Asia Cup 2023: ಹೈಬ್ರಿಡ್ ಮಾದರಿ ತಂತ್ರದಲ್ಲಿ ಗೆದ್ದ ಜಯ್ ಶಾಗೆ ಪದಕ ಸಿಗಬೇಕಿತ್ತು; ಪಾಕ್ ಮಾಜಿ ಕ್ರಿಕೆಟಿಗ
2023ರ ಏಷ್ಯಾ ಕಪ್ ಪಂದ್ಯಾವಳಿಗಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಪ್ರಸ್ತಾಪಿಸಿದ ಹೈಬ್ರಿಡ್ ಮಾದರಿಯನ್ನು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಮತ್ತು ಬಿಸಿಸಿಐ ಒಪ್ಪಿಕೊಂಡಿವೆ. ಈ 16ನೇ ಆವೃತ್ತಿಯಲ್ಲಿ ಪಾಕಿಸ್ತಾನ ನಾಲ್ಕು ಪಂದ್ಯಗಳಿಗೆ ಆತಿಥ್ಯ ವಹಿಸಲಿದ್ದರೆ, ಫೈನಲ್ ಸೇರಿದಂತೆ ಉಳಿದ ಒಂಬತ್ತು ಪಂದ್ಯಗಳಿಗೆ ಶ್ರೀಲಂಕಾ ಆತಿಥ್ಯ ವಹಿಸಲಿದೆ.
2023ರ ಏಷ್ಯಾ ಕಪ್ ಪಂದ್ಯಾವಳಿಯನ್ನು ಇದೇ ಆಗಸ್ಟ್ 31ರಿಂದ ಸೆಪ್ಟೆಂಬರ್ 17ರವರೆಗೆ ನಡೆಸಲು ನಿರ್ಧರಿಸಲಾಗಿದೆ. ಈ ನಿರ್ಧಾರವು ಮುಂಬರುವ ಚಾಂಪಿಯನ್ಸ್ ಟ್ರೋಫಿ 2025ರ ಸಂಭಾವ್ಯ ನೀಲನಕ್ಷೆಯಂತೆ ಕಾಣುತ್ತಿದ್ದು, ಇದನ್ನು ಪಾಕಿಸ್ತಾನವೇ ಆಯೋಜಿಸಲಿದೆ.

ಇದೀಗ ಪಾಕಿಸ್ತಾನ ತಂಡದ ಮಾಜಿ ಕ್ರಿಕೆಟಿಗ ರಶೀದ್ ಲತೀಫ್ ಅವರು ಹೈಬ್ರಿಡ್ ಮಾದರಿ ಏಷ್ಯಾ ಕಪ್ ಪಂದ್ಯಾವಳಿ ಸ್ವೀಕಾರಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮತ್ತು ಪಿಸಿಬಿಯನ್ನು ಗುರಿಯಾಗಿಸಿಕೊಂಡು ದೊಡ್ಡ ಹೇಳಿಕೆ ನೀಡಿದ್ದಾರೆ.
ರಶೀದ್ ಲತೀಫ್ ಪ್ರಕಾರ, ಜಯ್ ಶಾ ಮತ್ತು ಪಿಸಿಬಿ ಇಬ್ಬರೂ ಹೈಬ್ರಿಡ್ ಮಾದರಿಯನ್ನು ಸ್ವೀಕರಿಸಲು ವೈಯಕ್ತಿಕ ಉದ್ದೇಶಗಳನ್ನು ಹೊಂದಿದ್ದರು. ಸವಾಲಿನ ಸಂದರ್ಭಗಳಲ್ಲಿ ಪಂದ್ಯಾವಳಿಯನ್ನು ಆಯೋಜಿಸುವಲ್ಲಿ ಜಯ್ ಶಾ ಅವರ ಪ್ರಯತ್ನಗಳಿಗೆ ಮನ್ನಣೆ ನೀಡಲಾಗಿದೆ. ಇದೇ ವೇಳೆ ಪಾಕಿಸ್ತಾನವು ಎದುರಿಸುತ್ತಿರುವ ತೊಂದರೆಗಳ ಕಾರಣ ನೀಡಿ ತಮ್ಮ ಖ್ಯಾತಿಯನ್ನು ಉಳಿಸಿಕೊಂಡಿದ್ದಾರೆ ಎಂದರು.
ಏಷ್ಯಾ ಕಪ್‌ನಲ್ಲಿ ಶ್ರೀಲಂಕಾಕ್ಕೆ ಒಂಬತ್ತು ಪಂದ್ಯಗಳನ್ನು ಹಂಚಿಕೆ ಮಾಡುವುದರಿಂದ ರಾಜಕೀಯ ಮತ್ತು ಆರ್ಥಿಕ ಅರಾಜಕತೆಯಿಂದ ಬಳಲುತ್ತಿದ್ದ ಅವರ ಆರ್ಥಿಕತೆಗೆ ಹೆಚ್ಚು ಪ್ರಯೋಜನವಾಗಲಿದೆ ಎಂದು ರಶೀದ್ ಲತೀಫ್ ಒತ್ತಿ ಹೇಳಿದರು.

"ಇದೊಂದು ವಿಶಿಷ್ಟ ಸನ್ನಿವೇಶ, ಜಯ್ ಶಾ ಗೆಲ್ಲಲು ಬಯಸಿದ್ದರು, ಅವರ ಕೆಲಸಕ್ಕೆ ಮನ್ನಣೆ ಸಿಗಬೇಕಿತ್ತು. ಜಯ್ ಶಾ ಈ ತಂತ್ರಗಳಿಗೆ ಪದಕ ಬಯಸಿದ್ದರು. ಎಸಿಸಿ ಅಧ್ಯಕ್ಷರಾಗಿರುವ ಜಯ್ ಶಾ ಕೆಲವು ಟೂರ್ನಿಗಳನ್ನು ಆಯೋಜಿಸಿದ್ದಾರೆ. ಸದ್ಯ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಕೂಡ ನಿರ್ಣಾಯಕ ಪರಿಸ್ಥಿತಿಯಲ್ಲಿದೆ ಮತ್ತು ತಮ್ಮ ಮುಖವನ್ನು ಉಳಿಸಿಕೊಳ್ಳಲು ಒಂದು ಮಾರ್ಗದ ಅಗತ್ಯವಿತ್ತು," ಎಂದು ರಶೀದ್ ಲತೀಫ್ ತಿಳಿಸಿದರು.
ಒಂಬತ್ತು ಪಂದ್ಯಗಳನ್ನು ಆಯೋಜಿಸುವುದರಿಂದ ಶ್ರೀಲಂಕಾದ ಆರ್ಥಿಕತೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ. ಆರ್ಥಿಕ ಕುಸಿತದ ಅವಧಿಯ ನಂತರ ಗಮನಾರ್ಹ ಆದಾಯವನ್ನು ಗಳಿಸುತ್ತದೆ ಎಂದು ರಶೀದ್ ಲತೀಫ್ ಗಮನಸೆಳೆದರು.
"ಭಾರತ ಮತ್ತು ಪಾಕಿಸ್ತಾನ ಎರಡೂ ಇದರಲ್ಲಿ ಯಶಸ್ವಿಯಾಗಿದೆ. ಮೂರನೇ ಫಲಾನುಭವಿ ಶ್ರೀಲಂಕಾ ಕೂಡ. ಅಫ್ಘಾನಿಸ್ತಾನ, ನೇಪಾಳ ಮತ್ತು ಬಾಂಗ್ಲಾದೇಶ ತಂಡಗಳು ತಮ್ಮ ಭಾಗವಹಿಸುವ ಶುಲ್ಕವನ್ನು ಪಡೆಯುತ್ತವೆ. ಆದ್ದರಿಂದ ಇದು ಎಲ್ಲರಿಗೂ ಉತ್ತಮವಾಗಿದೆ. ಪಾಕಿಸ್ತಾನ, ಭಾರತ, ಬಾಂಗ್ಲಾದೇಶ ಮತ್ತು ಶ್ರೀಲಂಕಾ ಕೂಡ ಸಂತೋಷವಾಗಿವೆ," ಎಂದು ರಶೀದ್ ಲತೀಫ್ ಅಭಿಪ್ರಾಯಪಟ್ಟರು.
ಹೈಬ್ರಿಡ್ ಮಾದರಿಯ ಪ್ರಕಾರ, ಪಾಕಿಸ್ತಾನದಲ್ಲಿ ನಡೆಯಲಿರುವ ಪಂದ್ಯಗಳು ಹೀಗಿವೆ. ಪಾಕಿಸ್ತಾನ vs ನೇಪಾಳ, ಬಾಂಗ್ಲಾದೇಶ vs ಅಫ್ಘಾನಿಸ್ತಾನ, ಅಫ್ಘಾನಿಸ್ತಾನ vs ಶ್ರೀಲಂಕಾ ಮತ್ತು ಶ್ರೀಲಂಕಾ vs ಬಾಂಗ್ಲಾದೇಶ ಪಂದ್ಯಗಳು ನಡೆಯಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications