋಲಿಸಿತ್ತು.

Sep 09, 2022, 4:55 pm IST

2021 ರ T20 ವಿಶ್ವಕಪ್‌ನಿಂದ, ಪಾಕಿಸ್ತಾನದ ಲೆಗ್‌ ಸ್ಪಿನ್ನರ್ ಶಾದಾಬ್ ಖಾನ್ 15 T20 ಅಂತರಾಷ್ಟ್ರೀಯ ಇನ್ನಿಂಗ್ಸ್‌ಗಳಲ್ಲಿ 22 ವಿಕೆಟ್‌ಗಳನ್ನು ಪಡೆದಿದ್ದಾರೆ ಮತ್ತು ಈ ಅವಧಿಯಲ್ಲಿ 5.90 ರ ಎಕಾನಮಿ ದರ ಹೊಂದಿದ್ದಾರೆ.

Sep 09, 2022, 4:54 pm IST

ಜನವರಿ 2022 ರಿಂದ, ಶ್ರೀಲಂಕಾ ತಂಡದ ನಾಯಕ ದಸುನ್ ಶನಕ 15 T20 ಅಂತರಾಷ್ಟ್ರೀಯ ಇನ್ನಿಂಗ್ಸ್‌ಗಳಲ್ಲಿ 145.05 ಸ್ಟ್ರೈಕ್ ರೇಟ್ ಮತ್ತು 39.60 ರ ಸರಾಸರಿಯಲ್ಲಿ 396 ರನ್ ಗಳಿಸಿದ್ದಾರೆ.

Sep 09, 2022, 3:49 pm IST

ಪಾಕಿಸ್ತಾನ ಸಂಭಾವ್ಯ ಪ್ಲೇಯಿಂಗ್ 11: ಮೊಹಮ್ಮದ್ ರಿಜ್ವಾನ್, ಬಾಬರ್ ಆಜಮ್, ಫಖರ್ ಜಮಾನ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಆಸಿಫ್ ಅಲಿ, ಖುಷ್ದಿಲ್ ಶಾ, ಹಾರಿಸ್ ರೌಫ್, ನಸೀಮ್ ಶಾ, ಮೊಹಮ್ಮದ್ ಹಸ್ನೇನ್

Sep 09, 2022, 3:48 pm IST

ಶ್ರೀಲಂಕಾ ಸಂಭಾವ್ಯ ಪ್ಲೇಯಿಂಗ್ 11: ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್, ಚರಿತ್ ಅಸಲಂಕ, ದನುಷ್ಕ ಗುಣತಿಲಕ, ಭಾನುಕ ರಾಜಪಕ್ಸೆ, ದಸುನ್ ಶನಕ, ವನಿಂದು ಹಸರಂಗ, ಚಾಮಿಕ ಕರುಣಾರತ್ನೆ, ಮಹೀಶ್ ತೀಕ್ಷಣ, ಅಸಿತ ಫೆರ್ನಾಂಡೋ, ದಿಲ್ಶನ್ ಮಧುಶಂಕ

Sep 09, 2022, 2:20 pm IST

ದುಬೈ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ಏಷ್ಯಾಕಪ್ 2022ರ ಫೈನಲ್ ಪಂದ್ಯಕ್ಕೂ ಮುನ್ನ ಸೂಪರ್ 4 ಕೊನೆಯ ಪಂದ್ಯದಲ್ಲಿ ಶ್ರೀಲಂಕಾ ಮತ್ತು ಪಾಕಿಸ್ತಾನ ಮುಖಾಮುಖಿಯಾಗಿದ್ದು, ಫಲಿತಾಂಶದ ದೃಷ್ಟಿಯಲ್ಲಿ ಇದು ಕೇವಲ ಔಪಚಾರಿಕ ಪಂದ್ಯವಾಗಿದೆ. ಈಗಾಗಲೇ ಉಭಯ ತಂಡಗಳು ಭಾನುವಾರ (ಸೆ. 11) ನಡೆಯಲಿರುವ ಫೈನಲ್ ಪಂದ್ಯಕ್ಕೆ ಅರ್ಹತೆ ಪಡೆದಿವೆ.

Sep 08, 2022, 10:43 pm IST

ಅಫ್ಘಾನಿಸ್ತಾನ ವಿರುದ್ಧ ಟೀಂ ಇಂಡಿಯಾಗೆ 101ರನ್‌ಗಳ ಭರ್ಜರಿ ಜಯ. ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 111 ರನ್ ಕಲೆಹಾಕಿದ ಅಫ್ಘಾನಿಸ್ತಾನ, 213 ರನ್ ಗುರಿ ನೀಡಿದ್ದ ಟೀಂ ಇಂಡಿಯಾ

Sep 08, 2022, 10:17 pm IST

ಅಫ್ಘಾನಿಸ್ತಾನ 14 ಓವರ್ ಮುಕ್ತಾಯಕ್ಕೆ 57/7, 213 ರನ್ ಗುರಿ ನೀಡಿದ್ದ ಟೀಂ ಇಂಡಿಯಾ

Sep 08, 2022, 10:14 pm IST

ಅಫ್ಘಾನಿಸ್ತಾನದ ಏಳನೇ ವಿಕೆಟ್ ಪತನ, ರಶೀದ್ ಖಾನ್ 15 ರನ್‌ಗಳಿಸಿ ದೀಪಕ್ ಹೂಡಾಗೆ ವಿಕೆಟ್ ಒಪ್ಪಿಸಿದ್ರು. ಅಫ್ಘಾನಿಸ್ತಾನ 54/7 (13.1 ಓವರ್)

Sep 08, 2022, 10:03 pm IST

10 ಓವರ್ ಮುಕ್ತಾಯಕ್ಕೆ ಅಫ್ಥಾನಿಸ್ತಾನ ಆರು ವಿಕೆಟ್ ನಷ್ಟಕ್ಕೆ 34 ರನ್ ಕಲೆಹಾಕಿದೆ

Sep 08, 2022, 9:52 pm IST

ಭುವನೇಶ್ವರ್ ಕುಮಾರ್ 4 ಓವರ್‌ಗಳಲ್ಲಿ ಒಂದು ಮೇಡನ್ ಸಹಿತ ಕೇವಲ 4 ರನ್ ನೀಡಿ 5 ವಿಕೆಟ್ ಕಬಳಿಸಿದ್ದಾರೆ.

Sep 08, 2022, 9:52 pm IST

ಅಫ್ಘಾನಿಸ್ತಾನದ 6 ವಿಕೆಟ್ ಪತನ, ಭಾರತದ ಪರ ಐದನೇ ವಿಕೆಟ್ ಪಡೆದ ಭುವನೇಶ್ವರ್ ಕುಮಾರ್, ಟಿ20 ಕ್ರಿಕೆಟ್‌ನಲ್ಲಿ ಬೆಸ್ಟ್‌ ಬೌಲಿಂಗ್‌. ಅಫ್ಘಾನಿಸ್ತಾನ 6.5 ಓವರ್‌ಗಳಲ್ಲಿ 21/6

Sep 08, 2022, 9:42 pm IST

5 ಓವರ್ ಮುಕ್ತಾಯಕ್ಕೆ ಅಫ್ಘಾನಿಸ್ತಾನ 4 ವಿಕೆಟ್ ನಷ್ಟಕ್ಕೆ 19 ರನ್ ಕಲೆಹಾಕಿದೆ

Sep 08, 2022, 9:32 pm IST

ಅಫ್ಘಾನಿಸ್ತಾನದ ನಾಲ್ಕನೇ ವಿಕೆಟ್ ಪತನ, ತನ್ನ ಎರಡನೇ ಓವರನ್‌ನಲ್ಲಿ ನಾಲ್ಕನೇ ವಿಕೆಟ್ ಪಡೆದ ಭುವನೇಶ್ವರ್ ಕುಮಾರ್‌. ಅಫ್ಘಾನಿಸ್ತಾನ 3 ಓವರ್‌ಗಳಲ್ಲಿ 9/4

Sep 08, 2022, 9:29 pm IST

ಅಫ್ಘಾನಿಸ್ತಾನದ ಮೂರನೇ ವಿಕೆಟ್ ಪತನ, ಮೂರು ವಿಕೆಟ್ ಉರುಳಿಸಿದ ಭುವನೇಶ್ವರ್ ಕುಮಾರ್. ಅಫ್ಘಾನಿಸ್ತಾನ 2.4 ಓವರ್‌ಗಳಲ್ಲಿ 9/3

Sep 08, 2022, 9:22 pm IST

ಮೊದಲ ಓವರ್‌ನಲ್ಲೇ ಎರಡು ವಿಕೆಟ್ ಕಳೆದುಕೊಂಡ ಅಫ್ಘಾನಿಸ್ತಾನ. ಕೇವಲ ಒಂದು ರನ್‌ಗೆ ಎರಡು ವಿಕೆಟ್‌ ಪಡೆದ ಭುವನೇಶ್ವರ್ ಕುಮಾರ್

Sep 08, 2022, 9:19 pm IST

ಅಫ್ಘಾನಿಸ್ತಾನದ ಮೊದಲ ವಿಕೆಟ್ ಪತನ, ಶೂನ್ಯಕ್ಕೆ ವಿಕೆಟ್ ಕಳೆದುಕೊಂಡ ಹಜರತುಲ್ಲಾ ಝಜೈ

Sep 08, 2022, 9:02 pm IST

ಭಾರತ ನಿಗದಿತ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 212 ರನ್ ಕಲೆಹಾಕಿದ್ದು, ಅಫ್ಘಾನಿಸ್ತಾನಕ್ಕೆ 213ರನ್ ಗುರಿ ನೀಡಿದೆ. ವಿರಾಟ್ ಕೊಹ್ಲಿ 61 ಎಸೆತಗಳಲ್ಲಿ ಅಜೇಯ 122 ರನ್ ಕಲೆಹಾಕಿದ್ದಾರೆ. ರಿಷಭ್ ಪಂತ್ 16 ಎಸೆತಗಳಲ್ಲಿ ಅಜೇಯ 20 ರನ್ ಸಿಡಿಸಿದ್ದಾರೆ.

Sep 08, 2022, 8:58 pm IST

19.1 ಓವರ್‌ಗಳಲ್ಲಿ 200 ರ ಗಡಿ ಮುಟ್ಟಿದ ಟೀಂ ಇಂಡಿಯಾ. ಕೊಹ್ಲಿ ಅಜೇಯ 111 ರನ್

Sep 08, 2022, 8:55 pm IST

ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 71ನೇ ಶತಕ ದಾಖಲಿಸಿದ ವಿರಾಟ್ ಕೊಹ್ಲಿ, ಬರೋಬ್ಬರಿ ಎರಡೂವರೆ ವರ್ಷದ ಬಳಿಕ ಕೊಹ್ಲಿ ಅಂತರಾಷ್ಟ್ರೀಯ ಶತಕ ದಾಖಲು

Sep 08, 2022, 8:54 pm IST

ಟಿ20 ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ಸಿಡಿಸಿದ ವಿರಾಟ್ ಕೊಹ್ಲಿ 53 ಎಸೆತಗಳಲ್ಲಿ ಮೂರಂಕಿ ಗಡಿ ಮುಟ್ಟಿದ ವಿರಾಟ್‌

Sep 08, 2022, 8:51 pm IST

18 ಓವರ್ ಮುಕ್ತಾಯಕ್ಕೆ ಟೀಂ ಇಂಡಿಯಾ 2 ವಿಕೆಟ್ ನಷ್ಟಕ್ಕೆ 175 ರನ್ ಕಲೆಹಾಕಿದೆ. ವಿರಾಟ್ ಕೊಹ್ಲಿ ಅಜೇಯ 90, ರಿಷಭ್ ಪಂತ್ 15 ರನ್

Sep 08, 2022, 8:44 pm IST

17 ಓವರ್ ಮುಕ್ತಾಯಕ್ಕೆ ಟೀಂ ಇಂಡಿಯಾ 2 ವಿಕೆಟ್ ನಷ್ಟಕ್ಕೆ 160 ರನ್ ಕಲೆಹಾಕಿದೆ. ವಿರಾಟ್ ಕೊಹ್ಲಿ ಅಜೇಯ 77, ರಿಷಭ್ ಪಂತ್ 14 ರನ್

Sep 08, 2022, 8:43 pm IST

ರಿಷಭ್ ಪಂತ್ 9 ರನ್‌ಗಳಿಸಿದ್ದಾಗ ಕ್ಯಾಚ್ ಕೈ ಚೆಲ್ಲಿದ ಮುಜೀಬ್ ಉರ್ ರಹಮಾನ್

Sep 08, 2022, 8:39 pm IST

16 ಓವರ್ ಮುಕ್ತಾಯಕ್ಕೆ ಟೀಂ ಇಂಡಿಯಾ 2 ವಿಕೆಟ್ ನಷ್ಟಕ್ಕೆ 145 ರನ್ ಕಲೆಹಾಕಿದೆ. ವಿರಾಟ್ ಕೊಹ್ಲಿ ಅಜೇಯ 66, ರಿಷಭ್ ಪಂತ್ 8 ರನ್

Sep 08, 2022, 8:36 pm IST

15 ಓವರ್ ಮುಕ್ತಾಯಕ್ಕೆ ಟೀಂ ಇಂಡಿಯಾ 2 ವಿಕೆಟ್ ನಷ್ಟಕ್ಕೆ 134 ರನ್ ಕಲೆಹಾಕಿದೆ. ವಿರಾಟ್ ಕೊಹ್ಲಿ ಅಜೇಯ 59, ರಿಷಭ್ ಪಂತ್ 6 ರನ್

Sep 08, 2022, 8:33 pm IST

14 ಓವರ್ ಮುಕ್ತಾಯಕ್ಕೆ ಟೀಂ ಇಂಡಿಯಾ 2 ವಿಕೆಟ್ ನಷ್ಟಕ್ಕೆ 130 ರನ್ ಕಲೆಹಾಕಿದೆ. ವಿರಾಟ್ ಕೊಹ್ಲಿ ಅಜೇಯ 57, ರಿಷಭ್ ಪಂತ್ 4 ರನ್

Sep 08, 2022, 8:28 pm IST

ಮೊದಲ ಎಸೆತದಲ್ಲಿ ಸಿಕ್ಸರ್‌ ಸಿಡಿಸಿ, ಎರಡನೇ ಎಸೆತದಲ್ಲಿ ಇನ್‌ಸೈಡ್ ಎಡ್ಜ್‌ ಆಗಿ ಬೌಲ್ಡ್‌ ಆದ ಸೂರ್ಯಕುಮಾರ್ ಯಾದವ್ 6 ರನ್‌ಗೆ ಔಟ್‌

Sep 08, 2022, 8:25 pm IST

ಕೆ.ಎಲ್ ರಾಹುಲ್ 41 ಎಸೆತಗಳಲ್ಲಿ 62 ರನ್‌ಗಳಿಸಿ ಔಟ್‌. ಭಾರತ 12.4 ಓವರ್‌ಗಳಲ್ಲಿ 119/1

Sep 08, 2022, 8:21 pm IST

12 ಓವರ್ ಮುಕ್ತಾಯಕ್ಕೆ ಟೀಂ ಇಂಡಿಯಾ ವಿಕೆಟ್ ನಷ್ಟವಿಲ್ಲದೆ 111 ರನ್ ಕಲೆಹಾಕಿದೆ.

Sep 08, 2022, 8:20 pm IST

36 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ KL ರಾಹುಲ್, ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 17ನೇ ಫಿಫ್ಟಿ ದಾಖಲಿಸಿದ್ದಾರೆ.

Sep 08, 2022, 8:19 pm IST

11.2 ಓವರ್‌ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 100 ರನ್ ಕಲೆಹಾಕಿದ ಟೀಂ ಇಂಡಿಯಾ, ಈ ಟೂರ್ನಿಯಲ್ಲಿ ಮೊದಲ ಆರಂಭಿಕ ಶತಕದ ಜೊತೆಯಾಟವಾಡಿದೆ.

Sep 08, 2022, 8:17 pm IST

32 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ವಿರಾಟ್ ಕೊಹ್ಲಿ, ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 33ನೇ ಫಿಫ್ಟಿ ದಾಖಲಿಸಿದ್ದಾರೆ.

Sep 08, 2022, 8:11 pm IST

ಭಾರತ 10 ಓವರ್ ಮುಕ್ತಾಯಕ್ಕೆ ವಿಕೆಟ್ ನಷ್ಟವಿಲ್ಲದೆ 87 ರನ್ ಕಲೆಹಾಕಿದೆ. ಕೆಎಲ್ ರಾಹುಲ್ ಅಜೇಯ 42, ವಿರಾಟ್ ಕೊಹ್ಲಿ ಅಜೇಯ 44 ರನ್

Sep 08, 2022, 8:07 pm IST

ಭಾರತ 9 ಓವರ್ ಮುಕ್ತಾಯಕ್ಕೆ ವಿಕೆಟ್ ನಷ್ಟವಿಲ್ಲದೆ 80 ರನ್ ಕಲೆಹಾಕಿದೆ. ಕೆಎಲ್ ರಾಹುಲ್ ಅಜೇಯ 37, ವಿರಾಟ್ ಕೊಹ್ಲಿ ಅಜೇಯ 42 ರನ್

Sep 08, 2022, 8:03 pm IST

34 ರನ್‌ಗಳಿಸಿದ್ದಾಗ ವಿರಾಟ್ ಕೊಹ್ಲಿಯ ಕ್ಯಾಚ್ ಡ್ರಾಪ್‌. ಮೊಹಮ್ಮದ್ ನಬಿ ಬೌಲಿಂಗ್‌ನಲ್ಲಿ ಇಬ್ರಾಹಿಂ ಜರ್ದಾನ್‌ ಕ್ಯಾಚ್ ಕೈ ಚೆಲ್ಲಿದರು. ಭಾರತ 8 ಓವರ್ ಮುಕ್ತಾಯಕ್ಕೆ ವಿಕೆಟ್ ನಷ್ಟವಿಲ್ಲದೆ 72 ರನ್ ಕಲೆಹಾಕಿದೆ

Sep 08, 2022, 7:59 pm IST

ಭಾರತ 6 ಓವರ್ ಮುಕ್ತಾಯಕ್ಕೆ ವಿಕೆಟ್ ನಷ್ಟವಿಲ್ಲದೆ 61 ರನ್ ಕಲೆಹಾಕಿದೆ. ಕೆಎಲ್ ರಾಹುಲ್ ಅಜೇಯ 33, ವಿರಾಟ್ ಕೊಹ್ಲಿ ಅಜೇಯ 27 ರನ್

Sep 08, 2022, 7:55 pm IST

ಭಾರತ 6 ಓವರ್ ಮುಕ್ತಾಯಕ್ಕೆ ವಿಕೆಟ್ ನಷ್ಟವಿಲ್ಲದೆ 52 ರನ್ ಕಲೆಹಾಕಿದೆ. ಕೆಎಲ್ ರಾಹುಲ್ ಅಜೇಯ 26, ವಿರಾಟ್ ಕೊಹ್ಲಿ ಅಜೇಯ 25 ರನ್

Sep 08, 2022, 7:52 pm IST

ಭಾರತ 5 ಓವರ್ ಮುಕ್ತಾಯಕ್ಕೆ ವಿಕೆಟ್ ನಷ್ಟವಿಲ್ಲದೆ 37 ರನ್ ಕಲೆಹಾಕಿದೆ. ಕೆಎಲ್ ರಾಹುಲ್ ಅಜೇಯ 26, ವಿರಾಟ್ ಕೊಹ್ಲಿ ಅಜೇಯ 10 ರನ್

Sep 08, 2022, 7:44 pm IST

ಭಾರತ 3 ಓವರ್ ಮುಕ್ತಾಯಕ್ಕೆ ವಿಕೆಟ್ ನಷ್ಟವಿಲ್ಲದೆ 21 ರನ್ ಕಲೆಹಾಕಿದೆ. ಕೆಎಲ್ ರಾಹುಲ್ ಅಜೇಯ 13, ವಿರಾಟ್ ಕೊಹ್ಲಿ ಅಜೇಯ 7 ರನ್

Sep 08, 2022, 7:40 pm IST

ಭಾರತ 2 ಓವರ್ ಮುಕ್ತಾಯಕ್ಕೆ ವಿಕೆಟ್ ನಷ್ಟವಿಲ್ಲದೆ 9 ರನ್ ಕಲೆಹಾಕಿದೆ. ಕೆಎಲ್ ರಾಹುಲ್ ಅಜೇಯ 6, ವಿರಾಟ್ ಕೊಹ್ಲಿ ಅಜೇಯ 2 ರನ್

Sep 08, 2022, 7:36 pm IST

ಭಾರತ 1 ಓವರ್ ಮುಕ್ತಾಯಕ್ಕೆ ವಿಕೆಟ್ ನಷ್ಟವಿಲ್ಲದೆ 6 ರನ್ ಕಲೆಹಾಕಿದೆ

Sep 08, 2022, 7:32 pm IST

ಟೀಂ ಇಂಡಿಯಾ ಪರ ಕೆ.ಎಲ್ ರಾಹುಲ್ ಜೊತೆಗೆ ಓಪನರ್ ಆಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ

Sep 08, 2022, 7:10 pm IST

ಟೀಂ ಇಂಡಿಯಾ ಪ್ಲೇಯಿಂಗ್ ಇಲೆವೆನ್: ಕೆಎಲ್ ರಾಹುಲ್(ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್(ವಿಕೆಟ್ ಕೀಪರ್), ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ದೀಪಕ್ ಚಾಹರ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್

Sep 08, 2022, 7:09 pm IST

ಅಫ್ಘಾನಿಸ್ತಾನ ಪ್ಲೇಯಿಂಗ್ ಇಲೆವೆನ್: ಹಜರತುಲ್ಲಾ ಝಜೈ, ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಇಬ್ರಾಹಿಂ ಝದ್ರಾನ್, ನಜೀಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ (ನಾಯಕ), ಕರೀಮ್ ಜನತ್, ರಶೀದ್ ಖಾನ್, ಅಜ್ಮತುಲ್ಲಾ ಒಮರ್ಜಾಯ್, ಮುಜೀಬ್ ಉರ್ ರಹಮಾನ್, ಫರೀದ್ ಅಹ್ಮದ್ ಮಲಿಕ್, ಫಜಲ್ಹಕ್ ಫಾರೂಕಿ

Sep 08, 2022, 7:04 pm IST

ಟೀಂ ಇಂಡಿಯಾ ಪ್ಲೇಯಿಂಗ್‌ ಇಲೆವೆನ್‌ನಲ್ಲಿ ಮೂವರು ಆಟಗಾರರ ಬದಲಾವಣೆ. ನಾಯಕ ರೋಹಿತ್ ಶರ್ಮಾ, ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ಸ್ಪಿನ್ನರ್ ಯುಜವೇಂದ್ರ ಚಹಾಲ್‌ ಔಟ್‌. ಅವರ ಬದಲು ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ದೀಪಕ್ ಚಹಾರ್‌ಗೆ ಸ್ಥಾನ

Sep 08, 2022, 7:01 pm IST

ಭಾರತ-ಅಫ್ಘಾನಿಸ್ತಾನ ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಘಾನಿಸ್ತಾನ ಬೌಲಿಂಗ್ ಆಯ್ಕೆ, ಮೊದಲು ಬ್ಯಾಟಿಂಗ್ ಮಾಡಲಿರುವ ಟೀಂ ಇಂಡಿಯಾ

Sep 08, 2022, 7:01 pm IST

ಅಫ್ಘಾನಿಸ್ತಾನ ಪಂದ್ಯಕ್ಕೆ ರೋಹಿತ್ ಶರ್ಮಾ ಅಲಭ್ಯ, ಕೆ.ಎಲ್ ರಾಹುಲ್ ಟೀಂ ಇಂಡಿಯಾ ನಾಯಕನಾಗಿ ತಂಡವನ್ನ ಮುನ್ನಡೆಸುತ್ತಿದ್ದಾರೆ.

Sep 08, 2022, 6:50 pm IST

ದುಬೈ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಭಾರತ-ಅಫ್ಘಾನಿಸ್ತಾನ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸುವ ಸಾಧ್ಯತೆಯಿಲ್ಲ ಮತ್ತು ತಾಪಮಾನವು ಸುಮಾರು 40 ಡಿಗ್ರಿ ಸೆಲ್ಸಿಯಸ್‌ಗೆ ತಲುಪುತ್ತಿದೆ. ತುಂಬಾ ಬಿಸಿ ಹಾಗೂ ಹ್ಯುಮಿಡಿಟಿ ಕಂಡುಬರಲಿದೆ.

Sep 08, 2022, 5:07 pm IST

ಮೈದಾನದಲ್ಲಿ ಆಸಿಫ್ ಅಲಿ ವರ್ತನೆ ಮೂರ್ಖತನದ ಪರಮಾವಧಿ ಎಂದು ಅಫ್ಘಾನಿಸ್ತಾನ ತಂಡದ ಮಾಜಿ ನಾಯಕ ಗುಲ್ಬದಿನ್ ನೈಬ್ ಟೀಕಿಸಿದ್ದಾರೆ. ಏಷ್ಯಾಕಪ್‌ನ ಉಳಿದ ಪಂದ್ಯಗಳಿಗೆ ಆಸಿಫ್‌ ಅಲಿ ಆಡುವುದನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದ್ದಾರೆ. ಯಾವುದೇ ಬೌಲರ್ ವಿಕೆಟ್ ಪಡೆದಾಗ ಸಂಭ್ರಮಾಚರಣೆ ಮಾಡುವ ಅಧಿಕಾರವಿದೆ. ಆದರೆ ದೈಹಿಕವಾಗಿ ಹಲ್ಲೆ ಮಾಡಲು ಮುಂದಾಗುವುದು, ನಿಂದಿಸುವುದು ಸ್ವೀಕಾರಾರ್ಹವಲ್ಲ, ಎಂದು ಟ್ವೀಟ್ ಮಾಡಿದ್ದಾರೆ.

Sep 08, 2022, 2:08 pm IST

ಅಫ್ಘಾನಿಸ್ತಾನ ಸಂಭಾವ್ಯ ಆಡುವ ಬಳಗ: ಹಜರತುಲ್ಲಾ ಝಜೈ, ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಇಬ್ರಾಹಿಂ ಝದ್ರಾನ್, ಮೊಹಮ್ಮದ್ ನಬಿ (ನಾಯಕ), ನಜೀಬುಲ್ಲಾ ಝದ್ರಾನ್, ಕರೀಮ್ ಜನತ್, ರಶೀದ್ ಖಾನ್, ಸಮೀವುಲ್ಲಾ ಶಿನ್ವಾರಿ, ನವೀನ್-ಉಲ್-ಹಕ್, ಮುಜೀಬ್ ಉರ್ ರಹಮಾನ್, ಫಜಲ್ಹಕ್ ಫರೂಕ್

Sep 08, 2022, 2:08 pm IST

ಸಂಭಾವ್ಯ ಆಡುವ ಬಳಗ ಭಾರತ: ಕೆಎಲ್ ರಾಹುಲ್, ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಅರ್ಷ್‌ದೀಪ್ ಸಿಂಗ್, ಯುಜ್ವೇಂದ್ರ ಚಾಹಲ್

Sep 08, 2022, 2:08 pm IST

ಪಿಚ್ ರಿಪೋರ್ಟ್: ದುಬೈ ಪಿಚ್ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವುಭಾಗಗಳಿಗೂ ಉತ್ತಮ ಬೆಂಬಲ ನೀಡುತ್ತದೆ. ಸ್ಪೋಟಕ ಬ್ಯಾಟಿಂಗ್‌ಗೆ ಅವಕಾಶ ನೀಡಲಿದ್ದರೂ 160-170 ರನ್‌ಗಳನ್ನು ಗಳಿಸಿದರೆ ಸವಾಲಿನ ಮೊತ್ತವಾಗಬಹುದು. ನೇರವಾದ ಬೌಂಡರಿ ಗೆರೆ ಹತ್ತಿರದಲ್ಲಿದ್ದು ಇದರ ಲಾಭವನ್ನು ಬ್ಯಾಟರ್‌ಗಳು ಪಡೆಯಬಹುದು. ಹೆಚ್ಚುವರಿ ಬೌನ್ಸ್ ಪಡೆಯುವುದು ಕೂಡ ಇಲ್ಲಿನ ಪಿಚ್‌ನ ಮತ್ತೊಂದು ಗುಣವಾಗಿದೆ. ಸ್ಪಿನ್ನರ್‌ಗಳಿಗೆ ಸಣ್ಣ ಮಟ್ಟಿನ ನೆರವು ದೊರೆಯಲಿದೆ.

Sep 08, 2022, 2:07 pm IST

ಹವಾಮಾನ ವರದಿ ಹಾಗೂ ಪಿಚ್ ರಿಪೋರ್ಟ್: ಪಂದ್ಯದ ದಿನ ಶಾರ್ಜಾ ಕ್ರೀಡಾಂಗಣದ ವಾತಾವರಣದ ಉಷ್ಣಾಂಶ 36ಡಿಗ್ರಿ ಸೆಲ್ಸಿಯಸ್‌ನಷ್ಟಿರುತ್ತದೆ. ಈ ಪಂದ್ಯಕ್ಕೂ ಮಳೆಯಿಂದ ಅಡ್ಡಿ ಉಂಟಾಗುವ ಯಾವುದೇ ಆತಂಕವಿಲ್ಲ. ಹೀಗಾಗಿ ಪಂದ್ಯ ಸಂಪೂರ್ಣವಾಗಿ ನಡೆಯುವ ಅವಕಾಶವಿದೆ.

Sep 08, 2022, 2:07 pm IST

ಅಫ್ಘಾನಿಸ್ತಾನ ಹಾಗೂ ಭಾರತ ತಂಡಗಳು ಸೆಪ್ಟೆಂಬರ್ 8 ಗುರುವಾರದಂದು ಶಾರ್ಜಾ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಲಿದೆ. ಭಾರತೀಯ ಕಾಲಮಾನ ಸಂಜೆ 7:30ಕ್ಕೆ ಪಂದ್ಯ ಆರಂಭವಾಗಲಿದ್ದು 7 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಸ್ಟಾರ್‌ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪಂದ್ಯ ನೇರಪ್ರಸಾರವಾಗಲಿದ್ದು ಹಾಟ್‌ಸ್ಟಾರ್‌ನಲ್ಲಿಯೂ ಪಂದ್ಯವನ್ನು ವೀಕ್ಷಿಸಬಹುದು.

Sep 07, 2022, 11:11 pm IST

ಇದರಿಂದಾಗಿ ಅಫ್ಘಾನಿಸ್ತಾನ ಮತ್ತು ಭಾರತ ತಂಡಗಳ ಫೈನಲ್ ಹಾದಿ ಅಧಿಕೃತವಾಗಿ ಅಂತ್ಯವಾಗಿದ್ದು, ಸತತ ಎರಡು ಪಂದ್ಯಗಳನ್ನು ಗೆದ್ದಿರುವ ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳು ಫೈನಲ್‌ ಹಂತಕ್ಕೆ ಏರಿವೆ.

Sep 07, 2022, 11:11 pm IST

ಇಂದು (ಸೆಪ್ಟೆಂಬರ್ 7) ಶಾರ್ಜಾ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನಲ್ಲಿ ನಡೆದ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ತಂಡಗಳ ನಡುವಿನ ಸೂಪರ್ 4 ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಪಾಕಿಸ್ತಾನ 1 ವಿಕೆಟ್‌ಗಳ ರೋಚಕ ಗೆಲುವನ್ನು ಸಾಧಿಸಿದೆ.

Sep 07, 2022, 10:45 pm IST

2022ರ ಏಷ್ಯಾ ಕಪ್ ಸೂಪರ್-4ರ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ 130 ರನ್‌ಗಳ ಗುರಿ ಬೆನ್ನತ್ತಿರುವ ಪಾಕಿಸ್ತಾನ 17 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 105 ರನ್ ಗಳಿಸಿದೆ.

Sep 07, 2022, 10:09 pm IST

2022ರ ಏಷ್ಯಾ ಕಪ್ ಸೂಪರ್-4ರ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ 130 ರನ್‌ಗಳ ಗುರಿ ಬೆನ್ನತ್ತಿರುವ ಪಾಕಿಸ್ತಾನ 10 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 54 ರನ್ ಗಳಿಸಿದೆ.

Sep 07, 2022, 9:51 pm IST

ಅಫ್ಘಾನಿಸ್ತಾನ ವಿರುದ್ಧ 130 ರನ್‌ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನ ಎರಡು ವಿಕೆಟ್ ಕಳೆದುಕೊಂಡಿದೆ.

Sep 07, 2022, 9:31 pm IST

2022ರ ಏಷ್ಯಾ ಕಪ್ ಸೂಪರ್-4ರ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ 130 ರನ್‌ಗಳ ಗುರಿ ಬೆನ್ನತ್ತಿರುವ ಪಾಕಿಸ್ತಾನ 2.3 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 14 ರನ್ ಗಳಿಸಿದೆ.

Sep 07, 2022, 9:07 pm IST

2022ರ ಏಷ್ಯಾ ಕಪ್ ಸೂಪರ್-4ರ ಪಂದ್ಯದಲ್ಲಿ ಅಫ್ಘಾನಿಸ್ತಾನ ಮೊದಲು ಬ್ಯಾಟಿಂಗ್ ಮಾಡಿದ ನಂತರ ಪಾಕಿಸ್ತಾನ ತಂಡಕ್ಕೆ 130 ರನ್‌ಗಳ ಗುರಿ ನೀಡಿದೆ.

Sep 07, 2022, 8:47 pm IST

2022ರ ಏಷ್ಯಾ ಕಪ್ ಸೂಪರ್-4ರ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಅಫ್ಘಾನಿಸ್ತಾನ 17 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 104 ರನ್ ಗಳಿಸಿದೆ.

Sep 07, 2022, 8:33 pm IST

2022ರ ಏಷ್ಯಾ ಕಪ್ ಸೂಪರ್-4ರ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಅಫ್ಘಾನಿಸ್ತಾನ 14 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 94 ರನ್ ಗಳಿಸಿದೆ.

Sep 07, 2022, 8:25 pm IST

2022ರ ಏಷ್ಯಾ ಕಪ್ ಸೂಪರ್-4ರ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಅಫ್ಘಾನಿಸ್ತಾನ 12 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 79 ರನ್ ಗಳಿಸಿದೆ.

Sep 07, 2022, 8:02 pm IST

ಅಫ್ಘಾನಿಸ್ತಾನ 6 ಓವರ್ ಮುಕ್ತಾಯಕ್ಕೆ 2 ವಿಕೆಟ್ ನಷ್ಟಕ್ಕೆ 48 ರನ್ ಕಲೆಹಾಕಿದೆ

Sep 07, 2022, 7:58 pm IST

ಅಫ್ಘಾನಿಸ್ತಾನ 5 ಓವರ್ ಮುಕ್ತಾಯಕ್ಕೆ 2 ವಿಕೆಟ್ ನಷ್ಟಕ್ಕೆ 43 ರನ್ ಕಲೆಹಾಕಿದೆ

Sep 07, 2022, 7:57 pm IST

ಅಫ್ಘಾನಿಸ್ತಾನದ ಎರಡನೇ ವಿಕೆಟ್ ಪತನ, ಮತ್ತೊಬ್ಬ ಓಪನರ್ ಹಜರತುಲ್ಲಾ ಝಜೈ 21 ರನ್‌ಗಳಿಸಿ ಮೊಹಮ್ಮದ್ ಹಸ್ನೇನ್ಗೆ ವಿಕೆಟ್ ಒಪ್ಪಿಸಿದ್ದಾರೆ.

Sep 07, 2022, 7:52 pm IST

ಅಫ್ಘಾನಿಸ್ತಾನ 4 ಓವರ್ ಮುಕ್ತಾಯಕ್ಕೆ 1 ವಿಕೆಟ್ ನಷ್ಟಕ್ಕೆ 37 ರನ್ ಕಲೆಹಾಕಿದೆ. ರಹಮಾನುಲ್ಲಾ ಗುರ್ಬಾಜ್ 17 ರನ್‌ಗಳಿಸಿ ಹಾರಿಸ್ ರೌಫ್ಗೆ ವಿಕೆಟ್ ಒಪ್ಪಿಸಿದರು.

Sep 07, 2022, 7:41 pm IST

ಅಫ್ಘಾನಿಸ್ತಾನ 2 ಓವರ್ ಮುಕ್ತಾಯಕ್ಕೆ ವಿಕೆಟ್ ನಷ್ಟವಿಲ್ಲ 20 ರನ್ ಕಲೆಹಾಕಿದೆ

Sep 07, 2022, 7:36 pm IST

ಅಫ್ಘಾನಿಸ್ತಾನ 1 ಓವರ್ ಮುಕ್ತಾಯಕ್ಕೆ 4 ರನ್ ಕಲೆಹಾಕಿದೆ

Sep 07, 2022, 7:07 pm IST

ಅಫ್ಘಾನಿಸ್ತಾನ ಪ್ಲೇಯಿಂಗ್ 11: ಹಜರತುಲ್ಲಾ ಝಜೈ, ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಇಬ್ರಾಹಿಂ ಜದ್ರಾನ್, ನಜೀಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ (ನಾಯಕ), ಕರೀಂ ಜನತ್, ರಶೀದ್ ಖಾನ್, ಅಜ್ಮತುಲ್ಲಾ ಒಮರ್ಜಾಯ್, ಮುಜೀಬ್ ಉರ್ ರಹಮಾನ್, ಫರೀದ್ ಅಹ್ಮದ್ ಮಲಿಕ್, ಫಜಲ್ಹಕ್ ಫಾರೂಕಿ

Sep 07, 2022, 7:05 pm IST

ಪಾಕಿಸ್ತಾನ ಪ್ಲೇಯಿಂಗ್ 11: ಮೊಹಮ್ಮದ್ ರಿಜ್ವಾನ್(ವಿಕೆಟ್ ಕೀಪರ್), ಬಾಬರ್ ಅಜಮ್(ನಾಯಕ), ಫಖರ್ ಜಮಾನ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಆಸಿಫ್ ಅಲಿ, ಮೊಹಮ್ಮದ್ ನವಾಜ್, ಶಾದಾಬ್ ಖಾನ್, ಹಾರಿಸ್ ರೌಫ್, ಮೊಹಮ್ಮದ್ ಹಸ್ನೇನ್, ನಸೀಮ್ ಶಾ

Sep 07, 2022, 7:04 pm IST

ಪಾಕಿಸ್ತಾನ ತಂಡದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಆದ್ರೆ ಅಫ್ಘಾನಿಸ್ತಾನ ತಂಡದ ಪ್ಲೇಯಿಂಗ್‌ ಇಲೆವೆನ್‌ನಲ್ಲಿ ಎರಡು ಬದಲಾವಣೆ ಮಾಡಿದೆ.

Sep 07, 2022, 7:02 pm IST

ಪಾಕಿಸ್ತಾನ vs ಅಫ್ಘಾನಿಸ್ತಾನ ಸೂಪರ್ 4 ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಬೌಲಿಂಗ್ ಆಯ್ದುಕೊಂಡಿದೆ. ಪರಿಣಾಮ ಅಫ್ಘಾನಿಸ್ತಾನ ತಂಡ ಮೊದಲು ಬ್ಯಾಟಿಂಗ್ ಮಾಡಬೇಕಿದೆ.

Sep 07, 2022, 6:57 pm IST

ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ನಾಯಕ ಮೊಹಮ್ಮದ್ ನಬಿ ಕೊನೆಯ ಏಳು ಇನ್ನಿಂಗ್ಸ್‌ಗಳಲ್ಲಿ ಪ್ರತಿಯೊಂದರಲ್ಲೂ ಸಿಂಗಲ್ ಡಿಜಿಟ್‌ಗೆ ಔಟಾಗಿದ್ದಾರೆ

Sep 07, 2022, 6:56 pm IST

ಭಾರತದ ವಿರುದ್ಧದ ಪಂದ್ಯದಲ್ಲಿ ಮೊಣಕಾಲು ನೋವಿಗೆ ಒಳಗಾಗಿದ್ದ ಪಾಕಿಸ್ತಾನದ ಬ್ಯಾಟರ್‌ ಮತ್ತು ವಿಕೆಟ್ ಕೀಪರ್ ಮೊಹಮ್ಮದ್ ರಿಜ್ವಾನ್ ಫಿಟ್‌ನೆಸ್‌ಗಾಗಿ ಬೆವರು ಹರಿಸಿದರೂ, ಇಂದಿನ ಪಂದ್ಯದಲ್ಲಿ ಆಡುವನ್ನ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುತ್ತಾರೆ ಎಂಬ ಖಚಿತತೆ ಇಲ್ಲ.

Sep 07, 2022, 4:52 pm IST

ಅಫ್ಘಾನಿಸ್ತಾನ ಸಂಭಾವ್ಯ 11 ತಂಡ ಹಜರತುಲ್ಲಾ ಝಜೈ, ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಕರೀಮ್ ಜನತ್, ಇಬ್ರಾಹಿಂ ಝದ್ರಾನ್, ನಜೀಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ (ನಾಯಕ), ರಶೀದ್ ಖಾನ್, ಸಮೀವುಲ್ಲಾ ಶಿನ್ವಾರಿ, ನವೀನ್-ಉಲ್-ಹಕ್, ಮುಜೀಬ್ ಉರ್ ರಹಮಾನ್, ಫಜಲ್ಹಕ್ ಫರೂಕ್

Sep 07, 2022, 4:48 pm IST

ಪಾಕಿಸ್ತಾನ ಸಂಭಾವ್ಯ 11 ತಂಡ: ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಫಖರ್ ಜಮಾನ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಶಾದಾಬ್ ಖಾನ್, ಆಸಿಫ್ ಅಲಿ, ಮೊಹಮ್ಮದ್ ನವಾಜ್, ಹ್ಯಾರಿಸ್ ರೌಫ್, ನಸೀಮ್ ಶಾ, ಮೊಹಮ್ಮದ್ ಹಸ್ನೇನ್

Sep 07, 2022, 3:50 pm IST

ಪಾಕಿಸ್ತಾನ vs ಅಫ್ಘಾನಿಸ್ತಾನ ಪಂದ್ಯವನ್ನ ಯಾವ ದೇಶದಲ್ಲಿ? ಯಾವ ಚಾನೆಲ್ ಮೂಲಕ ವೀಕ್ಷಿಸಬಹುದು? * ಭಾರತದಲ್ಲಿ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಭಾರತದಲ್ಲಿ ಏಷ್ಯಾ ಕಪ್ 2022 ರ ಅಧಿಕೃತ ಪ್ರಸಾರಕವಾಗಿದೆ. ಹೀಗಾಗಿ, ಪಂದ್ಯವು ಸ್ಟಾರ್ ಸ್ಪೋರ್ಟ್ಸ್ ಚಾನೆಲ್‌ಗಳಲ್ಲಿ ಲಭ್ಯವಿರುತ್ತದೆ. ಡಿಸ್ನಿ+ ಹಾಟ್‌ಸ್ಟಾರ್ ಲೈವ್ ಸ್ಟ್ರೀಮಿಂಗ್ ಅನ್ನು ಪ್ರಸ್ತುತಪಡಿಸುತ್ತದೆ. * ಪಾಕಿಸ್ತಾನದಲ್ಲಿ PTV ಮತ್ತು ಟೆನ್ ಸ್ಪೋರ್ಟ್ಸ್ ಪಾಕಿಸ್ತಾನದಲ್ಲಿ ಪಂದ್ಯದ ಅಧಿಕೃತ ಪ್ರಸಾರಕರಾಗಿದ್ದಾರೆ. * ಬಾಂಗ್ಲಾದೇಶದಲ್ಲಿ ಗಾಜಿ ಟಿವಿ ಪಂದ್ಯವನ್ನು ಪ್ರಸಾರ ಮಾಡಲಿದೆ. * ಅಫ್ಘಾನಿಸ್ತಾನದಲ್ಲಿ ಅರಿಯಾನಾ ಟಿವಿ ಪಂದ್ಯದ ಲೈವ್ ಸ್ಟ್ರೀಮಿಂಗ್ ಅನ್ನು ಪ್ರಸ್ತುತಪಡಿಸುತ್ತದೆ. * ಆಸ್ಟ್ರೇಲಿಯಾದಲ್ಲಿ ಫಾಕ್ಸ್ ಸ್ಪೋರ್ಟ್ಸ್ ಪಂದ್ಯದ ಲೈವ್ ಆಕ್ಷನ್ ಅನ್ನು ಪ್ರಸ್ತುತಪಡಿಸುತ್ತದೆ. * ನ್ಯೂಜಿಲೆಂಡ್‌ನಲ್ಲಿ ಸ್ಕೈ ಸ್ಪೋರ್ಟ್ಸ್ ಪಂದ್ಯದ ನೇರ ಪ್ರಸಾರ ಮಾಡಲಿದೆ. * ದಕ್ಷಿಣ ಆಫ್ರಿಕಾದಲ್ಲಿ ದಕ್ಷಿಣ ಆಫ್ರಿಕಾದಲ್ಲಿ, ಸೂಪರ್‌ಸ್ಪೋರ್ಟ್ ನೆಟ್‌ವರ್ಕ್ ಪಂದ್ಯದ ಲೈವ್-ಆಕ್ಷನ್ ಅನ್ನು ಪ್ರಸ್ತುತಪಡಿಸುತ್ತದೆ. * USA ನಲ್ಲಿ ವಿಲೋ ಟಿವಿ ಪಂದ್ಯದ ನೇರ ಪ್ರಸಾರ ಮಾಡಲಿದೆ. * ಯುಕೆಯಲ್ಲಿ, ಸ್ಕೈ ಸ್ಪೋರ್ಟ್ಸ್ ಪಂದ್ಯದ ಲೈವ್ ಸ್ಟ್ರೀಮಿಂಗ್ ಅನ್ನು ಪ್ರಸಾರ ಮಾಡಲಿದೆ. * ಯುಎಇಯಂತಹ ಮಧ್ಯಪ್ರಾಚ್ಯ ಪ್ರದೇಶಗಳಲ್ಲಿ, ಓಎಸ್ಎನ್ ಸ್ಪೋರ್ಟ್ಸ್ ಕ್ರಿಕೆಟ್ ಪಂದ್ಯದ ನೇರ ಪ್ರಸಾರ ವೀಕ್ಷಿಸಬಹುದು.

Sep 07, 2022, 3:10 pm IST

ಐಸಿಸಿ ನೂತನ ಟಿ20 ಶ್ರೇಯಾಂಕಪಟ್ಟು ಬಿಡುಗಡೆಗೊಳಿಸಿದ್ದು ಮಹತ್ವದ ಬದಲಾವಣೆಯಾಗಿದೆ. ಸುದೀರ್ಘ ಕಾಲದಿಂದ ಚುಟುಕು ಮಾದರಿಯ ಬ್ಯಾಟರ್‌ಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದ ಬಾಬರ್ ಅಜಂ ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ಏಷ್ಯಾ ಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿಕೊಂಡು ಬಂದಿರುವ ಪಾಕಿಸ್ತಾನದವರೇ ಆದ ಯುವ ಆಟಗಾರ ಮೊಹಮ್ಮದ್ ರಿಜ್ವಾನ್ ಅಗ್ರಸ್ಥಾನವನ್ನು ಪಡೆದುಕೊಳ್ಳುವ ಮೂಲಕ ಶ್ರೇಷ್ಠ ಸಾಧನೆ ಮಾಡಿದ್ದಾರೆ.

Sep 07, 2022, 1:40 pm IST

ಏಷ್ಯಾ ಕಪ್‌ನ ಸೂಪರ್ 4 ಹಂತದಲ್ಲಿ ಭಾರತ ಆಡಿದ ಎರಡು ಪಂದ್ಯಗಳ ಪೈಕಿ ಎರಡರಲ್ಲಿಯೂ ಸೋಲು ಅನುಭವಿಸಿದೆ. ಈ ಕಾರಣದಿಂದಾಗಿ ಭಾರತ ಏಷ್ಯಾ ಕಪ್‌ನ ಫೈನಲ್ ಹಂತಕ್ಕೇರುವ ಅವಕಾಶವನ್ನು ಬಹುತೇಕ ಕಳೆದುಕೊಂಡಿದೆ. ತಂಡದ ಬೌಲಿಂಗ್ ವಿಭಾಗದ ಸಾಕಷ್ಟು ಹಿನ್ನಡೆ ಅನುಭವಿಸುತ್ತಿದ್ದು ಇದು ತಂಡಕ್ಕೆ ದೊಡ್ಡ ಹಿನ್ನಡೆಯುಂಟು ಮಾಡಿದೆ. ಈ ಸಂದರ್ಭದಲ್ಲಿ ಮಾಜಿ ಕೋಚ್ ರವಿ ಶಾಸ್ತ್ರಿ ಭಾರತ ತಂಡಕ್ಕೆ ಅನುಭವಿ ವೇಗಿಯ ಗೈರು ಕಾಡುತ್ತಿದೆ ಎಂದಿದ್ದಾರೆ.

Sep 07, 2022, 12:32 pm IST

ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನ ತಂಡಗಳು ಸೆಪ್ಟೆಂಬರ್ 7 ಬುಧವಾರದಂದು ಶಾರ್ಜಾ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಲಿದೆ. ಭಾರತೀಯ ಕಾಲಮಾನ ಸಂಜೆ 7:30ಕ್ಕೆ ಪಂದ್ಯ ಆರಂಭವಾಗಲಿದ್ದು 7 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಸ್ಟಾರ್‌ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪಂದ್ಯ ನೇರಪ್ರಸಾರವಾಗಲಿದ್ದು ಹಾಟ್‌ಸ್ಟಾರ್‌ನಲ್ಲಿಯೂ ಪಂದ್ಯವನ್ನು ವೀಕ್ಷಿಸಬಹುದಾಗಿದೆ.

Sep 07, 2022, 10:03 am IST

ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ಅದ್ಭುತ ಪ್ರದರ್ಶನವನ್ನು ನೀಡಿಕೊಂಡು ಬಂದಿದೆ. ಆದರೆ ಏಷ್ಯಾ ಕಪ್‌ನಲ್ಲಿ ನೀಡಿರುವ ಪ್ರದರ್ಶನ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಈ ಪಂದ್ಯದಲ್ಲಿ ಭಾರತ ಸೋಲು ಅನುಭವಿಸುವ ಮೂಲಕ ರೋಹಿತ್ ಶರ್ಮಾ ನಾಯಕತ್ವದಲ್ಲಿ ಮೊದಲ ಬಾರಿಗೆ ಸತತ ಎರಡು ಪಂದ್ಯಗಳಲ್ಲಿ ಭಾರತ ಟಿ20 ಪಂದ್ಯದಲ್ಲಿ ಸೋಲು ಅನುಭವಿಸಿದಂತಾಗಿದೆ.

Sep 07, 2022, 10:03 am IST

ಸೋಲಿನ ಬಳಿಕ ಮಾತನಾಡಿದ ನಾಯಕ ರೋಹಿತ್ ಶರ್ಮಾ ಕೆಲ ಮಹತ್ವದ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. "ಮೊದಲಾರ್ಧದಲ್ಲಿ ಬ್ಯಾಟಿಂಗ್‌ನಲ್ಲಿ ಪಡೆದ ಮೇಲುಗೈಯನ್ನು ಮುನ್ನಡೆಸಿಕೊಂಡು ಹೋಗಲು ವಿಫಲವಾದೆವು. ಈ ಕಾರಣದಿಂದಾಗಿಯೇ 10-15 ರನ್‌ಗಳು ನಮಗೆ ಕೊರತೆಯಾದವು. ದ್ವಿತಿಯಾರ್ಧ ನಮ್ಮ ಪಾಲಿಗೆ ಉತ್ತಮವಾಗಿರಲಿಲ್ಲ. ವಿಕೆಟ್ ಕಳೆದುಕೊಂಡ ಆಟಗಾರರು ಯಾವ ಹೊಡೆತಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದನ್ನು ಅರ್ಥ ಮಾಡುಕೊಳ್ಳುತ್ತಾರೆ. ಸೋಲುಗಳು ತಂಡಕ್ಕೆ ಯಾವೆಲ್ಲಾ ನಿರ್ಧಾರಗಳು ಸಹಾಯವಾಗುತ್ತವೆ ಎಂಬುದನ್ನು ತಿಳಿಸುತ್ತದೆ" ಎಂದಿದ್ದಾರೆ ನಾಯಕ ರೋಹಿತ್ ಶರ್ಮಾ.

Sep 06, 2022, 11:33 pm IST

ಸವಾಲಿನ ಗುರಿ ಬೆನ್ನತ್ತಿದ ಶ್ರೀಲಂಕಾ ತಂಡ ಪಾತುಮ್ ನಿಸ್ಸಾಂಕ ಮತ್ತು ಕುಸಲ್ ಮೆಂಡಿಸ್ ಅವರ ಆಕರ್ಷಕ ಬ್ಯಾಟಿಂಗ್ ನೆರವಿನಿಂದ 19.5 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 174 ರನ್ ಕಲೆಹಾಕಿದ್ದು, 6 ವಿಕೆಟ್‌ಗಳ ರೋಚಕ ಗೆಲುವನ್ನು ಕಂಡಿತು.

Sep 06, 2022, 11:33 pm IST

ಪಂದ್ಯದಲ್ಲಿ ಟಾಸ್ ಸೋತು ಫೀಲ್ಡಿಂಗ್ ಆಯ್ದುಕೊಂಡಿದ್ದ ಶ್ರೀಲಂಕಾ ತಂಡದ ನಾಯಕ ದಸುನ್ ಶನಕ, ಟೀಮ್ ಇಂಡಿಯಾವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದ್ದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ರೋಹಿತ್ ಶರ್ಮಾ ಅವರ ಅರ್ಧಶತಕದ ನೆರವಿನಿಂದ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 173 ರನ್ ಕಲೆಹಾಕಿ ಶ್ರೀಲಂಕಾ ತಂಡಕ್ಕೆ ಗೆಲ್ಲಲು 174 ರನ್‌ಗಳ ಗುರಿಯನ್ನು ನೀಡಿತ್ತು.

Sep 06, 2022, 11:33 pm IST

ಟೀಂ ಇಂಡಿಯಾ ವಿರುದ್ಧ ಶ್ರೀಲಂಕಾ 6 ವಿಕೆಟ್‌ಗಳ ರೋಚಕ ಗೆಲುವನ್ನು ಸಾಧಿಸಿದ್ದು, ಇದರಿಂದಾಗಿ ಭಾರತದ ಫೈನಲ್ ಹಾದಿ ಬಹುತೇಕ ಅಂತ್ಯವಾದಂತಿದ್ದು, ಸತತ ಎರಡು ಪಂದ್ಯಗಳನ್ನು ಗೆದ್ದಿರುವ ಶ್ರೀಲಂಕಾ ತಂಡದ ಫೈನಲ್ ಹಾದಿ ಸುಗಮವಾಗಿದೆ.

Sep 06, 2022, 11:33 pm IST

ಇಂದು (ಸೆಪ್ಟೆಂಬರ್ 6) ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವಿನ ಸೂಪರ್ 4 ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ಶ್ರೀಲಂಕಾ 6 ವಿಕೆಟ್‌ಗಳ ರೋಚಕ ಗೆಲುವನ್ನು ಸಾಧಿಸಿದೆ.

Sep 06, 2022, 10:46 pm IST

ಏಷ್ಯಾ ಕಪ್‌ನ ಸೂಪರ್ 4ರ ಪಂದ್ಯದಲ್ಲಿ ಭಾರತ ವಿರುದ್ಧ ಶ್ರೀಲಂಕಾ ತಂಡ 15 ಓವರ್‌ಗಳ 4 ವಿಕೆಟ್ ನಷ್ಟಕ್ಕೆ 120 ರನ್ ಗಳಿಸಿದೆ.

Sep 06, 2022, 10:43 pm IST

ಶ್ರೀಲಂಕಾದ ನಾಲ್ಕನೇ ವಿಕೆಟ್ ಪತನವಾಗಿದೆ. 57 ರನ್ ಗಳಿಸಿ ಆಡುತ್ತಿದ್ದ ಕುಸಾಲ್ ಮೆಂಡೀಸ್ ಯಜ್ವೇಂದ್ರ ಚಹಾಲ್ ಬೌಲಿಂಗ್‌ನಲ್ಲಿ ಎಲ್‌ಬಿ ಬಲೆಗೆ ಬಿದ್ದರು.

Sep 06, 2022, 10:25 pm IST

ಶ್ರೀಲಂಕಾದ ಮೊದಲ ವಿಕೆಟ್ ಪತನವಾಗಿದೆ. 52 ರನ್ ಗಳಿಸಿ ಆಡುತ್ತಿದ್ದ ಪಾತುಮ್ ನಿಸ್ಸಾಂಕ ಯಜ್ವೇಂದ್ರ ಚಹಾಲ್ ಬೌಲಿಂಗ್‌ನಲ್ಲಿ ರೋಹಿತ್ ಶರ್ಮಾಗೆ ಕ್ಯಾಚ್ ನೀಡಿ ಔಟಾದರು.

Sep 06, 2022, 10:24 pm IST

ಏಷ್ಯಾ ಕಪ್‌ನ ಸೂಪರ್ 4ರ ಪಂದ್ಯದಲ್ಲಿ ಭಾರತ ವಿರುದ್ಧ ಶ್ರೀಲಂಕಾ ತಂಡ 11 ಓವರ್‌ಗಳ ಮುಕ್ತಾಯಕ್ಕೆ ಯಾವುದೇ ವಿಕೆಟ್ ನಷ್ಟವಿಲ್ಲದೇ 97 ರನ್ ಗಳಿಸಿದೆ.

Sep 06, 2022, 10:03 pm IST

174 ರನ್‌ಗಳ ಗುರಿ ಬೆನ್ನತ್ತಿದ ಶ್ರೀಲಂಕಾ ತಂಡ 6 ಓವರ್‌ಗಳ ಮುಕ್ತಾಯಕ್ಕೆ ಯಾವುದೇ ವಿಕೆಟ್ ನಷ್ಟವಿಲ್ಲದೇ 57 ರನ್ ಗಳಿಸಿದೆ.

Sep 06, 2022, 9:31 pm IST

ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 173 ರನ್ ಕಲೆ ಹಾಕಿದ್ದು, ಎದುರಾಳಿ ಶ್ರೀಲಂಕಾ ತಂಡಕ್ಕೆ ಗೆಲ್ಲಲು 174 ರನ್‌ಗಳ ಗುರಿಯನ್ನು ನೀಡಿದೆ.

Sep 06, 2022, 9:31 pm IST

ಶ್ರೀಲಂಕಾ ಗೆಲ್ಲಲು 174 ರನ್‌ಗಳ ಗುರಿ ನೀಡಿದ ಭಾರತ

Sep 06, 2022, 8:51 pm IST

ಶ್ರೀಲಂಕಾ ವಿರುದ್ಧ ಸೂರ್ಯಕುಮಾರ್ ಯಾದವ್ 29 ಎಸೆತಗಳಲ್ಲಿ 34 ರನ್ ಗಳಿಸಿ ಔಟಾದರು.

Sep 06, 2022, 8:41 pm IST

ಶ್ರೀಲಂಕಾ ವಿರುದ್ಧ ಭಾರತ ತಂಡದ ನಾಯಕ ರೋಹಿತ್ ಶರ್ಮಾ 41 ಎಸೆತಗಳಲ್ಲಿ 72 ರನ್ ಗಳಿಸಿ ಔಟಾದರು.

Sep 06, 2022, 8:38 pm IST

ಟೀಂ ಇಂಡಿಯಾ 12 ಓವರ್‌ಗಳ ಮುಕ್ತಾಯಕ್ಕೆ 2 ವಿಕೆಟ್ ನಷ್ಟಕ್ಕೆ 109 ರನ್ ಕಲೆಹಾಕಿದೆ. ರೋಹಿತ್ ಶರ್ಮಾ 72 ರನ್ ಮತ್ತು ಸೂರ್ಯಕುಮಾರ್ ಯಾದವ್ 28 ರನ್ ಗಳಿಸಿ ಬ್ಯಾಟಿಂಗ್ ಆಡುತ್ತಿದ್ದಾರೆ.

Sep 06, 2022, 8:34 pm IST

ಶ್ರೀಲಂಕಾ ವಿರುದ್ಧ ಭಾರತದ ಪರ ರೋಹಿತ್ ಶರ್ಮಾ ಕೇವಲ 32 ಎಸೆತಗಳಲ್ಲಿ ತಮ್ಮ 28ನೇ ಟಿ20 ಅರ್ಧಶತಕವನ್ನು ಗಳಿಸಿದ್ದಾರೆ.

Sep 06, 2022, 8:29 pm IST

ಟೀಂ ಇಂಡಿಯಾ 10 ಓವರ್ ಮುಕ್ತಾಯಕ್ಕೆ 2 ವಿಕೆಟ್ ನಷ್ಟಕ್ಕೆ 79 ರನ್ ಕಲೆಹಾಕಿದೆ. ರೋಹಿತ್ ಶರ್ಮಾ 53 ರನ್ ಮತ್ತು ಸೂರ್ಯಕುಮಾರ್ ಯಾದವ್ 17 ರನ್ ಗಳಿಸಿ ಬ್ಯಾಟಿಂಗ್ ಆಡುತ್ತಿದ್ದಾರೆ.

Sep 06, 2022, 8:28 pm IST

ಏಷ್ಯಾ ಕಪ್‌ನ ಸೂಪರ್ 4 ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಅರ್ಧಶತಕ ಗಳಿಸಿದ ರೋಹಿತ್ ಶರ್ಮಾ.

Sep 06, 2022, 8:22 pm IST

ಟೀಂ ಇಂಡಿಯಾ 9 ಓವರ್ ಮುಕ್ತಾಯಕ್ಕೆ 2 ವಿಕೆಟ್ ನಷ್ಟಕ್ಕೆ 65 ರನ್ ಕಲೆಹಾಕಿದೆ. ರೋಹಿತ್ ಶರ್ಮಾ 41 ರನ್ ಮತ್ತು ಸೂರ್ಯಕುಮಾರ್ ಯಾದವ್ 15 ರನ್ ಗಳಿಸಿ ಬ್ಯಾಟಿಂಗ್ ಆಡುತ್ತಿದ್ದಾರೆ.

Sep 06, 2022, 8:19 pm IST

ಟೀಂ ಇಂಡಿಯಾ 8 ಓವರ್ ಮುಕ್ತಾಯಕ್ಕೆ 2 ವಿಕೆಟ್ ನಷ್ಟಕ್ಕೆ 58 ರನ್ ಕಲೆಹಾಕಿದೆ.

Sep 06, 2022, 8:04 pm IST

ಟೀಂ ಇಂಡಿಯಾ 5 ಓವರ್ ಮುಕ್ತಾಯಕ್ಕೆ 2 ವಿಕೆಟ್ ನಷ್ಟಕ್ಕೆ 36 ರನ್ ಕಲೆಹಾಕಿದೆ.

Sep 06, 2022, 7:59 pm IST

ಟೀಂ ಇಂಡಿಯಾ 4 ಓವರ್ ಮುಕ್ತಾಯಕ್ಕೆ 2 ವಿಕೆಟ್ ನಷ್ಟಕ್ಕೆ 22 ರನ್ ಕಲೆಹಾಕಿದೆ.

Sep 06, 2022, 7:51 pm IST

ಟೀಂ ಇಂಡಿಯಾದ ಎರಡನೇ ವಿಕೆಟ್ ಪತನ:. ಶೂನ್ಯಕ್ಕೆ ಔಟಾದ ವಿರಾಟ್‌ ಕೊಹ್ಲಿ, ಭಾರತ 2.4 ಓವರ್ ನಷ್ಟಕ್ಕೆ 13/2

Sep 06, 2022, 7:45 pm IST

ಟೀಂ ಇಂಡಿಯಾದ ಮೊದಲ ವಿಕೆಟ್ ಪತನ. 6 ರನ್‌ಗಳಿಸಿ ಕೆ.ಎಲ್ ರಾಹುಲ್ ಔಟ್‌

Sep 06, 2022, 7:37 pm IST

ಭಾರತ 1 ಓವರ್ ಮುಕ್ತಾಯಕ್ಕೆ ಯಾವುದೇ ವಿಕೆಟ್ ನಷ್ಟವಿಲ್ಲದೆ 4 ರನ್ ಕಲೆಹಾಕಿದೆ.

Sep 06, 2022, 7:10 pm IST

ಶ್ರೀಲಂಕಾ ಪ್ಲೇಯಿಂಗ್ 11: ಪಾತುಮ್ ನಿಸ್ಸಾಂಕ, ಕುಸಾಲ್ ಮೆಂಡಿಸ್(ವಿಕೆಟ್ ಕೀಪರ್), ಚರಿತ್ ಅಸಲಂಕ, ದನುಷ್ಕ ಗುಣತಿಲಕ, ಭಾನುಕ ರಾಜಪಕ್ಸೆ, ದಸುನ್ ಶನಕ(ನಾಯಕ), ವನಿಂದು ಹಸರಂಗ, ಚಾಮಿಕ ಕರುಣಾರತ್ನೆ, ಮಹೀಶ್ ತೀಕ್ಷಣ, ಅಸಿತ ಫೆರ್ನಾಂಡೊ, ದಿಲ್ಶನ್ ಮಧುಶಂಕ

Sep 06, 2022, 7:09 pm IST

ಭಾರತ ಪ್ಲೇಯಿಂಗ್ 11: ಕೆಎಲ್ ರಾಹುಲ್, ರೋಹಿತ್ ಶರ್ಮಾ(ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್(ವಿಕೆಟ್ ಕೀಪರ್), ದೀಪಕ್ ಹೂಡಾ, ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಯುಜ್ವೇಂದ್ರ ಚಾಹಲ್, ಅರ್ಷ್‌ದೀಪ್‌ ಸಿಂಗ್

Sep 06, 2022, 7:06 pm IST

ಟೀಂ ಇಂಡಿಯಾ ಪ್ಲೇಯಿಂಗ್ ಇಲೆವೆನ್‌ನಲ್ಲಿ ಒಂದು ಬದಲಾವಣೆ ಆಗಿದ್ದು, ರವಿ ಬಿಷ್ಣೋಯಿ ಬದಲು ರವಿಚಂದ್ರನ್ ಅಶ್ವಿನ್‌ಗೆ ಸ್ಥಾನ ನೀಡಲಾಗಿದೆ. ಆದ್ರೆ ಶ್ರೀಲಂಕಾ ತಂಡದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

Sep 06, 2022, 7:00 pm IST

ಭಾರತ-ಶ್ರೀಲಂಕಾ ಏಷ್ಯಾಕಪ್‌ 2022 ಸೂಪರ್ 4 ಪಂದ್ಯದಲ್ಲಿ ಟಾಸ್‌ ಗೆದ್ದ ಶ್ರೀಲಂಕಾ ತಂಡ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದೆ. ಪರಿಣಾಮ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಲಿದೆ.

Sep 06, 2022, 6:45 pm IST

ಶ್ರೀಲಂಕಾ ವಿರುದ್ಧದ ಬಹುಮುಖ್ಯವಾದ ಪಂದ್ಯದಲ್ಲಿ ಮಿಂಚಲು ಟೀಂ ಇಂಡಿಯಾ ಸೂಪರ್‌ಸ್ಟಾರ್‌ಗಳಾದ ವಿರಾಟ್ ಕೊಹ್ಲಿ, ಕೆ.ಎಲ್ ರಾಹುಲ್, ಹಾರ್ದಿಕ್ ಪಾಂಡ್ಯ ಸಜ್ಜಾಗಿದ್ದಾರೆ.

Sep 06, 2022, 5:54 pm IST

ಏಷ್ಯಾ ಕಪ್‌ 2022ರ ಸೂಪರ್ 4 ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಕ್ಯಾಚ್‌ ಕೈ ಬಿಟ್ಟು ಸಾಕಷ್ಟು ಟೀಕೆಗೆ ಒಳಗಾಗಿರುವ ಬೌಲರ್ ಅರ್ಷ್‌ದೀಪ್ ಸಿಂಗ್‌ ಬೆಂಬಲಕ್ಕೆ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ನಿಂತಿದ್ದಾರೆ. ತನ್ನ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿರುವ ಶಮಿ '' ಚಿಂತಿಸಬೇಡ ಅರ್ಷ್‌ದೀಪ್ ಸಿಂಗ್‌, ನಾವೆಲ್ಲಾ ನಿನ್ನ ಜೊತೆಯಲ್ಲಿ ಇದ್ದೇವೆ, ಮುಂದಿನ ಪಂದ್ಯಗಳತ್ತ ನಿನ್ನ ಗಮನಹರಿಸುವ, ಟೀಕೆಗಳಿಗೆ ತಲೆಕೆಡಿಸಿಕೊಳ್ಳಬೇಡ'' ಎಂದು ಶಮಿ ಬರೆದಿದ್ದಾರೆ.

Sep 06, 2022, 4:23 pm IST

ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಮೊದಲ ಇನ್ನಿಂಗ್ಸ್‌ ಸರಾಸರಿ ಸ್ಕೋರ್ 160ರಷ್ಟಿದೆ. ಈ ಪಿಚ್‌ನಲ್ಲಿ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ ತಂಡದ ಗೆಲುವಿನ ದಾಖಲೆ ಹೆಚ್ಚಿದ್ದು ಶೇಕಡಾ 80ರಷ್ಟು ಪಂದ್ಯಗಳನ್ನ ಜಯಿಸಿದೆ.

Sep 06, 2022, 4:19 pm IST

ಭಾರತ ಮತ್ತು ಶ್ರೀಲಂಕಾ ಮೂರು ಫಾರ್ಮೆಟ್‌ನಲ್ಲಿ ಒಟ್ಟು 233 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಭಾರತ 132 ಪಂದ್ಯ ಗೆದ್ದಿದೆ. ಆದ್ರೆ ಶ್ರೀಲಂಕಾ ತಂಡವು ಕೇವಲ 71 ಪಂದ್ಯ ಜಯಿಸಿದೆ.

Sep 06, 2022, 3:55 pm IST

ಮಾಜಿ ಕ್ರಿಕೆಟಿಗ ಕಿರಣ್ ಮೋರೆ ಭಾರತ ತಂಡ ಟಿ20 ವಿಶ್ವಕಪ್ ಗೆಲ್ಲಲು ಮಹತ್ವದ ಪಾತ್ರವಹಿಸುವ ಆಟಗಾರ ಎಂದು ಕೆಎಲ್ ರಾಹುಲ್ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರಾಹುಲ್‌ಗೆ ಬೆಂಬಲ ನೀಡುವ ಅಗತ್ಯವಿದ್ದು ತಂಡದ ಪರವಾಗಿ ಪರಿಣಾಮಕಾರಿ ಪ್ರದರ್ಶನ ನೀಡಬಲ್ಲ ಆಟಗಾರ ಎಂದಿದ್ದಾರೆ ಮೋರೆ. "ಕೆಎಲ್ ರಾಹುಲ್ ಗಾಯದಿಂದ ಮರಳಿದ್ದಾರೆ. ಅಲ್ಲದೆ ಹರ್ನಿಯಾ ಶಸ್ತ್ರಚಿಕಿತ್ಸೆಗೂ ಅವರು ಒಳಗಾಗಿದ್ದರು. ಅವರು ತಂಡದ ಪ್ರಮುಖ ಆಟಗಾರನಾಗಿದ್ದು ವಿಶ್ವಕಪ್‌ನಲ್ಲಿ ಅವರ ಅಗತ್ಯ ತಂಡಕ್ಕೆ ಬಹಳಷ್ಟಿದೆ. ಅವರು ವಿಶ್ವಕಪ್‌ನಲ್ಲಿ ಸುಲಭವಾಗಿ ಶತಕವನ್ನು ಗಳಿಸಬಲ್ಲರು" ಎಂದಿದ್ದಾರೆ ಕಿರಣ್ ಮೋರೆ.

Sep 06, 2022, 3:45 pm IST

ಭಾರತ ಶ್ರೀಲಂಕಾ ತಂಡದ ವಿರುದ್ಧ ಸೂಪರ್ 4 ಹಂತದ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿದೆ. ಪಾಕಿಸ್ತಾನದ ವಿರುದ್ಧ ಸೋಲು ಅನುಭವಿಸಿರುವ ಭಾರತ ಹಿನ್ನಡೆಯಲ್ಲಿದ್ದು ಈ ಪಂದ್ಯವನ್ನು ಗೆಲ್ಲುವ ಒತ್ತಡದಲ್ಲಿದೆ. ಸಾಮರ್ಥ್ಯದಲ್ಲಿ ಶ್ರೀಲಂಕಾ ಪಡೆಗಿಂತ ಸಾಕಷ್ಟು ಬಲಿಷ್ಠವಾಗಿ ಕಾಣಿಸುವ ಭಾರತ ತಂಡಕ್ಕೆ ಬೌಲಿಂಗ್ ಪ್ರದರ್ಶನ ತಲೆನೋವು ತಂದಿಟ್ಟಿದೆ. ಇನ್ನು ಈ ಪಂದ್ಯದಲ್ಲಿ ಭಾರತದ ಆಡುವ ಬಳಗದಲ್ಲಿ ಯಾವೆಲ್ಲಾ ಬದಲಾವಣೆ ಮಾಡಬಹುದು ಎಂಬುದು ಕುತೂಹಲ ಮೂಡಿಸಿದೆ

Sep 06, 2022, 3:44 pm IST

ಇನ್ನು ಇದೇ ವಿಚಾರವಾಗಿ ಮಾತನಾಡಿದ ರಾಬಿನ್ ಉತ್ತಪ್ಪ ಭಿನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ರಾಬಿನ್ ಉತ್ತಪ್ಪ ತಮ್ಮ ಪ್ರಕಾರ ಭಾರತ ತಂಡ ವಿಕೆಟ್ ಕೀಪರ್ ಬ್ಯಾಟರ್ ಆಗಿ ರಿಷಭ್ ಪಂತ್ ಅವರ ಬದಲಿಗೆ ದಿನೇಶ್ ಕಾರ್ತಿಕ್ ಅವರನ್ನು ಆಡಿಸಬೇಕು ಎಂದಿದ್ದಾರೆ. ದಿನೇಶ್ ಕಾರ್ತಿಕ್ ಫಿನಿಷರ್ ಆಗಿ ಕರ್ತವ್ಯವನ್ನು ನಿಭಾಯಿಸುವ ಕಾರಣ ಅವರ ಅಗತ್ಯ ತಂಡಕ್ಕೆ ಹೆಚ್ಚಿನ ಪ್ರಮಾಣದಲ್ಲಿದೆ ಎಂದಿದ್ದಾರೆ ಉತ್ತಪ್ಪ. ರಿಷಬ್ ಪಂತ್ ಅಗ್ರ ನಾಲ್ಕರ ಕ್ರಮಾಂಕದಲ್ಲಿ ಕಣಕ್ಕಿಳಿದರೆ ಮಾತ್ರವೇ ಯಶಸ್ಸು ಸಾಧಿಸುತ್ತಾರೆ ಎಂದಿದ್ದಾರೆ ರಾಬಿನ್ ಉತ್ತಪ್ಪ.

Sep 06, 2022, 3:44 pm IST

ಇಎಸ್‌ಪಿಎನ್ ಕ್ರಿಕ್ ಇನ್ಫೋದಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಚರ್ಚೆಯ ವಿಚಾರವಾಗಿ ಮಾತನಾಡಿದ ಚೇತೇಶ್ವರ್ ಪೂಜಾರ "ರಿಷಭ್ ಪಂತ್‌ಗೆ ಬೆಭಲವಾಗಿ ನಿಲ್ಲಬೇಕು ಎಂದು ಯೋಚಿಸಿದ್ದರೆ ನನ್ನ ಪ್ರಕಾರ ಅವರತು ಪಂತ್‌ಗೆ ಅವಕಾಶ ನೀಡುವುದನ್ನು ಮುಂದುವರಿಸಬೇಕು. ಪ್ರತಿ ಪಂದ್ಯಕ್ಕೂ ನೀವು ತಂಡದಲ್ಲಿ ಬದಲಾವಣೆ ಮಾಡುವುದು ಸಾಧ್ಯವಿಲ್ಲ. ದಿನೇಶ್ ಕಾರ್ತಿಕ್ ಅವರಿಗೆ ಅವಕಾಶ ನೀಡಬೇಕು ಎಂಬುದಾಗಿದ್ದರೆ ಪಾಕಿಸ್ತಾನದ ವಿರುದ್ಧವೇ ಆವಕಾಶ ನೀಡಬೇಕಾಗಿತ್ತು. ಹಾಗಾಗಿ ರಿಷಭ್ ಪಂತ್‌ಗೇ ಮುಂದಿನ ಪಂದ್ಯದಲ್ಲಿಯೂ ಅವಕಾಶ ದೊರೆಯಲಿದೆ ಎಂದು ಭಾವಿಸುತ್ತೇನೆ" ಎಂದಿದ್ದಾರೆ ಚೇತೇಶ್ವರ್ ಪೂಜಾರ.

Sep 06, 2022, 11:34 am IST

ಶ್ರೀಲಂಕಾ ಸಂಪೂರ್ಣ ಸ್ಕ್ವಾಡ್: ಕುಸಾಲ್ ಮೆಂಡಿಸ್ (ವಿಕೆಟ್ ಕೀಪರ್), ದಸುನ್ ಶನಕ (ನಾಯಕ), ಪಾತುಮ್ ನಿಸ್ಸಾಂಕ, ಚರಿತ್ ಅಸಲಂಕಾ, ದನುಷ್ಕ ಗುಣತಿಲಕ, ಭಾನುಕ ರಾಜಪಕ್ಷೆ, ವನಿಂದು ಹಸರಂಗ, ಚಾಮಿಕ ಕರುಣಾರತ್ನೆ, ಮಹೇಶ್ ತೀಕ್ಷಣ, ಅಸಿತ ಫೆರ್ನಾಂಡೊ, ದಿಲ್ಶನ್ ಮಧುಶಂಕ, ದಿನೇಶ್ ಚಂಡಿಮಲ್, ಧನಂಜಯ ಡಿ ಸಿಲ್ವಾ, ಜೆಫ್ರಿ ವಾಂಡರ್ಸೆ, ಅಶೇನ್ ಬಂಡಾರ, ಪ್ರವೀಣ್ ಜಯವಿಕ್ರಮ, ನುವಾನಿಡು ಫೆರ್ನಾಂಡೋ, ಪ್ರಮೋದ್ ಮದುಶನ್, ನುವಾನ್ ತುಷಾರ, ಮತೀಶ ಪತಿರಣ

Sep 06, 2022, 11:33 am IST

ಸಂಪೂರ್ಣ ಸ್ಕ್ವಾಡ್: ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ರಿಷಬ್ ಪಂತ್ (ವಿಕೆಟ್ ಕೀಪರ್), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್, ರವಿ ಬಿಷ್ಣೋಯ್, ಯುಜುವೇಂದ್ರ ಚಾಹಲ್, ಅರ್ಷ್‌ದೀಪ್ ಸಿಂಗ್, ದಿನೇಶ್ ಕಾರ್ತಿಕ್, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್ , ಆವೇಶ್ ಖಾನ್

Sep 06, 2022, 11:33 am IST

ಭಾರತ vs ಶ್ರೀಲಂಕಾ ಪಂದ್ಯದ ಸಮಯ ಹಾಗೂ ನೇರಪ್ರಸಾರ: ಭಾರತ ಹಾಗೂ ಶ್ರೀಲಂಕಾ ನಡುವಿನ ಈ ಪಂದ್ಯ ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯಲಿದ್ದು ಈ ಪಂದ್ಯ ಭಾರತೀಯ ಕಾಲಮಾನ ಸಂಜೆ 7:30ಕ್ಕೆ ಆರಂಭವಾಗಲಿದೆ. 7 ಗಂಟೆಗೆ ಪಂದ್ಯದ ಟಾಸ್ ಪ್ರಕ್ರಿಯೆ ನಡೆಯಲಿದೆ. ಇನ್ನು ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಪಂದ್ಯದ ನೇರಪ್ರಸಾರವಿರಲಿದ್ದು ಹಾರ್ಟ್‌ಸ್ಟಾರ್‌ನಲ್ಲಿ ಲೈವ್‌ಸ್ಟ್ರೀಮಿಂಗ್ ಇರಲಿದೆ

Sep 05, 2022, 11:34 pm IST

ದ್ವೀಪ ರಾಷ್ಟ್ರ ಶ್ರೀಲಂಕಾ ತಮ್ಮ ಆರಂಭಿಕ ಸೂಪರ್ ಫೋರ್ ಪಂದ್ಯವನ್ನು ಗೆದ್ದುಕೊಂಡಿದೆ ಮತ್ತು ಮಂಗಳವಾರ ದುಬೈನಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡದ ವಿರುದ್ಧ ಮತ್ತೊಂದು ಗೆಲುವು ಸಾಧಿಸಿದರೆ ಪ್ರಶಸ್ತಿಯ ಹಂತಕ್ಕೆ ಮತ್ತಷ್ಟು ಹತ್ತಿರವಾಗಲಿದೆ.

Sep 05, 2022, 11:20 pm IST

ಭಾರತದ ಐಪಿಎಲ್ ಅನುಭವ ಮತ್ತು ಗೆಲುವಿನ ಮನಸ್ಥಿತಿಯು 2022ರ ಏಷ್ಯಾ ಕಪ್ ಫೈನಲ್‌ನಲ್ಲಿ ತನ್ನ ತಂಡವನ್ನು ಎದುರಿಸಲು ಸವಾಲಿನ ತಂಡವಾಗಿದೆ ಎಂದು ಶ್ರೀಲಂಕಾ ನಾಯಕ ದಸುನ್ ಶನಕ ಸೋಮವಾರ ಹೇಳಿದ್ದಾರೆ.

Sep 05, 2022, 10:01 pm IST

ಮಾಜಿ ಕ್ರಿಕೆಟಿಗರಾದ ವಾಸಿಂ ಅಕ್ರಮ್, ಗೌತಮ್ ಗಂಭೀರ್ ಮತ್ತು ರವಿಶಾಸ್ತ್ರಿ ಪಾಕಿಸ್ತಾನ ವಿರುದ್ಧದ ಏಷ್ಯಾ ಕಪ್ 2022ರ ಸೂಪರ್ 4 ಪಂದ್ಯದಲ್ಲಿ ಭಾರತದ ಎಡಗೈ ಬ್ಯಾಟರ್ ರಿಷಭ್ ಪಂತ್ ಅವರ ಶಾಟ್ ಆಯ್ಕೆಯನ್ನು ಪ್ರಶ್ನಿಸಿದ್ದಾರೆ. ಇದು ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮೊದಲ ಇನ್ನಿಂಗ್ಸ್‌ನ ನಿರ್ಣಾಯಕ ಸಮಯದಲ್ಲಿ ಔಟಾಗಲು ಕಾರಣವಾಯಿತು.

Sep 05, 2022, 6:36 pm IST

ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಭಾರತ ಸೋಲು ಅನುಭವಿಸಿದ ಬಳಿಕ ಮಾತನಾಡಿದ ಸುನಿಲ್ ಗವಾಸ್ಕರ್ ಪಾಕ್ ವಿರುದ್ಧದ ಈ ಮಹತ್ವದ ಪಂದ್ಯದಲ್ಲಿ ಭಾರತದ ಆಡುವ ಬಳಗದಲ್ಲಿ ಮಾಡಿದ ಎಡವಟ್ಟೊಂದನ್ನು ಬೊಟ್ಟು ಮಾಡಿದ್ದಾರೆ. ಟೀಮ್ ಇಂಡಿಯಾ ಈ ಪಂದ್ಯದಲ್ಲಿ ಆಡುವ ಬಳಗದಲ್ಲಿ ದಿನೇಶ್ ಕಾರ್ತಿಕ್ ಅವರನ್ನು ಹೊರಗಿಟ್ಟು ರಿಷಭ್ ಪಂತ್‌ಗೆ ಅವಕಾಶವನ್ನು ನೀಡಿತ್ತು. ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ಈ ನಿರ್ಧಾರವನ್ನು ಯಾವ ಕಾರಣಕ್ಕಾಗಿ ತೆಗೆದುಕೊಂಡಿತು ಎಂಬುದು ಅರ್ಥವೇ ಆಗುತ್ತಿಲ್ಲ ಎಂದಿದ್ದಾರೆ.

Sep 05, 2022, 6:36 pm IST

ಪಾಕಿಸ್ತಾನದ ವಿರುದ್ಧದ ಭಾರತದ ಸೋಲಿನ ಕುರಿತಾಗಿ ಸಾಕಷ್ಟು ವಿಶ್ಲೇಷಣೆಗಳು ನಡೆಯುತ್ತಿದೆ. ಭಾರತ ತಂಡ ಈ ನಿರ್ಣಾಯಕ ಪಂದ್ಯದಲ್ಲಿ ಸೋಲು ಅನುಭವಿಸಲು ಕಾರಣವಾದ ಅಂಶಗಳೇನು ಎಂಬುದರ ಕುರಿತಾಗಿಯಾಗಿ ಸಾಕಷ್ಟು ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಈ ಸಂದರ್ಭದಲ್ಲಿ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಭಾರತ ಸೋಲಲು ಕಾರಣವಾದ ಪ್ರಮುಖ ಅಂಶವನ್ನು ಸುನಿಲ್ ಗವಾಸ್ಕರ್ ಉಲ್ಲೇಖಿಸಿದ್ದು ಆ ನಿರ್ಧಾರ ಯಾಕೆ ಎಂಬುದೇ ಅರ್ಥವಾಗಿಲ್ಲ ಎಂದಿದ್ದಾರೆ.

Sep 05, 2022, 4:07 pm IST

ಭಾರತ ಹಾಗೂ ಪಾಕಿಸ್ತಾನ‌ ನಡುವಿನ ಸೂಪರ್ 4 ಹಂತದ ಸೆಣೆಸಾಟ ಮುಕ್ತಾಯವಾಗಿದೆ. ಈ ಮುಖಾಮುಖಿಯಲ್ಲಿ ಭಾರತ ತಂಡ‌ ರೋಚಕ‌ ಸೆಣೆಸಾಟ ನಡೆಸಿಯೂ ಸೋಲು ಅನುಭವಿಸಿದೆ. ಭಾರತ ತಂಡದ‌ ಬೌಲಿಂಗ್ ವಿಭಾಗದ ನೀರಸ‌ ಪ್ರದರ್ಶನದಿಂದಾಗಿ ಗೆಲ್ಲಬಹುದಾಗಿದ್ದ ಪಂದ್ಯವನ್ನು ಭಾರತ ಕಳೆದುಕೊಂಡಿದೆ. ಆದರೆ ಈ ಪಂದ್ಯದಲ್ಲಿ ಪಾಕಿಸ್ತಾನದ ಪರವಾಗಿ ಪ್ರಮುಖ ಪಾತ್ರವಹಿಸಿದ್ದ ವಿಕೆಟ್ ಕೀಪರ್ ಮೊಹಮ್ಮದ್ ರಿಜ್ವಾನ್ ಪಂದ್ಯದ ಬಳಿಕ ಎಂಆರ್‌ಐ ಸ್ಕ್ಯಾನಿಂಗ್ ಗೆ ಒಳಗಾಗಿದ್ದಾರೆ.

Sep 05, 2022, 3:34 pm IST

ಟೀಮ್ ಇಂಡಿಯಾದಲ್ಲಿ ಒಳ್ಳೆಯ ವಾತಾವರಣವಿದ್ದು, ಇದರ ಕೀರ್ತಿ ತಂಡದ ನಾಯಕ ಮತ್ತು ಕೋಚ್‌ಗೆ ಸಲ್ಲಬೇಕು ಎಂದು ವಿರಾಟ್ ಕೊಹ್ಲಿ ಪಾಕ್ ವಿರುದ್ಧದ ಪಂದ್ಯ ಮುಕ್ತಾಯವಾದ ನಂತರ ನಡೆದ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.

Sep 05, 2022, 1:23 pm IST

ಪಾಕ್ ವಿರುದ್ಧದ ಪಂದ್ಯದಲ್ಲಿ ಅಸಿಫ್ ಅಲಿ ಕ್ಯಾಚ್ ಬಿಟ್ಟ ಅರ್ಷ್‌ದೀಪ್ ಸಿಂಗ್ ಕುರಿತು ಮಾತನಾಡಿರುವ ವಿರಾಟ್ ಕೊಹ್ಲಿ ಒತ್ತಡದ ಪಂದ್ಯಗಳಲ್ಲಿ ಈ ರೀತಿಯ ತಪ್ಪುಗಳಾಗುವುದು ಸಹಜ ಎಂದು ಅರ್ಷ್‌ದೀಪ್ ಸಿಂಗ್ ಪರ ಬ್ಯಾಟ್ ಬೀಸಿದ್ದಾರೆ.

Sep 05, 2022, 12:49 pm IST

ಪಾಕ್ ಪಂದ್ಯ ಮುಗಿದ ಬೆನ್ನಲ್ಲೇ ವಿವಾದ: ಭಾರತ ಕ್ರಿಕೆಟಿಗ ಅರ್ಷ್‌ದೀಪ್ ಸಿಂಗ್ ವಿಕಿಪಿಡಿಯಾ ಪ್ರೊಫೈಲ್ ಪೇಜ್ ಅನ್ನು ಕಿಡಿಗೇಡಿಗಳು ತಿದ್ದಿದ್ದು ಖಲಿಸ್ತಾನ್ ಕ್ರಿಕೆಟಿಗ ಎಂದು ಬದಲಿಸಿದ್ದರು.

Sep 05, 2022, 9:34 am IST

ನಿನ್ನೆಯ ಪಂದ್ಯದಲ್ಲಿ ಟೀಮ್ ಇಂಡಿಯಾ ಆಟಗಾರರು ಒಂದೆಡೆ ವಿಕೆಟ್ ಕಳೆದುಕೊಳ್ಳುತ್ತಿದ್ದರೆ ಮತ್ತೊಂದೆಡೆ ನೆಲಕಚ್ಚಿ ನಿಂತು ಉತ್ತಮ ಬ್ಯಾಟಿಂಗ್ ಪ್ರದರ್ಶನ ಮಾಡಿದ ವಿರಾಟ್ ಕೊಹ್ಲಿಯನ್ನು ರೋಹಿತ್ ಶರ್ಮಾ ಪಂದ್ಯ ಮುಗಿದ ನಂತರ ಹೊಗಳಿದ್ದಾರೆ. ವಿರಾಟ್ ಕೊಹ್ಲಿಯ ಈ ಆಟ ಅತ್ಯುತ್ತಮವಾಗಿತ್ತು, ತಂಡದ ಆಟಗಾರರು ಒಂದೆಡೆ ವಿಕೆಟ್ ಕಳೆದುಕೊಳ್ಳುತ್ತಿದ್ದರೆ ಮತ್ತೊಂದೆಡೆ ರನ್ ಕಲೆಹಾಕುವಂತ ಆಟಗಾರನ ಅಗತ್ಯವಿತ್ತು, ಆ ಕೆಲಸವನ್ನು ವಿರಾಟ್ ಕೊಹ್ಲಿ ಮಾಡಿದರು ಹಾಗೂ ವಿರಾಟ್ ಕೊಹ್ಲಿ ಕಲೆಹಾಕಿದ ರನ್ ತಂಡಕ್ಕೆ ಅತ್ಯಮೂಲ್ಯವಾಗಿತ್ತು ಎಂದು ರೋಹಿತ್ ಶರ್ಮಾ ಕೊಹ್ಲಿ ಪ್ರದರ್ಶನವನ್ನು ಹಾಡಿ ಹೊಗಳಿದ್ದಾರೆ.

Sep 04, 2022, 11:33 pm IST

ಪಾಕಿಸ್ತಾನ 19.5 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 182 ರನ್ ಕಲೆಹಾಕಿದ್ದು 5 ವಿಕೆಟ್‍ಗಳ ರೋಚಕ ಗೆಲುವನ್ನು ಕಂಡಿದೆ.

Sep 04, 2022, 11:15 pm IST

ಪಾಕಿಸ್ತಾನ 19 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 175 ರನ್ ಕಲೆಹಾಕಿದ್ದು ಗೆಲ್ಲಲು 6 ಎಸೆತಗಳಲ್ಲಿ 7 ರನ್ ಕಲೆಹಾಕಬೇಕಿದೆ

Sep 04, 2022, 11:09 pm IST

ಪಾಕಿಸ್ತಾನ 18 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 156 ರನ್ ಕಲೆಹಾಕಿದ್ದು ಗೆಲ್ಲಲು 12 ಎಸೆತಗಳಲ್ಲಿ 26 ರನ್ ಕಲೆಹಾಕಬೇಕಿದೆ

Sep 04, 2022, 10:58 pm IST

ಪಾಕ್ ನಾಲ್ಕನೇ ವಿಕೆಟ್ ಪತನ: ಮೊಹಮ್ಮದ್ ರಿಜ್ವಾನ್ 51 ಎಸೆತಗಳಲ್ಲಿ 71 ರನ್ ಕಲೆಹಾಕಿ ಓಟ್ ಆಗಿದ್ದಾರೆ. ಪಾಕ್ 16.5 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 147 ರನ್ ಕಲೆಹಾಕಿದ್ದು ಗೆಲ್ಲಲು 19 ಎಸೆತಗಳಲ್ಲಿ 35 ಬಾರಿಸಬೇಕಿದೆ

Sep 04, 2022, 10:43 pm IST

ಪಾಕಿಸ್ತಾನ 15 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 135 ರನ್ ಕಲೆಹಾಕಿದ್ದು ಗೆಲ್ಲಲು 30 ಎಸೆತಗಳಲ್ಲಿ 47 ರನ್ ಕಲೆಹಾಕಬೇಕಿದೆ.

Sep 04, 2022, 10:38 pm IST

ಪಾಕಿಸ್ತಾನ 14 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 119 ರನ್ ಕಲೆಹಾಕಿದ್ದು ಗೆಲ್ಲಲು 36 ಎಸೆತಗಳಲ್ಲಿ 63 ರನ್ ಬಾರಿಸಬೇಕಿದೆ

Sep 04, 2022, 10:29 pm IST

ಮೊಹಮ್ಮದ್ ರಿಜ್ವಾನ್ 37 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದು, ಪಾಕಿಸ್ತಾನ 12.2 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 100 ರನ್ ಕಲೆಹಾಕಿದೆ ಹಾಗೂ ಗೆಲ್ಲಲು 46 ಎಸೆತಗಳಲ್ಲಿ 82 ರನ್ ಬಾರಿಸಬೇಕಿದೆ.

Sep 04, 2022, 10:22 pm IST

ಭಾರತ ನೀಡಿರುವ 182 ರನ್‌ಗಳ ಗುರಿಯನ್ನು ಬೆನ್ನತ್ತಿರುವ ಪಾಕಿಸ್ತಾನ 11 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 86 ರನ್ ಕಲೆಹಾಕಿದ್ದು ಗೆಲ್ಲಲು 54 ಎಸೆತಗಳಲ್ಲಿ 96 ರನ್ ಕಲೆಹಾಕಬೇಕಿದೆ

Sep 04, 2022, 10:12 pm IST

ಪಾಕಿಸ್ತಾನದ ಎರಡನೇ ವಿಕೆಟ್ ಪತನ: 18 ಎಸೆತಗಳಲ್ಲಿ 15 ರನ್ ಕಲೆಹಾಕಿದ್ದ ಫಖರ್ ಜಮಾನ್ ಚಾಹಲ್ ಎಸೆತದಲ್ಲಿ ಔಟ್ ಆಗಿದ್ದು ಪಾಕ್ 8.4 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 63 ರನ್ ಕಲೆಹಾಕಿದೆ, ಗೆಲುವಿಗೆ 68 ಎಸೆತಗಳಲ್ಲಿ 119 ರನ್ ಬಾರಿಸಬೇಕಿದೆ

Sep 04, 2022, 10:00 pm IST

ಟೀಮ್ ಇಂಡಿಯಾ ನೀಡಿರುವ 182 ರನ್ ಗುರಿ ಬೆನ್ನತ್ತಿರುವ ಪಾಕಿಸ್ತಾನ ಪವರ್ ಪ್ಲೇ ಮುಕ್ತಾಯಕ್ಕೆ 1 ವಿಕೆಟ್ ನಷ್ಟಕ್ಕೆ 44 ರನ್ ಕಲೆಹಾಕಿದ್ದು 84 ಎಸೆತಗಳಲ್ಲಿ 138 ರನ್ ಬಾರಿಸಬೇಕಿದೆ.

Sep 04, 2022, 9:46 pm IST

ರವಿ ಬಿಷ್ಣೋಯಿ ಎಸೆತದಲ್ಲಿ ಸೂರ್ಯಕುಮಾರ್ ಯಾದವ್‌ಗೆ ಕ್ಯಾಚ್ ನೀಡಿರುವ ಬಾಬರ್ ಅಜಮ್ 10 ಎಸೆತಗಳಲ್ಲಿ 14 ರನ್ ಕಲೆಹಾಕಿದ್ದು 3.4 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 22 ರನ್ ಕಲೆಹಾಕಿದೆ.

Sep 04, 2022, 9:42 pm IST

ಭಾರತ ನೀಡಿರುವ 182 ರನ್‌ಗಳ ಗುರಿಯನ್ನು ಬೆನ್ನತ್ತಿರುವ ಪಾಕಿಸ್ತಾನ 3 ಓವರ್‌ಗಳಲ್ಲಿ 19 ರನ್ ಕಲೆಹಾಕಿದ್ದು 17 ಓವರ್‌ಗಳಲ್ಲಿ 163 ರನ್ ಬಾರಿಸಬೇಕಿದೆ

Sep 04, 2022, 9:22 pm IST

ಟೀಂ ಇಂಡಿಯಾ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 181 ರನ್ ಕಲೆ ಹಾಕಿದ್ದು ಎದುರಾಳಿ ಪಾಕಿಸ್ತಾನ ತಂಡಕ್ಕೆ 182 ಗೆಲ್ಲಲು ರನ್‌ಗಳ ಗುರಿಯನ್ನು ನೀಡಿದೆ.

Sep 04, 2022, 9:06 pm IST

ಟೀಮ್ ಇಂಡಿಯಾ 18 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 164 ರನ್ ಕಲೆಹಾಕಿದೆ. ವಿರಾಟ್ ಕೊಹ್ಲಿ 36 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದಾರೆ.

Sep 04, 2022, 8:52 pm IST

ಟೀಮ್ ಇಂಡಿಯಾ 15 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 135 ರನ್ ಕಲೆಹಾಕಿದೆ.

Sep 04, 2022, 8:49 pm IST

ಕಳೆದ ಪಾಕ್ ವಿರುದ್ಧದ ಪಂದ್ಯದಲ್ಲಿ ಅಬ್ಬರಿಸಿದ್ದ ಹಾರ್ದಿಕ್ ಪಾಂಡ್ಯ ಈ ಬಾರಿ ನಿರಾಸೆ ಮೂಡಿಸಿದ್ದು, 2 ಎಸೆತಗಳಲ್ಲಿ ಯಾವುದೇ ರನ್ ಗಳಿಸದೆ ಔಟಾಗಿದ್ದಾರೆ. ಏಳನೇ ಕ್ರಮಾಂಕದಲ್ಲಿ ದೀಪಕ್ ಹೂಡ ಕಣಕ್ಕಿಳಿದಿದ್ದಾರೆ.

Sep 04, 2022, 8:41 pm IST

ರಿಷಭ್ ಪಂತ್ 12 ಎಸೆತಗಳಲ್ಲಿ 14 ರನ್ ಕಲೆಹಾಕಿ ಓಟ್ ಆಗಿದ್ದು, ಟೀಮ್ ಇಂಡಿಯಾ ನಾಲ್ಕನೇ ವಿಕೆಟ್ ಕಳೆದುಕೊಂಡಿದೆ. ಭಾರತ 13.5 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 126 ರನ್ ಕಲೆಹಾಕಿದೆ.

Sep 04, 2022, 8:37 pm IST

ಟೀಮ್ ಇಂಡಿಯಾ 13 ಓವರ್‌ಗಳಲ್ಲಿ 3 ವಿಕೆಟ್ 118 ರನ್ ಕಲೆಹಾಕಿದೆ.

Sep 04, 2022, 8:17 pm IST

ಸೂರ್ಯಕುಮಾರ್ ಯಾದವ್ 10 ಎಸೆತಗಳಲ್ಲಿ 13 ರನ್ ಕಲೆಹಾಕಿ ವಿಕೆಟ್ ಒಪ್ಪಿಸಿದ್ದಾರೆ. ಟೀಮ್ ಇಂಡಿಯಾ 9.4 ಓವರ್‌ ಮುಕ್ತಾಯಕ್ಕೆ 3 ವಿಕೆಟ್ ಕಳೆದುಕೊಂಡು 91 ರನ್ ಗಳಿಸಿದೆ.

Sep 04, 2022, 8:15 pm IST

ಟೀಮ್ ಇಂಡಿಯಾ 9 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 88 ರನ್ ಕಲೆಹಾಕಿದೆ.

Sep 04, 2022, 8:08 pm IST

ಟೀಮ್ ಇಂಡಿಯಾ 7 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 71 ರನ್ ಕಲೆಹಾಕಿದೆ. ವಿರಾಟ್ ಕೊಹ್ಲಿ ಹಾಗೂ ಸೂರ್ಯಕುಮಾರ್ ಯಾದವ್ ಇಬ್ಬರೂ ತಲಾ ಒಂದೊಂದು ಬೌಂಡರಿ ಬಾರಿಸಿ ಕಣದಲ್ಲಿದ್ದಾರೆ.

Sep 04, 2022, 8:06 pm IST

ಭಾರತದ ಎರಡನೇ ವಿಕೆಟ್ ಪತನ. 20 ಎಸೆತಗಳಲ್ಲಿ 28 ರನ್ ಗಳಿಸಿ ಕೆಎಲ್ ರಾಹುಲ್ ಔಟ್

Sep 04, 2022, 7:57 pm IST

ಟೀಂ ಇಂಡಿಯಾದ ಮೊದಲ ವಿಕೆಟ್ ಪತನ, ರೋಹಿತ್ ಶರ್ಮಾ 28 ರನ್‌ಗಳಿಸಿ ಔಟ್‌. ಭಾರತ 5.1 ಓವರ್‌ಗಳಲ್ಲಿ 54/1

Sep 04, 2022, 7:56 pm IST

ಭಾರತ 5 ಓವರ್‌ ಮುಕ್ತಾಯಕ್ಕೆ ವಿಕೆಟ್ ನಷ್ಟವಿಲ್ಲದೆ 54 ರನ್ ಕಲೆಹಾಕಿದೆ. ರೋಹಿತ್ ಶರ್ಮಾ ಅಜೇಯ 28, ಕೆಎಲ್ ರಾಹುಲ್ ಅಜೇಯ 26ರನ್ ಗಳಿಸಿದ್ದಾರೆ.

Sep 04, 2022, 7:52 pm IST

ಭಾರತ 4 ಓವರ್‌ ಮುಕ್ತಾಯಕ್ಕೆ ವಿಕೆಟ್ ನಷ್ಟವಿಲ್ಲದೆ 46 ರನ್ ಕಲೆಹಾಕಿದೆ. ರೋಹಿತ್ ಶರ್ಮಾ ಅಜೇಯ 27, ಕೆಎಲ್ ರಾಹುಲ್ ಅಜೇಯ 19ರನ್ ಗಳಿಸಿದ್ದಾರೆ.

Sep 04, 2022, 7:46 pm IST

ಭಾರತ 3 ಓವರ್‌ ಮುಕ್ತಾಯಕ್ಕೆ ವಿಕೆಟ್ ನಷ್ಟವಿಲ್ಲದೆ 34 ರನ್ ಕಲೆಹಾಕಿದೆ.

Sep 04, 2022, 7:41 pm IST

ಭಾರತ 2 ಓವರ್‌ ಮುಕ್ತಾಯಕ್ಕೆ ವಿಕೆಟ್ ನಷ್ಟವಿಲ್ಲದೆ 20 ರನ್ ಕಲೆಹಾಕಿದೆ. ರೋಹಿತ್ ಶರ್ಮಾ ಅಜೇಯ 15, ಕೆಎಲ್ ರಾಹುಲ್ ಅಜೇಯ 5ರನ್ ಗಳಿಸಿದ್ದಾರೆ.

Sep 04, 2022, 7:36 pm IST

ಭಾರತ ಮೊದಲ ಓವರ್‌ ಮುಕ್ತಾಯಕ್ಕೆ ವಿಕೆಟ್ ನಷ್ಟವಿಲ್ಲದೆ 11ರನ್ ಕಲೆಹಾಕಿದೆ.

Sep 04, 2022, 7:09 pm IST

ಪಾಕಿಸ್ತಾನ ಪ್ಲೇಯಿಂಗ್ 11: ಮೊಹಮ್ಮದ್ ರಿಜ್ವಾನ್(ವಿಕೆಟ್ ಕೀಪರ್‌), ಬಾಬರ್ ಅಜಮ್(ನಾಯಕ), ಫಖರ್ ಜಮಾನ್, ಖುಷ್ದಿಲ್ ಶಾ, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಆಸಿಫ್ ಅಲಿ, ಮೊಹಮ್ಮದ್ ನವಾಜ್, ಹಾರಿಸ್ ರೌಫ್, ಮೊಹಮ್ಮದ್ ಹಸ್ನೇನ್, ನಸೀಮ್ ಶಾ

Sep 04, 2022, 7:06 pm IST

ಟೀಂ ಇಂಡಿಯಾ ಪ್ಲೇಯಿಂಗ್ 11: ಕೆಎಲ್ ರಾಹುಲ್, ರೋಹಿತ್ ಶರ್ಮಾ(ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್(ವಿಕೆಟ್ ಕೀಪರ್‌), ದೀಪಕ್ ಹೂಡಾ, ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್, ರವಿ ಬಿಷ್ಣೋಯ್, ಯುಜ್ವೇಂದ್ರ ಚಾಹಲ್, ಅರ್ಷದೀಪ್ ಸಿಂಗ್

Sep 04, 2022, 7:05 pm IST

ಪಾಕಿಸ್ತಾನ ತಂಡದ ಪ್ಲೇಯಿಂಗ್ ಇಲೆವೆನ್‌ನಲ್ಲಿ ಒಂದು ಬದಲಾವಣೆ, ಟೀಂ ಇಂಡಿಯಾದಲ್ಲಿ ಮೂವರು ಆಟಗಾರರ ಬದಲಾವಣೆ

Sep 04, 2022, 7:02 pm IST

ಏಷ್ಯಾಕಪ್ 2022, ಸೂಪರ್‌ 4 ಪಂದ್ಯ: ಟಾಸ್ ಗೆದ್ದ ಪಾಕಿಸ್ತಾನ ಬೌಲಿಂಗ್ ಆಯ್ಕೆ, ಮೊದಲು ಬ್ಯಾಟಿಂಗ್ ಮಾಡಲಿರುವ ಟೀಂ ಇಂಡಿಯಾ

Sep 04, 2022, 6:50 pm IST

ಏಷ್ಯಾಕಪ್‌ನಲ್ಲಿ ಭಾರತವು ಪಾಕಿಸ್ತಾನದ ವಿರುದ್ಧ 9-5 ಗೆಲುವು-ಸೋಲಿನ ದಾಖಲೆಯನ್ನು ಹೊಂದಿದೆ. 2010 ರಿಂದ, ಉಭಯ ತಂಡಗಳ ನಡುವಿನ 7 ಏಷ್ಯಾ ಕಪ್ ಮುಖಾಮುಖಿಯಲ್ಲಿ ಭಾರತವು ಆರರಲ್ಲಿ ಗೆದ್ದಿದೆ.

Sep 04, 2022, 5:56 pm IST

ಪಾಕಿಸ್ತಾನವು ಯುಎಇಯಲ್ಲಿ ಆಡಿದ 19 ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಕೇವಲ ಎರಡು ಪಂದ್ಯವನ್ನ ಮಾತ್ರ ಸೋತಿದೆ. 2021ರ T20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲನ್ನ ಬಿಟ್ಟರೆ, ಕಳೆದ ಭಾರತದ ವಿರುದ್ಧ ಏಷ್ಯಾಕಪ್ ಆರಂಭಿಕ ಪಂದ್ಯದ ಸೋಲು ಎರಡನೆಯದಾಗಿದೆ.

Sep 04, 2022, 5:54 pm IST

ಭಾರತ vs ಪಾಕಿಸ್ತಾನ ಮುಖಾಮುಖಿ: T20Is: ಪಂದ್ಯಗಳು: 10, ಭಾರತ ಗೆಲುವು: 7, ಪಾಕಿಸ್ತಾನ: 2, ಟೈಡ್: 1 ODIಗಳು: ಪಂದ್ಯಗಳು: 132, ಭಾರತ ಗೆಲುವು: 55, ಪಾಕಿಸ್ತಾನ: 73, NR: 4 ಟೆಸ್ಟ್: ಪಂದ್ಯಗಳು: 59, ಭಾರತ ಗೆಲುವು: 9, ಪಾಕಿಸ್ತಾನ: 12, ಡ್ರಾ: 38

Sep 04, 2022, 4:31 pm IST

ದುಬೈ ಕ್ರಿಕೆಟ್ ಸ್ಟೇಡಿಯಂನಲ್ಲಿ ಸಾಮಾನ್ಯವಾಗಿ 160-170 ರ ಸಮೀಪದಲ್ಲಿ ರನ್‌ಗಳು ಹರಿದುಬಂದಿದೆ. ನೇರ ಬೌಂಡರಿಗಳು ತುಂಬಾ ಚಿಕ್ಕದಾಗಿದ್ದು ಬ್ಯಾಟ್ಸ್‌ಮನ್‌ಗಳು ಅದರ ಸಂಪೂರ್ಣ ಲಾಭ ಪಡೆಯುತ್ತಾರೆ. ಇನ್ನು ಸೀಮ್‌ ಮೂವ್‌ಮೆಂಟ್ ಹಾಗೂ ಹೆಚ್ಚುವರಿ ಬೌನ್ಸ್‌ ಬೌಲರ್‌ಗಳಿಗೆ ನೆರವಾಗಲಿದ್ದು, ಸ್ಪಿನ್ನರ್‌ಗಳಿಗೆ ಹೆಚ್ಚು ಸಹಾಯವಾಗುವುದಿಲ್ಲ.

Sep 04, 2022, 4:05 pm IST

ಹಾಂಕಾಂಗ್ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್ ಮಾಡುವಾಗ ಶಹನವಾಜ್ ದಹಾನಿ ಗಾಯಗೊಂಡಿದ್ದರು. ಪಾಕಿಸ್ತಾನ ಕ್ರಿಕೆಟ್ ತಂಡದ ವೈದ್ಯಕೀಯ ತಂಡವು ಮುಂದಿನ 48-72 ಗಂಟೆಗಳ ಕಾಲ ಬೌಲರ್ ಆರೋಗ್ಯದ ಮೇಲೆ ಕಣ್ಣಿರಿಸಲಿದ್ದು, ನಂತರ ಅವರು ಏಷ್ಯಾ ಕಪ್‌ನ ಮುಂಬರುವ ಪಂದ್ಯಗಳಲ್ಲಿ ಆಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಶಹನವಾಜ್ ದಹಾನಿ ಅವರನ್ನು ಹೊರಗಿಟ್ಟ ನಂತರ, ಈಗ ಹಸನ್ ಅಲಿಯನ್ನು ಭಾರತದ ವಿರುದ್ಧ ಆಡುವ ಹನ್ನೊಂದರಲ್ಲಿ ಸೇರಿಸಬಹುದು.

Sep 04, 2022, 3:56 pm IST

ಭಾರತ ವಿರುದ್ಧದ ಪಂದ್ಯಕ್ಕೂ ಮುನ್ನ ಪಾಕ್ ತಂಡ ಭಾರೀ ಮುಖಭಂಗ ಅನುಭವಿಸಿದೆ. ವೇಗದ ಬೌಲರ್‌ಗಳಾದ ಶಾಹೀನ್ ಅಫ್ರಿದಿ ಮತ್ತು ಮೊಹಮ್ಮದ್ ವಾಸಿಮ್ ಏಷ್ಯಾಕಪ್‌ನಿಂದ ಹೊರಗುಳಿದ ನಂತರ ಪಾಕಿಸ್ತಾನದ ಮತ್ತೊಬ್ಬ ವೇಗದ ಬೌಲರ್ ಗಾಯಗೊಂಡಿದ್ದಾರೆ. ಶಂಕಿತ ಸ್ನಾಯು ಸೆಳೆತ ಸಮಸ್ಯೆಯಿಂದಾಗಿ ಪಾಕಿಸ್ತಾನದ ವೇಗದ ಬೌಲರ್ ಶಾನವಾಜ್ ಭಾರತ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದಾರೆ.

Sep 04, 2022, 2:53 pm IST

ಭಾರತ ತಂಡದಲ್ಲಿ ಸಾಕಷ್ಟು ಪ್ರಮಾಣದ ಮ್ಯಾಚ್ ವಿನ್ನರ್‌ಗಳು ಇದ್ದಾರೆ. ಆದರೆ ಎಲ್ಲರಿಗಿಂತಲೂ ಪಾಕಿಸ್ತಾನ ಹೆಚ್ಚು ತಲೆಕೆಡಿಸಿಕೊಂಡಿರುವುದು ಹಾರ್ದಿಕ್ ಪಾಂಡ್ಯ ಬಗ್ಗೆ. ಲೀಗ ಹಂತದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡು ವಿಭಾಗದಲ್ಲಿಯೂ ಹಾರ್ದಿಕ್ ಪಾಂಡ್ಯ ಪಾಕಿಸ್ತಾನ ಪಡೆಗೆ ದೊಡ್ಡ ಆಘಾತವನ್ನು ನೀಡುವಲ್ಲಿ ಯಶಸ್ವಿಯಾಗಿದ್ದರು. ಈ ಕಾರಣದಿಂದಾಗಿಯೇ ಹಾರ್ದಿಕ್ ಪಾಂಡ್ಯ ವಿರುದ್ಧ ವಿಶೇಷ ಯೋಜನೆಗಳನ್ನು ಬಾಬರ್ ಪಡೆ ಸಿದ್ಧಪಡಿಸಿಕೊಂಡಿದೆ ಎನ್ನಲಾಗಿದೆ. ಶನಿವಾರ ನಡೆದ ಟೀಮ್ ಮೀಟಿಂಗ್‌ನಲ್ಲಿ ಹಾರ್ದಿಕ್ ಪಾಂಡ್ಯ ಅವರನ್ನು ಕಟ್ಟಿಹಾಕುವ ವಿಚಾರವಾಗಿಯೇ ಹೆಚ್ಚಿನ ಚರ್ಚೆಗಳು ನಡೆದಿದೆ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿದೆ.

Sep 04, 2022, 1:25 pm IST

ಮುಶ್ಫಿಕರ್ ರಹೀಮ್ ಟಿ20 ಕ್ರಿಕೆಟ್‌ಗೆ ವಿದಾಯ ಘೋಷಣೆ

Sep 04, 2022, 1:24 pm IST

ಏಷ್ಯಾ ಕಪ್‌ನಲ್ಲಿ ಬಾಂಗ್ಲಾದೇಶ ತಂಡ ಲೀಗ್ ಹಂತದಿಂದ ಹೊರಬಿದ್ದಿದ್ದು ಈ ಸಂದರ್ಭದಲ್ಲಿ ತಂಡದ ಅನುಭವಿ ಆಟಗಾರ ಮುಶ್ಫಿಕರ್ ರಹೀಮ್ ಟಿ20 ಕ್ರಿಕೆಟ್‌ಗೆ ವಿದಾಯ ಘೋಷಣೆ ಮಾಡಿದ್ದಾರೆ. ಟ್ವಿಟ್ಟರ್‌ನಲ್ಲಿ ಭಾನುವಾರ ತಮ್ಮ ನಿವೃತ್ತಿಯ ಘೋಷಣೆ ಮಾಡಿದ್ದು ಟೆಸ್ಟ್ ಹಾಗೂ ಏಕದಿನ ಮಾದರಿಯಲ್ಲಿ ಹೆಚ್ಚಿನ ಗಮನ ಹರಿಸುವ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳುತ್ತಿರುವುದಾಗಿ ಪ್ರಕಟಿಸಿದ್ದಾರೆ.

Sep 04, 2022, 11:55 am IST

ಪಾಕಿಸ್ತಾನದ ಸಂಭಾವ್ಯ ಆಡುವ ಬಳಗ ಹೀಗಿದೆ: ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಬಾಬರ್ ಅಜಮ್ ©, ಫಖರ್ ಜಮಾನ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಶಾದಾಬ್ ಖಾನ್, ಆಸಿಫ್ ಅಲಿ, ಮೊಹಮ್ಮದ್ ನವಾಜ್, ಹಾರಿಸ್ ರೌಫ್, ಶಾನವಾಜ್ ದಹಾನಿ, ನಸೀಮ್ ಶಾ

Sep 04, 2022, 11:55 am IST

ಭಾರತದ ಸಂಭಾವ್ಯ ಆಡುವ ಬಳಗ ಹೀಗಿದೆ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್(ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಆವೇಶ್ ಖಾನ್, ಯುಜ್ವೇಂದ್ರ ಚಾಹಲ್, ಅರ್ಶ್ದೀಪ್ ಸಿಂಗ್

Sep 04, 2022, 9:48 am IST

ಭಾರತ ತಂಡಕ್ಕೆ ದೊಡ್ಡ ಹಿನ್ನಡೆಯೊಂದು ಉಂಟಾಗಿದೆ. ತಂಡದ ಪ್ರಮುಖ ಆಲ್‌ರೌಡರ್ ರವೀಂದ್ರ ಜಡೇಜಾ ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದು ಟೂರ್ನಿಯ ಉಳಿದ ಪಂದ್ಯಗಳಿಂದ ಹೊಬಿದ್ದಿದ್ದಾರೆ. ಲೀಗ್ ಹಂತದ ಮೊದಲ ಪಂದ್ಯ ಪಾಕಿಸ್ತಾನದ ವಿರುದ್ಧ ರವೀಂದ್ರ ಜಡೇಜಾ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಅದ್ಭುತ ಪ್ರದರ್ಶನ ನೀಡಿದ್ದರು. ಇದೀಗ ಭಾರತ ತಂಡ ಪ್ರಮುಖ ಆಲ್‌ರೌಂಡರ್‌ಅನ್ನು ಕಳೆದುಕೊಂಡಿರುವ ಕಾರಣ ತಂಡದ ಸಮತೋಲನವನ್ನು ಉಳಿಸಿಕೊಳ್ಳಲು ಯಾವ ಆಟಗಾರನಿಗೆ ಅವಕಾಶ ನೀಡುತ್ತದ ಎಂಬುದು ಕುತೂಹಲ ಮೂಡಿಸಿದೆ.

Sep 03, 2022, 11:19 pm IST

ಶ್ರೀಲಂಕಾ ತಂಡ 19.1 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 179 ರನ್ ಕಲೆ ಹಾಕಿ 4 ವಿಕೆಟ್‍ಗಳ ಜಯ ಸಾಧಿಸಿದೆ.

Sep 03, 2022, 10:45 pm IST

ಅಫ್ಘಾನಿಸ್ತಾನ ನೀಡಿರುವ 176 ರನ್‌ಗಳ ಕಠಿಣ ಗುರಿಯನ್ನು ಬೆನ್ನತ್ತಿರುವ ಶ್ರೀಲಂಕಾ 15 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 127 ರನ್ ಕಲೆಹಾಕಿದ್ದು 30 ಎಸೆತಗಳಲ್ಲಿ 49 ಬಾರಿಸಬೇಕಿದೆ.

Sep 03, 2022, 10:19 pm IST

ಅಫ್ಘಾನಿಸ್ತಾನ ನೀಡಿರುವ 176 ರನ್‌ಗಳ ಕಠಿಣ ಗುರಿಯನ್ನು ಬೆನ್ನತ್ತಿರುವ ಶ್ರೀಲಂಕಾ 10 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 82 ರನ್ ಕಲೆಹಾಕಿದ್ದು 60 ಎಸೆತಗಳಲ್ಲಿ 94 ಬಾರಿಸಬೇಕಿದೆ.

Sep 03, 2022, 9:59 pm IST

ಅಫ್ಘಾನಿಸ್ತಾನ ನೀಡಿರುವ 176 ರನ್‌ಗಳ ಕಠಿಣ ಗುರಿಯನ್ನು ಬೆನ್ನತ್ತಿರುವ ಶ್ರೀಲಂಕಾ 6 ಓವರ್‌ಗಳಲ್ಲಿ 57 ರನ್ ಕಲೆಹಾಕಿದ್ದು 84 ಎಸೆತಗಳಲ್ಲಿ 119 ರನ್ ಬಾರಿಸಬೇಕಿದೆ.

Sep 03, 2022, 9:29 pm IST

ಅಫ್ಘಾನಿಸ್ತಾನ ಪರ ರಹಮಾನುಲಾ ಗುರ್ಬಾಜ್ 84 ರನ್ ಬಾರಿಸಿದರೆ, ಇಬ್ರಾಹಿಂ ಜದ್ರಾನ್ ಕೂಡ 40 ರನ್ ಗಳಿಸಿದರು.

Sep 03, 2022, 9:28 pm IST

ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಏಷ್ಯಾಕಪ್ ಸೂಪರ್ 4 ಪಂದ್ಯದಲ್ಲಿ ಅಫ್ಘಾನಿಸ್ತಾನ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 175 ರನ್‌ ಗಳಿಳಿಸಿದ್ದು, ಶ್ರೀಲಂಕಾ ತಂಡ ಗೆಲ್ಲಲು 176 ರನ್ ಗಳಿಸಬೇಕಿದೆ.

Sep 03, 2022, 8:57 pm IST

ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಏಷ್ಯಾಕಪ್ ಸೂಪರ್ 4 ಪಂದ್ಯದಲ್ಲಿ ಅಫ್ಘಾನಿಸ್ತಾನ 15.3 ಓವರ್‌ಗಳಲ್ಲಿ 140 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿದೆ.

Sep 03, 2022, 8:24 pm IST

ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಏಷ್ಯಾಕಪ್ ಸೂಪರ್ 4 ಪಂದ್ಯದಲ್ಲಿ ರಹಮಾನುಲ್ಲಾ ಗುರಾಬ್ಜ್ ಅರ್ಧಶತಕ ಬಾರಿಸುವ ಮೂಲಕ ಅಫ್ಘಾನಿಸ್ತಾನ ತಂಡಕ್ಕೆ ಮುನ್ನಡೆ ತಂದಿದ್ದಾರೆ.

Sep 03, 2022, 7:52 pm IST

ಶಾರ್ಜಾ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ಸೂಪರ್ 4 ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಅಫ್ಘಾನಿಸ್ತಾನದ ಆರಂಭಿಕರಾದ ರಹಮಾನುಲ್ಲಾ ಗುರ್ಬಾಜ್ ಮತ್ತು ಹಜರತುಲ್ಲಾ ಝಜೈ ಇನ್ನಿಂಗ್ಸ್ ಆರಂಭಿಸಿದ್ದಾರೆ.

Sep 03, 2022, 7:18 pm IST

ಅಫ್ಘಾನಿಸ್ತಾನ ತಂಡದ ಆಡುವ 11ರ ಬಳಗ: ಹಜರತುಲ್ಲಾ ಝಜೈ , ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಇಬ್ರಾಹಿಂ ಝದ್ರಾನ್, ನಜಿಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ (ನಾಯಕ), ಕರೀಂ ಜನತ್, ರಶೀದ್ ಖಾನ್, ಉಸ್ಮಾನ್ ಶಿನ್ವಾರಿ, ನವೀನ್-ಉಲ್-ಹಕ್, ಮುಜೀಬ್-ಉರ್-ರಹಖ್ಮಾನ್, ಫಝ್ವಾಲ್.

Sep 03, 2022, 7:18 pm IST

ಶ್ರೀಲಂಕಾ ತಂಡದ ಆಡುವ 11ರ ಬಳಗ: ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್), ಚರಿತ್ ಅಸಲಂಕಾ, ದನುಷ್ಕ ಗುಣತಿಲಕ, ಭಾನುಕಾ ರಾಜಪಕ್ಸೆ, ದಸುನ್ ಶನಕ (ನಾಯಕ), ವನಿಂದು ಹಸರಂಗ, ಚಮಿಕಾ ಕರುಣಾರತ್ನೆ, ಮಹೇಶ್ ತೀಕ್ಷಣ, ಅಸಿತ ಫೆರ್ನಾಂಡೋ, ದಿಲ್ಶನ್ ಮಧುಶಂಕ.

Sep 03, 2022, 7:05 pm IST

ಏಷ್ಯಾ ಕಪ್ 2022 ಸೂಪರ್ 4ರ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಟಾಸ್ ಗೆದ್ದ ಶ್ರೀಲಂಕಾ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

Sep 03, 2022, 6:03 pm IST

ಅಫ್ಘಾನ್ ಬೌಲರ್‌ಗಳು ಶ್ರೀಲಂಕಾವನ್ನು 20 ಓವರ್‌ಗಳಲ್ಲಿ ಕೇವಲ 105 ರನ್‌ಗಳಿಗೆ ಕಟ್ಟಿಹಾಕಿದರು ಮತ್ತು ಫಜಲ್‌ಹಕ್ ಫಾರೂಕಿ 3 ವಿಕೆಟ್‌ಗಳೊಂದಿಗೆ ಅತಿ ಹೆಚ್ಚು ವಿಕೆಟ್‌ಟೇಕರ್ ಆಗಿ ಮಿಂಚಿದ್ದರು.

Sep 03, 2022, 4:20 pm IST

ಏಷ್ಯಾ ಕಪ್ 2022 ರಲ್ಲಿ ಸೂಪರ್ 4ರ ಹಂತವು ಇಂದು (ಸೆಪ್ಟೆಂಬರ್ 3) ಯುಎಇಯ ಶಾರ್ಜಾದಲ್ಲಿ ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ತಂಡಗಳು ಎದುರುಗೊಳ್ಳಲಿವೆ. ಸೂಪರ್ 4 ಹಂತಕ್ಕೆ ಅರ್ಹತೆ ಪಡೆದಿರುವ ಇತರ 2 ತಂಡಗಳೆಂದರೆ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ.

Sep 03, 2022, 3:46 pm IST

ಅಫ್ಘಾನಿಸ್ತಾನ ಸಂಭಾವ್ಯ ಪ್ಲೇಯಿಂಗ್ 11: ಹಜರತುಲ್ಲಾ ಝಜೈ, ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಇಬ್ರಾಹಿಂ ಜದ್ರಾನ್, ನಜೀಬುಲ್ಲಾ ಝದ್ರಾನ್, ಕರೀಂ ಜನತ್, ಮೊಹಮ್ಮದ್ ನಬಿ (ನಾಯಕ), ರಶೀದ್ ಖಾನ್, ಅಜ್ಮತುಲ್ಲಾ ಒಮರ್ಝೈ, ನವೀನ್-ಉಲ್-ಹಕ್, ಮುಜೀಬ್ ಉರ್ ರಹಮಾನ್, ಫಜಲ್ಹಕ್ ಫಾರೂಕಿ.

Sep 03, 2022, 3:45 pm IST

ಶ್ರೀಲಂಕಾ ಸಂಭಾವ್ಯ ಪ್ಲೇಯಿಂಗ್ 11: ಪಾತುಮ್ ನಿಸ್ಸಾಂಕ, ಕುಸಾಲ್ ಮೆಂಡಿಸ್ (ವಿಕೆಟ್ ಕೀಪರ್), ಚರಿತ್ ಅಸಲಂಕ, ದನುಷ್ಕ ಗುಣತಿಲಕ, ಭಾನುಕ ರಾಜಪಕ್ಸೆ, ದಸುನ್ ಶನಕ (ನಾಯಕ), ವನಿಂದು ಹಸರಂಗ, ಚಾಮಿಕ ಕರುಣಾರತ್ನೆ, ಮಹೀಶ್ ತೀಕ್ಷಣ, ಅಸಿತ ಫೆರ್ನಾಂಡೋ, ದಿಲ್ಶನ್ ಮಧುಶಂಕ

Sep 03, 2022, 1:31 pm IST

ಈ ಸ್ಟೇಡಿಯಂನಲ್ಲಿ ಮೊದಲ ಇನ್ನಿಂಗ್ಸ್‌ನ ಸರಾಸರಿ ಸ್ಕೋರ್ 149 ರನ್ ಆಗಿದ್ದು, ಎರಡನೇ ಇನ್ನಿಂಗ್ಸ್‌ ಸ್ಕೋರ್ ಸರಾಸರಿ 125ರಷ್ಟಿದೆ. ಇನ್ನು ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ಎರಡು ಟಿ20 ಅಂತರಾಷ್ಟ್ರೀಯ ಪಂದ್ಯಗಳ ಮುಖಾಮುಖಿಯಲ್ಲಿ ತಲಾ 1 ಗೆಲುವನ್ನ ಕಂಡಿವೆ.

Sep 03, 2022, 1:19 pm IST

ಶಾರ್ಜಾ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಒಟ್ಟು 26 ಪಂದ್ಯಗಳು ನಡೆದಿದ್ದು, ಮೊದಲ ಬ್ಯಾಟಿಂಗ್ ಮಾಡಿದ ತಂಡವು 16 ಪಂದ್ಯವನ್ನ ಗೆದ್ದಿದ್ದು, ಎರಡನೇ ಬ್ಯಾಟಿಂಗ್‌ ಮಾಡಿದ ತಂಡವು 10 ಪಂದ್ಯ ಗೆದ್ದಿದೆ.

Sep 03, 2022, 1:06 pm IST

ಪಿಚ್ ರಿಪೋರ್ಟ್‌: ಶಾರ್ಜಾ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಇತ್ತೀಚಿನ ಕೆಲವು ಪಂದ್ಯಗಳಲ್ಲಿ ಸ್ಪಿನ್ ಬೌಲರ್‌ಗಳಿಗೆ ಹೆಚ್ಚು ನೆರವಾಗಿದೆ. ಹೀಗಾಗಿ ಸೂಪರ್ 4 ಪಂದ್ಯದಲ್ಲೂ ಸ್ಪಿನ್ನರ್‌ಗಳು ಪ್ರಮುಖ ಪಾತ್ರ ವಹಿಸಲಿದ್ದು, ಉಭಯ ತಂಡಗಳಲ್ಲಿ ಗುಣಮಟ್ಟದ ಸ್ಪಿನ್ನರ್‌ಗಳಿದ್ದಾರೆ. ಹಾಂಗ್ ಕಾಂಗ್ ವಿರುದ್ಧ ಭಾರತದ ಗೆಲುವನ್ನು ಹೊರತುಪಡಿಸಿ, ಏಷ್ಯಾ ಕಪ್‌ನಲ್ಲಿ ಇಲ್ಲಿಯವರೆಗೆ ಎರಡನೇ ಬ್ಯಾಟಿಂಗ್ ಮಾಡುವ ತಂಡಗಳು ವಿಜಯಶಾಲಿಯಾಗಿ ಹೊರಹೊಮ್ಮಿವೆ, ಇದು ಟಾಸ್ ಗೆಲ್ಲುವ ನಾಯಕನಿಗೆ ಸ್ಪಷ್ಟ ಆಯ್ಕೆಯಾಗಿದೆ.

Sep 03, 2022, 12:34 pm IST

ಶ್ರೀಲಂಕಾ ತಂಡವು ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಮುಗ್ಗರಿಸಿದ ಬಳಿಕ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 2 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿ ಸೂಪರ್ 4 ಪ್ರವೇಶಿಸಿದೆ.

Sep 03, 2022, 12:33 pm IST

ಗ್ರೂಪ್‌ ಹಂತದಲ್ಲಿ ಎರಡಕ್ಕೆ ಎರಡು ಪಂದ್ಯಗಳನ್ನ ಗೆಲ್ಲುವ ಮೂಲಕ ಅಫ್ಘಾನಿಸ್ತಾನ ತಂಡವು ನೇರವಾಗಿ ಸೂಪರ್ 4 ಪ್ರವೇಶಿಸಿತು. ಮೊದಲ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 8 ವಿಕೆಟ್‌ಗಳ ಗೆಲುವನ್ನ ಸಾಧಿಸಿದ್ರೆ , ಎರಡನೇ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 7 ವಿಕೆಟ್‌ಗಳ ಜಯ ಸಾಧಿಸಿತು.

Sep 03, 2022, 12:26 pm IST

ಏಷ್ಯಾಕಪ್‌ ಟೂರ್ನಿಯು ಪ್ರಮುಖ ಹಂತದತ್ತ ಸಾಗಿದ್ದು, ಸೂಪರ್ 4 ಫೈಟ್‌ನ ಮೊದಲ ಪಂದ್ಯದಲ್ಲಿ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ಮುಖಾಮುಖಿಯಾಗಲಿವೆ. ಶಾರ್ಜಾ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಗ್ರೂಪ್ 'ಬಿ' ಮೂಲಕ ಸೂಪರ್ 4 ಪ್ರವೇಶಿಸಿರುವ B1 ಅಫ್ಘಾನಿಸ್ತಾನ ಮತ್ತು B2 ಶ್ರೀಲಂಕಾ ನಡುವೆ ಇಂದು ಈ ಪ್ರಮುಖ ಫೈಟ್ ನಡೆಯಲಿದೆ.

Sep 03, 2022, 11:47 am IST

T20I ಗಳಲ್ಲಿ ರನ್‌ಗಳ ಅಂತರದ ಬಹುದೊಡ್ಡ ಗೆಲುವು (ಪೂರ್ಣ ಸದಸ್ಯರು) : 172 ಶ್ರೀಲಂಕಾ vs ಕೀನ್ಯಾ (ಜೋಹಾನ್ಸ್‌ಬರ್ಗ್ 2007), 155 ಪಾಕ್ vs ಹಾಂಕಾಂಗ್ (ಶಾರ್ಜಾ 2022), 143 ಇಂಡಿ vs ಐರ್ಲೆಂಡ್ (ಡಬ್ಲಿನ್ 2018), 143 ಪಾಕ್ vs ವೆಸ್ಟ್‌ ಇಂಡೀಸ್‌ (ಕರಾಚಿ 2018), 137 ಇಂಗ್ಲೆಂಡ್ vs ವೆಸ್ಟ್‌ಇಂಡೀಸ್ (ಬಾಸ್ಸೆಟೆರೆ 2019)

Sep 03, 2022, 11:20 am IST

ಹಾಂಕಾಂಗ್‌ನ ಕಡಿಮೆ ಟಿ20 ಸ್ಕೋರ್‌ಗಳು: 38 vs ಪಾಕ್ ಶಾರ್ಜಾ 2022, 69 vs ನೇಪಾಳ ಚಟ್ಟೋಗ್ರಾಮ್ 2014, 87/9 vs ಉಗಾಂಡಾ ಬುಲವಾಯೊ 2022, 87 vs ಓಮನ್ ಅಬುಧಾಬಿ 2017

Sep 03, 2022, 11:00 am IST

ಪಾಕಿಸ್ತಾನ ವಿರುದ್ಧ ಕಡಿಮೆ T20 ಸ್ಕೋರ್‌ ದಾಖಲಿಸಿದ ರಾಷ್ಟ್ರಗಳು: 38 ಹಾಂಗ್ ಕಾಂಗ್ (ಶಾರ್ಜಾ 2022*), 60 ವೆಸ್ಟ್ ಇಂಡೀಸ್ (ಕರಾಚಿ 2018), 80 ನ್ಯೂಜಿಲೆಂಡ್ (ಕ್ರೈಸ್ಟ್‌ಚರ್ಚ್ 2010), 82 ಸ್ಕಾಟ್ಲೆಂಡ್ (ಎಡಿನ್ಬರ್ಗ್ 2018)

Sep 03, 2022, 10:49 am IST

ಟಿ20 ಕ್ರಿಕೆಟ್‌ ಇತಿಹಾಸದಲ್ಲಿ ಅತಿ ಹೆಚ್ಚು ರನ್‌ಗಳ ಅಂತರದಲ್ಲಿ ಗೆಲುವು ಸಾಧಿಸಿದ ರಾಷ್ಟ್ರಗಳಲ್ಲಿ ಪಾಕಿಸ್ತಾನ ಎರಡನೇ ಸ್ಥಾನಕ್ಕೇರಿದೆ. ಈ ಮೊದಲು 2007ರ ಟಿ20 ವಿಶ್ವಕಪ್‌ನಲ್ಲಿ ಜೋಹಾನ್ಸ್‌ಬರ್ಗ್‌ನಲ್ಲಿ ಶ್ರೀಲಂಕಾ 172 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು. ಇದಾದ ಬಳಿಕ ಪಾಕಿಸ್ತಾನ 2022ರಲ್ಲಿ ಹಾಂಕಾಂಗ್‌ ವಿರುದ್ಧ 155ರನ್‌ಗ ಬೃಹತ್ ಅಂತರದ ಜಯ ಸಾಧಿಸಿದೆ.

Sep 03, 2022, 10:47 am IST

ಹಾಂಕಾಂಗ್ ವಿರುದ್ಧ ಗೆಲ್ಲುವ ಮೂಲಕ ಪಾಕಿಸ್ತಾನ ಗ್ರೂಪ್ ಎನಲ್ಲಿ ಸೂಪರ್ 4 ತಲುಪಿದ ಎರಡನೇ ತಂಡವಾಗಿದೆ. ಪರಿಣಾಮ ಭಾನುವಾರ (ಸೆ.4) ಭಾರತ-ಪಾಕಿಸ್ತಾನ ಮತ್ತೊಂದು ರೋಚಕ ಕಾದಾಟವನ್ನ ಅಭಿಮಾನಿಗಳು ವೀಕ್ಷಿಸುವ ಅವಕಾಶ ಲಭಿಸಿದೆ.

Sep 02, 2022, 10:45 pm IST

ಪಾಕಿಸ್ತಾನ ನೀಡಿದ್ದ 194 ರನ್‌ಗಳ ಗುರಿಯನ್ನು ಬೆನ್ನತ್ತುವಲ್ಲಿ ವಿಫಲವಾದ ಹಾಂಗ್ ಕಾಂಗ್ ಪಾಕಿಸ್ತಾನದ ಬೌಲಿಂಗ್ ದಾಳಿಗೆ ತತ್ತರಿಸಿ 38 ರನ್‌ಗಳಿಗೆ ಆಲ್ ಔಟ್ ಆಗಿ ತೀವ್ರ ಮುಖಭಂಗವನ್ನು ಅನುಭವಿಸಿದೆ.

Sep 02, 2022, 10:44 pm IST

ಹಾಂಗ್ ಕಾಂಗ್ ವಿರುದ್ಧ ಪಾಕಿಸ್ತಾನ 155 ರನ್‌ಗಳ ಭರ್ಜರಿ ಜಯವನ್ನು ಸಾಧಿಸುವ ಮೂಲಕ ಸೂಪರ್ 4ಗೆ ಲಗ್ಗೆ ಇಟ್ಟಿದೆ.

Sep 02, 2022, 9:59 pm IST

ಹಾಂಗ್‌ಕಾಂಗ್ 6 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 25 ರನ್ ಕಲೆಹಾಕಿದ್ದು, 84 ಎಸೆತಗಳಲ್ಲಿ 169 ರನ್ ಬಾರಿಸಬೇಕಾದ ಅಗತ್ಯವಿದೆ.

Sep 02, 2022, 9:19 pm IST

ಏಷ್ಯಾ ಕಪ್‌ನ ನಾಕೌಟ್ ಪಂದ್ಯದಲ್ಲಿ ಹಾಂಗ್‌ಕಾಂಗ್ ವಿರುದ್ಧ ಪಾಕಿಸ್ತಾನ ತಂಡವು ನಿಗದಿತ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 193 ರನ್ ಗಳಿಸಿದೆ. ಈ ಪಂದ್ಯವನ್ನು ಗೆಲ್ಲಲು ಹಾಂಗ್‌ಕಾಂಗ್ 194 ರನ್ ಗಳಿಸಬೇಕು.

Sep 02, 2022, 9:17 pm IST

ಮೊಹಮ್ಮದ್ ರಿಜ್ವಾನ್ ಮತ್ತು ಫಖರ್ ಜಮಾನ್ ವಿಕೆಟ್ ಪಡೆದು ಎಹ್ಸಾನ್ ಖಾನ್ ಹಾಂಗ್‌ಕಾಂಗ್ ಪರ ಗಮನ ಸೆಳೆದರು.

Sep 02, 2022, 8:45 pm IST

ಪಾಕಿಸ್ತಾನದ ಆರಂಭಿಕ ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಅರ್ಧ ಶತಕ ಗಳಿಸಿದ್ದು, ಈವರೆಗೆ ಪಾಕಿಸ್ತಾನ 14 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 104 ರನ್ ಗಳಿಸಿದೆ.

Sep 02, 2022, 8:36 pm IST

ಮೊಹಮ್ಮದ್ ರಿಜ್ವಾನ್ ಮತ್ತು ಫಖರ್ ಜಮಾನ್ ಅವರ ಅತ್ಯುತ್ತಮ ಪ್ರಯತ್ನದ ಹೊರತಾಗಿಯೂ ಹಾಂಕಾಂಗ್ ಪಾಕಿಸ್ತಾನವನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ.

Sep 02, 2022, 8:20 pm IST

ಬಾಬರ್ ಅಜಂ ವಿಕೆಟ್ ಕಳೆದುಕೊಂಡ ಪಾಕಿಸ್ತಾನ ಚೇತರಿಸಿಕೊಂಡಿದ್ದು, 9 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 58 ರನ್ ಗಳಿಸಿದೆ.

Sep 02, 2022, 7:57 pm IST

ಹಾಂಗ್‌ಕಾಂಗ್ ತಂಡದ ಎಹ್ಸಾನ್ ಖಾನ್ ಪಾಕಿಸ್ತಾನದ ವಿರುದ್ಧದ ನಾಕೌಟ್ ಪಂದ್ಯದಲ್ಲಿ ಬಾಬರ್ ಅಜಂ ಅವರ ವಿಕೆಟ್ ಅನ್ನು ಮೂರನೇ ಓವರ್‌ನಲ್ಲಿ ಔಟ್ ಮಾಡಿದರು.

Sep 02, 2022, 7:42 pm IST

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 2 ಓವರ್‌ ಮುಕ್ತಾಯಕ್ಕೆ ಯಾವುದೇ ವಿಕೆಟ್ ನಷ್ಟವಿಲ್ಲದೆ 5 ರನ್ ಕಲೆಹಾಕಿದೆ.

Sep 02, 2022, 7:15 pm IST

ಹಾಂಕಾಂಗ್ ಪ್ಲೇಯಿಂಗ್ 11: ನಿಜಾಕತ್ ಖಾನ್ (ನಾಯಕ), ಯಾಸಿಮ್ ಮುರ್ತಾಜಾ, ಬಾಬರ್ ಹಯಾತ್, ಕಿಂಚಿತ್ ಶಾ, ಐಜಾಜ್ ಖಾನ್, ಜೀಶನ್ ಅಲಿ, ಸ್ಕಾಟ್ ಮೆಕೆಚ್ನಿ (ವಿಕೆಟ್ ಕೀಪರ್), ಹರೂನ್ ಅರ್ಷದ್, ಎಹ್ಸಾನ್ ಖಾನ್, ಆಯುಷ್ ಶುಕ್ಲಾ, ಮೊಹಮ್ಮದ್ ಗಜನ್ಫರ್

Sep 02, 2022, 7:14 pm IST

ಪಾಕಿಸ್ತಾನ ಪ್ಲೇಯಿಂಗ್ 11: ಮೊಹಮ್ಮದ್ ರಿಜ್ವಾನ್(ವಿಕೆಟ್ ಕೀಪರ್), ಬಾಬರ್ ಅಜಮ್(ನಾಯಕ), ಫಖರ್ ಜಮಾನ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಶಾದಾಬ್ ಖಾನ್, ಆಸಿಫ್ ಅಲಿ, ಮೊಹಮ್ಮದ್ ನವಾಜ್, ಹಾರಿಸ್ ರೌಫ್, ನಸೀಮ್ ಶಾ, ಶಹನವಾಜ್ ದಹಾನಿ

Sep 02, 2022, 7:12 pm IST

ಪಾಕಿಸ್ತಾನ vs ಹಾಂಕಾಂಗ್ ಏಷ್ಯಾಕಪ್ 2022ರ ಪಂದ್ಯದಲ್ಲಿ ಟಾಸ್ ಗೆದ್ದ ಹಾಂಕಾಂಗ್ ಮೊದಲು ಬೌಲಿಂಗ್ ಆಯ್ದುಕೊಂಡಿದ್ದು, ಪಾಕಿಸ್ತಾನ ಬ್ಯಾಟಿಂಗ್ ಮಾಡಲಿದೆ. ಪಂದ್ಯವು ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿದೆ.

Sep 02, 2022, 6:28 pm IST

ಹಾಂಕಾಂಗ್ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನದ ಯುವ ಬೌಲರ್ ನಸೀಮ್ ಶಾ ಕಣಕ್ಕಿಳಿಯುವುದು ಅನುಮಾನ ಮೂಡಿಸಿದೆ. ಭಾರತದ ವಿರುದ್ಧದ ಪಂದ್ಯದಲ್ಲಿ ನೋವಿನಿಂದ ಬಳಲಿದ್ದ ನಸೀಮ್ ಶಾ ಪಂದ್ಯ ಪೂರ್ವ ಅಭ್ಯಾಸದಲ್ಲೂ ಪಾಲ್ಗೊಂಡಿರಲಿಲ್ಲ.

Sep 02, 2022, 5:44 pm IST

ಟೀಂ ಇಂಡಿಯಾ ಆಲ್‌ರೌಂಡರ್ ರವೀಂದ್ರ ಜಡೇಜಾ ಗಾಯಗೊಂಡಿದ್ದು, ಏಷ್ಯಾಕಪ್‌ನಿಂದ ಹೊರಗುಳಿದಿದ್ದಾರೆ ಎಂದು ಬಿಸಿಸಿಐ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಮೂಲಕ ಸುದ್ದಿ ಹೊರಹಾಕಿದೆ. ರವೀಂದ್ರ ಜಡೇಜಾ ಬದಲು ಆಲ್‌ರೌಂಡರ್ ಅಕ್ಷರ್ ಪಟೇಲ್‌ಗೆ ಸ್ಥಾನ ಒದಗಿಸಲಾಗಿದೆ.

Sep 02, 2022, 4:56 pm IST

ಪಿಚ್ ರಿಪೋರ್ಟ್‌: ಶಾರ್ಜಾ ಕ್ರಿಕೆಟ್ ಸ್ಟೇಡಿಯಂನ ಪಿಚ್ ಸಾಮಾನ್ಯವಾಗಿ ಬ್ಯಾಟಿಂಗ್ ಸ್ನೇಹಿ ವಿಕೆಟ್ ಆಗಿದ್ದು, ಬ್ಯಾಟರ್‌ಗಳಿಗೆ ಸಾಕಷ್ಟು ಸಹಾಯವನ್ನು ನೀಡುತ್ತದೆ. ಮಳೆಯ ನಿರೀಕ್ಷೆಯೊಂದಿಗೆ, 40 ಓವರ್‌ಗಳ ಅವಧಿಯಲ್ಲಿ ಟ್ರ್ಯಾಕ್ ಅಷ್ಟೇನೂ ಬದಲಾಗುವುದಿಲ್ಲ, ಆದ್ದರಿಂದ ನಾವು ಹೆಚ್ಚಿನ ಸ್ಕೋರಿಂಗ್ ಥ್ರಿಲ್ಲರ್ ಪಂದ್ಯವನ್ನ ನಿರೀಕ್ಷಿಸಬಹುದಾಗಿದೆ. ಎರಡೂ ತಂಡಗಳು ತಮ್ಮ ಬ್ಯಾಟಿಂಗ್ ಫೈರ್‌ಪವರ್‌ನೊಂದಿಗೆ 160 ರಿಂದ 170 ರ ಸರಾಸರಿ ಸ್ಕೋರ್ ಅನ್ನು ನಿರೀಕ್ಷಿಸಬಹುದು.

Sep 02, 2022, 4:53 pm IST

PAK vs HKG ನಡುವೆ ವಿಜೇತ ತಂಡ ಭಾನುವಾರದಂದು(ಸೆ. 4) ಸೂಪರ್-4 ಮುಖಾಮುಖಿಯಲ್ಲಿ ಭಾರತವನ್ನು ಎದುರಿಸಲಿದೆ.

Sep 02, 2022, 4:52 pm IST

ಭಾರತ, ಅಫ್ಘಾನಿಸ್ತಾನ, ಶ್ರೀಲಂಕಾ ಈಗಾಗಲೇ ಸೂಪರ್-4 ಸ್ಥಾನಗಳನ್ನು ಪಡೆದುಕೊಂಡಿವೆ. PAK vs HKG ನಡುವೆ ಯಾರು ಗೆಲ್ಲುತ್ತಾರೋ ಅವರು SUPER-4 ಗೆ ಪ್ರವೇಶಿಸಲಿದ್ದಾರೆ.

Sep 02, 2022, 10:45 am IST

ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆಯಲಿರುವ ಪಾಕಿಸ್ತಾನ ಮತ್ತು ಹಾಂಕಾಂಗ್ ನಡುವಿನ ಪಂದ್ಯವು ಅತ್ಯಂತ ಕುತೂಹಲವನ್ನ ಮೂಡಿಸಿದ್ದು, ಗ್ರೂಪ್ ಎ ನಲ್ಲಿ ಭಾರತದ ಬಳಿಕ ಸೂಪರ್‌ 4 ಹಂತಕ್ಕೆ ಯಾರು ಪ್ರವೇಶಿಸಲಿದ್ದಾರೆ ಎಂಬುದು ನಿರ್ಧಾರವಾಗಲಿದೆ.

Sep 02, 2022, 10:44 am IST

ಈ ರೋಚಕ ಸೆಣೆಸಾಟದಲ್ಲಿ ಗೆಲುವು ಸಾಧಿಸಿದ ಬಳಿಕ ಅಭಿಮಾನಿಗಳು ಹಾಗೂ ಶ್ರೀಲಂಕಾ ತಂಡದ ಸದಸ್ಯರು ಸಂತಸದಲ್ಲಿ ತೇಲಾಡಿದ್ದಾರೆ. ಈ ಗೆಲುವಿನ ಸಂದರ್ಭದಲ್ಲಿ ಶ್ರೀಲಂಕಾ ತಂಡದ ಆಟಗಾರ ಸಂಭ್ರಮಿಸುತ್ತಲೇ ಬಾಂಗ್ಲಾದೇಶ ತಂಡವನ್ನು ಟ್ರೋಲ್ ಮಾಡಿದ್ದಾರೆ. ಶ್ರೀಲಂಕಾದ ಆಟಗಾರ ಚಾಮಿಕಾ ಕರುಣರತ್ನೆ ನಾಗಿಣಿ ನೃತ್ಯದ ಮೂಲಕ ಬಾಂಗ್ಲಾದೇಶವನ್ನು ಕೆಣಕಿದ್ದಾರೆ.

Sep 01, 2022, 11:30 pm IST

ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 183 ರನ್ ಕಲೆಹಾಕಿ ಶ್ರೀಲಂಕಾ ತಂಡಕ್ಕೆ ಗೆಲ್ಲಲು 184 ರನ್‌ಗಳ ಸವಾಲಿನ ಗುರಿ ನೀಡಿತ್ತು. ಅತ್ತ ಈ ಗುರಿಯನ್ನು ಬೆನ್ನತ್ತುವಲ್ಲಿ ಸಫಲವಾದ ಶ್ರೀಲಂಕಾ 19.2 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 184 ರನ್ ಕಲೆ ಹಾಕಿ 2 ವಿಕೆಟ್‌ಗಳ ರೋಚಕ ದಾಖಲಿಸಿತು.

Sep 01, 2022, 11:30 pm IST

ಬಾಂಗ್ಲಾದೇಶ ವಿರುದ್ಧದ ಈ ಗೆಲುವಿನ ಮೂಲಕ ಗ್ರೂಪ್ ಹಂತದಲ್ಲಿನ ತನ್ನ 2 ಪಂದ್ಯಗಳಲ್ಲಿ ಒಂದು ಸೋಲು ಮತ್ತು ಜಯ ಸಾಧಿಸಿರುವ ಶ್ರೀಲಂಕಾ ಬಿ ಗುಂಪಿನ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಿಯಾಗಿ ಸೂಪರ್ 4 ಸುತ್ತಿಗೆ ಲಗ್ಗೆ ಇಟ್ಟಿದೆ.

Sep 01, 2022, 11:30 pm IST

ಇಂದು (ಗುರುವಾರ, ಸೆಪ್ಟೆಂಬರ್ 1) ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳ ನಡುವಿನ ಪಂದ್ಯದಲ್ಲಿ ಶ್ರೀಲಂಕಾ ತಂಡವು 2 ವಿಕೆಟ್‌ಗಳ ರೋಚಕ ಜಯವನ್ನು ಸಾಧಿಸುವುದರ ಮೂಲಕ ಈ ಬಾರಿಯ ಏಷ್ಯಾ ಕಪ್ ಟೂರ್ನಿಯಲ್ಲಿ ಸೂಪರ್ 4 ಹಂತವನ್ನು ತಲುಪಿದೆ.

Sep 01, 2022, 11:29 pm IST

ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾಗೆ ರೋಚಕ ಜಯ

Sep 01, 2022, 11:03 pm IST

ಒಟ್ಟು 184 ರನ್‌ಗಳ ಗುರಿ ಬೆನ್ನತ್ತಿದ ಶ್ರೀಲಂಕಾ, ಬಾಂಗ್ಲಾದೇಶದ ವಿರುದ್ಧ ಆರು ವಿಕೆಟ್ ಕಳೆದುಕೊಂಡಿದೆ.

Sep 01, 2022, 9:50 pm IST

ಅಫೀಫ್ ಹೊಸೈನ್ ಮತ್ತು ಮೆಹಿದಿ ಹಸನ್ ಮಿರಾಜ್ ಅವರು 39 ಮತ್ತು 38 ರನ್‌ಗಳ ಕೊಡಗೆ ನಿಡಿದ ಕಾರಣ ಏಷ್ಯಾ ಕಪ್ ಬಿ ಗುಂಪಿನ ಪಂದ್ಯದಲ್ಲಿ ಬಾಂಗ್ಲಾದೇಶವು ಶ್ರೀಲಂಕಾ ವಿರುದ್ಧ ಏಳು ವಿಕೆಟ್‌ಗೆ 183 ರನ್ ಗಳಿಸುವಲ್ಲಿ ಯಶಸ್ವಿಯಾಯಿತು.

Sep 01, 2022, 9:49 pm IST

ಉಭಯ ತಂಡಗಳು ತಮ್ಮ ಆರಂಭಿಕ ಹಣಾಹಣಿಯಲ್ಲಿ ಅಫ್ಘಾನಿಸ್ತಾನ ವಿರುದ್ಧ ಸೋಲನ್ನು ಕಂಡಿದ್ದು, ಇದೀಗ ತಮ್ಮ ಮೊದಲ ಗೆಲುವು ಕಾಣಲು ಎದುರು ನೋಡುತ್ತಿದ್ದು, ಇಂದಿನ ಹಣಾಹಣಿಯ ವಿಜೇತರು ಸೂಪರ್ 4 ಹಂತದಲ್ಲೂ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲಿದ್ದಾರೆ.

Sep 01, 2022, 9:49 pm IST

ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಶ್ರೀಲಂಕಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 183 ರನ್ ಗಳಿಸಿದ್ದು, ಶ್ರೀಲಂಕಾ ಗೆಲ್ಲಲು 184 ರನ್‌ಗಳ ಗುರಿಯನ್ನು ನೀಡಿದೆ.

Sep 01, 2022, 9:11 pm IST

ಏಷ್ಯಾಕಪ್ ಬಿ ಗುಂಪಿನ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಬಾಂಗ್ಲಾದೇಶ ಆರು ವಿಕೆಟ್ ಕಳೆದುಕೊಂಡಿದೆ.

Sep 01, 2022, 8:37 pm IST

ಏಷ್ಯಾಕಪ್ ಬಿ ಗುಂಪಿನ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಬಾಂಗ್ಲಾದೇಶ ನಾಲ್ಕನೇ ವಿಕೆಟ್ ಕಳೆದುಕೊಂಡಿದೆ. 24 ರನ್ ಗಳಿಸಿದ್ದಾಗ ಬಾಂಗ್ಲಾದೇಶದ ನಾಯಕ ಶಕಿನ್ ಅಲ್ ಹಸನ್ ಅವರನ್ನು ಮಹೀಶ್ ತೀಕ್ಷಣ ಔಟ್ ಮಾಡಿದರು.

Sep 01, 2022, 8:23 pm IST

ನಾಲ್ಕು ರನ್ ಗಳಿಸಿದ್ದಾಗ ಕುಸಾಲ್ ಮೆಂಡಿಸ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದ ಮುಶ್ಫಿಕರ್ ರಹೀಮ್ ಅವರನ್ನು ಚಮಿಕಾ ಕರುಣಾರತ್ನೆ ಔಟ್ ಮಾಡಿದರು. ಇದಕ್ಕೂ ಮುನ್ನ 38 ರನ್‌ ಗಳಿಸಿ ಅಪಾಯಕಾರಿಯಾಗಿದ್ದ ಮೆಹಿದಿ ಹಸನ್ ಮಿರಾಜ್ ಅವರನ್ನು ವನಿಂದು ಹಸರಂಗ ಔಟ್ ಮಾಡಿದರು. ಪ್ರಸ್ತುತ, 9.0 ಓವರ್‌ಗಳ ನಂತರ ಬಾಂಗ್ಲಾದೇಶ ಸ್ಕೋರ್ 70/3 ಆಗಿತ್ತು.

Sep 01, 2022, 8:01 pm IST

ಚೊಚ್ಚಲ ಪಂದ್ಯ ಆಡುತ್ತಿರುವ ಅಸಿತಾ ಫೆರ್ನಾಂಡೋ ಅವರು ಶಬ್ಬಿರ್ ರೆಹಮಾನ್ ಅವರನ್ನು ಔಟ್ ಮಾಡುವ ಮೂಲಕ ಶ್ರೀಲಂಕಾಕ್ಕೆ ಮೊದಲ ಮುನ್ನಡೆಯನ್ನು ಒದಗಿಸಿದರು. ಐದು ರನ್ ಗಳಿಸಿದ ನಂತರ ಬ್ಯಾಟರ್ ಶಬ್ಬಿರ್ ರೆಹಮಾನ್ ನಿರ್ಗಮಿಸಿದರು ಮತ್ತು 4.0 ಓವರ್‌ಗಳ ನಂತರ ತಂಡದ ಮೊತ್ತವು 29/1 ಆಗಿತ್ತು.

Sep 01, 2022, 7:10 pm IST

ಬಾಂಗ್ಲಾದೇಶ ಪ್ಲೇಯಿಂಗ್ 11: ಸಬ್ಬಿರ್ ರಹಮಾನ್, ಮುಶ್ಫಿಕರ್ ರಹೀಮ್(ವಿಕೆಟ್ ಕೀಪರ್), ಶಾಕಿಬ್ ಅಲ್ ಹಸನ್(ನಾಯಕ), ಅಫೀಫ್ ಹೊಸೈನ್, ಮಹಮ್ಮದುಲ್ಲಾ, ಮೊಸದ್ದೆಕ್ ಹೊಸೈನ್, ಮಹೇದಿ ಹಸನ್, ತಸ್ಕಿನ್ ಅಹ್ಮದ್, ಮೆಹಿದಿ ಹಸನ್ ಮಿರಾಜ್, ಮುಸ್ತಫಿಜುರ್ ರೆಹಮಾನ್, ಎಬಾಡೋತ್ ಹೊಸೈನ್

Sep 01, 2022, 7:08 pm IST

ಶ್ರೀಲಂಕಾ ಪ್ಲೇಯಿಂಗ್ 11: ಪಾತುಮ್ ನಿಸ್ಸಾಂಕ, ಕುಸಾಲ್ ಮೆಂಡಿಸ್(ವಿಕೆಟ್ ಕೀಪರ್), ಚರಿತ್ ಅಸಲಂಕ, ದನುಷ್ಕ ಗುಣತಿಲಕ, ಭಾನುಕ ರಾಜಪಕ್ಸೆ, ವನಿಂದು ಹಸರಂಗ, ದಸುನ್ ಶನಕ(ನಾಯಕ), ಚಾಮಿಕ ಕರುಣಾರತ್ನೆ, ಮಹೀಶ್ ತೀಕ್ಷಣ, ದಿಲ್ಶನ್ ಮಧುಶಂಕ, ಅಸಿತ ಫೆರ್ನಾಂಡೊ

Sep 01, 2022, 7:02 pm IST

ಶ್ರೀಲಂಕಾ ಮತ್ತು ಬಾಂಗ್ಲಾದೇಶ ಏಷ್ಯಾಕಪ್‌ 2022ರ ಗ್ರೂಪ್ ಬಿ ಫೈಟ್‌ನಲ್ಲಿ ಟಾಸ್‌ ಗೆದ್ದ ಶ್ರೀಲಂಕಾ ಫೀಲ್ಡಿಂಗ್ ಆಯ್ದುಕೊಂಡಿದೆ. ಬಾಂಗ್ಲಾದೇಶ ತಂಡವು ಮೊದಲು ಬ್ಯಾಟಿಂಗ್ ಮಾಡಲಿದೆ.

Sep 01, 2022, 6:54 pm IST

ಶ್ರೀಲಂಕಾ ಮತ್ತು ಬಾಂಗ್ಲಾದೇಶದ ಕಳೆದ ಟಿ20 ಅಂತರಾಷ್ಟ್ರೀಯ ಪಂದ್ಯ(2021) ಮುಖಾಮುಖಿಯಲ್ಲಿ ಶ್ರೀಲಂಕಾ ತಂಡವು ಟಾಸ್‌ ಗೆದ್ದಿದ್ದಲ್ಲದೆ ಐದು ವಿಕೆಟ್‌ಗಳಿಂದ ಗೆಲುವು ಸಾಧಿಸಿತು.

Sep 01, 2022, 6:51 pm IST

2018ರ ಕಳೆದ ಏಷ್ಯಾಕಪ್ ಮುಖಾಮುಖಿಯಲ್ಲಿ ಟಾಸ್ ಗೆದ್ದಿದ್ದ ಬಾಂಗ್ಲಾದೇಶ 137 ರನ್‌ಗಳಿಂದ ಶ್ರೀಲಂಕಾ ವಿರುದ್ಧ ಜಯ ಸಾಧಿಸಿತು.

Sep 01, 2022, 6:01 pm IST

ಶ್ರೀಲಂಕಾ ಟಾಸ್ ಫಲಿತಾಂಶಗಳು - ಕೊನೆಯ 10 T20 ಅಂತರಾಷ್ಟ್ರೀಯ ಪಂದ್ಯಗಳು: ಟಾಸ್ ಗೆದ್ದ ನಂತರ ಶ್ರೀಲಂಕಾ 2 ಪಂದ್ಯಗಳಲ್ಲಿ 2 ಪಂದ್ಯಗಳನ್ನ ಸೋತಿದೆ. ಇನ್ನು ಟಾಸ್ ಸೋತ 8 ಪಂದ್ಯಗಳಲ್ಲಿ 2 ಪಂದ್ಯಗಳನ್ನ ಮಾತ್ರ ಗೆದ್ದಿದೆ.

Sep 01, 2022, 5:56 pm IST

ಬಾಂಗ್ಲಾದೇಶ ಟಾಸ್ ಫಲಿತಾಂಶಗಳು - ಕೊನೆಯ 10 T20 ಅಂತರಾಷ್ಟ್ರೀಯ ಪಂದ್ಯಗಳು: ಟಾಸ್ ಗೆದ್ದ ನಂತರ ಬಾಂಗ್ಲಾದೇಶ ಫಲಿತಾಂಶ: 6 ಪಂದ್ಯಗಳಲ್ಲಿ 2 ಪಂದ್ಯ ಮಾತ್ರ ಜಯಿಸಿದೆ. ಇನ್ನು ಟಾಸ್‌ ಸೋತ ನಂತರ ಬಾಂಗ್ಲಾದೇಶವು 4 ಪಂದ್ಯಗಳಲ್ಲಿ 1 ಪಂದ್ಯ ಜಯಿಸಿದೆ.

Sep 01, 2022, 5:52 pm IST

ಬಾಂಗ್ಲಾದೇಶ vs ಶ್ರೀಲಂಕಾ (BAN vs SL) , ಏಷ್ಯಾ ಕಪ್ 2022 ಪಂದ್ಯವು ರಾತ್ರಿ 7.30ಕ್ಕೆ ಪ್ರಾರಂಭಗೊಳ್ಳಲಿದ್ದು, ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನ ಸ್ಟಾರ್ ಸ್ಪೋರ್ಟ್ಸ್ 1, ಸ್ಟಾರ್ ಸ್ಪೋರ್ಟ್ಸ್ 1 HD, ಸ್ಟಾರ್ ಸ್ಪೋರ್ಟ್ಸ್ 1 ಹಿಂದಿ, ಸ್ಟಾರ್ ಸ್ಪೋರ್ಟ್ಸ್ 1 HD ಹಿಂದಿ, ಸ್ಟಾರ್ ಸ್ಪೋರ್ಟ್ಸ್ 1 ಕನ್ನಡ ಸ್ಟಾರ್ ಸ್ಪೋರ್ಟ್ಸ್ 1 ತಮಿಳು, ಸ್ಟಾರ್ ಸ್ಪೋರ್ಟ್ಸ್ 1 ತೆಲುಗು ನಲ್ಲಿ ಪ್ರಸಾರ ಮಾಡಲಾಗುತ್ತದೆ.

Sep 01, 2022, 4:25 pm IST

ಶ್ರೀಲಂಕಾ ಮತ್ತು ಬಾಂಗ್ಲಾದೇಶ ನಡುವೆ ಸೆಪ್ಟೆಂಬರ್ 1ರ ರಾತ್ರಿ ನಡೆಯಲಿರುವ ಪಂದ್ಯವು ಉಭಯ ತಂಡಗಳಿಗೆ ಡೂ ಆರ್ ಡೈ ಪರಿಸ್ಥಿತಿ ನಿರ್ಮಿಸಿದೆ. ಸೋತ ತಂಡವು ಟೂರ್ನಿಯಿಂದ ನಿರ್ಗಮಿಸಿದ್ರೆ, ಗೆದ್ದ ತಂಡವು ಗ್ರೂಪ್‌ ಬಿಯಿಂದ ಸೂಪರ್ 4ಗೆ ಎಂಟ್ರಿಯಾಗಲಿರುವ ಎರಡನೇ ತಂಡವಾಗಲಿದೆ. ಈಗಾಗಲೇ ಅಫ್ಘಾನಿಸ್ತಾನ ಎರಡೂ ಪಂದ್ಯಗಳನ್ನ ಜಯಿಸಿ ಅಗ್ರ ತಂಡವಾಗಿ ಸೂಪರ್ 4 ಪ್ರವೇಶಿಸಿದೆ.

Sep 01, 2022, 4:24 pm IST

ಶ್ರೀಲಂಕಾ ತಂಡದ ನಾಯಕ ದಸನು ಶನಕ ಬಾಂಗ್ಲಾದೇಶ ಬೌಲಿಂಗ್ ಅಟ್ಯಾಕ್ ಅನ್ನು ಅಫ್ಘಾನಿಸ್ತಾನಕ್ಕೆ ಹೋಲಿಸಿ, '' ನಮಗೆ ತಿಳಿದಿದೆ ಫಿಜ್ (ಮುಸ್ತಫಿಜುರ್ ರಹಮಾನ್) ಉತ್ತಮ ಬೌಲರ್ ಎಂದು. ಶಕೀಬ್ ಅಲ್ ಹಸನ್ ಕೂಡ ವರ್ಲ್ಡ್‌ ಕ್ಲಾಸ್ ಬೌಲರ್ ಆಗಿದ್ದಾರೆ. ಇವರಿಬ್ಬರನ್ನ ಹೊರತುಪಡಿಸಿ, ಬೇರೆ ಯಾವೊಬ್ಬರೂ ವರ್ಲ್ಡ್‌ ಕ್ಲಾಸ್ ಬೌಲರ್ ಅವರ ತಂಡದಲ್ಲಿಲ್ಲ. ಹೀಗಾಗಿ ಅಫ್ಘಾನಿಸ್ತಾನಕ್ಕೆ ಹೋಲಿಕೆ ಮಾಡಿದ್ರೆ, ಬಾಂಗ್ಲಾದೇಶ ಸುಲಭ ಎದುರಾಳಿ'' ಎಂದು ಶನಕ ಈ ಮೊದಲು ಪಂದ್ಯ ಪೂರ್ವ ಪರ್ತಿಕಾಗೋಷ್ಟಿಯಲ್ಲಿ ಹೇಳಿದ್ದರು.

Sep 01, 2022, 4:23 pm IST

ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಗುರುವಾರ ನಡೆಯಲಿರುವ ಶ್ರೀಲಂಕಾ ಮತ್ತು ಬಾಂಗ್ಲಾದೇಶ ನಡುವಿನ ಅತ್ಯಂತ ಮಹತ್ವದ ಪಂದ್ಯಕ್ಕೂ ಮುನ್ನ ಉಭಯ ತಂಡಗಳ ನಡುವೆ ಮಾತಿನ ಸಮರವಾಗಿದೆ. ಶ್ರೀಲಂಕಾ ಕ್ರಿಕೆಟ್ ತಂಡದ ನಾಯಕ ದಸನು ಶನಕ ಹೇಳಿಕೆಯನ್ನ ಉದ್ದೇಶಿಸಿ ಮಾತನಾಡಿರುವ ಬಾಂಗ್ಲಾದೇಶ ಟೀಂ ಡೈರೆಕ್ಟರ್ ಖಲೀದ್ ಮಹಮ್ಮದ್ ಸುಜೋನ್ ಲಂಕಾ ನಾಯಕನ ವಿರುದ್ಧ ತೀವ್ರವಾಗಿ ಹರಿಯಾಯ್ದಿದ್ದಾರೆ. ಬಾಂಗ್ಲಾದೇಶ ಬೌಲಿಂಗ್ ದಾಳಿ ಕುರಿತು ಮಾತನಾಡಿರುವ ಲಂಕಾ ನಾಯಕನಿಗೆ ಸುಜೋನ್ ಬಿಸಿ ಮುಟ್ಟಿಸಿದ್ದಾರೆ. 'ಬಾಂಗ್ಲಾದೇಶ ಕನಿಷ್ಠ ಇಬ್ಬರಾದ್ರೂ ವರ್ಲ್ಡ್‌ ಕ್ಲಾಸ್ ಬೌಲರ್‌ ಹೊಂದಿದೆ'' ಎಂದು ಹೇಳುವ ಮೂಲಕ ನಿಮ್ಮ ಬಳಿ ಯಾರಿದ್ದಾರೆ ಎಂದು ಪರೋಕ್ಷವಾಗಿ ಲಂಕಾವನ್ನ ಪ್ರಶ್ನಿಸಿದ್ದಾರೆ.

Sep 01, 2022, 3:18 pm IST

ಬಾಂಗ್ಲಾದೇಶ ಸಂಭಾವ್ಯ ‍XI: ಮೊಹಮ್ಮದ್ ನಯಿಮ್, ಅನಾಮುಲ್ ಹಕ್, ಶಕೀಬ್ ಅಲ್ ಹಸನ್ (ನಾಯಕ), ಅಫೀಫ್ ಹೊಸೈನ್, ಮುಶ್ಫಿಕರ್ ರಹೀಮ್ (ವಿಕೆಟ್ ಕೀಪರ್), ಮೊಸದ್ದೆಕ್ ಹೊಸೈನ್, ಮಹಮ್ಮದುಲ್ಲಾ, ಮಹೇದಿ ಹಸನ್, ಮೊಹಮ್ಮದ್ ಸೈಫುದ್ದೀನ್, ತಸ್ಕಿನ್ ಅಹ್ಮದ್, ಮುಸ್ತಾಫಿಜುರ್ ರೆಹಮಾನ್

Sep 01, 2022, 3:17 pm IST

ಶ್ರೀಲಂಕಾ ಸಂಭಾವ್ಯ ಆಡುವ ಬಳಗ: ದನುಷ್ಕ ಗುಣತಿಲಕ, ಪಾತುಮ್ ನಿಸ್ಸಾಂಕ, ಕುಸಾಲ್ ಮೆಂಡಿಸ್ (ವಿಕೆಟ್ ಕೀಪರ್), ಚರಿತ್ ಅಸಲಂಕಾ, ಭಾನುಕ ರಾಜಪಕ್ಸೆ, ದಸುನ್ ಶನಕ ©, ವನಿಂದು ಹಸರಂಗ, ಚಾಮಿಕಾ ಕರುಣಾರತ್ನೆ, ಮಹೇಶ್ ತೀಕ್ಷಣ, ದಿಲ್ಶನ್ ಮಧುಶಂಕ, ಮಥೀಶ ಪತಿರಣ

Sep 01, 2022, 2:20 pm IST

ಹವಾಮಾನ ವರದಿ: ಮಳೆಯಾಗುವ ಯಾವುದೇ ಸಾಧ್ಯತೆಯಿಲ್ಲ. ಪಂದ್ಯದ ಅವಧಿಯಲ್ಲಿ ಉಷ್ಣಾಂಶ 35 ಡಿಗ್ರಿ ಸೆಲ್ಸಿಯಸ್‌ನ ಸನಿಹದಲ್ಲಿರಲಿದೆ. 45 ಶೇಕಡಾದಷ್ಟು ಶುಷ್ಕತೆಯಿರಲಿದ್ದು ಗಂಟೆಗೆ 13 ಕಿ. ಮೀ ವೇಗದಲ್ಲಿ ಗಾಳಿ ಬೀಸಲಿದೆ.

Sep 01, 2022, 2:19 pm IST

ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯುತ್ತಿದ್ದು ಸ್ಪೋಟಕ ಬ್ಯಾಟಿಂಗ್‌ಗೆ ಹೆಚ್ಚು ಬೆಂಬಲಿಸುವುದಿಲ್ಲ ಎಂಬುದು ಗಮನಾರ್ಹ. 160-170 ರನ್‌ಗಳನ್ನು ಗಳಿಸಿದರೆ ನಿಯಂತ್ರಿಸುವ ಅವಕಾಶವಿದೆ. ವೇಗಿಗಳಿಗೆ ಪಿಚ್‌ನಿಂದ ಉತ್ತಮ ಬೆಂಬಲ ದೊರೆಯಲಿದ್ದು ಸ್ಪಿನ್ ಬೌಲಿಂಗ್‌ಗೆ ಹೆಚ್ಚಿನ ನೆರವು ದೊರೆಯಲಾರದು.

Sep 01, 2022, 1:20 pm IST

ಶ್ರೀಲಂಕಾ ಹಾಗೂ ಬಾಂಗ್ಲಾದೇಶ ತಂಡಗಳು ಇಂದು ಮೈದಾನದಲ್ಲಿ ಪರಸ್ಪರ ಮುಖಾಮುಖಿಯಾಗಲು ಸಜ್ಜಾಗಿದೆ. ಪಂದ್ಯಕ್ಕೂ ಮುನ್ನವೇ ಸಾಕಷ್ಟು ಮಾತಿನ ಪೈಪೋಟಿ ನಡೆದಿದ್ದು ಅಂಗಳದಲ್ಲಿ ಮೇಲುಗೈ ಸಾಧಿಸವರು ಯಾರು ಎಂಬುದು ಈಗ ಕುತೂಹಲ ಕೆರಳಿಸಿದೆ. ಬಾಂಗ್ಲಾದೇಶ ಬಲಿಷ್ಠ ಪೈಪೋಟಿ ನೀಡುವ ತಂಡವಲ್ಲ ಎಂದಿರುವ ಶ್ರೀಲಂಕಾ ನಾಯಕನ ಹೇಳಿಕೆಗೆ ಬಾಂಗ್ಲಾದೇಶದ ಕಡೆಯಿಂದ ಕಟು ಪ್ರತಿಕ್ರಿಯೆಗಳು ಬರುತ್ತಿದ್ದು ಮೈದಾನದ ಕದನದ ಬಗ್ಗೆ ಕುತೂಹಲ ಹೆಚ್ಚಿಸಿದೆ

Sep 01, 2022, 10:14 am IST

ಸೂರ್ಯಕುಮಾರ್ ಆಡಿದ ಇಂದಿನ ಇನ್ನಿಂಗ್ಸ್‌ಅನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಅವರು ಪ್ರತಿ ಬಾರಿಯೂ ಈ ರೀರಿಯ ಭಿನ್ನವಾದ ಹೊಡೆತಗಳನ್ನು ಬಾರಿಸಿಕೊಂಡು ಬಂದಿದ್ದಾರೆ. ಅವರಲ್ಲಿರುವ ಆತ್ಮವಿಶ್ವಾಸದ ಕಾರಣದಿಂದಾಗಿಯೇ ಅವರಿಗೆ ಅಂಥಾ ಹೊಡೆತಗಳನ್ನು ಸಲೀಸಾಗಿ ಬಾರಿಸಲು ಸಾಧ್ಯವಾಗುತ್ತದೆ. ಇಂದು ಬಾರಿಸಿದ ಕೆಲ ಹೊಡೆತಗಳು ಪಠ್ಯದಿಂದ ಬಂದವುಗಳಲ್ಲ. ಹೊಡೆತಗಳ ಆಯ್ಕೆಗಳು ಕೂಡ ನಿರ್ಣಾಯಕ. ಅವರು ಮೈದಾನದ ಎಲ್ಲಾ ಭಾಗಕ್ಕೂ ಚೆಂಡನ್ನು ಅಟ್ಟಬಲ್ಲರು ಎಂಬುದು ನಮಗೆ ತಿಳಿದಿದೆ. ಇಂದು ಅವರು ಮಾಡಿದ್ದು ಕೂಡ ಅದನ್ನೇ" ಎಂದು ಸೂರ್ಯ ಕುಮಾರ್ ಯಾದವ್ ಬಗ್ಗೆ ಭಾರೀ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ ರೋಹಿತ್ ಶರ್ಮಾ

Aug 31, 2022, 11:12 pm IST

ಹಾಂಗ್‌ಕಾಂಗ್ ವಿರುದ್ಧ ಗೆದ್ದು ಗ್ರೂಪ್ ಹಂತದ ಎರಡೂ ಪಂದ್ಯಗಳಲ್ಲಿಯೂ ಜಯ ಕಂಡು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡು ಸೂಪರ್ 4 ಸುತ್ತಿಗೆ ಲಗ್ಗೆ ಇಟ್ಟಿದೆ

Aug 31, 2022, 11:08 pm IST

ಭಾರತ ನೀಡಿದ್ದ 193 ರನ್‌ಗಳ ಗುರಿಯನ್ನು ಬೆನ್ನತ್ತುವಲ್ಲಿ ವಿಫಲವಾದ ಹಾಂಕಾಂಗ್ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 152 ರನ್ ಕಲೆ ಹಾಕಿ 40 ರನ್‌ಗಳ ಸೋಲನ್ನು ಕಂಡಿದೆ.

Aug 31, 2022, 10:08 pm IST

ಟೀಮ್ ಇಂಡಿಯಾ ನೀಡಿರುವ 193 ರನ್‌ಗಳ ಕಠಿಣ ಗುರಿಯನ್ನು ಬೆನ್ನತ್ತಿರುವ ಹಾಂಗ್‌ಕಾಂಗ್ 10 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 65 ರನ್ ಕಲೆಹಾಕಿದ್ದು ಗೆಲ್ಲಲು ಇನ್ನೂ 65 ಎಸೆತಗಳಲ್ಲಿ 128 ರನ್ ಬಾರಿಸಬೇಕಾದ ಅಗತ್ಯವಿದೆ.

Aug 31, 2022, 10:01 pm IST

ಟೀಮ್ ಇಂಡಿಯಾ ನೀಡಿರುವ 193 ರನ್‌ಗಳ ಕಠಿಣ ಗುರಿಯನ್ನು ಬೆನ್ನತ್ತಿರುವ ಹಾಂಗ್‌ಕಾಂಗ್ 8 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 58 ರನ್ ಕಲೆಹಾಕಿದ್ದು ಗೆಲ್ಲಲು ಇನ್ನೂ 72 ಎಸೆತಗಳಲ್ಲಿ 135 ರನ್ ಬಾರಿಸಬೇಕಾದ ಅಗತ್ಯವಿದೆ.

Aug 31, 2022, 9:25 pm IST

ಟೀಂ ಇಂಡಿಯಾ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 92 ರನ್ ಕಲೆಹಾಕಿದ್ದು ಹಾಂಕಾಂಗ್ ತಂಡಕ್ಕೆ ಗೆಲ್ಲಲು 193 ರನ್‌ಗಳ ಕಠಿಣ ಗುರಿ ನೀಡಿದೆ. ಟೀಮ್ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮ 21 ರನ್ ಕಲೆಹಾಕಿದರೆ, ಕೆಎಲ್ ರಾಹುಲ್ 36 ರನ್ ಬಾರಿಸಿದರು. ಇನ್ನುಳಿದಂತೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದು ನಿಧಾನಗತಿಯಲ್ಲಿ ಬ್ಯಾಟ್ ಬೀಸಿದ ವಿರಾಟ್ ಕೊಹ್ಲಿ 44 ಎಸೆತಗಳಲ್ಲಿ ಅಜೇಯ 59 ರನ್ ಬಾರಿಸಿದರು ಹಾಗೂ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಬೌಂಡರಿ ಮೇಲೆ ಬೌಂಡರಿ ಚಚ್ಚಿ ಅಬ್ಬರಿಸಿದ ಸೂರ್ಯಕುಮಾರ್ ಯಾದವ್ 26 ಎಸೆತಗಳಲ್ಲಿ ಅಜೇಯ 68 ರನ್ ಬಾರಿಸಿದರು. ಸೂರ್ಯಕುಮಾರ್ ಯಾದವ್ 6 ಬೌಂಡರಿ ಮತ್ತು 6 ಸಿಕ್ಸರ್ ಸಿಡಿಸಿ ಅಬ್ಬರಿಸಿ ನಿಧಾನಗತಿಯಲ್ಲಿ ಸಾಗುತ್ತಿದ್ದ ಟೀಮ್ ಇಂಡಿಯಾದ ರನ್ ವೇಗವನ್ನು ಹೆಚ್ಚಿಸಿ ಬೃಹತ್ ಮೊತ್ತ ಕಲೆಹಾಕುವಲ್ಲಿ ನೆರವಾದರು.

Aug 31, 2022, 8:36 pm IST

ಟೀಮ್ ಇಂಡಿಯಾ ಹಾಂಗ್‌ಕಾಂಗ್ ವಿರುದ್ಧ 13 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 94 ರನ್ ಕಲೆಹಾಕಿದೆ. ಕಣದಲ್ಲಿ ವಿರಾಟ್ ಕೊಹ್ಲಿ ಹಾಗೂ ಸೂರ್ಯಕುಮಾರ್ ಯಾದವ್ ಬ್ಯಾಟ್ ಬೀಸುತ್ತಿದ್ದಾರೆ.

Aug 31, 2022, 7:51 pm IST

ಆಡುವ ಬಳಗಗಳು ಟೀಮ್ ಇಂಡಿಯಾ ಆಡುವ ಬಳಗ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ದಿನೇಶ್ ಕಾರ್ತಿಕ್, ಭುವನೇಶ್ವರ್ ಕುಮಾರ್, ಅವೇಶ್ ಖಾನ್, ಯುಜ್ವೇಂದ್ರ ಚಾಹಲ್ ಮತ್ತು ಅರ್ಷದೀಪ್ ಸಿಂಗ್ ಹಾಂಗ್ ಕಾಂಗ್ ಆಡುವ ಬಳಗ: ನಿಜಾಕತ್ ಖಾನ್ ( ನಾಯಕ ) ಯಾಸಿಮ್ ಮುರ್ತಾಜಾ, ಬಾಬರ್ ಹಯಾತ್, ಕಿಂಚಿತ್ ಷಾ, ಐಜಾಜ್ ಖಾನ್, ಸ್ಕಾಟ್ ಮೆಕೆಚ್ನಿ (ವಿಕೆಟ್ ಕೀಪರ್), ಜೀಶನ್ ಅಲಿ, ಹರೂನ್ ಅರ್ಷದ್, ಎಹ್ಸಾನ್ ಖಾನ್, ಆಯುಷ್ ಶುಕ್ಲಾ, ಮೊಹಮ್ಮದ್ ಘಜನ್ಫರ್

Aug 31, 2022, 7:35 pm IST

ಭಾರತ ಮತ್ತು ಹಾಂಗ್‌ಕಾಂಗ್ ತಂಡಗಳ ನಡುವಿನ ಪಂದ್ಯ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆರಂಭಗೊಂಡಿದ್ದು ಟಾಸ್ ಗೆದ್ದಿರುವ ಹಾಂಗ್‌ಕಾಂಗ್ ಫೀಲ್ಡಿಂಗ್ ಆಯ್ದುಕೊಂಡು ಟೀಮ್ ಇಂಡಿಯಾವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದೆ. ಇನ್ನು ಈ ಪಂದ್ಯದಲ್ಲಿ ಕಣಕ್ಕಿಳಿಯಲಿರುವ ಟೀಮ್ ಇಂಡಿಯಾದಲ್ಲಿ ಒಂದು ಪ್ರಮುಖ ಬದಲಾವಣೆಯಾಗಿದ್ದು, ಹಾರ್ದಿಕ್ ಪಾಂಡ್ಯಾಗೆ ವಿಶ್ರಾಂತಿ ನೀಡಿ ರಿಷಭ್ ಪಂತ್‌ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

Aug 31, 2022, 5:20 pm IST

ಟೀಮ್ ಇಂಡಿಯಾದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಸದ್ಯ ಅತ್ಯದ್ಭುತ ಫಾರ್ಮ್‌ನಲ್ಲಿದ್ದಾರೆ. ಕಳೆದ ಐಪಿಎಲ್‌ನ ಮೂಲಕ ಕಮ್‌ಬ್ಯಾಕ್ ಮಾಡಿದ ಬಳಿಕ ಹಾರ್ದಿಕ್ ಪಾಂಡ್ಯ ಸ್ಥಿರವಾಗಿ ಪ್ರದರ್ಶನ ನೀಡುತ್ತಿದ್ದು ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿಯೂ ಪರಿಣಾಮಕಾರಿಯಾಗಿದ್ದಾರೆ. ಕಳೆದ ಭಾನುವಾರ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿಯೂ ಮ್ಯಾಚ್ ವಿನ್ನರ್ ಆಗಿ ತಂಡಕ್ಕೆ ಗೆಲುವು ತಂದಿಟ್ಟ ಹಾರ್ದಿಕ್ ಪಾಂಡ್ಯ ತನ್ನ ಬೆಳವಣಿಗೆಯಲ್ಲಿ ಓರ್ವ ಮಾಜಿ ಕ್ರಿಕೆಟಿಗನ ಪಾತ್ರ ದೊಡ್ಡದಿದೆ ಎಂದಿದ್ದಾರೆ. ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ತನ್ನ ಯಶಸ್ಸಿನ ವಿಚಾರವಾಗಿ ಮಾತನಾಡುತ್ತಾ ಶ್ರೇಯಸ್ಸು ನೀಡಿದ್ದು ಬೇರೆ ಯಾರಿಗೂ ಅಲ್ಲ. ಮಾಜಿ ಕ್ರಿಕೆಟಿಗ ಎಂಎಸ್ ಧೋನಿಗೆ. ಮಾಜಿ ನಾಯಕ ಎಂಎಸ್ ಧೋನಿ ತನ್ನ ಬೆಳವಣಿಗೆಯಲ್ಲಿ ಬಹಳಷ್ಟು ದೊಡ್ಡ ಪಾತ್ರವಹಿಸಿದ್ದಾರೆ ಎಂದಿದ್ದಾರೆ ಹಾರ್ದಿಕ್ ಪಾಂಡ್ಯ

Aug 31, 2022, 3:28 pm IST

ಐಸಿಸಿ ರ‍್ಯಾಂಕಿಂಗ್: ವೃತ್ತಿಜೀವನದಲ್ಲಿ ಅತ್ಯುತ್ತಮ ಶ್ರೇಯಾಂಕ ಪಡೆದ ಹಾರ್ದಿಕ್ ಪಾಂಡ್ಯ

ಟೀಮ್ ಇಂಡಿಯಾದ ಪ್ರಮುಖ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಎಂಥಾ ಅದ್ಭುತ ಫಾರ್ಮ್ನಲ್ಲಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು. ಕಳೆದ ಮೂರ್ನಾಲ್ಕು ತಿಂಗಳುಗಳಲ್ಲಿ ಪಾಂಡ್ಯ ಮೈದಾನಕ್ಕಿಳಿದಾಗ ಒಂದು ಬಾರಿಯೂ ನಿರೀಕ್ಷೆಯಲ್ಲಿ ಹುಸಿಗೊಳಿಸಿ ವಾಪಾಸ್ ಬಂದವರಲ್ಲ. ಕಳೆದ ಭಾನುವಾರ ಅಂತ್ಯವಾದ ಪಾಕಿಸ್ತಾನದ ವಿರುದ್ಧದ ಪಂದ್ಯ ಇದಕ್ಕೆ ಇತ್ತೀಚಿನ ಸಾಕ್ಷಿಯಾಗಿದೆ. ಈ ಅದ್ಭುತ ಪ್ರದರ್ಶನದಿಂದಾಗಿ ಶ್ರೇಯಾಂಕಪಟ್ಟಿಯಲ್ಲಿಯೂ ಹಾರ್ದಿಕ್ ಪಾಂಡ್ಯ ಅದ್ಭುತ ಏರಿಕೆ ಕಂಡಿದ್ದಾರೆ.

Aug 31, 2022, 3:26 pm IST

ಟಿ20 ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಹಾರ್ದಿಕ್ ಪಾಂಡ್ಯ ತಮ್ಮ ವೃತ್ತಿ ಜೀವನದ ಅತ್ಯುನ್ನತ ಸಾಧನೆ ಮಾಡಿದ್ದಾರೆ. ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ನೀಡಿದ ಆಲ್‌ರೌಂಡರ್ ಪ್ರದರ್ಶನದ ಬಳಿಕ ಹಾರ್ದಿಕ್ ಪಾಂಡ್ಯ ಐಸಿಸಿ ಟಿ20 ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ 5ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

Aug 31, 2022, 11:48 am IST

ಅಫ್ಘಾನಿಸ್ತಾನದ ಪ್ರತಿಭಾನ್ವಿತ ಆಟಗಾರ ರಶೀದ್ ಖಾನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ 2015ರಲ್ಲಿ ಪದಾರ್ಪಣೆ ಮಾಡಿದ್ದು ಅದ್ಭುತ ಪ್ರದರ್ಶನಗಳನ್ನು ನೀಡುವ ಮೂಲಕ ಕ್ರಿಕೆಟ್‌ನ ಸೂಪರ್‌ಸ್ಟಾರ್‌ಗಳಲ್ಲಿ ಒಬ್ಬರೆನಿಸಿದ್ದಾರೆ. ಅದರಲ್ಲೂ ಟಿ20 ಮಾದರಿಯಲ್ಲಿ ರಶೀದ್ ಖಾನ್ ಅಮೋಗ ಯಶಸ್ಸು ಸಾಧಿಸುತ್ತಿದ್ದಾರೆ. ಚುಟುಕು ಕ್ರಿಕೆಟ್‌ನಲ್ಲಿ ವೇಗವಾಗಿ 100 ವಿಕೆಟ್ ಸಂಪಾದಿಸಿರುವ ಆಟಗಾರ ಎನಿಸಿಕೊಂಡಿದ್ದು ಈ ಮೈಲಿಗಲ್ಲಿಗಾಗಿ ರಶೀದ್ ಕೇವಲ 53 ಪಂದ್ಯಗಳನ್ನು ಬಳಸಿಕೊಂಡಿದ್ದರು.

Aug 31, 2022, 11:47 am IST

ಟಿ20Iನಲ್ಲಿ 114 ವಿಕೆಟ್ ಪಡೆದಿರುವ ನ್ಯೂಜಿಲೆಂಡ್‌ನ ವೇಗದ ಬೌಲರ್ ಟಿಮ್ ಸೌಥಿ ಅವರನ್ನು ರಶೀದ್ ಖಾನ್ ಹಿಂದಿಕ್ಕಿದ್ದು ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ.

Aug 31, 2022, 9:35 am IST

ಹಾಂಗ್ ಕಾಂಗ್ ಸಂಪೂರ್ಣ ಸ್ಕ್ವಾಡ್: ನಿಜಾಕತ್ ಖಾನ್(ನಾಯಕ), ಯಾಸಿಮ್ ಮುರ್ತಾಜಾ, ಬಾಬರ್ ಹಯಾತ್, ಕಿಂಚಿತ್ ಶಾ, ಐಜಾಜ್ ಖಾನ್, ಸ್ಕಾಟ್ ಮೆಕೆಚ್ನಿ(ವಿಕೆಟ್ ಕೀಪರ್), ಜೀಶನ್ ಅಲಿ, ಹರೂನ್ ಅರ್ಷದ್, ಎಹ್ಸಾನ್ ಖಾನ್, ಮೊಹಮ್ಮದ್ ಘಜನ್ಫರ್, ಆಯುಷ್ ಶುಕ್ಲಾ, ಅತೀಕ್ ಇಕ್ಬಾಲ್, ಮೊಹಮ್ಮದ್ ವಹೀದ್, ವಾಜಿದ್ ಶಾ, ಅಫ್ತಾಬ್ ಹುಸೇನ್, ಧನಂಜಯ್ ರಾವ್, ಅಹಾನ್ ತ್ರಿವೇದಿ

Aug 31, 2022, 9:34 am IST

ಭಾರತದ ಸಂಪೂರ್ಣ ಸ್ಕ್ವಾಡ್: ರೋಹಿತ್ ಶರ್ಮಾ(ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್(ವಿಕೆಟ್ ಕೀಪರ್), ಭುವನೇಶ್ವರ್ ಕುಮಾರ್, ಆವೇಶ್ ಖಾನ್, ಯುಜ್ವೇಂದ್ರ ಚಹಾಲ್, ಅರ್ಶ್ದೀಪ್ ಸಿಂಗ್, ದೀಪಕ್ ಹೂಡಾ, ರಿಷಬ್ ಪಂತ್, ರವಿಚಂದ್ರನ್ ಅಶ್ವಿನ್, ರವಿ ಬಿಷ್ಣೋಯ್

Aug 31, 2022, 9:34 am IST

ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡಕ್ಕೆ ಇಂದು ಹಾಂಕಾಂಗ್ ತಂಡ ಸವಾಲೊಡ್ಡಲು ಸಜ್ಜಾಗಿದೆ. ಬಲಿಷ್ಠ ಭಾರತ ತಂಡದ ವಿರುದ್ಧ ಹಾಂಕಾಂಗ್ ಯಾವ ರೀತಿಯ ಸವಾಲೊಡ್ಡಲಿದೆ ಎಂಬುದು ಕುತೂಹಲ ಮೂಡಿಸಿದೆ.

Aug 30, 2022, 10:59 pm IST

ಬಾಂಗ್ಲದೇಶ ನೀಡಿದ 128 ರನ್‌ಗಳ ಗುರಿಯನ್ನು ಬೆನ್ನತ್ತಿದ ಅಫ್ಘಾನಿಸ್ತಾನ 18.3 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 131 ರನ್ ಚಚ್ಚುವುದರ ಮೂಲಕ ಗೆಲುವಿನ ಕೇಕೆ ಹಾಕಿದೆ. ಈ ಗೆಲುವಿನ ಮೂಲಕ ಬಿ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ಅಫ್ಘಾನಿಸ್ತಾನ ಈ ಬಾರಿಯ ಏಷ್ಯಾಕಪ್‌ನಲ್ಲಿ ಸೂಪರ್ 4 ಸುತ್ತಿಗೆ ಲಗ್ಗೆ ಇಟ್ಟ ಮೊದಲ ತಂಡ ಎನಿಸಿಕೊಂಡಿದೆ.

Aug 30, 2022, 10:02 pm IST

ಬಾಂಗ್ಲಾದೇಶ ನೀಡಿರುವ 128 ರನ್‌ಗಳ ಗುರಿಯನ್ನು ಬೆನ್ನತ್ತಿರುವ ಅಫ್ಘಾನಿಸ್ತಾನ 10 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 48 ರನ್ ಕಲೆಹಾಕಿದ್ದು 60 ಎಸೆತಗಳಲ್ಲಿ 80 ರನ್ ಬಾರಿಸಬೇಕಾದ ಅಗತ್ಯವಿದೆ.

Aug 30, 2022, 9:40 pm IST

ಬಾಂಗ್ಲಾದೇಶ ನೀಡಿರುವ 128 ರನ್‌ಗಳ ಗುರಿಯನ್ನು ಬೆನ್ನತ್ತಿರುವ ಅಫ್ಘಾನಿಸ್ತಾನ 5 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 19 ರನ್ ಕಲೆಹಾಕಿದ್ದು 90 ಎಸೆತಗಳಲ್ಲಿ 109 ರನ್ ಬಾರಿಸಬೇಕಾದ ಅಗತ್ಯವಿದೆ.

Aug 30, 2022, 9:20 pm IST

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತಂಡ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 127 ರನ್ ಕಲೆ ಹಾಕಿ ಎದುರಾಳಿ ಅಫ್ಘಾನಿಸ್ತಾನ ತಂಡಕ್ಕೆ ಗೆಲ್ಲಲು 128 ರನ್‌ಗಳ ಸಾಮಾನ್ಯ ಗುರಿಯನ್ನು ನೀಡಿದೆ.

Aug 30, 2022, 8:31 pm IST

11 ಓವರ್ ಮುಕ್ತಾಯಕ್ಕೆ ಬಾಂಗ್ಲಾದೇಶ 5 ವಿಕೆಟ್ ಕಳೆದುಕೊಂಡು 55 ರನ್ ಕಲೆಹಾಕಿದೆ. ಮೊಹದೆಕ್ ಹುಸೈನ್ ಹಾಗೂ ಮಹ್ಮದುಲ್ಲಾ ಕಣದಲ್ಲಿದ್ದಾರೆ.

Aug 30, 2022, 7:50 pm IST

ಬಾಂಗ್ಲದೇಶ ತನ್ನ ಆರಂಭಿಕ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

Aug 30, 2022, 7:13 pm IST

ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸನ್ ಇಂದು ತಮ್ಮ 100ನೇ ಟಿ20 ಪಂದ್ಯ ಆಡುತ್ತಿದ್ದಾರೆ. ಅವರು ಇದುವರೆಗೆ 2010 ರನ್ ಗಳಿಸಿ 121 ವಿಕೆಟ್ ಪಡೆದಿದ್ದಾರೆ.

Aug 30, 2022, 7:12 pm IST

ಮಂಗಳವಾರ ಶಾರ್ಜಾದ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ 2022ರ ಏಷ್ಯಾ ಕಪ್ ಅಭಿಯಾನದ ಆರಂಭಿಕ ಪಂದ್ಯದಲ್ಲಿ ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸನ್ ಟಾಸ್ ಗೆದ್ದು ಅಫ್ಘಾನಿಸ್ತಾನ ವಿರುದ್ಧ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು.

Aug 30, 2022, 3:33 pm IST

ಅಫ್ಘಾನಿಸ್ತಾನ ಸ್ಕ್ವಾಡ್ ಹೀಗಿದೆ: ಹಜರತುಲ್ಲಾ ಝಜೈ, ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಇಬ್ರಾಹಿಂ ಜದ್ರಾನ್, ನಜಿಬುಲ್ಲಾ ಜದ್ರಾನ್, ಕರೀಂ ಜನತ್, ಮೊಹಮ್ಮದ್ ನಬಿ (ನಾಯಕ), ರಶೀದ್ ಖಾನ್, ಅಜ್ಮತುಲ್ಲಾ ಒಮರ್ಜಾಯ್, ನವೀನ್-ಉಲ್-ಹಕ್, ಮುಜೀಬ್ ಉರ್ ರೆಹಮಾನ್, ಫಜಲ್ಹಕ್ ಫಾರೂಕಿ, ಸಮೀವುಲ್ಲಾ ಶಿನ್ವಾರಿ, ಹಶ್ಮತುಲ್ಲಾ ಶಾಹಿದಿ, ಅಫ್ಸರ್ ಝಜೈ, ಫರೀದ್ ಅಹ್ಮದ್ ಮಲಿಕ್, ಉಸ್ಮಾನ್ ಘನಿ, ನೂರ್ ಅಹ್ಮದ್

Aug 30, 2022, 9:22 am IST

ಬಾಂಗ್ಲಾದೇಶದ ಸ್ಕ್ವಾಡ್ ಹೀಗಿದೆ: ಮೊಹಮ್ಮದ್ ನಯಿಮ್, ಅನಾಮುಲ್ ಹಕ್, ಶಕೀಬ್ ಅಲ್ ಹಸನ್ (ನಾಯಕ), ಅಫೀಫ್ ಹೊಸೈನ್, ಮುಶ್ಫಿಕರ್ ರಹೀಮ್ (ವಿಕೆಟ್ ಕೀಪರ್), ಮಹಮ್ಮದುಲ್ಲಾ, ಸಬ್ಬೀರ್ ರೆಹಮಾನ್, ಮಹೇದಿ ಹಸನ್, ಮೊಹಮ್ಮದ್ ಸೈಫುದ್ದೀನ್, ನಸುಮ್ ಅಹ್ಮದ್, ಮುಸ್ತಾಫಿಜುರ್ ರೆಹಮಾನ್, ಮೊಸದ್ದೆಕ್ ಹೊಸೈನ್, ತಸ್ಕಿನ್ ಅಹ್ಮದ್, ಮೆಹಿದಿ ಹಸನ್ ಮಿರಾಜ್, ಎಬಾಡೋತ್ ಹೊಸೈನ್, ಪರ್ವೇಜ್ ಹೊಸೈನ್ ಎಮಾನ್.

Aug 30, 2022, 8:39 am IST

ಬಾಂಗ್ಲಾದೇಶ ತಂಡ ಈ ಬಾರಿಯ ಟೂರ್ನಿಯಲ್ಲಿ ಇಂದು ಮೊದಲ ಪಂದ್ಯವನ್ನಾಡಲು ಸಜ್ಜಾಗಿದೆ. ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿ ಶ್ರೀಲಂಕಾ ವಿರುದ್ಧ ಗೆಲುವು ಸಾಧಿಸಿರುವ ಅಫ್ಘಾನಿಸ್ತಾನ ಬಾಂಗ್ಲಾದೇಶದ ವಿರುದ್ಧವೂ ಗೆಲ್ಲುವ ಹುಮ್ಮಸ್ಸಿನಲ್ಲಿದೆ.

Aug 29, 2022, 9:08 pm IST

"ಇದು ಟಿ20 ಕ್ರಿಕೆಟ್, ಇಲ್ಲಿ ನಿಮ್ಮ ಸ್ವಭಾವಕ್ಕೆ ವಿರುದ್ಧವಾಗಿ ಹೊಡೆತಗಳನ್ನು ಬಾರಿಸುವ ಪ್ರಯತ್ನಗಳನ್ನು ನಡೆಸುತ್ತೀರಿ. ಹಿಂದೆ ಆ ರೀತಿಯ ಹೊಡೆತಗಳನ್ನು ಬಾರಿಸಿದ್ದರೂ ಇಂದು ನಿರಾಸೆ ಮೂಡಿಸಿದೆ. ನೀವು ಸಿಕ್ಸರ್ ಹೊಡೆಯಲು ಪ್ರಯತ್ನಿಸಿ ಔಟ್ ಆಗಿದ್ದರೆ ಅದೇನೂ ಸಮಸ್ಯೆಯಾಗುತ್ತಿರಲಿಲ್ಲ. ಏಕೆಂದರೆ ನೀವು ದೊಡ್ಡ ಹೊಡೆತವನ್ನು ಆಡಲು ಪ್ರಯತ್ನಿಸುತ್ತಿರುತ್ತೀರಿ. ಆದರೆ ಇಲ್ಲಿ ನೀವು ಸಿಕ್ಸರ್ ಹೊಡೆಯಲು ಪ್ರಯತ್ನಿಸಲಿಲ್ಲ ಅಥವಾ ಅದಕ್ಕೆ ಬೇಕಾದ ಪೂರ್ಣ ಪ್ರಯತ್ನ ಬರಲಿಲ್ಲ. ಹಾಗಾಗಿ ಇದು ಏನೂ ಅಲ್ಲದ ಹೊಡೆತವಾಗಿತ್ತು. ಆ ಕಾರಣದಿಂದಾಗಿಯೇ ಆತ ಹೆಚ್ಚು ನಿರಾಸೆಗೆ ಒಳಗಾಗಿರಬಹುದು" ಎಂದಿದ್ದಾರೆ ಗೌತಮ್ ಗಂಭೀರ್.

Aug 29, 2022, 9:08 pm IST

ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಆರಂಭದಲ್ಲಿ ಸರಾಗವಾಗಿ ರನ್‌ಗಳಿಸಲು ವಿರಾಟ್ ಕೊಹ್ಲಿ ಪರದಾಡಿದರೂ ನಂತರ ಕೆಲ ಅದ್ಭುತ ಹೊಡೆತಗಳನ್ನು ಬಾರಿಸುವ ಮೂಲಕ ಉತ್ತಮ ಲಯದಲ್ಲಿಯರುವ ಸೂಚನೆ ನೀಡಿದರು. ಆದರೆ ಈ ಹಂತದಲ್ಲಿ ವಿರಾಟ್ ಕೊಹ್ಲಿ ಬೇಡದ ಹೊಡೆತಕ್ಕೆ ಮುಂದಾಗಿ ವಿಕೆಟ್ ಕಳೆದುಕೊಳ್ಳುವ ಮೂಲಕ ನಿರಾಸೆ ಮೂಡಿಸಿದರು. ಈ ವಿಚಾರವಾಗಿ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಪ್ರತಿಕ್ರಿಯಿಸಿದ್ದಾರೆ.

Aug 29, 2022, 9:06 pm IST

ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯ ಮುಕ್ತಾಯವಾದ ನಂತರ ವಿರಾಟ್‌ ಕೊಹ್ಲಿ ಪಾಕಿಸ್ತಾನದ ಆಟಗಾರ ಹ್ಯಾರಿಸ್ ರೌಫ್ ಜತೆ ಮಾತನಾಡಿ ಕಾಲ ಕಳೆದಿದ್ದಾರೆ. ಇದೇ ಸಂದರ್ಭದಲ್ಲಿ ಯುವ ಆಟಗಾರನಿಗೆ ಕೊಹ್ಲಿ ತಮ್ಮ ಸಹಿ ಹಾಕಿರುವ ಜೆರ್ಸಿಯನ್ನು ನೀಡಿದ್ದಾರೆ. ಈ ವಿಡಿಯೋವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ.

Aug 29, 2022, 8:51 pm IST

ಟೀಂ ಇಂಡಿಯಾ ವಿಶ್ವಕಪ್ ಹೀರೋ ಯುವರಾಜ್ ಸಿಂಗ್, ಸಾಕಷ್ಟು ಒತ್ತಡವಿದ್ದಂತಹ ಪಂದ್ಯದಲ್ಲಿ ಭಾರತಕ್ಕೆ ಒಳ್ಳೆಯ ಗೆಲುವು ಸಿಕ್ಕಿತು. ಚೆನ್ನಾಗಿ ಬೌಲಿಂಗ್ ಮಾಡಿದಿರಿ ಹಾಗೂ ಆಡಿದ್ದೀರಾ ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್ ಎಂದು ಟ್ವೀಟ್ ಮಾಡಿದ್ದಾರೆ.

Aug 29, 2022, 8:40 pm IST

ರಾತ್ರಿ ನಡೆದ ಪಂದ್ಯವು ಒಂದೊಳ್ಳೆಯ ಮ್ಯಾಚ್ ಹಾಗೂ ಒಂದೊಳ್ಳೆಯ ಗೆಲುವಾಗಿತ್ತು. ಚೆನ್ನಾಗಿ ಆಡಿದ್ದೀರಾ, ಅಭಿನಂದನೆಗಳು ನಿಮಗೆ ಎಂದು ವೇಗಿ ಮೊಹಮ್ಮದ್ ಶಮಿ, ಟೀಂ ಇಂಡಿಯಾ ಪ್ರದರ್ಶನವನ್ನು ಕೊಂಡಾಡಿದ್ದಾರೆ.

Aug 29, 2022, 8:28 pm IST

ವಾವ್ ವಾವ್ ವಾವ್..! ಅದ್ಭುತ ಹಾರ್ದಿಕ್ ಪಾಂಡ್ಯ. ಎಲ್ಲವನ್ನು ನಾನೇ ಮಾಡುತ್ತೇನೆ ಎನ್ನುವಂತಿತ್ತು ಹಾರ್ದಿಕ್ ಪಾಂಡ್ಯ ಆಟ. ಭುವನೇಶ್ವರ್ ಕುಮಾರ್ ಅವರಿಂದ ಚಾಣಾಕ್ಷ ಪ್ರದರ್ಶನ. ರವೀಂದ್ರ ಜಡೇಜಾ ಹಾಗೂ ವಿರಾಟ್ ಕೊಹ್ಲಿ ಕೂಡಾ ಉತ್ತಮ ಸಹಯೋಗ ನೀಡಿದರು. ಸಾಕಷ್ಟು ಸಮಯದ ನಂತರ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಒಂದು ಜಿದ್ದಾಜಿದ್ದಿನ ಪಂದ್ಯ ನೋಡಲು ಸಿಕ್ಕಿತು. ಮಸ್ತ್ ಮಜಾ ಬಂತು ಎಂದು ವಿರೇಂದ್ರ ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ

Aug 29, 2022, 8:27 pm IST

ವಿರಾಟ್ ಕೊಹ್ಲಿ ಹಾಗೂ ರವೀಂದ್ರ ಜಡೇಜಾ ಅವರ ಜತೆ ಕೊನೆಯವರೆಗೂ ಕ್ರೀಸ್‌ನಲ್ಲಿದ್ದ ತಂಡವನ್ನು ಗೆಲುವಿನ ದಡ ಸೇರಿಸಿದ ಹಾರ್ದಿಕ್ ಪಾಂಡ್ಯ ಇನಿಂಗ್ಸ್‌ ಮಹತ್ವದ್ದೆನಿಸಿತು ಎಂದು ಮಾಸ್ಟರ್‌ ಬ್ಲಾಸ್ಟರ್ ಟ್ವೀಟ್ ಮಾಡಿದ್ದಾರೆ.

Aug 29, 2022, 8:16 pm IST

ಹಾರ್ದಿಕ್ ಪಾಂಡ್ಯ ಅವರ ಈ ಪ್ರದರ್ಶನದ ಬಗ್ಗೆ ಮಾಜಿ ಕೋಚ್ ರವಿ ಶಾಸ್ತ್ರಿ ಪ್ರತಿಕ್ರಿಯಿಸಿದ್ದಾರೆ. ಹಾರ್ದಿಕ್ ಪಾಂಡ್ಯ ಅವರ ಪ್ರದರ್ಶನವನ್ನು ಕೊಂಡಾಡಿರುವ ರವಿ ಶಾಸ್ತ್ರಿ "ಭಾರತ ತಂಡವನ್ನು ಗೆಲುವಿನ ದಡ ಸೇರಿಸಲು ಅತ್ಯುತ್ತಮ ಆಲ್‌ರೌಂಡರ್‌ನ ಅಗತ್ಯವಿತ್ತು" ಎಂದಿದ್ದಾರೆ.

Aug 29, 2022, 7:21 pm IST

ದುಬೈ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ ರೋಚಕ ಗೆಲುವಿನ ಬಳಿಕ ಪಾಕಿಸ್ತಾನದ ಖ್ಯಾತ ಮೀಮ್ಸ್ ಸ್ಟಾರ್ ಮೊಮಿನ್ ಶಾಕಿಬ್ ಮಾಜಿ ನಾಯಕ ಕೊಹ್ಲಿ, ಪಾಂಡ್ಯರನ್ನ ಭೇಟಿ ಮಾಡಿದ್ದಾರೆ. ಪಾಕಿಸ್ತಾನದ ಸೋಲಿನಿಂದ ದುಃಖಿತನಾಗಿದ್ದರೂ, ವಿರಾಟ್ ಮತ್ತು ಹಾರ್ದಿಕ್ ಅವರನ್ನು ಭೇಟಿಯಾದ ನಂತರ ಈ ಪಾಕಿಸ್ತಾನಿ ಮೀಮ್ಸ್‌ ಸ್ಟಾರ್ ಹರ್ಷ ವ್ಯಕ್ತಪಡಿಸಿದ್ದಾರೆ.

Aug 29, 2022, 2:20 pm IST

"ನಾನು ಎಲ್ಲವನ್ನೂ ನೆನಪಿಸಿಕೊಳ್ಳುತ್ತಿದ್ದೇನೆ, ನಿಮಗೆ ತಿಳಿದಿದೆ ನನ್ನನ್ನು ಸ್ಟ್ರೆಚರ್‌ನಲ್ಲಿ ಕರೆದೊಯ್ದರು, ಅದೇ ಡ್ರೆಸ್ಸಿಂಗ್ ರೂಮ್‌, ನೀವು ಸಾಧನೆಯ ಪ್ರಜ್ಞೆಯನ್ನು ಅನುಭವಿಸುತ್ತೀರಿ. ಏಕೆಂದರೆ ಸಂಭವಿಸಿದ ಸಂಗತಿಗಳು ಮತ್ತು ಅದರ ನಂತರ ಈ ರೀತಿಯ ಅವಕಾಶ ಸಿಕ್ಕಿತು. ಆದ್ದರಿಂದ ಪ್ರಯಾಣವು ತುಂಬಾ ಹೆಚ್ಚು ಸುಂದರವಾಗಿದೆ,"ಎಂದು ಬಿಸಿಸಿಐ ವಿಡಿಯೋದಲ್ಲಿ ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.

Aug 29, 2022, 1:43 pm IST

ಭಾರತವನ್ನು ರೋಚಕವಾಗಿ ಗೆಲ್ಲಿಸಿದ ನಂತರ "ಚಾಂಪಿಯನ್' ಹಾರ್ದಿಕ್ ಪಾಂಡ್ಯ ಅವರ ಚಿತ್ರವನ್ನು ವಿರಾಟ್ ಕೊಹ್ಲಿ ತಮ್ಮ Instagram ಸ್ಟೋರಿಯಲ್ಲಿ ಹಂಚಿಕೊಂಡರು.

Aug 29, 2022, 12:05 pm IST

ಬಲಗೈ ವೇಗಿ ಭುವನೇಶ್ವರ್ ಕುಮಾರ್ ಅವರ ನಾಲ್ಕು ವಿಕೆಟ್ ಗಳಿಕೆಯು ಭಾರತೀಯ ಬೌಲರ್‌ನಿಂದ ಹೊಸ ಟಿ20 ಕ್ರಿಕೆಟ್ ದಾಖಲೆಯನ್ನು ಬರೆಯಿತು. ಏಕೆಂದರೆ ಇದು ಪಾಕಿಸ್ತಾನದ ವಿರುದ್ಧ ತಂಡಕ್ಕೆ ಇದುವರೆಗಿನ ಅತ್ಯುತ್ತಮ ಅಂಕಿಅಂಶವಾಗಿದೆ. ಅವರು 2018ರಲ್ಲಿ ಮಿರ್‌ಪುರದಲ್ಲಿ ಹಾರ್ದಿಕ್ ಪಾಂಡ್ಯ ಅವರ 3/8 ದಾಖಲೆಯನ್ನು ಮೀರಿಸಿದರು.

Aug 29, 2022, 11:43 am IST

ಮೊದಲು ಬ್ಯಾಟಿಂಗ್ ಮಾಡಿದ ಎದುರಾಳಿ ಪಾಕಿಸ್ತಾನ ತಂಡ 19.5 ಓವರ್‌ಗಳಲ್ಲಿ 147ಕ್ಕೆ ಆಲೌಟ್ ಆಯಿತು. ಅನುಭವಿ ಸೀಮರ್ ಭುವನೇಶ್ವರ್ ಕುಮಾರ್ ಅವರ ನಾಲ್ಕು ಓವರ್‌ಗಳಲ್ಲಿ 4-26 ಅಂಕಿಗಳೊಂದಿಗೆ ಮರಳಿದರು. ಇನಿಂಗ್ಸ್‌ನ ಮೂರನೇ ಓವರ್‌ನಲ್ಲಿ ಪಾಕಿಸ್ತಾನದ ನಾಯಕ ಬಾಬರ್ ಅಜಂ ಅವರ ಪ್ರಮುಖ ವಿಕೆಟ್ ಪಡೆದು ಪಂದ್ಯದ ದಿಕ್ಕು ಬದಲಿಸಿದರು. ನಂತರ 148 ರನ್‌ಗಳ ಮೊತ್ತ ಬೆನ್ನತ್ತಿದ ಭಾರತ 19.4 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 148 ರನ್ ಗಳಿಸಿ ಗೆಲುವು ಸಾಧಿಸಿದರು.

Aug 29, 2022, 10:56 am IST

ಭಾನುವಾರ, ಆಗಸ್ಟ್ 28ರಂದು ದುಬೈನಲ್ಲಿ ನಡೆದ ಏಷ್ಯಾ ಕಪ್ 2022ರ ರೋಚಕ ಹಣಾಹಣಿಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತ 5 ವಿಕೆಟ್‌ಗಳ ಜಯ ಸಾಧಿಸಿತು. ಭಾರತದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಮೇಲೆ ತಾನು ಪ್ರಭಾವಿತನಾಗಿದ್ದೇನೆ ಎಂದು ಪಾಕಿಸ್ತಾನದ ಮಾಜಿ ನಾಯಕ ವಾಸಿಂ ಅಕ್ರಮ್ ಹೇಳಿದ್ದಾರೆ.

Aug 29, 2022, 10:14 am IST

ಟೀಂ ಇಂಡಿಯಾ ನಡೆದುಕೊಂಡ ರೀತಿ ನಮ್ಮ ಹೃದಯ ತಟ್ಟಿದೆ: ಬಾಬರ್ ಅಜಮ್

ದುಬೈನಲ್ಲಿ ನಡೆಯುತ್ತಿರುವ ಏಷ್ಯಾಕಪ್ 2022 ಟೂರ್ನಿಯಲ್ಲಿ ಭಾರತ-ಪಾಕಿಸ್ತಾನ ಎರಡನೇ ಪಂದ್ಯದಲ್ಲಿ ಮುಖಾಮುಖಿಯಾಗಿದ್ದು, ಪಂದ್ಯಕ್ಕೂ ಮುನ್ನ ನಡೆದ ಅಭ್ಯಾಸದ ವೇಳೆಯಲ್ಲಿ ಟೀಂ ಇಂಡಿಯಾ ಆಟಗಾರರ ಗೌರವಪೂರ್ವ ನಡವಳಿಕೆ ಕುರಿತು ಪಾಕ್‌ ನಾಯಕ ಬಾಬರ್ ಅಜಮ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Aug 29, 2022, 10:07 am IST

ಸಾಂಪ್ರದಾಯಿಕ ಬದ್ಧ ಎದುರಾಳಿ ಪಾಕಿಸ್ತಾನ ತಂಡದ ವಿರುದ್ಧ ಭಾರತದ ಗೆಲುವಿಗೆ ಇಡೀ ರಾಷ್ಟ್ರವು ಸಂತೋಷಪಡುತ್ತಿದೆ. ಭಾನುವಾರ (ಆಗಸ್ಟ್ 28) ಏಷ್ಯಾ ಕಪ್ 2022ರಲ್ಲಿ ತಮ್ಮ ಆರಂಭಿಕ ಪಂದ್ಯದಲ್ಲಿ 5 ವಿಕೆಟ್‌ಗಳ ಜಯವನ್ನು ದಾಖಲಿಸಿದ್ದಕ್ಕಾಗಿ ರೋಹಿತ್ ಶರ್ಮಾ ನಾಯಕತ್ವದ ತಂಡವನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದು, ಭಾರತ ತಂಡವು ಅತ್ಯುತ್ತಮ ಕೌಶಲ್ಯ ಮತ್ತು ಕೌಶಲ್ಯವನ್ನು ಪ್ರದರ್ಶಿಸುತ್ತಿದೆ ಎಂದು ಪ್ರಧಾನಿ ಮೋದಿ ಶ್ಲಾಘಿಸಿದರು.

Aug 28, 2022, 11:42 pm IST

ಭಾರತ ಹಾಗೂ ಪಾಕಿಸ್ತಾನ ವಿರುದ್ಧದ ರೋಚಕ ಸೆಣೆಸಾಟದಲ್ಲಿ ಭಾರತ ಅಮೋಘ ಗೆಲುವು ಸಾಧಿಸಿದೆ.

Aug 28, 2022, 11:02 pm IST

ಕೆಎಲ್ ರಾಹುಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಬಳಿಕ ಸೂರ್ಯಕುಮಾರ್ ಯಾದವ್ ಕೂಡ ಈಗ ವಿಕೆಟ್ ಕಳೆದುಕೊಂಡಿದ್ದು ಭಾರತ 89 ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡಂತಾಗಿದೆ

Aug 28, 2022, 9:45 pm IST

ಭಾರತಕ್ಕೆ ಆರಂಭಿಕ ಆಘಾತ: ಕೆಎಲ್ ರಾಹುಲ್ ವಿಕೆಟ್ ಪತನ

Aug 28, 2022, 9:31 pm IST

147 ರನ್‌ಗಳಿಗೆ ಪಾಕಿಸ್ತಾನ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡಿದೆ. ಭಾರತಕ್ಕೆ ಗೆಲ್ಲಲು 148 ರನ್‌ಗಳ ಗುರಿ ನೀಡಿದ ಪಾಕಿಸ್ತಾನ

Aug 28, 2022, 9:21 pm IST

ಭುವನೇಶ್ವರ್ ಕುಮಾರ್ ಅಮೋಘ ದಾಳಿ: ಸತತ ಎರಡು ಎಸೆತಗಳಲ್ಲಿ ಎರಡು ವಿಕೆಟ್ ಪಡೆದ ಭುವನೇಶ್ವರ್ ಕುಮಾರ್: 9ನೇ ವಿಕೆಟ್ ಕಳೆದುಕೊಂಡ ಪಾಕಿಸ್ತಾನ

Aug 28, 2022, 9:15 pm IST

ಭಾರತದ ಯುವ ವೇಗಿ ಅರ್ಷದೀಪ್‌ ಸಿಂಗ್ ಕೂಡ ತಮ್ಮ ಖಾತೆಗೆ ವಿಕೆಟ್ ಸೇರಿಸಿಕೊಂಡಿದ್ದಾರೆ. ಪಾಕಿಸ್ತಾನ 7 ವಿಕೆಟ್ ಕಳೆದುಕೊಂಡಿದೆ

Aug 28, 2022, 9:09 pm IST

ಆರನೇ ವಿಕೆಟ್ ಕಳೆದುಕೊಂಡ ಪಾಕಿಸ್ತಾನ. 9 ರನ್‌ಗಳಿಸಿ ಭುವನೇಶ್ವರ್ ಕುಮಾರ್‌ಗೆ ವಿಕೆಟ್ ಒಪ್ಪಿಸಿದ ಆಸಿಫ್ ಅಲಿ

Aug 28, 2022, 8:57 pm IST

ಮೂರನೇ ವಿಕೆಟ್ ಪಡೆದ ಹಾರ್ದಿಕ್ ಪಾಂಡ್ಯ: ಪಂದ್ಯದಲ್ಲಿ ಸಂಪೂರ್ಣ ಹಿಡಿತ ಸಾಧಿಸಿರುವ ಭಾರತ: ಪಾಕಿಸ್ತಾನದ ಐದನೇ ವಿಕೆಟ್ ಪತನ

Aug 28, 2022, 8:41 pm IST

ಭಾರತಕ್ಕೆ ಮೂರನೇ ಬ್ರೇಕ್ ನೀಡಿದ ಹಾರ್ದಿಕ್ ಪಾಂಡ್ಯ. ಇಫ್ತಿಕಾರ್ ಅಹ್ಮದ್ ಅವರನ್ನು ಶಾರ್ಟ್ ಬಾಲ್ ಎಸೆತದಲ್ಲಿ ಕ್ಯಾಚ್ ನೀಡಿ ನಿರ್ಗಮಿಸುವಂತೆ ಮಾಡಿದ್ದಾರೆ ಪಾಂಡ್ಯ.

Story first published: Monday, September 12, 2022, 0:00 [IST]
Other articles published on Sep 12, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+