Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಏಷ್ಯಾಕಪ್: ಟೀಮ್ ಇಂಡಿಯಾ ಜರ್ಸಿಯಲ್ಲಿ ಕಾಣಿಸಲಿದೆ ಪಾಕಿಸ್ತಾನದ ಹೆಸರು!

ಇದೇ ಮೊದಲ ಬಾರಿಗೆ ಟೀಮ್ ಇಂಡಿಯಾ ಪಾಕಿಸ್ತಾನದ ಹೆಸರಿರುವ ಜರ್ಸಿಯಲ್ಲಿ ಏಷ್ಯಾ ಕಪ್ ಟೂರ್ನಿಯಲ್ಲಿ ಆಡಲಿದೆ. ಹೌದು, ಟೀಮ್ ಇಂಡಿಯಾದ ಜರ್ಸಿಯಲ್ಲಿ ಪಾಕಿಸ್ತಾನದ ಹೆಸರು ಕೂಡ ಕಾಣಿಸಲಿದೆ. ಇದಕ್ಕೆ ಕಾರಣ ಈ ಬಾರಿಯ ಏಷ್ಯಾ ಕಪ್ ಟೂರ್ನಿಯ ಆತಿಥ್ಯವನ್ನು ಪಾಕಿಸ್ಥಾನ ವಹಿಸಿಕೊಳ್ಳುತ್ತಿದೆ. ಬಹುತೇಕ ಭಾಗ ಪಾಕಿಸ್ತಾನಕ್ಕಿಂತ ಹೊರಗೆ ಶ್ರೀಲಂಕಾದಲ್ಲಿ ಆಯೋಜನೆಯಾದರು ಪ್ರಾಥಮಿಕ ಆತಿಥ್ಯ ರಾಷ್ಟ್ರವಾಗಿ ಪಾಕಿಸ್ತಾನ ಇರುವುದೇ ಇದಕ್ಕೆ ಕಾರಣ.

ಪಾಕಿಸ್ತಾನ ಹಾಗೂ ನೇಪಾಳ ತಂಡಗಳು ಮುಖಾಮುಖಿಯಾಗುವ ಮೂಲಕ ಆಗಸ್ಟ್ 30ರಿಂದ ಏಷ್ಯಾಕಪ್ ಟೂರ್ನಿ ಆರಂಭವಾಗಲಿದೆ. ಭಾರತ ಪಾಕಿಸ್ತಾನ ನೆಲದಲ್ಲಿ ಆಡಲು ಒಪ್ಪದ ಕಾರಣದಿಂದಾಗಿ ಭಾರತದ ಎಲ್ಲಾ ಪಂದ್ಯಗಳು ಕೂಡ ಶ್ರೀಲಂಕಾದಲ್ಲಿ ಆಯೋಜನೆಯಾಗಲಿದೆ. ಆದರೆ ಈಗಾಗಲೇ ಹೇಳಿದಂತೆ ಪಾಕಿಸ್ಥಾನವೇ ಈ ಟೂರ್ನಿಯ ಪ್ರಾಥಮಿಕ ಆತಿಥ್ಯ ರಾಷ್ಟ್ರ ಎಂದು ಗುರುತಿಸಿಕೊಳ್ಳುತ್ತದೆ.

Asia Cup 2023: For first time ever, Pakistan name in Team India jersey on Asia Cup

ಏಷ್ಯಾ ಕಪ್ ಟೂರ್ನಿಯಲ್ಲಿ ಭಾಗವಹಿಸುವ ಎಲ್ಲಾ ತಂಡಗಳ ಬಲಭಾಗದಲ್ಲಿ ಏಷ್ಯಾಕಪ್ ಲೋಗೋ ಹಾಗೂ ಆತಿಥ್ಯ ರಾಷ್ಟ್ರವಾದ ಪಾಕಿಸ್ತಾದ ಹೆಸರು ಕಾಣಿಸಿಕೊಳ್ಳಲಿದೆ. ಹಾಗಾಗಿ ನಿಯಮದ ಪ್ರಕಾರ ಭಾರತದ ಜರ್ಸಿಯಲ್ಲಿಯೂ ಪಾಕಿಸ್ತಾನದ ಹೆಸರು ಕಾಣಿಸಿಕೊಳ್ಳಲಿದೆ. ಇನ್ನು ಈ ಟೂರ್ನಿಯಲ್ಲಿ ಭಾರತ ಸಪ್ಟೆಂಬರ್ 2ರಂದು ಪಾಕಿಸ್ತಾನ ತಂಡವನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.

ಭಾರತ ಹಾಗೂ ಪಾಕಿಸ್ತಾನ ವಿರುದ್ಧದ ಈ ಬಹುನಿರೀಕ್ಷಿತ ಪಂದ್ಯ ಶ್ರೀಲಂಕಾದ ಕ್ಯಾಂಡಿಯಲ್ಲಿ ಆಯೋಜನೆಯಾಗಲಿದ್ದು ಅಭಿಮಾನಿಗಳು ಈ ಪಂದ್ಯವನ್ನು ವೀಕಲ್ಷಿಸಲು ಕಿಕ್ಕಿರಿದು ಸೇರಿವ ನಿರೀಕ್ಷೆಯಿದೆ. ಇನ್ನು ಈ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನಗಳು ಕೇವಲ ಒಂದು ಭಾರಿ ಮಾತ್ರವಲ್ಲ ಗರಿಷ್ಠ ಮೂರು ಬಾರಿ ಮುಖಾಮುಖಿಯಾಗುವ ಅವಕಾಶವೂ ಇದೆ. ಆದರೆ ಅದಕ್ಕೆ ಈ ಎರೆಉ ತಂಡಗಳು ಕೂಡ ಫೈನಲ್‌ಗೆ ಪ್ರವೇಶಿಸಬೇಕಾಗುತ್ತದೆ.

7ನೇ ಬಾರಿ ಏಷ್ಯಾ ಕಪ್ ಗೆಲ್ಲುವತ್ತ ರೋಹಿತ್ ಪಡೆಯ ಚಿತ್ತ
ಕಳೆದ ವರ್ಷ 2022ರಲ್ಲಿ ಟಿ20 ಮಾದರಿಯಲ್ಲಿ ನಡೆದ ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ನೀರಸ ಪ್ರದರ್ಶನ ನೀಡಿದ ಪರಿಣಾಮ ಫೈನಲ್‌ಗೆ ಪ್ರವೇಶಿಸಲು ವಿಫಲವಾಗಿತ್ತು. ಆದರೆ ಈ ಬಾರಿ ರೋಹಿತ್ ಪಡೆ ಟ್ರೋಫಿ ಗೆಲ್ಲುವ ಕನಸಿನೊಂದಿಗೆ ಕಣಕ್ಕಿಳಿಯುತ್ತಿದೆ. ಅಲ್ಲದೆ ಏಕದಿನ ವಿಶ್ವಕಪ್ ಕೂಡ ಮುಂದಿರುವ ಕಾರಣ ತಂಡದ ಸಂಯೋಜನೆಯನ್ನು ಕೂಡ ಸರಿಮಾಡಿಕೊಳ್ಳುವ ಅಂತಿಮ ಅವಕಾಶ ಇದಾಗಿರಲಿದೆ.

ಇನ್ನು ವೆಸ್ಟ್ ಇಂಡಿಸ್ ವಿರುದ್ಧದ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾದ ಯೋಜನೆ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಸಾಧಿಸಲಿಲ್ಲ. ಕೆಲ ಆಟಗಾರರು ತಮಗೆ ದೊರೆತ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳಲಿಲ್ಲ. ಆದರೆ ಏಷ್ಯಾಕಪ್ ಟೂರ್ನಿಗೆ ಯುವ ಅನುಭವಿ ಆಟಗಾರರಾದ ಜಸ್ಪ್ರೀತ್ ಬೂಮ್ರಾ, ಕೆಎಲ್ ರಾಹುಲ್ ರೀತಿಯ ಅನುಭವಿ ಆಟಗಾರರು ಕಮ್‌ಬ್ಯಾಕ್ ಮಾಡುತ್ತಿದ್ದು ಸಮತೋಲಿನ ಆಡುವ ಬಳಗವನ್ನು ಹೊಂದುವ ನಿರೀಕ್ಷೆಯಿದೆ.

Story first published: Thursday, August 10, 2023, 16:55 [IST]
Other articles published on Aug 10, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+