Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪಾಕಿಸ್ತಾನದ ವಿರುದ್ಧ ತನ್ನ ಯೋಜನೆ ಬಹಿರಂಗಪಡಿಸಿದ ಸೂರ್ಯಕುಮಾರ್ ಯಾದವ್

Asia Cup 2022: Suryakumar on match against Pakistan said try to stay in my zone and play the game

ಮಧ್ಯಮ ಕ್ರಮಾಂಕದಲ್ಲಿ ಅದ್ಭುತ ಪ್ರದರ್ಶನದ ಮೂಲಕ ಮಿಂಚುತ್ತಿರುವ ಭಾರತದ ಆಟಗಾರ ಸೂರ್ಯಕುಮಾರ್ ಯಾದವ್ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಸಜ್ಜಾಗಿದ್ದಾರೆ. ಭಾನುವಾರದ ಪಂದ್ಯಕ್ಕೆ ಮುನ್ನ ಮಾತನಾಡಿದ ಸೂರ್ಯಕುಮಾರ್ ಯಾದವ್ ತನ್ನ ಯೋಜನೆಯ ಬಗ್ಗೆ ಮಾತನಾಡಿದ್ದಾರೆ. ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಯಾವ ರೀತಿಯ ಯೋಜನೆಗಳನ್ನು ಹಾಕಿಕೊಂಡಿದ್ದೇನೆ ಎಂಬುದರ ಬಗ್ಗೆ ಸೂರ್ಯಕುಮಾರ್ ಯಾದವ್ ಮಾತನಾಡಿದ್ದಾರೆ.

ಈ ಸಂದರ್ಭದಲ್ಲಿ ಸೂರ್ಯಕುಮಾರ್ ಯಾದವ್ ಪಾಕಿಸ್ತಾನದ ವಿರುದ್ಧದ ಪಂದ್ಯವನ್ನು ತಮ್ಮ ತಂಡದ ಪ್ರತಿಯೊಬ್ಬರು ಆಟಗಾರರು ಕೂಡ ಇದು ಮತ್ತೊಂದು ಪಂದ್ಯ ಎಂಬ ಭಾವನೆಯಲ್ಲಿಯೇ ಕಣಕ್ಕಿಳಿಯುವುದಾಗಿ ಹೇಳಿಕೊಂಡಿದ್ದಾರೆ. ಬಾಲ್ಯದಿಂದಲೂ ಭಾರತ ಹಾಗೂ ಪಾಕಿಸ್ತಾನ ನಡುವಿನ ಕದನವನ್ನು ಶ್ರೇಷ್ಠ ಮುಖಾಮುಖಿ ಎಂದು ಕರೆಯುತ್ತಿದ್ದು ಆದರೆ ಮೈದಾನದಲ್ಲಿ ಕಣಕ್ಕಿಳಿಯುವಾಗ ಇದು ಮತ್ತೊಂದು ಪಂದ್ಯವೆಂದು ಭಾವಿಸಿಕೊಂಡೇ ಕಣಕ್ಕಿಳಿಯುವುದಾಗಿ ಸೂರ್ಯಕುಮಾರ್ ತಿಳಿಸಿದ್ದಾರೆ.

ಇತರ ಪಂದ್ಯಗಳಂತೆಯೇ ಸಿದ್ಧತೆ

ಇತರ ಪಂದ್ಯಗಳಂತೆಯೇ ಸಿದ್ಧತೆ

ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಸಿದ್ಧತೆಯ ಬಗ್ಗೆ ಮಾತನಾಡಿದ ಸೂರ್ಯಕುಮಾರ್ ಯಾದವ್ ತಾವು ಈ ಪಂದ್ಯಕ್ಕಾಗಿ ಮೈದಾನಕ್ಕೆ ಇಳಿಯವುದಕ್ಕೂ ಮುನ್ನ ಇತರ ತಂಡಗಳ ವಿರುದ್ಧ ನಡೆಸುವ ರೀತಿಯಲ್ಲಿಯೇ ಅಭ್ಯಾಸ, ತರಬೇತಿಯನ್ನು ನಡೆಸುತ್ತೇವೆ. ಮೈದಾನದಲ್ಲಿಯೂ ಅದು ಫತಿಫಲಿಸುತ್ತದೆ. ನಾನು ಮೈದಾನಕ್ಕೆ ಇಳಿಯುವಾಗಲೂ ಅಷ್ಟೇ. ಹಾಗೆಯೇ ಇರುತ್ತದೆ. ಯಾವ ರೀತಿಯ ಪೈಪೋಟಿ ನಡೆಯುತ್ತದೆ ಎಂಬುದನ್ನು ಆಲೋಚಿಸುವುದಿಲ್ಲ ಹಾಗೂ ಹೊರಗಡೆ ಯಾವ ರೀತಿಯ ನಿರೀಕ್ಷೆಗಳು ಇರುತ್ತವೆ ಎಂಬುದರ ಬಗ್ಗೆ ಯೋಚಿಸುವುದಿಲ್ಲ. ನಾನು ನನ್ನ ವಲಯದಲ್ಲಿಯೇ ಇದ್ದು ಎಂದಿನ ಶೈಲಿಯಲ್ಲಿಯೇ ಆಡುವುದಕ್ಕೆ ಬಯಸುತ್ತೇನೆ" ಎಂದಿದ್ದಾರೆ ಸೂರ್ಯಕುಮಾರ್ ಯಾದವ್.

ಹಾಂಕಾಂಗ್ ವಿರುದ್ಧ ಅಬ್ಬರಿಸಿದ್ದ ಸೂರ್ಯ

ಹಾಂಕಾಂಗ್ ವಿರುದ್ಧ ಅಬ್ಬರಿಸಿದ್ದ ಸೂರ್ಯ

ಭಾರತದ ಮಧ್ಯಮ ಕ್ರಮಾಂಕದ ಪ್ರಮುಖ ಆಟಗಾರ ಸೂರ್ಯಕುಮಾರ್ ಯಾದವ್ ಹಾಂಕಾಂಗ್ ವಿರುದ್ಧದ ಪಂದ್ಯದಲ್ಲಿ ಸ್ಪೋಟಕ ಪ್ರದರ್ಶನ ನೀಡಿ ಮಿಂಚಿದ್ದಾರೆ. ಕೇವಲ 26 ಎಸೆತಗಳನ್ನು ಎದುರಿಸಿದ ಸೂರ್ಯ 68 ರನ್‌ಗಳನ್ನು ಸಿಡಿಸಿ ಮಿಂಚಿದ್ದಾರೆ. ಮತ್ತೊಂದು ತುದಿಯಲ್ಲಿದ್ದ ವಿರಾಟ್ ಕೊಹ್ಲಿ 44 ಎಸೆತಗಳಲ್ಲಿ 59 ರನ್‌ಗಳನ್ನು ಗಳಿಸಿದ್ದರು. ಈ ಪ್ರದರ್ಶನದ ಕಾರಣದಿಂದಾಗಿ ಭಾರತ ಆ ಪಂದ್ಯದಲ್ಲಿ ಕೇವಲ ಎರಡು ವಿಕೆಟ್ ಕಳೆದುಕೊಂಡು ಭರ್ಜರಿ 192 ರನ್‌ಗಳನ್ನು ಗಳಿಸಿತ್ತು.

SKY ಆಟಕ್ಕೆ ತಲೆಬಾಗಿದ ಕೊಹ್ಲಿ

SKY ಆಟಕ್ಕೆ ತಲೆಬಾಗಿದ ಕೊಹ್ಲಿ

ಹಾಂಕಾಂಗ್ ವಿರುದ್ಧದ ಪಂದ್ಯದಲ್ಲಿ ಸೂರ್ಯಕುಮಾರ್ ನೀಡಿದ ಪ್ರದರ್ಶನಕ್ಕೆ ಮತ್ತೊಂದು ತುದಿಯಲ್ಲಿ ನಿಂತು ಸಾಕ್ಷಿಯಾಗಿದ್ದ ವಿರಾಟ್ ಕೊಹ್ಲಿ ಭಾರೀ ಪ್ರಶಂಸೆಯ ಮಾತುಗಳನ್ನು ಆಡಿದ್ದಾರೆ. "ಐಪಿಎಲ್‌ನಲ್ಲಿ ನಾವು ಆಡಿದಾಗ ಅವರ ಸಾಕಷ್ಟು ಇನ್ನಿಂಗ್ಸ್‌ಗಳನ್ನು ನೋಡಿದ್ದೇನೆ. ಆದರೆ ಇಷ್ಟು ಹತ್ತಿರದಲ್ಲಿ ನಿಂತು ಅವರ ಆಟವನ್ನು ನೋಡುವುದು ನನ್ನ ಮೊದಲ ಅನುಭವ. ನಾನು ಸಂಪೂರ್ಣವಾಗಿ ಕಳೆದುಹೋಗಿದ್ದೆ. ಇಂದು ನೀವು ಆಡಿದ ರೀತಿಯನ್ನು ನೋಡಿದರೆ ಆ ಲಯದಲ್ಲಿ ನೀವು ಇರಲು ಸಾಧ್ಯವಾದರೆ ವಿಶ್ವದ ಯಾವುದೇ ತಂಡದ ವಿರುದ್ಧವೂ ಅಕ್ಷರಶಃ ಪಂದ್ಯವನ್ನು ಎಳೆದುಕೊಂಡು ಬಿಡಬಹುದು" ಎಂದು ಸೂರ್ಯಕುಮಾರ್ ಯಾದವ್ ಬಗ್ಗೆ ವಿರಾಟ್ ಕೊಹ್ಲಿ ಮೆಚ್ಚುಗೆಯ ಸುರಿಮಳೆಗೈದಿದ್ದರು.

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ರಿಷಬ್ ಪಂತ್ (ವಿಕೆಟ್ ಕೀಪರ್), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಅಕ್ಸರ್ ಪಟೇಲ್, ಭುವನೇಶ್ವರ್ ಕುಮಾರ್, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ಅರ್ಶ್ದೀಪ್ ಸಿಂಗ್, ರವಿ ಬಿಷ್ಣೋಯ್, ದಿನೇಶ್ ಕಾರ್ತಿಕ್, ಅವೇಶ್ ಖಾನ್, ದೀಪಕ್ ಹೂಡಾ

ಪಾಕಿಸ್ತಾನ ತಂಡ: ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಬಾಬರ್ ಅಜಮ್ (ನಾಯಕ), ಫಖರ್ ಜಮಾನ್, ಖುಷ್ದಿಲ್ ಶಾ, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಆಸಿಫ್ ಅಲಿ, ಮೊಹಮ್ಮದ್ ನವಾಜ್, ಹಾರಿಸ್ ರೌಫ್, ನಸೀಮ್ ಶಾ, ಹಸನ್ ಅಲಿ, ಉಸ್ಮಾನ್ ಖಾದಿರ್, ಮೊಹಮ್ಮದ್ ಹಸ್ನೈನ್, ಹೈದರ್ ಅಲಿ

Story first published: Sunday, September 4, 2022, 18:00 [IST]
Other articles published on Sep 4, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+