Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಏಷ್ಯಾಕಪ್‌ಗೆ ಆಯ್ಕೆಯಾದ ಭಾರತದ 15 ಆಟಗಾರರ ವಯಸ್ಸು: ಯಾರು ಕಿರಿಯ, ಯಾರಿಗೆ ಹೆಚ್ಚು ವಯಸ್ಸು?

Asia Cup 2022: Team India Asia Cup squads all players age list

ಇದೇ ತಿಂಗಳ 27ರಿಂದ ಯುಎಇ ನೆಲದಲ್ಲಿ ಬಹು ನಿರೀಕ್ಷಿತ ಏಷ್ಯಾಕಪ್ ಟೂರ್ನಿ ಆರಂಭಗೊಳ್ಳಲಿದ್ದು, ಮೊದಲ ಪಂದ್ಯದಲ್ಲಿ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ತಂಡಗಳು ಸೆಣಸಾಟ ನಡೆಸಲಿದ್ದು, ಆಗಸ್ಟ್ 28ರ ಭಾನುವಾರದಂದು ನಡೆಯಲಿರುವ ಟೂರ್ನಿಯ ದ್ವಿತೀಯ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಇನ್ನು ಕಳೆದ ಬಾರಿಯ ಏಷ್ಯಾಕಪ್ ಗೆದ್ದು ಹಾಲಿ ಚಾಂಪಿಯನ್ ಆಗಿ ಉಳಿದುಕೊಂಡಿರುವ ಟೀಮ್ ಇಂಡಿಯಾ ಈ ಆವೃತ್ತಿಯಲ್ಲಿ ಗೆದ್ದರೆ ಸತತವಾಗಿ ಮೂರನೇ ಬಾರಿಗೆ ಏಷ್ಯಾಕಪ್ ಟ್ರೋಫಿಯನ್ನು ಗೆದ್ದಂತಾಗಲಿದ್ದು ಹ್ಯಾಟ್ರಿಕ್ ಸಾಧನೆ ಮಾಡಲಿದೆ.

ಇನ್ನು ಎಲ್ಲಾ ಯೋಜನೆಯಂತೆ ನಡೆದಿದ್ದರೆ ಟೂರ್ನಿಯಲ್ಲಿ ಭಾರತ ತಂಡಕ್ಕೆ ರಾಹುಲ್ ದ್ರಾವಿಡ್ ಕೋಚ್ ಆಗಿ ಕೆಲಸ ನಿರ್ವಹಿಸಬೇಕಿತ್ತು. ಆದರೆ, ದುಬೈಗೆ ಹಾರುವ ಮುನ್ನ ರಾಹುಲ್ ದ್ರಾವಿಡ್ ಕೊರೊನಾ ವರದಿ ಪಾಸಿಟಿವ್ ಬಂದ ಕಾರಣ ಇದೀಗ ಹಂಗಾಮಿ ಕೋಚ್ ಆಗಿ ನೇಮಕಗೊಂಡಿದ್ದಾರೆ. ಹೀಗೆ ಪ್ರಮುಖ ಬದಲಾವಣೆಗೆ ಒಳಗಾಗಿರುವ ಟೀಮ್ ಇಂಡಿಯಾದ ಆಟಗಾರರಲ್ಲಿ ಮಾತ್ರ ಯಾವುದೇ ಬದಲಾವಣೆಯಾಗಿಲ್ಲ. ಟೂರ್ನಿಗೆ ಟೀಮ್ ಇಂಡಿಯಾ 15 ಆಟಗಾರರ ತಂಡವನ್ನು ಪ್ರಕಟಿಸಿತ್ತು ಹಾಗೂ 3 ಆಟಗಾರರನ್ನು ಮೀಸಲು ಆಟಗಾರರನ್ನಾಗಿ ನೇಮಿಸಿತ್ತು.

ಹೀಗೆ ಏಷ್ಯಾಕಪ್ ಟೂರ್ನಿಗೆ ಪ್ರಕಟಗೊಂಡಿರುವ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದುಕೊಂಡಿರುವ 15 ಆಟಗಾರರ ವಯಸ್ಸಿನ ಸಂಪೂರ್ಣ ಪಟ್ಟಿ ಈ ಕೆಳಕಂಡಂತಿದ್ದು, ಯಾವ ಆಟಗಾರ ಹಿರಿಯ ಹಾಗೂ ಕಿರಿಯ ಎಂಬ ಮಾಹಿತಿ ಇಲ್ಲಿದೆ.

ಏಷ್ಯಾಕಪ್ ಟೂರ್ನಿಗೆ ಪ್ರಕಟವಾದ ತಂಡದಲ್ಲಿರುವ ಆಟಗಾರರ ವಯಸ್ಸಿನ ವಿವರ

ಏಷ್ಯಾಕಪ್ ಟೂರ್ನಿಗೆ ಪ್ರಕಟವಾದ ತಂಡದಲ್ಲಿರುವ ಆಟಗಾರರ ವಯಸ್ಸಿನ ವಿವರ

1. ದಿನೇಶ್ ಕಾರ್ತಿಕ್ 37 ವರ್ಷ 84 ದಿನಗಳು

2. ರವಿಚಂದ್ರನ್ ಅಶ್ವಿನ್ 35 ವರ್ಷ 341 ದಿನಗಳು

3. ರೋಹಿತ್ ಶರ್ಮಾ 35 ವರ್ಷ 116 ದಿನಗಳು

4. ವಿರಾಟ್ ಕೊಹ್ಲಿ 33 ವರ್ಷ 292 ದಿನಗಳು

5 ರವೀಂದ್ರ ಜಡೇಜಾ 33 ವರ್ಷ 261 ದಿನಗಳು

6. ಭುವನೇಶ್ವರ್ ಕುಮಾರ್ 32 ವರ್ಷ 200 ದಿನಗಳು

7. ಯುಜ್ವೇಂದ್ರ ಚಾಹಲ್ 32 ವರ್ಷ 32 ದಿನಗಳು

8. ಸೂರ್ಯಕುಮಾರ್ ಯಾದವ್ 31 ವರ್ಷ 344 ದಿನಗಳು

9. ಕೆಎಲ್ ರಾಹುಲ್ 30 ವರ್ಷ 127 ದಿನಗಳು

10. ಹಾರ್ದಿಕ್ ಪಾಂಡ್ಯ 28 ವರ್ಷ 317 ದಿನಗಳು

11. ದೀಪಕ್ ಹೂಡಾ 27 ವರ್ಷ 127 ದಿನಗಳು

12. ಅವೇಶ್ ಖಾನ್ 25 ವರ್ಷ 254 ದಿನಗಳು

13. ರಿಷಭ್ ಪಂತ್ 24 ವರ್ಷ 324 ದಿನಗಳು

14. ಅರ್ಷ್‌ದೀಪ್ ಸಿಂಗ್ 23 ವರ್ಷ 200 ದಿನಗಳು

15. ರವಿ ಬಿಷ್ಣೋಯಿ 21 ವರ್ಷ 353 ದಿನಗಳು

ಟೀಮ್ ಇಂಡಿಯಾ ಏಷ್ಯಾಕಪ್ ಸ್ಕ್ವಾಡ್

ಟೀಮ್ ಇಂಡಿಯಾ ಏಷ್ಯಾಕಪ್ ಸ್ಕ್ವಾಡ್

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್-ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್-ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಆರ್.ಅಶ್ವಿನ್, ಯುಜ್ವೇಂದ್ರ ಚಹಾಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್ ಮತ್ತು ಅವೇಶ್ ಖಾನ್.

ಟೂರ್ನಿಯ ವೇಳಾಪಟ್ಟಿ

ಟೂರ್ನಿಯ ವೇಳಾಪಟ್ಟಿ

27 ಆಗಸ್ಟ್‌: ಶ್ರೀಲಂಕಾ ವರ್ಸಸ್ ಅಫ್ಘಾನಿಸ್ತಾನ (ದುಬೈ)

28 ಆಗಸ್ಟ್‌: ಭಾರತ ವರ್ಸಸ್ ಪಾಕಿಸ್ತಾನ (ದುಬೈ)

30 ಆಗಸ್ಟ್‌: ಬಾಂಗ್ಲಾದೇಶ ವರ್ಸಸ್ ಅಫ್ಘಾನಿಸ್ತಾನ (ದುಬೈ)

31 ಆಗಸ್ಟ್‌: ಭಾರತ ವರ್ಸಸ್ ಕ್ವಾಲಿಫೈಯರ್ (ದುಬೈ)

1 ಸೆಪ್ಟೆಂಬರ್: ಶ್ರೀಲಂಕಾ ವರ್ಸಸ್ ಬಾಂಗ್ಲಾದೇಶ (ದುಬೈ)

2 ಸೆಪ್ಟೆಂಬರ್: ಪಾಕಿಸ್ತಾನ ವರ್ಸಸ್ ಕ್ವಾಲಿಫೈಯರ್ (ಶಾರ್ಜಾ)

3 ಸೆಪ್ಟೆಂಬರ್: B1 vs B2 (ಶಾರ್ಜಾ)

4 ಸೆಪ್ಟೆಂಬರ್: A1 vs A2 (ದುಬೈ)

6 ಸೆಪ್ಟೆಂಬರ್: A1 vs B1 (ದುಬೈ)

7 ಸೆಪ್ಟೆಂಬರ್: A2 vs B2 (ದುಬೈ)

8 ಸೆಪ್ಟೆಂಬರ್: A1 vs B2 (ದುಬೈ)

9 ಸೆಪ್ಟೆಂಬರ್: B1 vs A2 (ದುಬೈ)

11 ಸೆಪ್ಟೆಂಬರ್: ಫೈನಲ್‌ (ದುಬೈ)

Story first published: Thursday, August 25, 2022, 10:28 [IST]
Other articles published on Aug 25, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+