Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Asia cup 2023: ಅಫ್ಘಾನಿಸ್ತಾನಕ್ಕೆ ಗೆಲ್ಲಲು ಬೃಹತ್ ಮೊತ್ತದ ಗುರಿ ನೀಡಿದ ಬಾಂಗ್ಲಾದೇಶ

ಏಷ್ಯಾಕಪ್ ಟೂರ್ನಿಯಲ್ಲಿ ಗೆಲ್ಲಲೇ ಬೇಕಿದ್ದ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದೆ. ಆರಂಭಿಕ ಆಟಗಾರ ಮೆಹದಿ ಹಸನ್ ಮಿರಾಜ್ ಹಾಗೂ ನಜ್ಮಲ್ ಹುಸೇನ್ ಶಂಟೋ ಅವರ ಅಮೋಘ ಶತಕದ ನೆರವಿನಿಂದಾಗಿ ಬಾಂಗ್ಲಾದೇಶ ಈ ಪಂದ್ಯದಲ್ಲಿ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 334 ರನ್‌ಗಳನ್ನು ಗಳಿಸಿದೆ.

ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಬಾಂಗ್ಲಾದೇಶ ತಂಡ ಅದ್ಭುತ ಆರಂಭವನ್ನು ಪಡೆಯಿತು. ಮೊದಲ ವಿಕೆಟ್‌ಗೆ 60 ರನ್‌ಗಳ ಜೊತೆಯಾಟ ಬಂದಿತ್ತು. ಆದರೆ ತೌಹಿದ್ ಹೃದೊಯ್ ಶೂನ್ಯಕ್ಕೆ ಔಟಾಗುವ ಮೂಲಕ 63 ರನ್‌ಗಳಿಗೆ ಬಾಂಗ್ಲಾ ಎರಡನೇ ವಿಕೆಟ್ ಕಳೆದುಕೊಂಡಂತಾಯಿತು. ಆದರೆ ನಂತರ ಮೆಹದಿ ಹಸನ್‌ಗೆ ಜೊತೆಯಾದ ಶಂಟೋ ಬೃಹತ್ ಜೊತೆಯಾಟವನ್ನು ನೀಡಿದರು. ಬರೊಬ್ಬರಿ ಶತಕದ ಜೊತೆತೆಯಾಟ ನೀಡಿದ ಈ ಇಬ್ಬರು ಆಟಗಾರರು ನಿರ್ಣಾಯಕ ಪಂದ್ಯದಲ್ಲಿ ಬಾಂಗ್ಲಾ ತಂಡದ ಮೇಲುಗೈಗೆ ಕಾರಣವಾದರು.

Asia cup 2023 match 4: Bangladesh set huge Target: Afghanistan need 335 runs to win

ಮೆಹದಿ ಹಸನ್ ಮಿರಾಜ್ ಈ ಪಂದ್ಯದಲ್ಲಿ ಗಾಯಗೊಂಡು ನಿವೃತ್ತರಾಗುವ ಮುನ್ನ 119 ಎಸೆತಗಳನ್ನು ಎದುರಿಸಿ 112 ರನ್‌ಗಳನ್ನು ಗಳಿಸಿದರು. ಇನ್ನು ಶಂಟೋ 104 ರನ್‌ಗಳನ್ನು ಗಳಿಸಿ ವಿಕೆಟ್ ಕಳೆದುಕೊಂಡಿದ್ದಾರೆ. ನಂತರ ಕೊನೆಯಲ್ಲಿ ನಾಯಕ ಶಕೀಬ್ ಅಲ್ ಹಸನ್ ಕೂಡ ಸ್ಪೋಟಕ ಆಟವನ್ನು ಪ್ರದರ್ಶಿಸಿದರು. ಹೀಗಾಗಿ ಬಾಂಗ್ಲಾದೇಶ ಈ ಪಂದ್ಯದಲ್ಲಿ ಬೃಹತ್ ಮೊತ್ತವನ್ನು ಗಳಿಸಲು ಸಾಧ್ಯವಾಗಿದೆ.

ಇನ್ನು ಅಫ್ಘಾನಿಸ್ತಾನ ಪರವಾಗಿ ಬೌಲಿಂಗ್‌ನಲ್ಲಿ ಮಿಂಚಲು ಎಲ್ಲಾ ಬೌಲರ್‌ಗಳು ಕೂಡ ಇಂದು ವಿಫಲವಾಗಿದ್ದಾರೆ. ಆದರೆ ಅದ್ಭುತ ಫೀಲ್ಡಿಂಗ್‌ನ ಕಾರಣದಿಂದಾಗಿ ಬಾಂಗ್ಲಾದ ಮೂವರು ಬ್ಯಾಟರ್‌ಗಳನ್ನು ರನೌಟ್ ಮಾಡುವಲ್ಲಿ ಅಫ್ಘನ್ ಪಡೆ ಯಶಸ್ವಿಯಾಯಿತು. ಮುಜೀಬ್ ಹಾಗೂ ಗುಲ್ಬದೀನ್ ಮಾತ್ರ ತಲಾ ಒಂದೊಂದು ವಿಎಕಟ್ ಪಡೆದರು.

ಬಾಂಗ್ಲಾದೇಶ ಆಡುವ ಬಳಗ: ಮೊಹಮ್ಮದ್ ನೈಮ್, ನಜ್ಮುಲ್ ಹೊಸೈನ್ ಶಾಂಟೊ, ಶಕೀಬ್ ಅಲ್ ಹಸನ್ (ನಾಯಕ), ತೌಹಿದ್ ಹೃದಯೋಯ್, ಶಮೀಮ್ ಹೊಸೈನ್, ಮುಶ್ಫಿಕರ್ ರಹೀಮ್ (ವಿಕೆಟ್ ಕೀಪರ್), ಅಫೀಫ್ ಹೊಸೈನ್, ಮೆಹಿದಿ ಹಸನ್ ಮಿರಾಜ್, ತಸ್ಕಿನ್ ಅಹ್ಮದ್, ಶೋರಿಫುಲ್ ಇಸ್ಲಾಂ, ಹಸನ್ ಮಹಮೂದ್
ಬೆಂಚ್: ತಂಝಿಮ್ ಹಸನ್ ಸಾಕಿಬ್, ನಸುಮ್ ಅಹ್ಮದ್, ಅನಾಮುಲ್ ಹಕ್, ಮಹೇದಿ ಹಸನ್, ಮುಸ್ತಾಫಿಜುರ್ ರೆಹಮಾನ್, ತಂಝೀದ್ ಹಸನ್

ಅಫ್ಘಾನಿಸ್ತಾನ ಆಡುವಬಳಗ: ರಹಮಾನುಲ್ಲಾ ಗುರ್ಬಾಜ್ (ವಾಕ್), ಇಬ್ರಾಹಿಂ ಜದ್ರಾನ್, ರಹಮತ್ ಶಾ, ಹಶ್ಮತುಲ್ಲಾ ಶಾಹಿದಿ (ಸಿ), ನಜಿಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ, ಗುಲ್ಬದಿನ್ ನೈಬ್, ಕರೀಂ ಜನತ್, ರಶೀದ್ ಖಾನ್, ಫಜಲ್ಹಕ್ ಫಾರೂಕಿ, ಮುಜೀಬ್ ಉರ್ ರೆಹಮಾನ್
ಬೆಂಚ್: ರಿಯಾಜ್ ಹಸನ್, ಇಕ್ರಮ್ ಅಲಿಖಿಲ್, ಅಬ್ದುಲ್ ರೆಹಮಾನ್, ಶರಫುದ್ದೀನ್ ಅಶ್ರಫ್, ನೂರ್ ಅಹ್ಮದ್, ಸುಲಿಮಾನ್ ಸಫಿ

Story first published: Sunday, September 3, 2023, 19:59 [IST]
Other articles published on Sep 3, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+