Asia Cup 2022: ರೋಚಕ ಪಂದ್ಯದಲ್ಲಿ ಬಾಂಗ್ಲಾದೇಶ ಮಣಿಸಿ ಸೂಪರ್ 4 ಹಂತ ತಲುಪಿದ ಶ್ರೀಲಂಕಾ

ಇಂದು (ಗುರುವಾರ, ಸೆಪ್ಟೆಂಬರ್ 1) ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳ ನಡುವಿನ ಪಂದ್ಯದಲ್ಲಿ ಶ್ರೀಲಂಕಾ ತಂಡವು 2 ವಿಕೆಟ್‌ಗಳ ರೋಚಕ ಜಯವನ್ನು ಸಾಧಿಸುವುದರ ಮೂಲಕ ಈ ಬಾರಿಯ ಏಷ್ಯಾ ಕಪ್ ಟೂರ್ನಿಯಲ್ಲಿ ಸೂಪರ್ 4 ಹಂತವನ್ನು ತಲುಪಿದೆ.
ಬಾಂಗ್ಲಾದೇಶ ವಿರುದ್ಧದ ಈ ಗೆಲುವಿನ ಮೂಲಕ ಗ್ರೂಪ್ ಹಂತದಲ್ಲಿನ ತನ್ನ 2 ಪಂದ್ಯಗಳಲ್ಲಿ ಒಂದು ಸೋಲು ಮತ್ತು ಜಯ ಸಾಧಿಸಿರುವ ಶ್ರೀಲಂಕಾ ಬಿ ಗುಂಪಿನ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಿಯಾಗಿ ಸೂಪರ್ 4 ಸುತ್ತಿಗೆ ಲಗ್ಗೆ ಇಟ್ಟಿದೆ.
ಇನ್ನು ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 183 ರನ್ ಕಲೆಹಾಕಿ ಶ್ರೀಲಂಕಾ ತಂಡಕ್ಕೆ ಗೆಲ್ಲಲು 184 ರನ್‌ಗಳ ಸವಾಲಿನ ಗುರಿ ನೀಡಿತ್ತು. ಅತ್ತ ಈ ಗುರಿಯನ್ನು ಬೆನ್ನತ್ತುವಲ್ಲಿ ಸಫಲವಾದ ಶ್ರೀಲಂಕಾ 19.2 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 184 ರನ್ ಕಲೆ ಹಾಕಿ 2 ವಿಕೆಟ್‌ಗಳ ರೋಚಕ ದಾಖಲಿಸಿತು.

ಶ್ರೀಲಂಕಾ ಪರ ವಿಕೆಟ್ ಕೀಪರ್- ಬ್ಯಾಟ್ಸ್‌ಮನ್ ಕುಸಲ್ ಮೆಂಡೀಸ್ ಮತ್ತು ನಾಯಕ ದಸುನ್ ಶನಕ ಕ್ರಮವಾಗಿ 60, 45 ರನ್‌ಗಳನ್ನು ಬಾರಿಸಿದರು. ಕೊನೆಯಲ್ಲಿ ಚಮಿಕಾ ಕರುಣಾರತ್ನೆ ಮತ್ತು ಅಸಿತಾ ಫರ್ನಾಂಡೊ ಗೆಲುವಿನ ಗಡಿ ದಾಟಿಸಿದರು.
ಬಾಂಗ್ಲಾದೇಶ ಪರ ಎಬಾಡೋಟ್ ಹೊಸೈನ್ ನಾಲ್ಕು ಓವರ್‌ಗಳಲ್ಲಿ 51 ರನ್ ನೀಡಿ 3 ವಿಕೆಟ್ ಪಡೆದರು. ತಸ್ಕಿನ್ ಅಹ್ಮದ್ ನಾಲ್ಕು ಓವರ್‌ಗಳಲ್ಲಿ 24 ರನ್ ನೀಡಿ 2 ವಿಕೆಟ್ ಪಡೆದರು. ಉಳಿದಂತೆ ಮುಸ್ತಾಫಿಜುರ್ ರೆಹಮಾನ್, ಮಹೇದಿ ಹಸನ್ ತಲಾ ಒಂದೊಂದು ವಿಕೆಟ್ ಪಡೆದರು.
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಬಾಂಗ್ಲಾದೇಶ, ಅಫೀಫ್ ಹೊಸೈನ್ ಮತ್ತು ಮೆಹಿದಿ ಹಸನ್ ಮಿರಾಜ್ ಅವರು 39 ಮತ್ತು 38 ರನ್‌ಗಳ ಕೊಡಗೆ ನೀಡಿದ ಕಾರಣ ಏಷ್ಯಾ ಕಪ್ ಬಿ ಗುಂಪಿನ ಪಂದ್ಯದಲ್ಲಿ ಬಾಂಗ್ಲಾದೇಶವು ಶ್ರೀಲಂಕಾ ವಿರುದ್ಧ ಏಳು ವಿಕೆಟ್‌ಗೆ 183 ರನ್ ಗಳಿಸುವಲ್ಲಿ ಯಶಸ್ವಿಯಾಯಿತು.
ಬಾಂಗ್ಲಾದೇಶ 4 ವಿಕೆಟ್‌ಗೆ 87 ರನ್‌ಗೆ ತತ್ತರಿಸುತ್ತಿರುವಾಗ ಅಫೀಫ್ ಹೊಸೈನ್ ಅವರು ಮಹಮ್ಮದುಲ್ಲಾ ಅವರೊಂದಿಗೆ 57 ರನ್ ಜೊತೆಯಾಟ ನಡೆಸಿದರು. ಇನ್ನೊಂದು ತುದಿಯಲ್ಲಿ ವಿಕೆಟ್‌ಗಳು ಪತನಗೊಂಡರೂ ಮೆಹಿದಿ ಹಸನ್ ಮಿರಾಜ್ ಬಾಂಗ್ಲಾದೇಶಕ್ಕೆ ಉತ್ತಮ ಆರಂಭ ನೀಡಿದರು. ಮಹಮ್ಮದುಲ್ಲಾ 27 ರನ್ ಗಳಿಸಿದರೆ, ಮೊಸಾದೆಕ್ ಹೊಸೈನ್ 24 ರನ್ ಗಳಿಸಿದರು.
ಚೊಚ್ಚಲ ಪಂದ್ಯ ಆಡಿದ ಅಸಿತಾ ಫೆರ್ನಾಂಡೋ ಅವರು ಶಬ್ಬಿರ್ ರೆಹಮಾನ್ ಅವರನ್ನು ಔಟ್ ಮಾಡುವ ಮೂಲಕ ಶ್ರೀಲಂಕಾಕ್ಕೆ ಮೊದಲ ಮುನ್ನಡೆಯನ್ನು ಒದಗಿಸಿದ್ದರು. ಐದು ರನ್ ಗಳಿಸಿದ ನಂತರ ಬ್ಯಾಟರ್ ಶಬ್ಬಿರ್ ರೆಹಮಾನ್ ನಿರ್ಗಮಿಸಿದರು.
ನಾಲ್ಕು ರನ್ ಗಳಿಸಿದ್ದಾಗ ಕುಸಾಲ್ ಮೆಂಡಿಸ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದ ಮುಶ್ಫಿಕರ್ ರಹೀಮ್ ಅವರನ್ನು ಚಮಿಕಾ ಕರುಣಾರತ್ನೆ ಔಟ್ ಮಾಡಿದರು. ಇದಕ್ಕೂ ಮುನ್ನ 38 ರನ್ ಗಳಿಸಿ ಅಪಾಯಕಾರಿಯಾಗಿದ್ದ ಮೆಹಿದಿ ಹಸನ್ ಮಿರಾಜ್ ಅವರನ್ನು ವನಿಂದು ಹಸರಂಗ ಔಟ್ ಮಾಡಿದರು. ಪ್ರಸ್ತುತ, 9.0 ಓವರ್‌ಗಳ ನಂತರ ಬಾಂಗ್ಲಾದೇಶ ಸ್ಕೋರ್ 70/3 ಆಗಿತ್ತು.
ಏಷ್ಯಾಕಪ್ ಬಿ ಗುಂಪಿನ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಬಾಂಗ್ಲಾದೇಶ ನಾಲ್ಕನೇ ವಿಕೆಟ್ ಕಳೆದುಕೊಂಡಿದೆ. 24 ರನ್ ಗಳಿಸಿದ್ದಾಗ ಬಾಂಗ್ಲಾದೇಶದ ನಾಯಕ ಶಕಿನ್ ಅಲ್ ಹಸನ್ ಅವರನ್ನು ಮಹೀಶ್ ತೀಕ್ಷಣ ಔಟ್ ಮಾಡಿದರು.
ಇನ್ನು ಬೌಲಿಂಗ್‌ನಲ್ಲಿ ಶ್ರೀಲಂಕಾದ ಚಮಿಕಾ ಕರುಣಾರತ್ನೆ ನಾಲ್ಕು ಓವರ್‌ಗಳಲ್ಲಿ 32 ರನ್ ನೀಡಿ 2 ವಿಕೆಟ್ ಪಡೆದರು. ವನಿಂದು ಹಸರಂಗಾ ನಾಲ್ಕು ಓವರ್‌ಗಳಲ್ಲಿ 41 ರನ್ ನೀಡಿ 2 ವಿಕೆಟ್ ಪಡೆದರು. ಮಹೀಶ್ ತೀಕ್ಷಣ, ದಿಲ್ಶನ್ ಮಧುಶಂಕ ಮತ್ತು ಅಸೀತಾ ಫರ್ನಾಂಡೊ ತಲಾ ಒಂದು ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications