Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Asia Cup 2023: ಭಾರತದ ವಿರುದ್ಧದ ಸೂಪರ್ 4 ಪಂದ್ಯಕ್ಕೆ ಮುನ್ನ ಪಾಕ್‌ನ ಮಾರಕ ವೇಗಿಗೆ ಗಾಯ

ಏಷ್ಯಾ ಕಪ್ 2023 ರ ಪಾಕಿಸ್ತಾನ - ಬಾಂಗ್ಲಾದೇಶ ನಡುವಿನ ಸೂಪರ್ 4 ಘರ್ಷಣೆಯ ಸಂದರ್ಭದಲ್ಲಿ ವೇಗಿ ನಸೀಮ್ ಶಾ ಅವರು ಫೀಲ್ಡಿಂಗ್ ಮಾಡುವಾಗ ಗಾಯಗೊಂಡಿದ್ದು ಆತಂಕಕ್ಕೆ ಕಾರಣವಾಗಿದೆ.

ನಸೀಂ ಶಾ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಮೊದಲ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಉತ್ತಮ ಲಯದಲ್ಲಿ ಕಾಣುತ್ತಿದ್ದ ಅವರು, ಆದಾಗ್ಯೂ, ಥರ್ಡ್ ಮ್ಯಾನ್ ಪ್ರದೇಶದಲ್ಲಿ ಬೌಂಡರಿ ನಿಲ್ಲಿಸಲು ಪ್ರಯತ್ನಿಸುವಾಗ ಗಾಯಗೊಂಡರು. ಅವರು ನೋವಿನಿಂದ ಬಳಲುತ್ತಿದ್ದ ಕಾರಣ ಅವರನ್ನು ಮೈದಾನದಿಂದ ಹೊರಗೆ ಕರೆದೊಯ್ಯಲಾಯಿತು.

 Asia Cup 2023: Pakistans Naseem Shah Injured Ahead of IND vs PAK Clash

ಶಾಹೀನ್ ಅಫ್ರಿದಿ ಜೊತೆ ಆರಂಭಿಕ ಓವರ್ ಗಳಲ್ಲಿ ಬೌಲಿಂಗ್ ಮಾಡುವಾಗ ನಸೀಂ ಶಾ ಮಾರಕವಾಗುತ್ತಾರೆ. ಕೆಲ ಸಮಯ ಮೈದಾನದಿಂದ ಹೊರಗಿದ್ದ ನಸೀಂ ಶಾ ನಂತರ ಫೀಲ್ಡಿಂಗ್ ಮಾಡಲು ವಾಪಸಾಗಿದ್ದು ಅಭಿಮಾನಿಗಳು ನಿಟ್ಟುಸಿರು ಬಿಡುವಂತೆ ಮಾಡಿತು. ಆ ವೇಳೆಗೆ ನಸೀಂ ಶಾ ಕೇವಲ 4 ಓವರ್ ಗಳನ್ನು ಮಾತ್ರ ಬೌಲಿಂಗ್ ಮಾಡಿದ್ದರು.

ಭಾರತದ ವಿರುದ್ಧ ಮುಂದಿನ ಪಂದ್ಯ

ಸೂಪರ್ 4 ಹಂತದ ಮೊದಲನೇ ಪಂದ್ಯದಲ್ಲಿ ಪಾಕಿಸ್ತಾನ ಬಾಂಗ್ಲಾದೇಶವನ್ನು ಎದುರಿಸುತ್ತಿದ್ದರೆ, ಮುಂದಿನ ಪಂದ್ಯದಲ್ಲಿ ಭಾರತ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ನಸೀಂ ಶಾ ಆಡುವುದು ಪಾಕಿಸ್ತಾನ ತಂಡಕ್ಕೆ ಬಹಳ ಮುಖ್ಯವಾದ ಕಾರಣ ಪಾಕಿಸ್ತಾನ ತಂಡದಲ್ಲಿ ಕೆಲ ಕಾಲ ಆತಂಕ ಮನೆ ಮಾಡಿತ್ತು.

ಅಲ್ಲದೆ, ಅಕ್ಟೋಬರ್ 5ರಿಂದ ಭಾರತದಲ್ಲಿ ಏಕದಿನ ವಿಶ್ವಕಪ್ ನಡೆಯುವ ಕಾರಣ ಆಟಗಾರರ ಫಿಟ್‌ನೆಸ್ ತಂಡಕ್ಕೆ ಮುಖ್ಯವಾಗಿದೆ. ಮಳೆಯಿಂದ ರದ್ದಾಗಿದ್ದ ಭಾರತ ವಿರುದ್ಧದ ಏಷ್ಯಾಕಪ್‌ ಪಂದ್ಯದಲ್ಲಿ ನಸೀಂ ಶಾ 3 ವಿಕೆಟ್ ಪಡೆದು ಮಿಂಚಿದ್ದರು.

ಮತ್ತೆ ಬೌಲಿಂಗ್ ಮಾಡಿದ ವೇಗಿ

ಕೆಲ ಸಮಯ ಮೈದಾನದಿಂದ ಹೊರಗಿದ್ದ ಬಳಿಕ ಮರಳಿದ ನಸೀಂ ಶಾ ಮತ್ತೆ ಬೌಲಿಂಗ್ ಮಾಡಿದ್ದಲ್ಲದೆ ಒಂದೇ ಓವರ್ ನಲ್ಲಿ ಎರಡು ವಿಕೆಟ್ ಪಡೆದು ಮಿಂಚಿದರು. ಪಾಕಿಸ್ತಾನದ ಮಾರಕ ಬೌಲಿಂಗ್ ದಾಳಿಗೆ ಸಿಕ್ಕ ಬಾಂಗ್ಲಾದೇಶ 38.4 ಓವರ್ ಗಳಲ್ಲಿ 193 ರನ್ ಗಳಿಗೆ ಆಲೌಟ್ ಆಗಿದೆ.

ನಸೀಂ ಶಾ 5.4 ಓವರ್ ಗಳಲ್ಲಿ 34 ರನ್ ನೀಡಿ 3 ವಿಕೆಟ್ ಪಡೆದರೆ, ಹ್ಯಾರಿಸ್ ರೌಫ್ 4 ವಿಕೆಟ್ ಪಡದರು. ಶಾಹೀನ್ ಅಫ್ರಿದಿ, ಫಹೀಮ್ ಅಶ್ರಫ್, ಇಫ್ತಿಕರ್ ಅಹ್ಮದ್ ತಲಾ ಒಂದು ವಿಕೆಟ್ ಪಡೆದರು.

ಉಭಯ ತಂಡಗಳ ಆಡುವ ಬಳಗ

ಪಾಕಿಸ್ತಾನ : ಫಖರ್ ಜಮಾನ್, ಇಮಾಮ್-ಉಲ್-ಹಕ್, ಬಾಬರ್ ಅಜಮ್(ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಅಘಾ ಸಲ್ಮಾನ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಫಹೀಮ್ ಅಶ್ರಫ್, ಶಾಹೀನ್ ಅಫ್ರಿದಿ, ನಸೀಮ್ ಶಾ, ಹ್ಯಾರಿಸ್ ರೌಫ್.

ಬಾಂಗ್ಲಾದೇಶ : ಮೊಹಮ್ಮದ್ ನಯಿಮ್, ಮೆಹಿದಿ ಹಸನ್ ಮಿರಾಜ್, ಲಿಟ್ಟನ್ ದಾಸ್, ತೌಹಿದ್ ಹೃದಯೋಯ್, ಶಕೀಬ್ ಅಲ್ ಹಸನ್ (ನಾಯಕ), ಮುಶ್ಫಿಕರ್ ರಹೀಮ್ (ವಿಕೆಟ್ ಕೀಪರ್), ಶಮೀಮ್ ಹೊಸೈನ್, ಅಫೀಫ್ ಹೊಸೈನ್, ತಸ್ಕಿನ್ ಅಹ್ಮದ್, ಶೋರಿಫುಲ್ ಇಸ್ಲಾಂ, ಹಸನ್ ಮಹಮೂದ್.

Story first published: Wednesday, September 6, 2023, 18:37 [IST]
Other articles published on Sep 6, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+