ಏಷ್ಯಾ ಕಪ್ 2023: ಭಾರತ ವಿರುದ್ಧದ ಸೂಪರ್ 4 ಪಂದ್ಯಕ್ಕೆ ಬಲಿಷ್ಠ ಆಡುವ 11ರ ಬಳಗ ಪ್ರಕಟಿಸಿದ ಪಾಕಿಸ್ತಾನ
ಭಾನುವಾರ, ಸೆಪ್ಟೆಂಬರ್ 10ರಂದು ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯುವ 2023ರ ಏಷ್ಯಾ ಕಪ್ ಪಂದ್ಯಾವಳಿಯ ಸೂಪರ್ 4 ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮತ್ತೊಮ್ಮೆ ಮುಖಾಮುಖಿಯಾಗಲಿದ್ದು, ಎಲ್ಲರ ದೃಷ್ಟಿ ಇದೀಗ ಈ ಹೈ-ವೋಲ್ಟೇಜ್ ಪಂದ್ಯದತ್ತ ನೆಟ್ಟಿದೆ.
ಇದೇ ವೇಳೆ 2023ರ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಭಾರತ ವಿರುದ್ಧದ ಪಂದ್ಯಕ್ಕೂ ಒಂದು ದಿನ ಮುಂಚೆ ಪಾಕಿಸ್ತಾನ ತಂಡ ತನ್ನ ಆಡುವ 11ರ ಬಳಗವನ್ನು ಪ್ರಕಟಿಸಿದೆ. ಭಾರತ ವಿರುದ್ಧ ನಡೆದ ಗುಂಪು ಹಂತದ ಪಂದ್ಯವು ಮಳೆಯಿಂದ ರದ್ದುಗೊಂಡಿತ್ತು ಎಂಬುದು ಗಮನಾರ್ಹ.
ಇನ್ನು ಕೊಲಂಬೊದಲ್ಲಿ ಭಾರತ ಮತ್ತು ಪಾಕಿಸ್ತಾನ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದ್ದು. ಆದರೂ, ಎರಡೂ ತಂಡಗಳು ತಮ್ಮ ಹಳೆಯ ಪೈಪೋಟಿಯನ್ನು ಮುಂದುವರೆಸುಲು ಎದುರು ನೋಡುತ್ತಿವೆ. ಈ ಪಂದ್ಯಕ್ಕೆ ಮೀಸಲು ದಿನವನ್ನು ನಿಗದಿ ಮಾಡಲಾಗಿದೆ.

ಭಾರತ ತಂಡವು ತನ್ನ ಕೊನೆಯ ಐದು ಪೂರ್ಣಗೊಂಡ ಏಕದಿನ ಪಂದ್ಯಗಳಲ್ಲಿ ಮೂರು ಪಂದ್ಯಗಳಲ್ಲಿ ಗೆದ್ದಿದ್ದರೆ, ಪಾಕಿಸ್ತಾನ ತಂಡವು ಅತ್ಯುತ್ತಮ ದಾಖಲೆಯನ್ನು ಹೊಂದಿದ್ದು, ಕೊನೆಯದಾಗಿ ಆಡಿದ ಎಲ್ಲಾ ಐದು ಏಕದಿನ ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.
ಭಾರತ ವಿರುದ್ಧದ ಪಂದ್ಯಕ್ಕೆ ಕಳೆದ ಪಂದ್ಯದ ತಂಡವನ್ನೇ ಉಳಿಸಿಕೊಳ್ಳಲಾಗಿದ್ದು, ಪ್ರತಿಭಾವಂತ ಮತ್ತು ಅನುಭವಿಗಳ ಮಿಶ್ರಣವನ್ನು ಹೊಂದಿದೆ.
ಭಾರತ ವಿರುದ್ಧ ಪಂದ್ಯಕ್ಕೆ ಪಾಕಿಸ್ತಾನ ತಂಡದ ಆಡುವ 11ರ ಬಳಗ
ಫಖರ್ ಜಮಾನ್, ಇಮಾಮ್-ಉಲ್-ಹಕ್, ಬಾಬರ್ ಆಜಂ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಅಘಾ ಸಲ್ಮಾನ್, ಇಫ್ತಿಕರ್ ಅಹಮದ್, ಶಾದಾಬ್ ಖಾನ್, ಫಾಹೀಂ ಅಶ್ರಫ್, ಶಾಹೀನ್ ಅಫ್ರಿದಿ, ನಸೀಮ್ ಶಾ, ಹ್ಯಾರಿಸ್ ರೌಫ್.

ಇನ್ನು ನಾಲ್ಕು ತಿಂಗಳಿಂದ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ಹೊರಗುಳಿದಿದ್ದ ಕೆಎಲ್ ರಾಹುಲ್ ಭಾರತ ತಂಡದ ಆಡುವ 11ರ ಬಳಗಕ್ಕೆ ಪುನರಾಗಮನ ಮಾಡಲು ಸಜ್ಜಾಗಿದ್ದಾರೆ. ಕೆಎಲ್ ರಾಹುಲ್ ವಾಪಸ್ಸಾಗಿರುವುದು ಮತ್ತು ಇಶಾನ್ ಕಿಶನ್ ಅವರ ಇತ್ತೀಚಿನ ಅತ್ಯುತ್ತಮ ಪ್ರದರ್ಶನ ಭಾರತೀಯ ತಂಡದ ಮ್ಯಾನೇಜ್‌ಮೆಂಟ್‌ಗೆ ಆಯ್ಕೆಯ ತಲೆನೋವು ಹುಟ್ಟುಹಾಕಿದೆ.
ಭಾರತ ತಂಡ ಸೇರಿಕೊಂಡ ಜಸ್ಪ್ರೀತ್ ಬುಮ್ರಾ
ತಮ್ಮ ಮಗುವಿನ ಜನನಕ್ಕಾಗಿ ನೇಪಾಳ ವಿರುದ್ಧದ ಪಂದ್ಯವನ್ನು ಕಳೆದುಕೊಂಡಿದ್ದ ಜಸ್ಪ್ರೀತ್ ಬುಮ್ರಾ ಅವರು ಸೂಪರ್ 4 ಹಂತದಲ್ಲಿ ಪಾಕಿಸ್ತಾನ ವಿರುದ್ಧ ಆಡಲು ಭಾರತ ತಂಡಕ್ಕೆ ಮರಳಿರುವುದು ಭಾರತದ ಬೌಲಿಂಗ್ ವಿಭಾಗವನ್ನು ಬಲಪಡಿಸಿದೆ.
ಹೀಗಾಗಿ, ಕೆಎಲ್ ರಾಹುಲ್ ಮತ್ತು ಜಸ್ಪ್ರೀತ್ ಬುಮ್ರಾ ಅವರು ಆಡುವ 11ರ ಬಳಗದಲ್ಲಿ ಕಾಣಿಸಿಕೊಂಡರೆ, ಇಶಾನ್ ಕಿಶನ್ ಮತ್ತು ಮೊಹಮ್ಮದ್ ಶಮಿ ಬೆಂಚ್ ಕಾಯಿಸಬೇಕಾಗುತ್ತದೆ.
ಹವಾಮಾನ ವರದಿ
ಅಕ್ಯುವೆದರ್ ಪ್ರಕಾರ, ಕೊಲಂಬೊ ಹವಾಮಾನವು ಒಂದೆರಡು ಗುಡುಗು ಸಹಿತ ದಿನವಿಡೀ ಶೇ.96ರಷ್ಟು ಮೋಡದಿಂದ ಕವಿದಿರುತ್ತದೆ ಮತ್ತು ತೇವಾಂಶವು 84 ಪ್ರತಿಶತದಷ್ಟು ಇರುತ್ತದೆ.
ಭಾನುವಾರ ಮಧ್ಯಾಹ್ನದ ಸಮಯದಲ್ಲಿ ಗಾಳಿ ಬೀಸುವಿಕೆಯು ಗಂಟೆಗೆ 41 ಕಿಮೀ ವೇಗದಲ್ಲಿ ಮತ್ತು ನೈಋತ್ಯದಿಂದ ಗಂಟೆಗೆ 20 ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಸಂಜೆಯ ವೇಳೆಗೆ, ಮೋಡದ ಹೊದಿಕೆಯು ಶೇಕಡಾ 100ರಷ್ಟಿರಲಿದ್ದು, ಮಳೆಯ ಸಂಭಾವ್ಯತೆ ಶೇಕಡಾ 96ರಷ್ಟಿದೆ.
ಒಟ್ಟಿನಲ್ಲಿ ಹವಾಮಾನ ಮುನ್ಸೂಚನೆಗಳ ಪ್ರಕಾರ, ಭಾರತ ಮತ್ತು ಪಾಕಿಸ್ತಾನ ಪಂದ್ಯದ ದಿನದಂದು ವರುಣ ದೇವನ ಉಪಸ್ಥಿತಿ ಅನುಭವಿಸುವ ಕಾರಣ ಪಂದ್ಯಕ್ಕೆ ಅಡ್ಡಿಯಾಗುವ ಆತಂಕವಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications