ತೀವ್ರ ಕುತೂಹಲ ಮೂಡಿಸಿರುವ ಏಷ್ಯಾ ಕಪ್ ಟೂರ್ನಿಯ ವೇಳಾಪಟ್ಟಿ ಇಂದು ಜುಲೈ 19ರಂದು ಬಿಡುಗಡೆಯಾಗಲಿದ್ದು ಈ ಮೂಲಕ ಕ್ರಿಕಟ್ ಅಭಿಮಾನಿಗಳ ಕಾತರ ಅಂತ್ಯವಾಗಲಿದೆ. ವರದಿಗಳ ಪ್ರಕಾರ ಈ ಬಾರಿಯ ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಕನಿಷ್ಠ ಎರಡು ಬಾರಿ ಮುಖಾಮುಖಿಯಾಗುವುದು ನಿಶ್ಚಿತ ಎನ್ನಲಾಗಿದೆ.
ಗ್ರೂಪ್ ಹಂತದಲ್ಲಿ ಎರಡು ಬಾರಿ ಮುಖಾಮುಖಿಯಾಗಲಿರುವ ಕಾರಣ ಈ ಎರಡು ತಂಡಗಳ ನಡುವಿನ ರೋಚಕ ಕದನವನ್ನು ಏಷ್ಯಾಕಪ್‌ನಲ್ಲಿಯೆ ಎರಡು ಬಾರಿ ವೀಕ್ಷಿಸುವ ಅವಕಾಶ ಅಭಿಮಾನಿಗಳಿಗೆ ದೊರೆಯಲಿದೆ. ಮೊದಲ ಸುತ್ತಿನ ಪಂದ್ಯ ಸೆಪ್ಟೆಂಬರ್ 2ರಂದು ನಡೆಯಲಿದೆ. ಎರಡನೇ ಪಂದ್ಯ ಸೆಪ್ಟೆಂಬರ್ 10ರಂದು ನಡೆಯಲಿದೆ ಎನ್ನಲಾಗಿದೆ. ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಈ ಪಂದ್ಯ ಶ್ರೀಲಂಕಾದ ದಾಂಬುಲಾ ಅಥವಾ ಕ್ಯಾಂಡಿಯಲ್ಲಿ ನಡೆಯುವ ನಿರೀಕ್ಷೆಯಿದೆ.

ಇನ್ನು ಈ ಬಾರಿಯ ಏಷ್ಯಾ ಕಪ್ ಟೂರ್ನಿಯ ಫಿಕ್ಚರ್ ಪ್ರಕಾರ ಕನಿಷ್ಠ 2 ಬಾರಿ ಮತ್ತು ಗರಿಷ್ಠ 4 ಬಾರಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುವ ಅವಕಾಶವಿದೆ ಎನ್ನಲಾಗಿದೆ. ಲೀಗ್ ಹಂತದ ಬಳಿಕ ಮುಂದಿನ ಸುತ್ತಿನಲ್ಲಿಯೂ ಈ ಎರಡು ತಂಡಗಳು ಮುಖಾಮುಖಿಯಾಗುವ ಅವಕಾಶವಿದ್ದು ಅದಾದ ಬಳಿಕ ಫೈನಲ್‌ಗೆ ಪ್ರವೇಶ ಪಡೆದುಕೊಂಡರೆ ಅಲ್ಲಿಯೂ ಈ ಎರಡು ತಂಡಗಳು ಮುಖಾಮುಖಿಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಹೀಗಾಗಿ ಈ ವೇಳಾಪಟ್ಟಿ ಕೂಡ ಸಾಕಷ್ಟು ಕುತೂಹಲ ಕೆರಳಿಸಿದೆ.
ಈ ಟೂರ್ನಿಯ ಉದ್ಟಾಟನೆ ಆಗಸ್ಟ್ 30 ಅಥವಾ 31ರಂದು ನಡೆಯಲಿದ್ದು ಆ ದಿನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ನೇಪಾಳ ತಂಡವನ್ನು ಮುಲ್ತಾನ್‌ನಲ್ಲಿ ಎದುರಿಸಲಿದೆ. ಲಾಹೋರ್ ಈ ಏಷ್ಯಾಕಪ್‌ನಲ್ಲಿ ಪಾಕಿಸ್ತಾನದಲ್ಲಿ ನಡೆಯುವ ಪಂದ್ಯಗಳ ಮತ್ತೊಂದು ತಾಣವಾಗಿರಲಿದೆ. ಉಳಿದ ಪಂದ್ಯಗಳು ಶ್ರೀಲಂಕಾದಲ್ಲಿಯೇ ಆಯೋಜನೆಯಾಗಲಿದೆ.
ಇನ್ನು ಈ ಬಾರಿಯ ಏಷ್ಯಾ ಕಪ್ ಆಯೋಜನೆಯ ಹಕ್ಕನ್ನು ಪಾಕಿಸ್ತಾನ ಹೊಂದಿದ್ದ ಕಾರಣ ಆಡುವ ತಾಣಗಳ ವಿಚಾರವಾಗಿ ಸಾಕಷ್ಟು ದೊಡ್ಡ ಮಟ್ಟದ ಭಿನ್ನಾಭಿಪ್ರಾಯಗಳು ವ್ಯಕ್ತವಾಗಿತ್ತು. ಭಾರತ ಪಾಕಿಸ್ತಾನ ನೆಲದಲ್ಲಿ ಆಡಲು ಸಿದ್ಧವಿಲ್ಲದ ಕಾರಣ ಬಿಸಿಸಿಐ ಹಾಗೂ ಪಿಸಿಬಿ ನಡುವೆ ಸಾಕಷ್ಟು ಹಗ್ಗಜಗ್ಗಾಟಕ್ಕೆ ಕಾರಣವಾಗಿತ್ತು. ಇದೇ ಕಾರಣವನ್ನಿಟ್ಟುಕೊಂಡು ಪಾಕಿಸ್ತಾನ ಭಾರತದಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸದಿರುವ ಬೆದರಿಕೆಯನ್ನು ಐಸಿಸಿಗೆ ಒಡ್ಡಿತ್ತು.

ಅಂತಿಮವಾಗಿ ಹೈಬ್ರಿಡ್ ಮಾದರಿಯಲ್ಲಿ ಕೆಲ ಪಂದ್ಯಗಳನ್ನು ಪಾಕಿಸ್ತಾನದಲ್ಲಿ ಹಾಗೂ ಇನ್ನುಳಿದ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಹೀಗಾಗಿ ಭಾರತದ ಎಲ್ಲಾ ಪಂದ್ಯಗಳು ಸೇರಿದಂತೆ ನಾಕೌಟ್ ಹಾಗೂ ಫೈನಲ್ ಪಂದ್ಯಗಳು ಶ್ರೀಲಂಕಾದಲ್ಲಿಯೇ ಆಯೋಜನೆಯಾಗಲಿದೆ.