Asia Cup 2022: ಹಾಂಗ್‌ಕಾಂಗ್ ವಿರುದ್ಧ ತಂಡಕ್ಕೆ ಪಂತ್ ವಾಪಸ್; ಯಾರನ್ನು ಹೊರ ಹಾಕ್ತಾರೆ ರೋಹಿತ್?

ಆಗಸ್ಟ್ 28ರ ಭಾನುವಾರದಂದು ಭಾರತ ಪ್ರಸ್ತುತ ನಡೆಯುತ್ತಿರುವ ಏಷ್ಯಾಕಪ್ ಟೂರ್ನಿಯಲ್ಲಿನ ತನ್ನ ಚೊಚ್ಚಲ ಪಂದ್ಯವನ್ನು ಆಡಿತು. ತನ್ನ ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧ ಸೆಣಸಾಡುವುದರ ಮೂಲಕ ಟೂರ್ನಿಯಲ್ಲಿ ತನ್ನ ಪಯಣವನ್ನು ಆರಂಭಿಸಿದ ಟೀಂ ಇಂಡಿಯಾ ಪಂದ್ಯದಲ್ಲಿ 5 ವಿಕೆಟ್‍ಗಳ ರೋಚಕ ಗೆಲುವನ್ನು ಸಾಧಿಸುವುದರ ಮೂಲಕ ಅಂಕಪಟ್ಟಿಯಲ್ಲಿ ಖಾತೆಯನ್ನು ತೆರೆದು ಶುಭಾರಂಭವನ್ನು ಮಾಡಿತು.
ಹಾರ್ದಿಕ್ ಪಾಂಡ್ಯ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡೂ ವಿಭಾಗಗಳಲ್ಲಿಯೂ ಮಿಂಚುವುದರ ಮೂಲಕ ಭಾರತದ ಪಾಲಿಗೆ ಆಪದ್ಬಾಂಧವನಾಗಿ ಪಂದ್ಯವನ್ನು ಗೆಲ್ಲಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಇನ್ನು ಈ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಭಾರತ ತಂಡದ ಆಡುವ ಬಳಗದಲ್ಲಿ ಅನಿರೀಕ್ಷಿತ ಬದಲಾವಣೆಯೊಂದು ಇತ್ತು. ಹೌದು, ಹಲವು ದಿನಗಳಿಂದ ಟೀಮ್ ಇಂಡಿಯಾದ ಪ್ರಾಥಮಿಕ ವಿಕೆಟ್ ಕೀಪರ್ ಎಂದು ಗುರುತಿಸಿಕೊಂಡಿರುವ ರಿಷಭ್ ಪಂತ್ ಅವರನ್ನು ಈ ಪಂದ್ಯದ ಆಡುವ ಬಳಗದಿಂದ ಹೊರಗಿಟ್ಟು ದಿನೇಶ್ ಕಾರ್ತಿಕ್ ಅವರಿಗೆ ಸ್ಥಾನವನ್ನು ನೀಡಲಾಗಿತ್ತು.
ತಂಡದ ಈ ನಿರ್ಧಾರವನ್ನು ಕಂಡ ನೆಟ್ಟಿಗರ ಸಹಿತ ಹಲವಾರು ಮಾಜಿ ಕ್ರಿಕೆಟಿಗರು ಆಶ್ಚರ್ಯದ ಜತೆಗೆ ಬೇಸರ ಮತ್ತು ಆಕ್ರೋಶವನ್ನು ಕೂಡ ವ್ಯಕ್ತಪಡಿಸಿದ್ದರು. ರಿಷಬ್ ಪಂತ್ ಅವರನ್ನು ಬೆಂಚ್ ಕಾಯಿಸಿ ದಿನೇಶ್ ಕಾರ್ತಿಕ್ ಅವರಿಗೆ ಅವಕಾಶ ಕೊಟ್ಟದ್ದು ತಪ್ಪು ಎಂದು ಹಲವರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಇನ್ನು ಈ ಕುರಿತಾಗಿ ಮಾತನಾಡಿದ್ದ ರೋಹಿತ್ ಶರ್ಮಾ ತಂಡದ ಅಗತ್ಯತೆಗೆ ಅನುಗುಣವಾಗಿ ಆಟಗಾರರನ್ನು ಆಯ್ಕೆ ಮಾಡಲಾಗುತ್ತದೆ ಹಾಗೂ ಬದಲಾವಣೆಗಳನ್ನು ಮಾಡಲಾಗುತ್ತದೆ ಎಂದು ಹೇಳಿಕೆ ನೀಡುವುದರ ಮೂಲಕ ಪಾಕ್ ವಿರುದ್ಧದ ಪಂದ್ಯಕ್ಕೆ ದಿನೇಶ್ ಕಾರ್ತಿಕ್ ಅಗತ್ಯತೆ ಇತ್ತು ಎಂಬುದನ್ನು ತಿಳಿಸಿದ್ದರು. ಹೀಗೆ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯದೇ ಬೆಂಚ್ ಕಾದಿದ್ದ ರಿಷಭ್ ಪಂತ್ ಇಂದು ( ಆಗಸ್ಟ್ 31 ) ನಡೆಯಲಿರುವ ಹಾಂಕಾಂಗ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆಗಳು ಹೆಚ್ಚಿದ್ದು, ತಂಡದಿಂದ ಯಾವ ಆಟಗಾರನನ್ನು ರೋಹಿತ್ ಶರ್ಮ ಹೊರ ಹಾಕಲಿದ್ದಾರೆ ಎಂಬ ಪ್ರಶ್ನೆ ಇದೀಗ ಎದ್ದಿದೆ.

ದಿನೇಶ್ ಕಾರ್ತಿಕ್ ಬೆಂಚ್ ಕಾಯ್ತಾರಾ?
ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದಿದ್ದ ರೋಹಿತ್ ಶರ್ಮಾ ಬಳಗ ಹಾಂಗ್ ಕಾಂಗ್ ವಿರುದ್ಧದ ಪಂದ್ಯಕ್ಕೆ ಹೆಚ್ಚೇನೂ ಬದಲಾವಣೆ ಮಾಡಿಕೊಳ್ಳುವುದಿಲ್ಲ ಎನ್ನಬಹುದು. ಈ ಪಂದ್ಯದಲ್ಲಿಯೂ ಸಹ ಓರ್ವ ವಿಕೆಟ್ ಕೀಪರ್‌ನನ್ನು ಮಾತ್ರ ಕಣಕ್ಕಿಳಿಸಲು ಮುಂದಾದರೆ ರಿಷಭ್ ಪಂತ್ ಅವರಿಗೆ ಅವಕಾಶ ನೀಡಲು ದಿನೇಶ್ ಕಾರ್ತಿಕ್ ಅವರನ್ನು ತಂಡದಿಂದ ಹೊರಗಿಡಬೇಕಾಗುತ್ತದೆ. ಕಳೆದ ಪಂದ್ಯದಲ್ಲಿ ಹೆಚ್ಚೇನೂ ಬ್ಯಾಟಿಂಗ್ ಮಾಡುವ ಅವಕಾಶ ಸಿಗದ ದಿನೇಶ್ ಕಾರ್ತಿಕ್ ಅವರನ್ನು ಈ ಪಂದ್ಯದಲ್ಲಿಯೂ ಸಹ ಮುಂದುವರೆಸಿದರೆ ರಿಷಬ್ ಪಂತ್ ಮತ್ತೆ ಅವಕಾಶ ವಂಚಿತರಾಗಲಿದ್ದಾರೆ.

ಎಲ್ಲರ ಚಿತ್ತ ಕೆಎಲ್ ರಾಹುಲ್ ಕಡೆ!
ಇನ್ನು ಕಳೆದ ಪಂದ್ಯದಲ್ಲಿ ಗೋಲ್ಡನ್ ಡಕ್ ಔಟ್ ಆದ ಕೆಎಲ್ ರಾಹುಲ್ ಕಡೆ ಇದೀಗ ಕ್ರಿಕೆಟ್ ಅಭಿಮಾನಿಗಳ ಚಿತ್ತ ನೆಟ್ಟಿದೆ. ಒಂದುವೇಳೆ ಟೀಮ್ ಇಂಡಿಯಾ ಹಾಂಗ್ ಕಾಂಗ್ ವಿರುದ್ಧದ ಪಂದ್ಯದಲ್ಲಿ ಕೆ ಎಲ್ ರಾಹುಲ್ ಅವರನ್ನು ಹೊರಗಿಡುವ ಕಠಿಣ ನಿರ್ಧಾರ ಕೈಗೊಂಡರೆ ರಿಷಭ್ ಪಂತ್ ಹಾಗೂ ದಿನೇಶ್ ಕಾರ್ತಿಕ್ ಇಬ್ಬರೂ ವಿಕೆಟ್ ಕೀಪರ್‌ಗಳನ್ನು ಕಣಕ್ಕಿಳಿಸುವ ಸಾಧ್ಯತೆಗಳಿವೆ. ಈ ಮೂಲಕ ರೋಹಿತ್ ಶರ್ಮಾ ರಿಷಬ್ ಪಂತ್ ಅವರಿಗೆ ಸ್ಥಾನ ನೀಡಲು ದಿನೇಶ್ ಕಾರ್ತಿಕ್ ಅವರನ್ನು ಹೊರ ಹಾಕುತ್ತಾರಾ ಅಥವಾ ಉಳಿದ ಯಾವುದಾದರೂ ಆಟಗಾರರನ್ನು ಹೊರಗಿಡುವ ಯತ್ನಕ್ಕೆ ಕೈ ಹಾಕ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಹಾಂಗ್ ಕಾಂಗ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯಬಹುದಾದ ತಂಡ
ರೋಹಿತ್ ಶರ್ಮಾ(ಸಿ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್/ ದಿನೇಶ್ ಕಾರ್ತಿಕ್, (ವಾರ) ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಅವೇಶ್ ಖಾನ್, ಯುಜುವೇಂದ್ರ ಚಾಹಲ್ ಮತ್ತು ಅರ್ಷದೀಪ್ ಸಿಂಗ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications