Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Asia Cup 2023: ಈ ದಿನಾಂಕದಂದು ಏಷ್ಯಾ ಕಪ್ ವೇಳಾಪಟ್ಟಿ ಬಿಡುಗಡೆ; ಶ್ರೀಲಂಕಾದಲ್ಲಿ ಭಾರತ vs ಪಾಕ್ ಪಂದ್ಯ!

ಏಕದಿನ ಮಾದರಿಯ 2023ರ ಏಷ್ಯಾ ಕಪ್ ಪಂದ್ಯಾವಳಿಯು ಆಗಸ್ಟ್ 31ರಿಂದ ಸೆಪ್ಟೆಂಬರ್ 17ರವರೆಗೆ ನಡೆಯಲಿದ್ದು, ಈ ಪ್ರತಿಷ್ಠಿತ ಪಂದ್ಯಾವಳಿಗೆ ಹೈಬ್ರಿಡ್ ಮಾದರಿಯಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ಆತಿಥ್ಯ ವಹಿಸಲಿವೆ. ಇನ್ನು ಶೀಘ್ರದಲ್ಲೇ ಸಂಪೂರ್ಣ ವೇಳಾಪಟ್ಟಿ ಬಿಡುಗಡೆಯಾಗಲಿದೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಬಹು ನಿರೀಕ್ಷಿತ ಏಷ್ಯಾ ಕಪ್ 2023ರ ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿವೆ. ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ ಎಂದು ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ಬುಧವಾರ ಸ್ಪಷ್ಟಪಡಿಸಿದ್ದಾರೆ.

Asia Cup 2023: Asia Cup Full Schedule Released On This Date; IND vs PAK Match in Sri Lanka

ಏಷ್ಯಾ ಕಪ್‌ಗಾಗಿ ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸಬೇಕೆಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಒತ್ತಾಯಿಸುತ್ತಿದೆ ಎಂಬ ವರದಿಗಳಿಗೆ ವಿರುದ್ಧವಾಗಿ, ಏಷ್ಯಾ ಕಪ್ ಪಂದ್ಯಾವಳಿಗೆ ಒಪ್ಪಿಕೊಂಡಿರುವ ಹೈಬ್ರಿಡ್ ಮಾದರಿಯಲ್ಲಿ ನಡೆಯುತ್ತದೆ ಎಂದು ತಿಳಿಸಿದ್ದಾರೆ.

ಐಸಿಸಿ ಮುಖ್ಯ ಕಾರ್ಯನಿರ್ವಾಹಕರ ಸಭೆಗಾಗಿ (ಸಿಇಸಿ) ಡರ್ಬನ್‌ನಲ್ಲಿರುವ ಅರುಣ್ ಧುಮಾಲ್, ವೇಳಾಪಟ್ಟಿಯನ್ನು ಅಂತಿಮಗೊಳಿಸಲು ಗುರುವಾರ ನಿಗದಿಯಾಗಿದ್ದ ಐಸಿಸಿ ಮಂಡಳಿಯ ಸಭೆಗೂ ಮುನ್ನ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮತ್ತು ಪಿಸಿಬಿ ಸಂಭಾವ್ಯ ಮುಖ್ಯಸ್ಥ ಝಕಾ ಅಶ್ರಫ್ ಭೇಟಿಯಾಗಿದ್ದಾರೆ ಎಂದು ಖಚಿತಪಡಿಸಿದರು.

"ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಪಿಸಿಬಿ ಮುಖ್ಯಸ್ಥ ಝಕಾ ಅಶ್ರಫ್ ಅವರನ್ನು ಭೇಟಿ ಮಾಡಿದರು. ಏಷ್ಯಾ ಕಪ್ ವೇಳಾಪಟ್ಟಿಯನ್ನು ಅಂತಿಮಗೊಳಿಸಲಾಗಿದೆ ಮತ್ತು ಅದನ್ನು ಒಪ್ಪಿಗೆ ಪಡೆಯಲಾಗುತ್ತದೆ. ಪಾಕಿಸ್ತಾನದಲ್ಲಿ ಲೀಗ್ ಹಂತದ ನಾಲ್ಕು ಪಂದ್ಯಗಳು ನಡೆಯಲಿವೆ, ನಂತರ ಶ್ರೀಲಂಕಾದಲ್ಲಿ ಫೈನಲ್ ಸೇರಿದಂತೆ 9 ಪಂದ್ಯಗಳು ನಡೆಯಲಿವೆ".

"ಭಾರತ ಮತ್ತು ಪಾಕಿಸ್ತಾನ ನಡುವಿನ ಎರಡೂ ಪಂದ್ಯಗಳನ್ನು ಆಡಲಿವೆ ಮತ್ತು ಫೈನಲ್‌ನಲ್ಲಿ ಮೂರನೇ ಪಂದ್ಯವನ್ನು ಆಡಬಹುದು," ಎಂದು ಅರುಣ್ ಧುಮಾಲ್ ಪಿಟಿಐಗೆ ತಿಳಿಸಿದರು.

ಪಾಕಿಸ್ತಾನ ಕ್ರೀಡಾ ಸಚಿವ ಎಹ್ಸಾನ್ ಮಜಾರಿ ಕೆಲವು ಕಡೆ ಹೇಳಿಕೊಂಡಂತೆ, ಭಾರತವು ಪಾಕಿಸ್ತಾನ ದೇಶಕ್ಕೆ ಪ್ರಯಾಣಿಸಲಿದೆ ಎಂದು ಅಲ್ಲಿನ ಮಾಧ್ಯಮಗಳ ವರದಿಗಳನ್ನು ಅರುಣ್ ಧುಮಾಲ್ ತಳ್ಳಿಹಾಕಿದರು.

"ಅಂತಹ ಯಾವುದೇ ಚರ್ಚೆ ನಡೆದಿಲ್ಲ. ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ ಮತ್ತು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಕೂಡ ಪ್ರಯಾಣಿಸುವುದಿಲ್ಲ. ಏಷ್ಯಾ ಕಪ್ ವೇಳಾಪಟ್ಟಿಯನ್ನು ಮಾತ್ರ ಅಂತಿಮಗೊಳಿಸಲಾಗಿದೆ," ಎಂದು ಅರುಣ್ ಧುಮಾಲ್ ಸ್ಪಷ್ಟಪಡಿಸಿದರು.

ವರದಿಗಳ ಪ್ರಕಾರ, 2023ರ ಏಷ್ಯಾ ಕಪ್ ಅಂತಿಮ ವೇಳಾಪಟ್ಟಿಯನ್ನು ಶುಕ್ರವಾರ, ಜುಲೈ 14ರಂದು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಭಾರತ ತಂಡವು 2010ರ ಆವೃತ್ತಿಯಂತೆ ಶ್ರೀಲಂಕಾದ ದಂಬುಲ್ಲಾದಲ್ಲಿ ಪಾಕಿಸ್ತಾನ ತಂಡವನ್ನು ಎದುರಿಸುವ ನಿರೀಕ್ಷೆ ಇದೆ.

ಇನ್ನು ಪಾಕಿಸ್ತಾನ ತಂಡವು ತಮ್ಮ ಏಕೈಕ ತವರಿನ ಪಂದ್ಯದಲ್ಲಿ ದುರ್ಬಲ ನೇಪಾಳ ತಂಡದ ವಿರುದ್ಧ ಆಡಲಿದೆ. ಇತರ ಮೂರು ಪಂದ್ಯಗಳು ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ, ಬಾಂಗ್ಲಾದೇಶ ಮತ್ತು ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ಪಂದ್ಯಗಳು ನಡೆಯಲಿವೆ.

ಹೊಸ ಪಿಸಿಬಿ ಮಂಡಳಿಯು ಪ್ರಸ್ತಾವಿತ ಹೈಬ್ರಿಡ್ ಮಾದರಿಗೆ ತಾತ್ವಿಕವಾಗಿ ಒಪ್ಪಿಗೆ ಸೂಚಿಸಿದೆ. ಆಗಸ್ಟ್ 31ರಿಂದ ಸೆಪ್ಟೆಂಬರ್ 17ರವರೆಗೆ ನಡೆಯಲಿರುವ 2023ರ ಏಷ್ಯಾ ಕಪ್ ಅನ್ನು ನಿಲ್ಲಿಸುವುದಿಲ್ಲ ಎಂದು ಹೇಳಿದೆ.

ಇದೆ ವೇಳೆ ಮಂಗಳವಾರ ಡರ್ಬನ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮುಖ್ಯ ಕಾರ್ಯನಿರ್ವಾಹಕ ಸಮಿತಿ (ಸಿಇಸಿ) ಸಭೆಯಲ್ಲಿ, ಹೆಚ್ಚುತ್ತಿರುವ ಟಿ20 ಲೀಗ್‌ಗಳ ನಿಯಂತ್ರಣದ ಬಗ್ಗೆ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಾಗಲಿಲ್ಲ.

Story first published: Wednesday, July 12, 2023, 10:19 [IST]
Other articles published on Jul 12, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+