Asia Cup 2022: ಪಾಕಿಸ್ತಾನ ವಿರುದ್ಧದ ಸೋಲಿಗೆ ಇದೇ ಕಾರಣ ಎಂದ ವೀರೇಂದ್ರ ಸೆಹ್ವಾಗ್
ಏಷ್ಯಾಕಪ್‌ನ ಸೂಪರ್ 4 ಹಂತದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಸೋತಿದೆ. ಫೈನಲ್ ಪ್ರವೇಶಿಸಬೇಕಾದರೆ ಟೀಂ ಇಂಡಿಯಾ ಉಳಿದ ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. 182 ರನ್‌ಗಳ ಗುರಿ ನೀಡಿದರು, ಭಾರತ ತಂಡ ಸೋತಿದ್ಯಾಕೆ ಎನ್ನುವ ವಿಶ್ಲೇಷಣೆಗಳು ಅಂದಿನಿಂದ ನಡೆಯುತ್ತಲೇ ಇದೆ.
ಈಗ ಮಾಜಿ ಕ್ರಿಕೆಟರ್ ವಿರೇಂದ್ರ ಸೆಹ್ವಾಗ್ ಭಾರತ-ಪಾಕಿಸ್ತಾನ ಪಂದ್ಯದ ಬಗ್ಗೆ ಮಾತನಾಡಿದ್ದಾರೆ. ಅರ್ಷದೀಪ್ ಸಿಂಗ್ ಕ್ಯಾಚ್ ಕೈಬಿಟ್ಟದ್ದು ಮತ್ತು ಭಾರತ ಬೌಲರ್ ಗಳು ಹೆಚ್ಚಿನ ವೈಡ್‌ಗಳನ್ನು ಎಸೆದದ್ದೇ ತಂಡದ ಸೋಲಿಗೆ ಪ್ರಮುಖ ಕಾರಣ ಎಂದು ವಿರೇಂದ್ರ ಸೆಹ್ವಾಗ್ ಹೇಳಿದ್ದಾರೆ.
182 ರನ್‌ಗಳ ಗುರಿ ಬೆನ್ನತ್ತಿದ್ದ ಪಾಕಿಸ್ತಾನ ಆರಂಭಿಕ ಆಘಾತದ ನಂತರ ಚೇತರಿಸಿಕೊಂಡು ಉತ್ತಮ ಆಟವಾಡಿತು. ರವಿ ಬಿಷ್ಣೋಯ್ ಎಸೆತದಲ್ಲಿ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಔಟಾಗುವ ಮೂಲಕ ನಿರಾಸೆ ಅನುಭವಿಸಿದರು. ನಂತರ ಬಂದ ಫಖಾರ್ ಜಮಾನ್ ಕೂಡ ಬೇಗನೆ ಔಟಾದರು, ಆದರೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿಪಡೆದ ಮೊಹಮ್ಮದ್ ನವಾಜ್ 20 ಎಸೆತಗಳಲ್ಲಿ 42 ರನ್ ಗಳಿಸಿ ಪಾಕಿಸ್ತಾನದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಗೆಲುವಿನ ಅವಕಾಶ ಕೈ ಚೆಲ್ಲಿದ ಭಾರತ
ನವಾಜ್ ಔಟಾದ ನಂತರ ಟೀಂ ಇಂಡಿಯಾಗೆ ಮತ್ತೆ ಗೆಲುವಿನ ಅವಕಾಶ ಸಿಕ್ಕಿತ್ತು, ಆದರೆ ಅಂತಿಮ ಓವರ್ ಗಳಲ್ಲಿ ಹೆಚ್ಚು ರನ್ ಬಿಟ್ಟುಕೊಟ್ಟದ್ದು, ಕಳಪೆ ಫೀಲ್ಡಿಂಗ್ ಭಾರತ ತಂಡಕ್ಕೆ ದುಬಾರಿಯಾಯಿತು.
18ನೇ ಓವರ್ ನಲ್ಲಿ ರವಿ ಬಿಷ್ಣೋಯ್ ಬೌಲಿಂಗ್‌ನಲ್ಲಿ ಅಸಿಫ್ ಅಲಿ ನೀಡಿದ ಸುಲಭದ ಕ್ಯಾಚನ್ನು ಅರ್ಷದೀಪ್ ಕೈ ಚೆಲ್ಲಿದ್ದು ಭಾರತದ ಸೋಲಿಗೆ ಪ್ರಮುಖ ಕಾರಣವಾಯಿತು ಎಂದು ವೀರೇಂದ್ರ ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ. ಜೀವದಾನ ಪಡೆದ ಅಸಿಫ್ ಅಲಿ 8 ಎಸೆತಗಳಲ್ಲಿ 16 ರನ್ ಗಳಿಸಿ ಪಾಕಿಸ್ತಾನದ ಗೆಲುವು ಸುಲಭಗೊಳಿಸಿದರು.
ಏಷ್ಯಾ ಕಪ್: ಶ್ರೀಲಂಕಾ ವಿರುದ್ಧದ ಮಹತ್ವದ ಕದನಕ್ಕೆ ರೋಹಿತ್ ಪಡೆ ಸಜ್ಜು: ತಪ್ಪು ತಿದ್ದಿಕೊಳ್ಳುತ್ತಾ ಭಾರತ!

ವೈಡ್ ಬಾಲ್ ಎಸೆದದ್ದು ಕೂಡ ಸೋಲಿಗೆ ಕಾರಣ
ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಪ್ರಕಾರ ಭಾರತದ ಬೌಲರ್ ಗಳು ಎಸೆದ ವೈಡ್ ಬಾಲ್‌ಗಳು ಕೂಡ ಸೋಲಿಗೆ ಪ್ರಮುಖ ಕಾರಣವಾಗಿದೆ. ಭಾರತದ ಬೌಲರ್ ಗಳು ಒಟ್ಟು 8 ರನ್‌ಗಳನ್ನು ಹೆಚ್ಚುವರಿಯಾಗಿ ಬಿಟ್ಟುಕೊಟ್ಟರು, ಅದರಲ್ಲಿ 6 ವೈಡ್, 2 ಲೆಗ್‌ಬೈಗಳು ಸೇರಿವೆ. ಆದರೆ ಈ 6 ವೈಡ್‌ಬಾಲಗಳನ್ನು ಎಸೆದದ್ದು 17 ರಿಂದ 19ನೇ ಓವರ್ ಗಳಲ್ಲಿ.
ಒತ್ತಡದಲ್ಲಿದ್ದ ಭಾರತ ಬೌಲರ್ ಗಳು ಮೂರು ಓವರ್ ಗಳಲ್ಲಿ ಆರು ವೈಡ್ ಎಸೆದದ್ದು ಸೋಲಿಗೆ ಕಾರಣ ಎಂದು ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ, 18ನೇ ಓವರ್ ನಲ್ಲಿ ರವಿ ಬಿಷ್ಣೋಯ್ 3 ವೈಡ್ ಎಸೆದರೆ, 19ನೇ ಓವರ್ ನಲ್ಲಿ ಭುವನೇಶ್ವರ್ ಕುಮಾರ್ ಎರಡು ವೈಡ್ ಎಸೆದರು, 17ನೇ ಓವರ್ ನಲ್ಲಿ ಹಾರ್ದಿಕ್ ಪಾಂಡ್ಯ 1 ವೈಡ್ ಎಸೆದಿದ್ದರು.

ಪಾಕಿಸ್ತಾನಕ್ಕೆ ಉತ್ತಮ ಪ್ರದರ್ಶನ ನೀಡಿತು
ಭಾರತ ತಂಡದ ವಿರುದ್ಧ ಪಾಕಿಸ್ತಾನ ತಂಡ ಉತ್ತಮ ಪ್ರದರ್ಶನ ನೀಡಿತು ಎಂದು ಸೆಹ್ವಾಗ್ ಹೇಳಿದ್ದಾರೆ. ಇನ್ನಿಂಗ್ಸ್ ಕೊನೆಯವರೆಗೂ ಪಾಕಿಸ್ತಾನ ಬ್ಯಾಟರ್ ಗಳು ಉತ್ತಮ ಪ್ರದರ್ಶನ ನೀಡಿದರು. ಒತ್ತಡದಲ್ಲೂ ತಾಳ್ಮೆಯಿಂದ ರನ್ ಗಳಿಸಿದ್ದು ಪಾಕಿಸ್ತಾನ ಗೆಲುವಿಗೆ ಕಾರಣವಾಯಿತು ಎಂದಿದ್ದಾರೆ.
ರಿಜ್ವಾನ್ ತಾಳ್ಮೆಯಿಂದ ಒಂದು ಕಡೆ ರನ್ ಕಲೆಹಾಕುತ್ತಿದ್ದರೆ ಮತ್ತೊಂದು ಬದಿಯಿಂದ ಮೊಹಮ್ಮದ್ ನವಾಜ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಬೇಕಾದ ರನ್‌ರೇಟ್‌ಗೆ ತಕ್ಕದಾಗಿಯೇ ಬ್ಯಾಟ್ ಮಾಡಿದ ಇಬ್ಬರೂ ಭಾರತದ ಬೌಲರ್ ಗಳ ಮೇಲೆ ಹೆಚ್ಚಿನ ಒತ್ತಡ ಹಾಕಿದರು. ಮೊಹಮ್ಮದ್ ರಿಜ್ವಾನ್ 51 ಎಸೆತಗಳಲ್ಲಿ 71 ರನ್ ಗಳಿಸಿದ್ದರು.

ಉಳಿದ ಎರಡು ಪಂದ್ಯ ಗೆಲ್ಲಲೇ ಬೇಕು
ಭಾರತ ತಂಡ ಪಾಕಿಸ್ತಾನ ವಿರುದ್ಧ ಸೋತಿರುವುದು ಹೆಚ್ಚಿನ ಒತ್ತಡಕ್ಕೆ ಕಾರಣವಾಗಿದೆ. ಫೈನಲ್ ಹಂತಕ್ಕೆ ಪ್ರವೇಶಿಸಬೇಕಾದರೆ ಸೂಪರ್ 4 ಹಂತದಲ್ಲಿ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನದ ವಿರುದ್ಧ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.
ಈಗಾಗಲೇ ಸೂಪರ್ 4 ಹಂತದ ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನದ ವಿರುದ್ಧ ಭರ್ಜರಿ ಜಯ ಸಾಧಿಸಿರುವ ಶ್ರೀಲಂಕಾ ತನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ. ಪಾಕಿಸ್ತಾನದ ವಿರುದ್ಧ ಸೋಲನ್ನು ಮರೆತು ಗೆಲುವಿನ ರಣತಂತ್ರದೊಂದಿದೆ ಟೀಂ ಇಂಡಿಯಾ ಮೈದಾನಕ್ಕಿಳಿಯಬೇಕಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications