Asia Cup 2023: ಪಾಕಿಸ್ತಾನದ ಕೈತಪ್ಪಲಿದೆ ಏಷ್ಯಾ ಕಪ್ ಆತಿಥ್ಯ?: ಶ್ರೀಲಂಕಾ ಆತಿಥ್ಯ ಸಾಧ್ಯತೆ
ಕುತೂಹಲಕಾರಿ ಬೆಳವಣಿಗೆಯಲ್ಲಿ ಈ ಬಾರಿಯ ಏಷ್ಯಾ ಕಪ್ ಟೂರ್ನಿಯ ಆತಿಥ್ಯವನ್ನು ಪಾಕಿಸ್ತಾನ ಕಳೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಈ ಬಗ್ಗೆ ಮೂಲಗಳ ಹೇಳಿಕೆ ಆಧರಿಸಿ ಇಂಡಿಯಾ ಟುಡೇ ವರದಿ ಮಾಡಿದೆ. ಈ ವರದಿಯ ಪ್ರಕಾರ ಪಾಕಿಸ್ತಾನದಲ್ಲಿ ಆಯೋಜನೆಯಾಗಬೇಕಿದ್ದ ಏಷ್ಯಾ ಕಪ್ ಟೂರ್ನಿ ಶ್ರೀಲಂಕಾದಲ್ಲಿ ಆಯೋಜನೆಗೆ ಸಿದ್ಧತೆಗಳು ನಡೆಯುತ್ತಿದೆ.
ಈ ವರ್ಷ ನಡೆಯಲಿರುವ ಏಷ್ಯಾ ಕಪ್ ಟೂರ್ನಿಯನ್ನು ಆಯೋಜನೆ ಮಾಡುವ ಹಕ್ಕನ್ನು ಪಾಕಿಸ್ತಾನ ಪಡೆದುಕೊಂಡಿದೆ. ಆದರೆ ಭಾರತ ಹಾಗೂ ಪಾಕಿಸ್ತಾನ ಎರಡು ದೇಶಗಳ ನಡುವಿನ ಸಂಬಂಧ ಉತ್ತಮವಾಗಿಲ್ಲವಾದ ಕಾರಣ ಭಾರತ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಳ್ಳುವುದಿಲ್ಲ ಎಂಬುದನ್ನು ಈ ಹಿಂದೆಯೇ ಭಾರತ ಖಚಿತಪಡಿಸಿತ್ತು. ಹೀಗಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹೈಬ್ರಿಡ್ ಮಾದರಿಯಲ್ಲಿ ಈ ಟೂರ್ನಿ ಆಯೋಜನೆ ಮಾಡುವ ಪ್ರಸ್ತಾಪವನ್ನು ಏಷ್ಯಾ ಕ್ರಿಕೆಟ್ ಕೌನ್ಸಿಲ್ ಮುಂದಿಟ್ಟಿತ್ತು. ಅಂದರೆ ಭಾರತದ ಪಂದ್ಯಗಳನ್ನು ಪಾಕಿಸ್ತಾನ ಹೊರತುಪಡಿಸಿ ತಟಸ್ಥ ತಾಣದಲ್ಲಿ ಆಯೋಜನೆ ಮಾಡಿ ಉಳಿದ ಪಂದ್ಯಗಳು ಪಾಕಿಸ್ತಾನದಲ್ಲಿಯೇ ನಡೆಯುವುದು ಈ ಪ್ರಸ್ತಾಪದಲ್ಲಿತ್ತು.

ಆದರೆ ಈಗ ನಡೆಯುತ್ತಿರುವ ಬೆಳವಣಿಗೆಯಲ್ಲಿ ಸಂಪೂರ್ಣ ಟೂರ್ನಿಯೇ ಪಾಕಿಸ್ತಾನ ಬಿಟ್ಟು ನಡೆಯುವ ಸಾಧ್ಯತೆಯಿದೆ. ಹಾಗಾಗಿ ಶ್ರೀಲಂಕಾ ಈ ಟೂರ್ನಿಯನ್ನು ಆಯೋಜನೆ ಮಾಡುವ ಸಾಧ್ಯತೆ ದಟ್ಟವಾಗಿದೆ. ಇಂಡಿಯಾ ಟುಡೇ ಬಲ್ಲ ಮೂಲಗಳ ಹೇಳಿಯನ್ನು ಆಧರಿಸಿ ಮಾಡಿರುವ ವರದಿಯಲ್ಲಿ "ಮುಂದಿನ ತಿಂಗಳಿನಲ್ಲಿ ಎಸಿಸಿ ಮತ್ತೊಂದು ಸಭೆ ನಡೆಸಲಿದ್ದು ಅಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ" ಎಂದು ಪ್ರಕಟಿಸಿದೆ.
ಏಷ್ಯಾ ಕಪ್ ಟೂರ್ನಿ ಆಯೋಜನೆಯ ಹಿನ್ನೆಲೆಯಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ನಜೀಮ್ ಸೇಥಿ ಈ ಹಿಂದೆ ಪ್ರತಿಕ್ರಿಯೆ ನೀಡಿದ್ದರು. ಆ ಸಂದರ್ಭದಲ್ಲಿ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ನಡೆಯಲಿದ್ದು ಭಾರತ ಬಾಗಿಯಾಗುವ ಪಂದ್ಯಗಳು ದುಬೈನಲ್ಲಿ ನಡೆಯುವ ಸಾಧ್ಯತೆಯಿದೆ. ಉಳಿದ ಪಂದ್ಯಗಳು ಪಾಕಿಸ್ತಾನದಲ್ಲಿಯೇ ಆಯೋಜನೆಯಾಗಲಿದೆ ಎಂದಿದ್ದರು.
"ನಾವು ಪ್ರಸ್ತಾಪಿಸಿದಂತೆ ಏಷ್ಯಾ ಕಟ್ ಟೂರ್ನಿಯನ್ನು ಹೈಬ್ರಿಡ್ ಮಾದರಿಯಲ್ಲಿ, ಭಾರತ ಪಾಕಿಸ್ಥಾಕ್ಕಿಂತ ಹೊರಗಡೆ ಹಾಗೂ ಉಳಿದ ಪಂದ್ಯಗಳು ಪಾಕಿಸ್ತಾನದಲ್ಲಿಯೇ ಆಯೋಜನೆಯಾಗಲಿದೆ. ಇದನ್ನು ಬಿಟ್ಟು ನಾವು ಬೇರೆ ಯಾವುದೇ ವೇಳಾಪಟ್ಟಿಯನ್ನು ಸ್ವೀಕರಿಸುವುದಿಲ್ಲ ಎಂದು ನಾವು ಸ್ಪಷ್ಟಪಡಿಸಿದ್ದೇವೆ" ಎಂದು ಹೇಳಿಕೆ ನೀಡಿದ್ದರು ಪಿಸಿಬಿ ಮುಖ್ಯಸ್ಥ ನಜೀಮ್ ಸೇಥಿ.
ಇನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ 2022ರ ಬಿಸಿಸಿಐನ ವಾರ್ಷಿಕ ಸಾಮಾನ್ಯ ಸಭೆಯ ಬಳಿಕ 2023ರ ಏಷ್ಯಾ ಕಪ್ ಟೂರ್ನಿ ತಟಸ್ಥ ಸ್ಥಳದಲ್ಲಿ ಆಯೋಜನೆಯಾಗಲಿದೆ ಎಂದಿದ್ದರು. ಎಸಿಸಿ ಅಧ್ಯಕ್ಷರೂ ಆಗಿರುವ ಜಯ್ ಶಾ ನೀಡಿರುವ ಈ ಹೇಳಿಕೆ ಕುತೂಹಲ ಮೂಡಿಸಿತ್ತು. "ನಾನು ಎಸಿಸಿ ಅಧ್ಯಕ್ಷನಾಗಿ ಹೇಳುತ್ತಿದ್ದೇನೆ. ನಾವು(ಭಾರತ) ಪಾಕಿಸ್ತಾನಕ್ಕೆ ಪ್ರಯಾಣಿಸಲು ಸಾಧ್ಯವಿಲ್ಲ. ಅವರು(ಪಾಕಿಸ್ತಾನ) ಇಲ್ಲಿಗೆ ಬರಲು ಸಾಧ್ಯವಿಲ್ಲ. ಈ ಹಿಂದೆ ಕೂಡ ಏಷ್ಯಾ ಕಪ್ ತಟಸ್ಥ ತಾಣಗಳಲ್ಲಿ ಆಯೋಜನೆಯಾಗಿತ್ತು" ಎಂದಿದ್ದರು ಜಯ್ ಶಾ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications