Asia cup 2022: ಬಾಂಗ್ಲಾ ವಿರುದ್ಧ ರಹಸ್ಯ ಕೋಡ್ ಅನ್ನು ಬಳಸಿದ ಶ್ರೀಲಂಕಾದ ಹೆಡ್ ಕೋಚ್

ಏಷ್ಯಾಕಪ್ 2022ರ ಗ್ರೂಪ್ ಬಿ ಹಂತದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾ ರೋಚಕವಾಗಿ ಪಂದ್ಯ ಗೆಲ್ಲುವ ಮೂಲಕ ಸೂಪರ್ 4 ಅನ್ನು ಪ್ರವೇಶಿಸಿದೆ. ಬಾಂಗ್ಲಾದೇಶ ನೀಡಿದ್ದ 184 ರನ್‌ಗಳ ಗುರಿಯನ್ನ ಬೆಂಬಿಡದೆ ಬೆನ್ನತ್ತಿದ ಲಂಕನ್ನರು, ಇನ್ನೂ 4 ಎಸೆತಗಳು ಬಾಕಿ ಇರುವಂತೆಯೇ ಪಂದ್ಯ ಜಯಿಸಿದೆ.
ಏಷ್ಯನ್ ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಶ್ರೀಲಂಕಾ ತಂಡ ಹೊಸ ತಂತ್ರವನ್ನು ಅಳವಡಿಸಿಕೊಂಡಿದೆ. ಈ ಹಿಂದೆ ಸಹ ಆಟಗಾರರು ತಪ್ಪು ಮಾಡಿದರೆ ಕೋಚ್‌ಗಳು ಆಟಗಾರರಿಗೆ ಡ್ರೆಸ್ಸಿಂಗ್ ರೂಂನಿಂದಲೇ ಇಲ್ಲವೇ ಡಗೌಟ್‌ನಿಂದಲೇ ಸಂದೇಶ ನೀಡುತ್ತಿದ್ದರು.

ಹೊಸ ಮಾದರಿಯಲ್ಲಿ ಸಂದೇಶ ನೀಡುವ ಕ್ರಿಸ್ ಸಿಲ್ವರ್‌ವುಡ್
ಟಿ20 ಕ್ರಿಕೆಟ್‌ನಲ್ಲಿ ಆಟದ ವಾತಾವರಣವು ಓವರ್‌ನಿಂದ ಓವರ್‌ಗೆ ಬದಲಾಗುತ್ತದೆ. ಈ ಹಿಂದೆ ಡ್ರಿಂಕ್ಸ್ ಬ್ರೇಕ್‌ನಲ್ಲಿ, ಇಲ್ಲವೆ ನೀರಿನ ಬಾಟಲಿಗಳೊಂದಿಗೆ ಹೆಚ್ಚುವರಿ ಆಟಗಾರರ ಮೂಲಕ ಕ್ರೀಸ್‌ನಲ್ಲಿದ್ದ ಆಟಗಾರರಿಗೆ ಸಂದೇಶಗಳನ್ನು ತಲುಪಿಸುವ ದಿನಗಳು ಮುಗಿದಿವೆ. ಈ ಹಂತದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೊಸ ಯುಗ ಬಂದಿದೆ. ಇಂಗ್ಲೆಂಡ್ ತಂಡದ ಕೋಚ್ ಆಗಿದ್ದ ಕ್ರಿಸ್ ಸಿಲ್ವರ್ ವುಡ್ ಎರಡು ಕಾಗದದ ಮೇಲೆ ಅಕ್ಷರ ಮತ್ತು ಸಂಖ್ಯೆಯನ್ನು ಹಾಕುವ ಮೂಲಕ ಗಮನ ಸೆಳೆದಿದ್ದಾರೆ. ಈ ರಹಸ್ಯ ಪದಗಳನ್ನು ಬಳಸಿ ಕ್ಯಾಪ್ಟನ್ ಅದಕ್ಕೆ ತಕ್ಕಂತೆ ಬದಲಾವಣೆ ಮಾಡುತ್ತಾನೆ.
Asia Cup 2022: ರೋಹಿತ್ ಶರ್ಮಾ ದುರ್ಬಲವಾಗಿ ಕಾಣುತ್ತಿದ್ದಾರೆ ಎಂದ ಪಾಕ್ ಮಾಜಿ ನಾಯಕ
ಇಂಗ್ಲೆಂಡ್ ಕೋಚ್ ಆಗಿದ್ದಾಗಲೂ ಇದೇ ರೀತಿಯಲ್ಲಿ ಕೋಡ್ ಬಳಸುತ್ತಿದ್ದ ಸಿಲ್ವರ್‌ವುಡ್
ಪ್ರಸ್ತುತ, ಕ್ರಿಸ್ ಸಿಲ್ವರ್‌ವುಡ್ ಶ್ರೀಲಂಕಾದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಮೊದಲು ಇಂಗ್ಲೆಂಡ್ ಕೋಚ್ ಆಗಿದ್ದಾಗಲೂ ಇದೇ ರೀತಿಯ ತಂತ್ರಗಾರಿಕೆಯನ್ನ ಸಿಲ್ವರ್‌ವುಡ್ ಮಾಡುತ್ತಿದ್ದರು. ಹೀಗಾಗಿ ಶ್ರೀಲಂಕಾ ತಂಡಕ್ಕೂ ತಮ್ಮ ತಂತ್ರಗಾರಿಕೆಯನ್ನು ಜಾರಿಗೆ ತಂದಿದ್ದಾರೆ. ಬಾಂಗ್ಲಾದೇಶ ಬ್ಯಾಟಿಂಗ್ ಮಾಡುವಾಗ ಪೇಪರ್ ಮೇಲೆ 2 D ಎನ್ನುವ ಅಕ್ಷರಗಳು ಕಾಣುತ್ತಿತ್ತು. ಇದರ ಅರ್ಥವೇನೆಂದು ಅಭಿಮಾನಿಗಳು ಕೂಡ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಕ್ರಿಸ್ ಸಿಲ್ವರ್‌ವುಡ್ ಈ ರೀತಿಯಾಗಿ ನೀಡಿರುವ ರಹಸ್ಯ ಸಂದೇಶಗಳನೇನು ಎಂಬುದನ್ನ ಅಭಿಮಾನಿಗಳು ಡಿಕೋಡ್ ಮಾಡುತ್ತಿದ್ದಾರೆ. D5 ಎಂದು ಕರೆಯಲ್ಪಡುವ ಇದೇ ರೀತಿಯ ಕೋಟ್ ಅನ್ನು ಕ್ರಿಸ್ ಸಿಲ್ವರ್‌ವುಡ್ ಕೂಡ ಬಳಸಿದ್ದಾರೆ. ಇದೀಗ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಕ್ರಿಸ್ ಈ ರೀತಿಯಾದ ಬಳಕೆಗೆ ಕಾರಣವೇನು ಎಂಬುದನ್ನ ಹುಡುಕಲಾಗುತ್ತಿದೆ.
ರೋಚಕ ಗೆಲುವಿನ ಬಳಿಕ ಬಾಂಗ್ಲಾದೇಶವನ್ನು 'ನಾಗಿಣಿ ಡಾನ್ಸ್' ಮೂಲಕ ಕುಟುಕಿದ ಲಂಕಾ ಕ್ರಿಕೆಟರ್!

2 ವಿಕೆಟ್‌ಗಳ ರೋಚಕ ಗೆಲುವು ದಾಖಲಿಸಿದ ಶ್ರೀಲಂಕಾ
ದಸನು ಶನಕ ನೇತೃತ್ವದ ಶ್ರೀಲಂಕಾ ತಂಡವು ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 183 ರನ್ ಕಲೆಹಾಕಿ ಶ್ರೀಲಂಕಾ ತಂಡಕ್ಕೆ ಗೆಲ್ಲಲು 184 ರನ್‌ಗಳ ಸವಾಲಿನ ಗುರಿ ನೀಡಿತ್ತು. ಅತ್ತ ಈ ಗುರಿಯನ್ನು ಬೆನ್ನತ್ತುವಲ್ಲಿ ಸಫಲವಾದ ಶ್ರೀಲಂಕಾ 19.2 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 184 ರನ್ ಕಲೆ ಹಾಕಿ 2 ವಿಕೆಟ್‌ಗಳ ರೋಚಕ ದಾಖಲಿಸಿತು.
ಶ್ರೀಲಂಕಾ ಪರ ಓಪನರ್ ಕುಸಾಲ್ ಮೆಂಡೀಸ್ 37 ಎಸೆತಗಳಲ್ಲಿ 60 ರನ್ ಸಿಡಿಸಿದ್ರು. ಇವರ ಇನ್ನಿಂಗ್ಸ್‌ನಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್ ಒಳಗೊಂಡಿದ್ದವು. ಇನ್ನು ನಾಯಕ ದಸನು ಶನಕ 45, ಚಮಿಕಾ ಕರುಣರತ್ನೆ 16, ಅಸಿತಾ ಫರ್ನಾಂಡೊ 3 ಎಸೆತಗಳಲ್ಲಿ ಅಜೇಯ 10ರನ್ ಕಲೆಹಾಕಿ ತಂಡಕ್ಕೆ ಗೆಲುವು ತಂದುಕೊಟ್ಟರು. ಈ ಗೆಲುವಿನ ಮೂಲಕ ಶ್ರೀಲಂಕಾ ಶ್ರೀಲಂಕಾ ತಂಡವು ಸೂಪರ್ 4 ಪ್ರವೇಶಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications