Asia Cup 2022: ಅವರು ತುಂಬಾ ಬಲಿಷ್ಠರು, ಅವರೇ ಏಷ್ಯಾಕಪ್ ಗೆಲ್ತಾರೆ ಎಂದ ಶೇನ್ ವಾಟ್ಸನ್

ಬಹು ನಿರೀಕ್ಷಿತ ಏಷ್ಯಾಕಪ್ ಟೂರ್ನಿ ಇದೇ ವಾರಾತ್ಯಂದಿಂದ ಆರಂಭಗೊಳ್ಳಲಿದ್ದು, ಟೂರ್ನಿಗೆ ಕ್ಷಣಗಣನೆ ಆರಂಭಗೊಂಡಿದೆ. ಅದರಲ್ಲಿಯೂ ಈ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುವುದರಿಂದ ಟೂರ್ನಿಯ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ ಎನ್ನಬಹುದು. ಹೌದು, ಐಸಿಸಿ ಟೂರ್ನಿಗಳನ್ನು ಹೊರತುಪಡಿಸಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿರುವ ಕಾರಣಕ್ಕೆ ಏಷ್ಯಾಕಪ್ ಭಾರೀ ನಿರೀಕ್ಷೆಯನ್ನು ಹೊಂದಿದೆ. ಅದರಲ್ಲಿಯೂ ಈ ಬಾರಿಯ ಏಷ್ಯಾಕಪ್ ಟೂರ್ನಿ ಟಿ ಟ್ವೆಂಟಿ ಮಾದರಿಯಲ್ಲಿ ಇರುವುದರಿಂದ ಟೀಮ್ ಇಂಡಿಯಾಗೆ ಕಳೆದ ಬಾರಿಯ ಟಿ ಟ್ವೆಂಟಿ ವಿಶ್ವಕಪ್‌ನಲ್ಲಿ ಪಾಕ್ ವಿರುದ್ಧದ ಸೋಲಿನ ಪ್ರತೀಕಾರವನ್ನು ತೀರಿಸಿಕೊಳ್ಳಲು ಇದು ಸರಿಯಾದ ವೇದಿಕೆಯಾಗಿದೆ ಎನ್ನಬಹುದು.
ಆಗಸ್ಟ್ 28ರ ಭಾನುವಾರದಂದು ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯ ನಡೆಯಲಿದ್ದು, ಈ ಬಾರಿ ಉಭಯ ತಂಡಗಳು ಎರಡು ಬಾರಿ ಮುಖಾಮುಖಿಯಾಗುವುದು ಖಚಿತ ಎನ್ನಬಹುದು. ಹೌದು, ಈಗಾಗಲೇ ಲೀಗ್ ಹಂತದಲ್ಲಿ ಇತ್ತಂಡಗಳು ಮುಖಾಮುಖಿಯಾಗುವುದು ಖಚಿತವಾಗಿದ್ದು ಸೂಪರ್ 12 ಹಂತದಲ್ಲಿ ಒಮ್ಮೆ ಮುಖಾಮುಖಿಯಾಗುವ ಸಾಧ್ಯತೆ ಹೆಚ್ಚಿದೆ. ಇನ್ನು ಫೈನಲ್ ಪಂದ್ಯದಲ್ಲಿಯೂ ಸಹ ಭಾರತ ಮತ್ತು ಪಾಕ್ ಪರಸ್ಪರ ಮುಖಾಮುಖಿಯಾಗುವ ಸಾಧ್ಯತೆಯಿದ್ದು ಟೂರ್ನಿಯಲ್ಲಿ ಎರಡೂ ತಂಡಗಳು ಮೂರು ಬಾರಿ ಮುಖಾಮುಖಿಯಾದರೆ ಆಶ್ಚರ್ಯವೇನಿಲ್ಲ.
ಇನ್ನು ಭಾರತ ಮತ್ತು ಪಾಕ್ ನಡುವಿನ ಭಾನುವಾರದ ಮುಖಾಮುಖಿಯ ಕುರಿತು ಹಲವಾರು ಮಾಜಿ ಕ್ರಿಕೆಟಿಗರು ಮಾತನಾಡಿದ್ದು ಯಾವ ತಂಡ ಗೆಲ್ಲಬಹುದು ಎಂಬುದನ್ನು ಊಹಿಸಿದ್ದಾರೆ. ಇದೀಗ ಈ ಸಾಲಿಗೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಶೇನ್ ವಾಟ್ಸನ್ ಸೇರಿದ್ದು, ಭಾರತ ಮತ್ತು ಪಾಕ್ ನಡುವಿನ ಪಂದ್ಯದಲ್ಲಿ ಯಾವ ತಂಡ ಗೆಲ್ಲಲಿದೆ ಹಾಗೂ ಟೂರ್ನಿಯಲ್ಲಿ ಯಾವ ತಂಡ ಚಾಂಪಿಯನ್ ಆಗಲಿದೆ ಎಂಬುದನ್ನು ಈ ಕೆಳಕಂಡಂತೆ ಊಹಿಸಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ವಿಜೇತರನ್ನು ಊಹಿಸಿದ ವಾಟ್ಸನ್
ಈ ಬಾರಿಯ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಮೊದಲ ಏಷ್ಯಾಕಪ್ ಮುಖಾಮುಖಿಯಲ್ಲಿ ಟೀಮ್ ಇಂಡಿಯಾವನ್ನು ಸೋಲಿಸಲು ಪಾಕ್ ಪ್ರಯತ್ನಿಸಬಹುದು ಎಂದು ಶೇನ್ ವಾಟ್ಸನ್ ಅಭಿಪ್ರಾಯಪಟ್ಟಿದ್ದಾರೆ. ಆದರೆ ಟೀಮ್ ಇಂಡಿಯಾ ಈ ಬಾರಿಯ ಏಷ್ಯಾಕಪ್ ಟೂರ್ನಿಯನ್ನು ಗೆಲ್ಲಲಿರುವ ಫೇವರಿಟ್ ತಂಡ ಎಂದಿರುವ ಶೇನ್ ವಾಟ್ಸನ್ ಯಾವುದೇ ದೇಶದ ಪಿಚ್ ಮತ್ತು ಹವಾಮಾನಕ್ಕೆ ಹೊಂದಿಕೊಳ್ಳುವ ಭಾರತ ತಂಡದಲ್ಲಿ ಬಲಿಷ್ಠ ಆಟಗಾರರಿದ್ದು ಅವರಿಗೆ ಸೂಪರ್ ಪವರ್ ಇದೆ ಎಂದು ಹೇಳಿಕೆ ನೀಡಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ ಗೆಲ್ಲಲಿರುವ ಬಲಿಷ್ಠ ತಂಡ ಎಂದು ಶೇನ್ ವಾಟ್ಸನ್ ಹೇಳಿಕೆ ನೀಡಿದ್ದಾರೆ.

ಈ ಪಂದ್ಯ ಗೆದ್ದವರೇ ಏಷ್ಯಾಕಪ್ ಗೆಲ್ಲಲಿದ್ದಾರೆ
ಇನ್ನೂ ಮುಂದುವರೆದು ಮಾತನಾಡಿರುವ ಶೇನ್ ವಾಟ್ಸನ್ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಆಗಸ್ಟ್ 28ರ ಪಂದ್ಯವನ್ನು ಯಾವ ತಂಡ ಗೆಲ್ಲಲಿದೆಯೋ ಆ ತಂಡ ಟ್ರೋಫಿಯನ್ನು ಗೆಲ್ಲಲಿದೆ ಎಂದು ಹೇಳಿಕೆ ನೀಡಿದ್ದಾರೆ.

ಟೂರ್ನಿಗೆ ಪ್ರಕಟವಾಗಿರುವ ತಂಡಗಳು
ಭಾರತ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದೀಪಕ್ ಹೂಡಾ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ರಿಷಬ್ ಪಂತ್, ದಿನೇಶ್ ಕಾರ್ತಿಕ್, ಭುವನೇಶ್ವರ್ ಕುಮಾರ್, ಅರ್ಶ್ದೀಪ್ ಸಿಂಗ್, ರವಿ ಬಿಷ್ಣೋಯ್, ಅವೇಶ್ ಖಾನ್, ಯುಜ್ವೇಂದ್ರ ಚಾಹಲ್.
ಪಾಕಿಸ್ತಾನ: ಬಾಬರ್ ಅಜಮ್(ನಾಯಕ), ಮೊಹಮ್ಮದ್ ರಿಜ್ವಾನ್, ಫಖರ್ ಜಮಾನ್, ಹೈದರ್ ಅಲಿ, ಖುಶ್ದಿಲ್ ಶಾ, ಆಸಿಫ್ ಅಲಿ, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಮೊಹಮ್ಮದ್ ವಾಸಿಮ್ ಜೂನಿಯರ್, ಹಾರಿಸ್ ರೌಫ್, ನಸೀಮ್ ಶಾ, ಶಾನವಾಜ್ ಹ ದಹಾನಿ, ಉಸ್ಮಾನ್ ಖಾದಿರ್, ಮೊಹಮ್ಮದ್ ಖಾದಿರ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications