Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪಾಕ್ ವಿರುದ್ಧ ಕೊಹ್ಲಿಯ ಮತ್ತೊಂದು ಅರ್ಧಶತಕ: ರಾಹುಲ್ ದ್ರಾವಿಡ್ ದಾಖಲೆ ನೆಲಸಮ

Virat kohli

ಏಷ್ಯಾಕಪ್‌ ಸೂಪರ್ 4ನಲ್ಲಿ ಪಾಕಿಸ್ತಾನ ವಿರುದ್ಧ ವಿರಾಟ್ ಕೊಹ್ಲಿ ಚುರುಕಾದ ಮತ್ತು ಜವಾಬ್ದಾರಿಯುತ ಅರ್ಧಶತಕವನ್ನು ಆಡಿದರು. ಅವರು 44 ಎಸೆತಗಳಲ್ಲಿ 60 ರನ್‌ಗಳ ಇನಿಂಗ್ಸ್‌ ಆಡಿದರು. ಈ ಇನ್ನಿಂಗ್ಸ್ ಮೂಲಕ ಟೀಂ ಇಂಡಿಯಾಗೆ ಆಧಾರವಾಗಿದ್ದಲ್ಲದೆ, ಎರಡು ವಿಶ್ವ ದಾಖಲೆಗಳನ್ನ ನಿರ್ಮಿಸಿದ್ರು. ಪ್ರಸ್ತುತ ಟೂರ್ನಿಯಲ್ಲಿ ಸತತ ಎರಡು ಅರ್ಧಶತಕ ದಾಖಲಿಸಿ ತಾನು ಫಾರ್ಮ್‌ಗೆ ಮರಳಿರುವುದನ್ನ ಕೊಹ್ಲಿ ಖಚಿತಪಡಿಸಿದರು.

ಹಾಂಗ್ ಕಾಂಗ್ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ದಾಖಲಿಸಿದ್ದ ಕೊಹ್ಲಿ, ಪಾಕ್‌ ವಿರುದ್ಧವೂ ಅರ್ಧಶತಕದ ಗಡಿದಾಟಿ, ಸಾಂಪ್ರದಾಯಿಕ ಎದುರಾಳಿಗಳ ವಿರುದ್ಧ ಸತತ ಅರ್ಧಶತಕಗಳನ್ನು ಗಳಿಸುವ ಮೂಲಕ ಮಿಂಚಿದರು.

ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯದಲ್ಲಿ ವಿರಾಟ್ 35 ರನ್ ಗಳಿಸಿದ್ದರು. ಆದರೆ ಆ ಪಂದ್ಯದಲ್ಲಿ ಔಟಾದ ರೀತಿ ಹಲವರನ್ನು ನಿರಾಸೆಗೊಳಿಸಿತ್ತು. ನಂತರ ಅವರು ಹಾಂಗ್ ಕಾಂಗ್ ವಿರುದ್ಧ ಅದ್ಭುತ ಅರ್ಧಶತಕವನ್ನು ಗಳಿಸಿದ ನಂತರ 44 ಎಸೆತಗಳಲ್ಲಿ 59 ರನ್ ಗಳಿಸಿ ಅಜೇಯರಾಗಿದ್ದರು. ಭಾನುವಾರ ಪಾಕಿಸ್ತಾನದ ವಿರುದ್ಧ ವಿರಾಟ್ ಅವರ ಇನ್ನಿಂಗ್ಸ್ ಎಲ್ಲಕ್ಕಿಂತ ಅದ್ಭುತವಾಗಿತ್ತು.

ಏಕೆಂದರೆ ಪಾಕಿಸ್ತಾನ ವಿರುದ್ಧ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕೊಹ್ಲಿಯ ಅವರ ನಾಲ್ಕನೇ ಅರ್ಧಶತಕವಾಗಿದೆ. ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 32ನೇ ಅರ್ಧಶತಕ ಗಳಿಸುವ ಮೂಲಕ ವಿರಾಟ್ ರೋಹಿತ್ ಶರ್ಮಾ ಅವರನ್ನು ಹಿಂದಿಕ್ಕಿದ್ದಾರೆ.

ರೋಹಿತ್ ಶರ್ಮಾ ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ನಾಲ್ಕು ಶತಕಗಳನ್ನು ಗಳಿಸಿದ್ದರೂ, ಅವರು ಈ ಸ್ವರೂಪದಲ್ಲಿ ಒಟ್ಟು 31 ಬಾರಿ 50 ದಾಟಿದ್ದಾರೆ. ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 50 ಅಥವಾ ಅದಕ್ಕಿಂತ ಹೆಚ್ಚು ರನ್‌ಗಳನ್ನ 32 ಬಾರಿ ಸ್ಕೋರ್ ಮಾಡುವ ಮೂಲಕ ವಿರಾಟ್ ಆ ದಾಖಲೆ ಮುರಿದರು. ಕಿಂಗ್ ಕೊಹ್ಲಿ ಈ ವಿಶ್ವ ದಾಖಲೆಯನ್ನು ಮತ್ತೊಮ್ಮೆ ತಮ್ಮದಾಗಿಸಿಕೊಂಡರು. ಜೊತೆಗೆ ಪಾಕಿಸ್ತಾನ ವಿರುದ್ಧ T20 ಪಂದ್ಯಗಳಲ್ಲಿ ತಮ್ಮ ನಾಲ್ಕನೇ ಅರ್ಧಶತಕದೊಂದಿಗೆ ಕೆವಿನ್ ಪೀಟರ್ಸನ್, ಮಾರ್ಟಿನ್ ಗಪ್ಟಿಲ್, ಕೇನ್ ವಿಲಿಯಮ್ಸನ್ ಮತ್ತು ಆ್ಯರೊನ್ ಫಿಂಚ್ ಅವರನ್ನು ಹಿಂದೆ ಸರಿಸಿದರು.

ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬಾರಿ ಭಾರತಕ್ಕಾಗಿ 50 ಕ್ಕೂ ಹೆಚ್ಚು ರನ್ ಗಳಿಸಿದ ವಿಚಾರದಲ್ಲಿ, ಕೊಹ್ಲಿ ಪ್ರಸ್ತುತ ಭಾರತದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರನ್ನು ಹಿಂದಿಕ್ಕಿದ್ದಾರೆ. ವಿರಾಟ್ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 70 ಶತಕಗಳನ್ನು ಹೊಂದಿದ್ದಾರೆ, ಅಲ್ಲದೆ 194 ಬಾರಿ 50 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಈಗ ಸಚಿನ್ ಬಳಿಕ ನಂತರದ ಸ್ಥಾನದಲ್ಲಿ ವಿರಾಟ್‌ ಕೊಹ್ಲಿ ಸ್ಥಾನ ಪಡೆದಿದ್ದು, ಮಾಸ್ಟರ್ ಬ್ಲಾಸ್ಟರ್ ಸಚಿನ್ ಮಾತ್ರ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 264 ಬಾರಿ 50 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.

100 ಅಂತರಾಷ್ಟ್ರೀಯ ಶತಕಗಳನ್ನು ಗಳಿಸಿರುವ ಸಚಿನ್ ಎಲ್ಲರಿಗಂತ ಅಗ್ರ ಸ್ಥಾನದಲ್ಲಿದ್ದಾರೆ. ವಿರಾಟ್ ಈಗ ನಡೆಯುತ್ತಿರುವ ಏಷ್ಯಾಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದು. ಮೂರು ಪಂದ್ಯಗಳಲ್ಲಿ ಅವರ ರನ್ 154, ಸ್ಟ್ರೈಕ್ ರೇಟ್ 126.22 ಆಗಿದೆ. ಅವರ ಹಿಂದೆ ಅಫ್ಘಾನಿಸ್ತಾನದ ರಹಮಾನುಲ್ಲಾ ಗುರ್ಬಾಜ್ (135 ರನ್) ಇದ್ದಾರೆ.

ಪಾಕಿಸ್ತಾನ ವಿರುದ್ಧ 7 ವಿಕೆಟ್ ನಷ್ಟಕ್ಕೆ 181ರನ್ ಕಲೆಹಾಕಿದ್ದ ಟೀಂ ಇಂಡಿಯಾ ಗುರಿಯನ್ನ ಪಾಕಿಸ್ತಾನ ಕೊನೆಯ ಎಸೆತ ಬಾಕಿ ಇರುವಂತೆ ಗುರಿ ತಲುಪಿ ಐದು ವಿಕೆಟ್‌ಗಳ ಗೆಲುವು ಸಾಧಿಸಿದೆ.

Story first published: Sunday, September 4, 2022, 23:42 [IST]
Other articles published on Sep 4, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+