ಏಷ್ಯಾಕಪ್ 2022: ಅಫ್ಘಾನಿಸ್ತಾನ ವಿರುದ್ಧದ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಭಾರಿ ಬದಲಾವಣೆ
ಟೀಂ ಇಂಡಿಯಾ ಏಷ್ಯಾಕಪ್‌ನಿಂದ ಹೊರಬಿದ್ದಿದೆ. ಗುರುವಾರ ನಡೆಯಲಿರುವ ಅಫ್ಘಾನಿಸ್ತಾನದ ವಿರುದ್ಧದ ಪಂದ್ಯ ಎರಡೂ ತಂಡಗಳಿಗೆ ಔಪಚಾರಿಕವಾಗಿರಲಿವೆ. ರೋಚಕ ಪಂದ್ಯದಲ್ಲಿ ಅಫ್ಘಾನಿಸ್ತಾನದ ವಿರುದ್ದ ಗೆದ್ದಿರುವ ಪಾಕಿಸ್ತಾನ ಫೈನಲ್ ಪ್ರವೇಶಿಸಿದೆ. ಮತ್ತೊಂದೆಡೆ ಶ್ರೀಲಂಕಾ ಕೂಡ ಫೈನಲ್ ಪ್ರವೇಶ ಖಚಿತಪಡಿಸಿಕೊಂಡಿದೆ.
ಆದರೂ ಗುರುವಾರ ನಡೆಯಲಿರುವ ಅಫ್ಘಾನಿಸ್ತಾನದ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಪ್ರಮುಖ ಬದಲವಾಣೆಗಳನ್ನು ಮಾಡುವ ನಿರೀಕ್ಷೆ ಇದೆ. ಎರರಡೂ ತಂಡಗಳಿಗೆ ಗುರುವಾರ ನಡೆಯುವ ಪಂದ್ಯ ಏಷ್ಯಾಕಪ್ ಟೂರ್ನಿ 2022ರ ಕೊನೆಯ ಪಂದ್ಯವಾಗಿದೆ.
ಆದರೂ, ಭಾರತ ಕೊನೆಯ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಅಭಿಯಾನವನ್ನು ಕೊನೆಗೊಳಿಸುವ ಯೋಜನೆಯಲ್ಲಿದೆ. ಪ್ರಯೋಗ ಮಾಡಲು ಟೀಂ ಇಂಡಿಯಾಗೆ ಈ ಪಂದ್ಯ ಉತ್ತಮ ಅವಕಾಶವಾಗಿದೆ.
ಆಲ್‌ರೌಂಡರ್ ರವೀಂದ್ರ ಜಡೇಜಾ ಮೊಣಕಾಲಿನ ನೋವಿನಿಂದಾಗಿ ಏಷ್ಯಾಕಪ್‌ನಿಂದ ಹೊರಗುಳಿದಿದ್ದರಿಂದ ಭಾರತಕ್ಕೆ ಭಾರಿ ಸಮಸ್ಯೆಯಾಯಿತು. ಪಾಕಿಸ್ತಾನದ ವಿರುದ್ಧದ ಸೂಪರ್ 4 ಪಂದ್ಯಕ್ಕಾಗಿ ತಮ್ಮ ತಂಡದಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿದ್ದರಿಂದ ಭಾರತ ತಂಡದ ಸೋಲಿಗೆ ಕಾಣವಾಯಿತು. 181 ರನ್‌ಗಳನ್ನು ಕಲೆ ಹಾಕಿದರು ಎದುರಾಳಿಗಳನ್ನು ಕಟ್ಟಿಹಾಕುವಲ್ಲಿ ಭಾರತದ ಬೌಲರ್ ಗಳು ವಿಫಲರಾದರು.

ಅಕ್ಷರ್ ಪಟೇಲ್‌ಗೆ ಸ್ಥಾನ ಅವಕಾಶ ಸಾಧ್ಯತೆ
ಗಾಯಗೊಂಡ ಜಡೇಜಾ ಬದಲಿಗೆ ಅಕ್ಷರ್ ಪಟೇಲ್‌ರನ್ನು ಆಯ್ಕೆ ಮಾಡಲಾಗಿದೆ. ಎಡಗೈ ಸ್ಪಿನ್ ಬೌಲರ್ ಆಗಿರುವ ಅಕ್ಷರ್ ಪಟೇಲ್, ಉತ್ತಮವಾಗಿ ಬ್ಯಾಟ್ ಕೂಡ ಮಾಡಬಲ್ಲರು. ಕ್ಷೇತ್ರ ರಕ್ಷಣೆಯಲ್ಲೂ ಅಕ್ಷರ್ ಪಟೇಲ್ ಪರಿಣಿತಿ ಹೊಂದಿದ್ದಾರೆ. ಇತ್ತೀಚಿನ ಪಂದ್ಯಗಳಲ್ಲಿ ಅಕ್ಷರ್ ಪಟೇಲ್ ಉತ್ತಮ ಪ್ರದರ್ಶನ ನೀಡಿದ್ದಾರೆ.
ಆದರೂ ಅವರನ್ನು ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಸದಿರುವುದು ಅಚ್ಚರಿಗೆ ಕಾರಣವಾಗಿತ್ತು. ಆದರೆ, ಗುರುವಾರದ ಪಂದ್ಯದಲ್ಲಿ ದೀಪಕ್ ಹೂಡಾ ಬದಲಿಗೆ ಅಕ್ಷರ್ ಪಟೇಲ್ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದೆ.

ದಿನೇಶ್ ಕಾರ್ತಿಕ್ ಆಡುವ ಸಾಧ್ಯತೆ
ಏಷ್ಯಾಕಪ್‌ನ ಭಾರತದ ಮೊದಲ ಪಂದ್ಯದಲ್ಲಿ ಆಡಿದ್ದ ದಿನೇಶ್ ಕಾರ್ತಿಕ್ ನಂತರದ ಯಾವ ಪಂದ್ಯದಲ್ಲೂ ಆಡಲಿಲ್ಲ. ಜಡೇಜಾ ಗಾಯಗೊಂಡು ಹೊರಗುಳಿದ ನಂತರ ಎಡಗೈ ಬ್ಯಾಟರ್ ಬೇಕೆಂದು ರಿಷಬ್ ಪಂತ್‌ಗೆ ಮಣೆ ಹಾಕಲಾಯಿತು. ಆದರೆ ರಿಷಬ್ ಪಂತ್ ನಿರೀಕ್ಷೆಗೆ ತಕ್ಕಂತೆ ಬ್ಯಾಟ್ ಮಾಡಲೇ ಇಲ್ಲ.
ಫಿನಿಷರ್ ಪಾತ್ರವನ್ನು ಉತ್ತಮವಾಗಿ ನಿಭಾಯಿಸುತ್ತಿರುವ ದಿನೇಶ್ ಕಾರ್ತಿಕ್ ಗುರುವಾರ ಅಫ್ಘಾನಿಸ್ತಾನದ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಸ್ಥಾನ ಪಡೆಯುವ ನಿರೀಕ್ಷೆ ಇದೆ.

ರವಿ ಬಿಷ್ಣೋಯ್ ಆಡುವ ಸಾಧ್ಯತೆ
ಪಾಕಿಸ್ತಾನ ವಿರುದ್ಧದ ತಮ್ಮ ಮೊದಲ ಸೂಪರ್ 4 ಪಂದ್ಯದಲ್ಲಿ ಇಬ್ಬರು ಲೆಗ್ ಸ್ಪಿನ್ನರ್‌ಗಳೊಂದಿಗೆ ಆಡಿದ ಟೀಮ್ ಇಂಡಿಯಾ ಸಾಕಷ್ಟು ಟೀಕೆಗೆ ಗುರಿಯಾಯಿತು. ಎಡಗೈ ಬ್ಯಾಟ್ಸ್‌ಮನ್ ಮೊಹಮ್ಮದ್ ನವಾಜ್ ಪಂದ್ಯವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡಿದ್ದರಿಂದ ಈ ತಂತ್ರ ಫಲಿಸಲಿಲ್ಲ.
ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಎರಡು ವಿಕೆಟ್ ಪಡೆದರು ಅದಾಗಲೇ ಬಹಳಷ್ಟು ತಡವಾಗಿತ್ತು. ಅಫ್ಘಾನಿಸ್ತಾನದ ವಿರುದ್ಧದ ಪಂದ್ಯದಲ್ಲಿ ರವಿ ಬಿಷ್ಣೋಯ್ ಸ್ಥಾನ ಪಡೆಯುವ ಸಾಧ್ಯತೆ ಇದ್ದು, ಆರ್. ಅಶ್ವಿನ್ ಅಥವಾ ಚಹಾಲ್ ಹೊರಗುಳಿಯುವ ಸಾಧ್ಯತೆ ಇದೆ.

ಬಲಿಷ್ಠವಾಗಿದೆ ಅಫ್ಘಾನಿಸ್ತಾನ ತಂಡ
ಅಫ್ಘಾನಿಸ್ತಾನ ತಂಡವನ್ನು ಲಘುವಾಗಿ ಪರಿಗಣಿಸುವಂತೆಯೇ ಇಲ್ಲ, ಪಾಕಿಸ್ತಾನ ವಿರುದ್ಧ ಸೋತರು ಅಫ್ಘಾನಿಸ್ತಾನ ಆಡಿದ ಆಟವನ್ನು ಯಾರೂ ಮರೆಯುವಂತಿಲ್ಲ. ಗೆಲುವಿಗೆ 130 ರನ್‌ಗಳನ್ನು ಗಳಿಸಬೇಕಾಗಿದ್ದ ಪಾಕಿಸ್ತಾನ ಒಂದು ಹಂತದಲ್ಲಿ ಸೋಲಿನ ಅಂಚಿಗೆ ಬಂದು ನಿಂತಿತ್ತು. ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ್ದ ಅಫ್ಘನ್ ಬೌಲರ್ ಗಳು ಪಾಕ್ ಬ್ಯಾಟರ್ ಗಳನ್ನು ಕಾಡಿದರು. ಅಂತಿಮವಾಗಿ ಪಾಕಿಸ್ತಾನ ರೋಚಕ ಗೆಲವು ಸಾಧಿಸುವ ಮೂಲಕ ಭಾರತ ಮತ್ತು ಅಫ್ಘಾನಿಸ್ತಾನವನ್ನು ಟೂರ್ನಿಯಿಂದ ಹೊರ ಹಾಕಿತು.
ಗುರುವಾರ ಭಾರತಕ್ಕೆ ಅಫ್ಘಾನಿಸ್ತಾನದ ವಿರುದ್ಧದ ಪಂದ್ಯ ನಿಜಕ್ಕೂ ಸವಾಲಾಗಿರಲಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಉತ್ತಮ ಪ್ರದರ್ಶನ ನೀಡಿದರೆ ಮಾತ್ರ ಗೆಲುವು ದಕ್ಕಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications