Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Asia cup: ಪಾಕಿಸ್ತಾನ ತಂಡಕ್ಕೆ ದೊಡ್ಡ ಆಘಾತ: ಏಷ್ಯಾಕಪ್‌ನಿಂದ ಹೊರಬಿದ್ದ ಸ್ಟಾರ್ ವೇಗಿ

ಏಷ್ಯಾಕಪ್ ಟೂರ್ನಿಯಲ್ಲಿ ಫೈನಲ್‌ಗೆ ಪ್ರವೇಶಿಸಲು ಹೋರಾಟ ನಡೆಸುತ್ತಿರುವ ಪಾಕಿಸ್ತಾನಕ್ಕೆ ಭಾರೀ ಹಿನ್ನಡೆಯಾಗಿದೆ. ತಂಡದ ಸ್ಟಾರ್ ವೇಗದ ಬೌರಲ್ ನಸೀಮ್ ಶಾ ಏಷ್ಯಾಕಪ್ ಟೂರ್ನಿಯಿಮದ ಸಂಪೂರ್ಣವಾಗಿ ಹೊರಬಿದ್ದಿದ್ದಾರೆ. ಭಾರತದ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡಿದ್ದ ನಸೀಮ್ ಶಾ ಬ್ಯಾಟಿಂಗ್‌ಗೆ ಇಳಿದಿರಲಿಲ್ಲ. ಇದೀಗ ಉಳಿದ ಪಂದ್ಯಕ್ಕೆ ನಸೀಮ್ ಶಾ ಅಲಭ್ಯವಾಗುವುದು ಅಧಿಕೃತವಾಗಿದೆ.

ಪಾಕಿಸ್ತಾನ ತಂಡ ಗುರುವಾರದಂದು ನಿರ್ಣಾಯಕ ಪಂದ್ಯವನ್ನಾಡಲಿದ್ದು ಶ್ರೀಲಂಕಾ ವಿರುದ್ಧ ಸೆಣೆಸಾಡಲಿದೆ. ಈ ಪಂದ್ಯದಲ್ಲಿ ಪಾಕಿಸ್ತಾನ ತಂಡ ಗೆದ್ದರೆ ಮಾತ್ರವೇ ಫೈನಲ್‌ಗೆ ಪ್ರವೇಶಿಸುವುದು ಸಾಧ್ಯ. ಇಂಥಾ ಸಂದರ್ಭದಲ್ಲಿ ಪ್ರಮುಖ ವೇಗದ ಬೌಲರ್‌ನ ಅಲಭ್ಯತೆ ಪಾಕ್ ಪಡೆಗೆ ದೊಡ್ಡ ಮಟ್ಟದಲ್ಲಿ ಕಾಡುವುದರಲ್ಲಿ ಅನುಮಾನವಿಲ್ಲ. ನಸೀಮ್ ಶಾ ಬದಲಿಗೆ ಮೀಸಲು ಆಟಗಾರನಾಗಿ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದ ಜಮನ್ ಖಾನ್‌ಗೆ ಅಂತಿಮ 17ರ ಬಳಗದಲ್ಲಿ ಅವಕಾಶ ದೊರೆತಿದೆ.

Asia cup 2023: Pakistan star pacer Naseem Shah ruled out of remaining matches of the tournament

ಬಲಗೈ ವೇಗದ ಬೌಲರ್ ಜಮನ್ ಖಾನ್ ನಸೀಮ್ ಶಾ ಬದಲಿಗೆ ಈಗಾಗಲೇ ತಂಡವನ್ನು ಸೇರಿಕೊಂಡಿದ್ದಾರೆ. ಬುಧವಾರ ಮುಂಜಾನೆ ಪಾಕ್ ತಂಡವನ್ನು ಸೇರಿಕೊಂಡ ಅವರು ಸಂಜೆಯಿಂದಲೇ ತಂಡದ ಜೊತೆಗೆ ಅಭ್ಯಾಸ ನಡೆಸಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಭಾರತ ವಿರುದ್ಧದ ಸೂಪರ್ 4 ಹಂತದ ಪಂದ್ಯದಲ್ಲಿ ಬೌಲಿಂಗ್ ವೇಳೆ ನಸೀಮ್ ಶಾ ಬಲ ಭುಜದ ನೋವಿಗೆ ತುತ್ತಾಗಿದ್ದರು. ಭಾರತದ ಬ್ಯಾಟಿಂಗ್‌ನ 49ನೇ ಓವರ್‌ಲ್ಲಿ ಮೈದಾನ ತೊರೆದ ನಸೀಮ್ ಶಾ ಬಳೀಕ ಆಡುವ ಬ್ಯಾಟಿಂಗ್‌ಗೆ ಕೂಡ ಇಳಿದಿರಲಿಲ್ಲ. ಹೀಗಾಗಿ ಉಳಿದ ಪಂದ್ಯಗಳಿಗೆ ಶಾ ಲಭ್ಯವಾಗುವುದು ಅನುಮಾನ ಎನ್ನಲಾಗಿತ್ತು. ಇದೀಗ ಅದು ಅಧಿಕೃತವಾಗಿದೆ. ಪಾಕಿಸ್ತಾನ ತಂಡದ ವೈದ್ಯಕೀಯ ಸಿಬ್ಬಂದಿಗಳು ನಿರಂತರವಾಗಿ ವೇಗಿಯ ಮೇಲೆ ನಿಗಾವಹಿಸಿದ್ದು ಸಾಧ್ಯವಾದಷ್ಟು ಶೀಗ್ರ ಚೇತರಿಕೆಗೆ ಮೇಲೆ ಗಮನಹರಿಸಲಾಗಿದೆ.

Story first published: Wednesday, September 13, 2023, 18:31 [IST]
Other articles published on Sep 13, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+