ಏಷ್ಯಾದ ಎದುರಾಳಿಗೆ ಕಂಟಕವಾದ ಟಾಪ್ 3 ಭಾರತೀಯ ಬೌಲರ್‌ಗಳು ಇವರು!

ಏಷ್ಯಾ ಕಪ್ ಟೂರ್ನಿಯ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು ಹಾಲಿ ಚಾಂಪಿಯನ್ ಭಾರತ ಈ ಬಾರಿ ಕೂಎ ಟ್ರೋಫಿಯನ್ನು ತನ್ನಲ್ಲಿಯೇ ಉಳಿಸಿಕೊಳ್ಳುವ ಆತ್ಮ ವಿಶ್ವಾಸದೊಂದಿಗೆ ಕಣಕ್ಕಿಳಿಯಲಿದೆ. ನಾಲ್ಕು ವರ್ಷಗಳ ಅಂತರದ ಬಳಿಕ ಏಷ್ಉಆ ಕಪ್ ಟೂರ್ನಿ ಆಯೋಜನೆಯಾಗುತ್ತಿದ್ದು ಈ ಭಾರಿ ಆರು ತಂಡಗಳು ಏಷ್ಯಾ ಭಾಗದ ಚಾಂಪಿಯನ್ ತಂಡವೆನಿಸಲು ಪೈಪೋಟಿ ನಡೆಸುತ್ತಿದೆ. 7 ಬಾರಿ ಈ ಟೂರ್ನಿಯ ಚಾಂಪಿಯನ್ ಎನಿಸಿರುವ ಭಾರತ ಈ ಬಾರಿಯ ಟೂರ್ನಿ ಗೆಲ್ಲುವ ನೆಚ್ಚಿನ ತಂಡವಾಗಿ ಕಣಕ್ಕಿಳಿಯುತ್ತಿದೆ.
ಈ ಬಾರಿ ಯುಎಇನಲ್ಲಿ ಏಷ್ಯಾ ಕಪ್ ಆಯೋಜನೆಯಾಗುತ್ತಿದ್ದು ಶನಿವಾರ ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ ತಂಡಗಳ ನಡುವಿನ ಕದನದೊಂದಿಗೆ ಟೂರ್ನಿಗೆ ಚಾಲನೆ ದೊರೆಯಲಿದೆ. ಆದರೆ ಭಾನುವಾರ ನಡೆಯಲಿರುವ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಕದನದ ಹಿನ್ನೆಲೆಯಲ್ಲಿ ಈ ಟೂರ್ನಿ ಹೆಚ್ಚು ಸುದ್ದಿಯಗುತ್ತಿದೆ.
2022ರ ಆವೃತ್ತಿಯ ಏಷ್ಯಾ ಕಪ್ ಹಿನ್ನೆಲೆಯಲ್ಲಿ ಏಷ್ಯಾದ ತಂಡಗಳ ವಿರುದ್ಧ ಅತಿ ಹೆಚ್ಚು ಯಶಸ್ಸು ಸಾಧಿಸಿರುವ ಭಾರತದ ಅಗ್ರ ಮೂವರು ಬೌಲರ್‌ಗಳು ಯಾರು ಎಂಬುದನ್ನು ಈ ವರದಿಯಲ್ಲಿ ನೋಡೋಣ. ಮುಂದೆ ಓದಿ.

ಮಾಜಿ ವೇಗಿ ಆಶಿಶ್ ನೆಹ್ರಾ
ಭಾರತದ ಮಾಜಿ ಕ್ರಿಕೆಟಿಗ ಆಶಿಶ್ ನೆಹ್ರಾ ಪದೇ ಪದೇ ಗಾಯದ ಸಮಸ್ಯೆಗೆ ಒಳಗಾಗಿ 7 ಬಾರಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರೂ ಬಲಿಷ್ಠವಾಗಿ ಕಮ್‌ಬ್ಯಾಕ್ ಮಾಡುತ್ತಾ ಭಾರತದ ಪರವಾಗಿ ಮಿಂಚಿರುವ ಆಟಗಾರ. ಏಷ್ಯಾ ತಂಡಗಳ ವಿರುದ್ಧ ಟಿ20 ಕ್ರಿಕೆಟ್ ಮಾದರಿಯಲ್ಲಿ ಮಿಂಚಿರುವ ಭಾರತದ ಅಗ್ರ ಮೂವರು ಬೌಲರ್‌ಗಳಲ್ಲಿ ನೆಹ್ರಾ ಕೂಡ ಕಾಣಿಸಿಕೊಂಡಿದ್ದಾರೆ. ಆಶಿಶ್ ನೆಹ್ರಾ ಒಟ್ಟಾರೆಯಾಗಿ 27 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಷ್ಟೇ ಆಡಿದ್ದರೂ ಒಟ್ಟು 34 ವಿಕಟ್ ಸಂಪಾದಿಸಿದ್ದಾರೆ. ಇದರಲ್ಲಿ 18 ವಿಕೆಟ್‌ಗಳು ಏಷ್ಯಾದ ತಂಡಗಳ ವಿರುದ್ದವೇ ಆಗಿದೆ. ಭಾರತದ ಇಬ್ಬರು ಬೌಲರ್‌ಗಳಿಗೆ ನೆಹ್ರಾ ಅವರ ಈ ಸಾಧನೆಯನ್ನು ಹಿಂದಿಕ್ಕುವ ಅವಕಾಶವಿದೆ. ಭುವನೇಶ್ವರ್ ಕುಮಾರ್ ಹಾಗೂ ಹಾರ್ದಿಕ್ ಪಾಂಡ್ಯ ಏಷ್ಯಾದ ತಮಡಗಳ ವಿರುದ್ಧ ತಲಾ 17 ವಿಕೆಟ್‌ಗಳನ್ನು ಪಡೆದ ಸಾಧನೆ ಮಾಡಿದ್ದಾರೆ.

ಅನುಭವಿ ಸ್ಪಿನ್ನರ್ ಆರ್ ಅಶ್ವಿನ್
ಈ ಪಟ್ಟಿಯಲ್ಲಿರುವ ಎರಡನೇ ಆಟಗಾರ ಅನುಭವಿ ಸ್ಪಿನ್ನರ್ ಆರ್ ಅಶ್ವಿನ್. ಏಷ್ಯಾದ ತಂಡಗಳ ವಿರುದ್ಧ ಆರ್ ಅಶ್ವಿನ್ 17 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ್ದು ಇದರಲ್ಲಿ 26 ವಿಕೆಟ್ ಸಂಪಾದಿಸಿದ್ದಾರೆ. ಇನ್ನು ಒಟ್ಟಾರೆಯಾಗಿ ಅಂತಾರಾಷ್ಟ್ರೀಯ ಚುಟುಕು ಕ್ರಿಕೆಟ್ ಮಾದರಿಯಲ್ಲಿ ಆರ್ ಅಶ್ವಿನ್ ನಾಲ್ಕನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿದ್ದಾರೆ. ಸದ್ಯ ಏಷ್ಯಾ ಕಪ್‌ನಲ್ಲಿ ಆಡುವ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿರುವ ಅಶ್ವಿನ್ ಈ ಬಾರಿಯ ಟೂರ್ನಿಯಲ್ಲಿ ಮಿಂಚುವ ವಿಶ್ವಾಸದಲ್ಲಿದ್ದಾರೆ.

ಸ್ಪಿನ್ನರ್ ಯುಜುವೇಂದ್ರ ಚಾಹಲ್
ಭಾರತ ಕ್ರಿಕೆಟ್ ತಂಡದ ಮತ್ತೋರ್ವ ಪ್ರಮುಖ ಸ್ಪಿನ್ ಬೌಲಿಂಗ್ ಅಸ್ತ್ರವಾಗಿರುವ ಯುಜುವೇಂದ್ರ ಚಾಹಲ್ ಏಷ್ಯಾದ ತಂಡಗಳ ವಿರುದ್ಧ ಅದ್ಭುತ ಯಶಸ್ಸು ಸಾಧಿಸಿರುವ ಮತ್ತೋರ್ವ ಬೌಲರ್. 15 ಟಿ20 ಪಂದ್ಯಗಳಲ್ಲಿ ಚಾಹಲ್ ಏಷ್ಯಾ ತಂಡಗಳ ವಿರುದ್ಧ 26 ವಿಕೆಟ್ ಸಂಪಾದಿಸಿದ್ದಾರೆ. 13.3ರಷ್ಟು ಅದ್ಭುತ ಸರಾಸರಿಯನ್ನು ಕೂಡ ಹೊಂದಿದ್ದಾರೆ ಚಾಹಲ್. ಕುತೂಹಲಕಾರಿ ಸಂಗತಿಯೆಂದರೆ ಏಷ್ಯಾದ ತಂಡಗಳ ಪೈಕಿ ಚಾಹಲ್ ಆಡಿರುವುದು ಬಾಂಗ್ಲಾದೇಶ ಹಾಗೂ ಶ್ರೀಲಂಕಾ ವಿರುದ್ಧ ಮಾತ್ರ. ಬಾಂಗ್ಲಾದೇಶದ ವಿರುದ್ಧ 9 ವಿಕೆಟ್ ಪಡೆದಿದ್ದರೆ ಶ್ರೀಲಂಕಾ ವಿರುದ್ಧ 17 ವಿಕೆಟ್ ಪಡೆದುಕೊಂಡಿದ್ದಾರೆ. ಚಾಹಲ್ ಭಾರತದ ಪರವಾಗಿ ಚುಟುಕು ಕ್ರಿಕೆಟ್ ಮಾದರಿಯಲ್ಲಿ ಅತ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದು 62 ಪಂದ್ಯಗಳಲ್ಲಿ 79 ವಿಕೆಟ್ ಸಂಪಾದಿಸಿದ್ದಾರೆ. ಹೀಗಾಗಿ ಈ ಬಾರಿಯ ಏಷ್ಯಾ ಕಪ್ ಟೂರ್ನಿಯಲ್ಲಿ ಮಹತ್ವದ ಪಾತ್ರವಹಿಸುವ ನಿರೀಕ್ಷೆಯಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications