ಏಷ್ಯಾ ಕಪ್ 2022: ಪಾಕಿಸ್ತಾನಕ್ಕೆ ಆಘಾತ; ಟೂರ್ನಿಯಿಂದ ಹೊರಬಿದ್ದ ವೇಗಿ ಶಾಹೀನ್ ಅಫ್ರಿದಿ!

ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಆಘಾತಕಾರಿ ಸುದ್ದಿಯೊಂದು ಹೊರಬಂದಿದೆ. ಪಾಕಿಸ್ತಾನ ತಂಡದ ಪ್ರಮುಖ ವೇಗದ ಬೌಲರ್, ಪ್ರತಿಭಾನ್ವಿತ ಆಟಗಾರ ಶಾಹೀನ್ ಅಫ್ರಿದಿ ಗಾಯದ ಕಾರಣದಿಂದಾಗಿ ಏಷ್ಯಾ ಕಪ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಕಳೆದ ಕೆಲ ಸಮಯಗಳಿಂದ ಗಾಯದಿಂದ ಬಳಲುತ್ತಿರುವ ಅವರು ಏಷ್ಯಾ ಕಪ್ ವೇಳೆಗೆ ಚೇತರಿಸಿಕೊಳ್ಳುವ ನಿರೀಕ್ಷೆಯಿತ್ತು. ಆದರೆ ಶಾಹೀನ್ ಶಾ ಅಫ್ರಿದಿ ಈ ಪ್ರತಿಷ್ಠಿತ ಟೂರ್ನಿಯಿಂದ ಹೊರಬಿದ್ದಿರುವುದು ಈಗ ಅಧಿಕೃತವಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ಪರವಾಗಿ ಅದ್ಭುತ ಪ್ರದರ್ಶನ ನಿಡುತ್ತಿರುವ ಶಾಹೀನ್ ಅಫ್ರಿದಿ ತಂಡದ ಬೌಲಿಂಗ್ ವಿಭಾಗದ ನೇತೃತ್ವದನ್ನು ಕೂಡ ವಹಿಸಿಕೊಳ್ಳುತ್ತಿದ್ದರು. ಆದರೆ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಫೀಲ್ಡಿಂಗ್ ವೇಳೆ ಶಾಹೀನ್ ಶಾ ಅಫ್ರಿದಿ ಮೊಣಕಾಲಿನ ಗಾಯಕ್ಕೆ ಒಳಗಾಗಿದ್ದರು. ಇದೇ ಕಾರಣದಿಂದಾಗಿ ಏಷ್ಯಾ ಕಪ್‌ನಿಮದ ಕೂಡ ತಪ್ಪಿಸಿಕೊಳ್ಳುವ ಸಂದರ್ಭವುಂಟಾಗಿದೆ.

ಆರು ವಾರಗಳ ವಿಶ್ರಾಂತಿ
ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ವೈದ್ಯಕೀಯ ಸಲಹೆಗಳ ಸಮಿತಿ ಮತ್ತು ವೈದ್ಯರು ಶಾಹೀನ್ ಶಾಗೆ ಆರು ವಾರಗಳ ವಿಶ್ರಾಂತಿಗೆ ಸಲಹೆ ನಿಡಿದ್ದಾರೆ ಎನ್ನಲಾಗಿದೆ. ಯುವ ವೇಗಿಯ ಸ್ಕ್ವಾನಿಂಗ್ ವರದಿಗಳನ್ನು ಆಧರಿಸಿ ಈ ಸೂಚನೆಯನ್ನು ನೀಡಲಾಗಿದೆ. ಹೀಗಾಗಿ ಶಾಹೀನ್ ಅಫ್ರಿದಿ ಕೇವಲ ಏಷ್ಯಾ ಕಪ್‌ಗೆ ಮಾತ್ರವಲ್ಲ, ಮುಂದಿನ ತಿಂಗಳು ತವರಿನಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಐತಿಹಾಸಿಕ ಸರಣಿಯಿಂದಲೂ ಶಾಹೀನ್ ಅಫ್ರಿದಿ ಹೊರಗುಳಿಯುವುದು ಬಹುತೇಕ ಖಚಿತವಾಗಿದೆ.

ಅಕ್ಟೋಬರ್‌ಗೆ ಮರಳುವ ನಿರೀಕ್ಷೆ
ಇನ್ನು ಶಾಹೀನ್ ಅಫ್ರಿದಿಯ ಗಾಯದ ಬಗ್ಗೆ ಪಿಸಿಬಿಯ ಮುಖ್ಯ ವೈದ್ಯಕೀಯ ಅಧಿಕಾರಿ ಡಾ. ನಜೀಬುಲ್ಲಾ ಸೋಮ್ರೋ 'ಕ್ರಿಕೆಟ್ ವರ್ಲ್ಡ್'ಗೆ ಪ್ರತಿಕ್ರಿಯಿಸಿದ್ದಾರೆ. "ನಾನು ಶಾಹೀನ್ ಅವರೊಂದಿಗೆ ಮಾತನಾಡಿದ್ದು ಈ ಸುದ್ದಿಯಿಂದಾಗಿ ಅವರು ಸಹಜವಾಗಿಯೇ ಬೇಸರಗೊಂಡಿದ್ದಾರೆ. ಆದರೆ ಆತನೋರ್ವ ಧೈರ್ಯಶಾಲಿ ಯುವಕನಾಗಿದ್ದು ಬಲಿಷ್ಠವಾಗಿ ಕಮ್‌ಬ್ಯಾಕ್ ಮಾಡಲಿದ್ದಾರೆ. ಅವರ ಚೇತರಿಕೆಗೆ ಹೆಚ್ಚಿನ ಕಾಲಾವಕಾಶ ಬೆಕಾಗಿದೆ ಎಂಬುದು ಸ್ಪಷ್ಟವಾಗಿದೆ. ಅಕ್ಟೋಬರ್ ವೇಳೆಗೆ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಅವರು ಮರಳುವ ಸಾಧ್ಯತೆಯಿದೆ" ಎಂದಿದ್ದಾರೆ.

ಕಳೆದ ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಮಿಂಚಿದ್ದ ಶಾಹೀನ್
ಕಳೆದ ವಿಶ್ವಕಪ್‌ನಲ್ಲಿ ಸೂಪರ್ 12 ಹಂತದಲ್ಲಿ ಪಾಕಿಸ್ತಾನ ತಂಡವನ್ನು ಭಾರತ ಎದುರಿಸಿದ್ದಾಗ ಭಾರತ ತಂಡಕ್ಕೆ ಆರಂಭದಲ್ಲಿಯೇ ಆಘಾತ ನೀಡಿದ್ದರು ಶಾಹೀನ್ ಶಾ ಅಫ್ರಿದಿ. ಭಾರತ ತಂಡದ ಅಗ್ರ ಕ್ರಮಾಂಕದ ಮೂವರು ಆಟಗಾರಿಗೆ ಫೆವಿಲಿಯನ್‌ಗೆ ದಾರಿ ತೋರಿಸುವ ಮೂಲಕ ಆಘಾತ ನೀಡಿದ್ದರು. ಕೆಎಲ್ ರಾಹುಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಈ ಮೂವರು ಕೂಡ ಶಾಹೀನ್ ಅಫ್ರಿದಿಗೆ ವಿಕೆಟ್ ಒಪ್ಪಿಸಿ ಫೆವಿಲಿಯನ್‌ಗೆ ಸೇರಿಕೊಂಡಿದ್ದರು. ಇದರ ಪರಿಣಾಮವಾಗಿ ಭಾರತ ನಿಗದಿತ 20 ಓವರ್‌ಗಳಲ್ಲಿ 152 ರನ್‌ಗಳ ಸಾಧಾರಣ ಗುರಿಯನ್ನು ನೀಡಿತ್ತು. ನಾಲ್ಕು ಓವರ್‌ಗಳ ಬೌಲಿಂಗ್‌ನಲ್ಲಿ ಶಾಹಿನ್ 31 ರನ್ ನೀಡಿ 3 ವಿಕೆಟ್ ಸಂಪಾದಿಸಿದ್ದರು.

ಭಾರತ ತಂಡದಲ್ಲಿಯೂ ಪ್ರಮುಖ ವೇಗಿ ಅಲಭ್ಯ
ಇತ್ತ ಭಾರತ ತಂಡ ಕೂಡ ಈ ಬಾರಿಯ ಏಷ್ಯಾ ಕಪ್‌ಗೆ ತಂಡದ ಪ್ರಮುಖ ವೇಗಿಯ ಗೈರಿನಲ್ಲಿ ಕಣಕ್ಕಿಳಿಯುತ್ತಿದೆ. ತಂಡದ ಪ್ರಮುಖ ಬೌಲಿಂಗ್ ಅಸ್ತ್ರ ಜಸ್ಪ್ರೀತ್ ಬೂಮ್ರಾ ಗಾಯಕ್ಕೆ ಒಳಗಾಗಿದ್ದು ಏಷ್ಯಾ ಕಪ್‌ನಿಂದ ಹೊರಗುಳಿದಿದ್ದಾರೆ. ಇನ್ನು ಹರ್ಷಲ್ ಪಟೇಲ್ ಕೂಡ ಗಾಯಗೊಂಡಿದ್ದು ಇವರು ಕೂಡ ಆಯ್ಕೆಯಾಗಿಲ್ಲ. ಭುವನೇಶ್ವರ್ ಕುಮಾರ್, ಅರ್ಷ್‌ದೀಪ್ ಸಿಂಗ್ ಹಾಗೂ ಆವೇಶ್ ಖಾನ್ ಭಾರತ ತಂಡದಲ್ಲಿ ಆಯ್ಕೆಯಾಗಿರುವ ವೇಗದ ಬೌಲರ್‌ಗಳಾಗಿದ್ದಾರೆ. ದೀಪಕ್ ಚಾಹರ್ ಅವರನ್ನು ಮೀಸರು ಆಟಗಾರನನ್ನಾಗಿ ಆಯ್ಕೆ ಮಾಡಲಾಗಿದೆ.
ಏಷ್ಯಾ ಕಪ್‌ಗೆ ಆಯ್ಕೆಯಾಗಿರುವ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್, ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಆರ್ ಅಶ್ವಿನ್, ಯುಜ್ವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಶ್‌ದೀಪ್ ಸಿಂಗ್, ಆವೇಶ್ ಖಾನ್.
ಸ್ಟ್ಯಾಂಡ್‌ಬೈ: ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ದೀಪಕ್ ಚಹಾರ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications