Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Asia Cup Winners: 1984ರಿಂದ ಏಷ್ಯಾ ಕಪ್ ವಿಜೇತ ತಂಡಗಳ ಪಟ್ಟಿ; ಹೆಚ್ಚು ಬಾರಿ ಗೆದ್ದ ತಂಡ ಯಾವುದು?

ಏಷ್ಯಾ ಕಪ್ ಏಷ್ಯಾದ ಅತ್ಯಂತ ಜನಪ್ರಿಯ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಒಂದೆನಿಸಿದೆ. ಈ ಟೂರ್ನಿಯನ್ನು ಎರಡು ವರ್ಷಗಳಿಗೊಮ್ಮೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಆಯೋಜಿಸುತ್ತದೆ. ಏಷ್ಯಾ ಕಪ್‌ನ 15ನೇ ಆವೃತ್ತಿಯನ್ನು ಯುಎಇಯಲ್ಲಿ 2022ರ ಆಗಸ್ಟ್ 27ರಿಂದ ಸೆಪ್ಟೆಂಬರ್ 11ರವರೆಗೆ ನಡೆಸಲಾಗಿತ್ತು.

2022ರಲ್ಲಿ ಟಿ20 ವಿಶ್ವಕಪ್‌ ಪಂದ್ಯಾವಳಿ ಇದ್ದ ಕಾರಣ, ಏಷ್ಯಾ ಕಪ್ ಟೂರ್ನಿಯನ್ನು ಟಿ20 ಮಾದರಿಯಲ್ಲಿ ಆಯೋಜಿಸಲಾಗಿತ್ತು ಹಾಗೂ ಆರು ತಂಡಗಳು ಭಾಗವಹಿಸಿದ್ದವು. ದ್ವೀಪ ರಾಷ್ಟ್ರ ಶ್ರೀಲಂಕಾ 2022ರ ಏಷ್ಯಾ ಕಪ್ ಪಂದ್ಯಾವಳಿಯ ಚಾಂಪಿಯನ್ ಆಗಿತ್ತು.

Asia Cup 2023: Asia Cup Winning Teams List Since 1984; Which Team Has WontThe Most Times?

2022ರ ಸೆಪ್ಟೆಂಬರ್ 11ರಂದು ಶ್ರೀಲಂಕಾ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಫೈನಲ್ ಪಂದ್ಯದಲ್ಲಿ ದಸುನ್ ಶನಕ ನಾಯಕತ್ವದ ಶ್ರೀಲಂಕಾ ತಂಡವು ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನವನ್ನು 23 ರನ್‌ಗಳಿಂದ ಸೋಲಿಸುವ ಮೂಲಕ ವಿಜೇತರಾಗಿದ್ದರು.

2023ರ ಏಷ್ಯಾ ಕಪ್ ಪಂದ್ಯಾವಳಿಯ ಆತಿಥ್ಯವನ್ನು ಪಾಕಿಸ್ತಾನಕ್ಕೆ ನೀಡಲಾಗಿದೆ. ಆದರೆ, ಹೈಬ್ರಿಡ್ ಮಾದರಿಯಲ್ಲಿ ಶ್ರೀಲಂಕಾವನ್ನು ಸಹ ಆಯೋಜಕ ರಾಷ್ಟ್ರವಾಗಿ ಆಯ್ಕೆ ಮಾಡಲಾಗಿದೆ. ಪಾಕಿಸ್ತಾನದಲ್ಲಿ 4 ಪಂದ್ಯಗಳು ನಡೆಯಲಿದ್ದರೆ, ಶ್ರೀಲಂಕಾದಲ್ಲಿ ಫೈನಲ್ ಸೇರಿ 9 ಪಂದ್ಯಗಳು ನಡೆಯಲಿವೆ.

Asia Cup 2023: Asia Cup Winning Teams List Since 1984; Which Team Has WontThe Most Times?

ಎರಡು ರಾಷ್ಟ್ರಗಳ ರಾಜಕೀಯ ಬಿಕ್ಕಟ್ಟಿನ ಕಾರಣದಿಂದ ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸುತ್ತಿಲ್ಲ. ಹೀಗಾಗಿ ಭಾರತ ತನ್ನ ಎಲ್ಲ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಲಿದೆ. 2023ರಲ್ಲಿ ಐಸಿಸಿ ಏಕದಿನ ವಿಶ್ವಕಪ್ ಇರುವ ಕಾರಣ, ಈ ಬಾರಿ 50 ಓವರ್‌ಗಳ ಮಾದರಿಯಲ್ಲಿ ಟೂರ್ನಿ ನಡೆಯಲಿದೆ.

ಇನ್ನು ಏಷ್ಯಾ ಕಪ್ ಪಂದ್ಯಾವಳಿಯನ್ನು 1984ರಲ್ಲಿ ಮೊದಲು ಆರಂಭಿಸಲಾಯಿತು. ಯುಎಇನಲ್ಲಿ ನಡೆದ ಚೊಚ್ಚಲ ಪಂದ್ಯಾವಳಿಯಲ್ಲಿ ಭಾರತ ತಂಡ ವಿಜೇತವಾಗಿದ್ದರೆ, ಶ್ರೀಲಂಕಾ ತಂಡ ರನ್ನರ್-ಅಪ್ ಆಗಿತ್ತು. 1984ರಿಂದ 2022ರವರೆಗಿನ ಏಷ್ಯಾ ಕಪ್ ಪಂದ್ಯಾವಳಿ ವಿಜೇತ, ರನ್ನರ್ ಅಪ್ ಮತ್ತು ಆಯೋಜಕ ದೇಶಗಳ ಮಾಹಿತಿ ಇಲ್ಲಿದೆ.

1984 - ಯುಎಇನಲ್ಲಿ ನಡೆದ ಚೊಚ್ಚಲ ಏಷ್ಯಾ ಕಪ್ ಪಂದ್ಯಾವಳಿಯನ್ನು ಭಾರತ ಗೆದ್ದುಕೊಂಡಿತ್ತು ಹಾಗೂ ಶ್ರೀಲಂಕಾ ರನ್ನರ್-ಅಪ್ ಆಗಿತ್ತು.

1986 - ಶ್ರೀಲಂಕಾದಲ್ಲಿ ಆಯೋಜನೆಯಾಗಿದ್ದ ಎರಡನೇ ಏಷ್ಯಾ ಕಪ್ ಪಂದ್ಯಾವಳಿಯನ್ನು ಆತಿಥೇಯ ಶ್ರೀಲಂಕಾ ಗೆದ್ದುಕೊಂಡಿದ್ದರೆ, ಪಾಕಿಸ್ತಾನ ತಂಡ ರನ್ನರ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತ್ತು.

1988 - ಬಾಂಗ್ಲಾದೇಶದಲ್ಲಿ ನಡೆಸಲಾದ 3ನೇ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಭಾರತ ವಿಜೇತ ತಂಡವಾಗಿದ್ದರೆ, ಶ್ರೀಲಂಕಾ ರನ್ನರ್-ಅಪ್ ಆಗಿತ್ತು.

1991 - ಮತ್ತೆ ಬಾಂಗ್ಲಾದೇಶದಲ್ಲಿ ನಡೆಸಲಾದ 4ನೇ ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ತಂಡವೇ ಚಾಂಪಿಯನ್ ಆಗಿದ್ದರೆ, ಶ್ರೀಲಂಕಾ ರನ್ನರ್-ಅಪ್ ಆಗಿತ್ತು.

1995 - ಯುಎಇನಲ್ಲಿ ಆಯೋಜಿಸಿದ್ದ 5ನೇ ಏಷ್ಯಾ ಕಪ್ ಪಂದ್ಯಾವಳಿಯಲ್ಲಿಯೂ ಕೂಡ ಭಾರತ ತಂಡ ವಿಜೇತವಾಗಿತ್ತು ಹಾಗೂ ಶ್ರೀಲಂಕಾ ತಂಡವೇ ರನ್ನರ್-ಅಪ್ ಆಗಿತ್ತು.

1997 - ಶ್ರೀಲಂಕಾದಲ್ಲಿ ನಡೆದ 6ನೇ ಏಷ್ಯಾ ಕಪ್ ಟೂರ್ನಿಯಲ್ಲಿ ಆತಿಥೇಯ ಶ್ರೀಲಂಕಾ ವಿಜೇತವಾಗಿದ್ದರೆ, ಭಾರತ ತಂಡ ರನ್ನರ್-ಅಪ್ ಆಗಿತ್ತು.

2000 - ಬಾಂಗ್ಲಾದೇಶದಲ್ಲಿ ಆಯೋಜನೆಯಾಗಿದ್ದ 7ನೇ ಏಷ್ಯಾ ಕಪ್ ಪಂದ್ಯಾವಳಿಯನ್ನು ಪಾಕಿಸ್ತಾನ ಗೆದ್ದುಕೊಂಡಿದ್ದರೆ, ಶ್ರೀಲಂಕಾ ರನ್ನರ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತ್ತು.

2004 - ಶ್ರೀಲಂಕಾದಲ್ಲಿ ನಡೆದ 8ನೇ ಏಷ್ಯಾ ಕಪ್ ಟೂರ್ನಿಯಲ್ಲಿ ಶ್ರೀಲಂಕಾ ಚಾಂಪಿಯನ್ ಆದರೆ, ಭಾರತ ತಂಡ ಎರಡನೇ ಸ್ಥಾನ ಪಡೆಯಿತು.

2008 - ಪಾಕಿಸ್ತಾನದಲ್ಲಿ ನಡೆದ 9ನೇ ಏಷ್ಯಾ ಕಪ್ ಪಂದ್ಯಾವಳಿಯ ಫೈನಲ್‌ನಲ್ಲಿ ಭಾರತ ವಿರುದ್ಧ ಶ್ರೀಲಂಕಾ ಗೆಲುವು ಸಾಧಿಸಿತ್ತು.

2010 - ಶ್ರೀಲಂಕಾದಲ್ಲಿ ನಡೆದ 10ನೇ ಏಷ್ಯಾ ಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಶ್ರೀಲಂಕಾವನ್ನು ಸೋಲಿಸಿ ಭಾರತ ಚಾಂಪಿಯನ್ ಆಗಿತ್ತು.

2012 - ಬಾಂಗ್ಲಾದೇಶದಲ್ಲಿ ನಡೆದ 11ನೇ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಪಾಕಿಸ್ತಾನ ವಿಜೇತವಾಗಿದ್ದರೆ, ಆತಿಥೇಯ ಬಾಂಗ್ಲಾದೇಶ ರನ್ನರ್-ಅಪ್ ಆಗಿತ್ತು.

2014 - ಬಾಂಗ್ಲಾದೇಶದಲ್ಲಿ ಆಯೋಜನೆಯಾಗಿದ್ದ 12ನೇ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಪಾಕಿಸ್ತಾನ ತಂಡವನ್ನು ಸೋಲಿಸಿ ಶ್ರೀಲಂಕಾ ವಿಜೇತ ತಂಡವಾಗಿತ್ತು.

2016 - ಬಾಂಗ್ಲಾದೇಶದಲ್ಲಿ 13ನೇ ಏಷ್ಯಾ ಕಪ್ ಟೂರ್ನಿಯನ್ನು ಭಾರತ ತಂಡ ಗೆದ್ದರೆ, ಬಾಂಗ್ಲಾದೇಶ ತಂಡ ರನ್ನರ್-ಅಪ್ ಆಗಿತ್ತು.

2018 - ಯುಎಇನಲ್ಲಿ ನಡೆದ 14ನೇ ಏಷ್ಯಾ ಕಪ್ ಪಂದ್ಯಾವಳಿಯಲ್ಲಿಯೂ ಭಾರತ ವಿಜೇತವಾದರೆ, ಬಾಂಗ್ಲಾದೇಶ ತಂಡ ಎರಡನೇ ಸ್ಥಾನ ಪಡೆಯಿತು.

2022 - ಯುಎಇನಲ್ಲಿ ನಡೆದ 15ನೇ ಏಷ್ಯಾ ಕಪ್ ಟೂರ್ನಿಯಲ್ಲಿ ಶ್ರೀಲಂಕಾ ತಂಡವು ಪಾಕಿಸ್ತಾನವನ್ನು ಸೋಲಿಸಿ ಕಪ್ ಎತ್ತಿ ಹಿಡಿದಿತ್ತು.

ಕಳೆದ 15 ಏಷ್ಯಾ ಕಪ್ ಆವೃತ್ತಿಗಳಲ್ಲಿ ಭಾರತ ತಂಡ 7 ಬಾರಿ ಗೆದ್ದುಕೊಂಡಿದ್ದರೆ, ಶ್ರೀಲಂಕಾ 6 ಬಾರಿ ಗೆದ್ದಿದೆ. ಪಾಕಿಸ್ತಾನ 2 ಬಾರಿ ಗೆಲುವು ಸಾಧಿಸಿದೆ. ಬಾಂಗ್ಲಾದೇಶ, ಅಫ್ಘಾನಿಸ್ತಾನ, ನೇಪಾಳ, ಹಾಂಗ್ ಕಾಂಗ್ ದೇಶಗಳು ಇನ್ನು ಖಾತೆ ತೆರೆದಿಲ್ಲ.

Story first published: Wednesday, June 21, 2023, 12:55 [IST]
Other articles published on Jun 21, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+