Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಏಷ್ಯಾ ಕಪ್: ACC ಮುಖ್ಯಸ್ಥ ಜಯ್ ಶಾಗೆ ಧನ್ಯವಾದ ತಿಳಿಸಿದ ಪಿಸಿಬಿ ಮುಖ್ಯಸ್ಥ: ಇಲ್ಲಿದೆ ಕಾರಣ

ಕಡೆಗೂ ಏಷ್ಯಾ ಕಪ್ ಆಯೋಜನೆ ಬಗ್ಗೆ ಇದ್ದ ಗೊಂದಲ ಬಗೆಹರಿದಿದ್ದು ಪಾಕಿಸ್ತಾನ ಹಾಗೂ ಶ್ರೀಲಂಕಾದಲ್ಲಿ ಟೂರ್ನಿ ಆಯೋಜನೆಯಾಗುವುದು ಖಚಿತವಾಗಿದೆ. ಈ ಬಗ್ಗೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್(ಎಸಿಸಿ) ಅಧಿಕೃತವಾಗಿ ಮಾಹಿತಿ ನೀಡಿದ್ದು ಟೂರ್ನಿ ಆಯೋಜನೆಯಾಗುವ ತಾಣಗಳ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಿದೆ. ಆಗಸ್ಟ್ 31ರಿಂದ ಸೆಪ್ಟೆಂಬರ್ 17ರವರೆಗೆ ಈ ಟೂರ್ನಿ ನಡೆಯಲಿದ್ದು ಪಾಕಿಸ್ತಾನದಲ್ಲಿ 4 ಹಾಗೂ ಶ್ರೀಲಂಕಾದಲ್ಲಿ 9 ಪಂದ್ಯಗಳು ಆಯೋಜನೆಯಾಗಲಿದೆ.

ಎಸಿಬಿ ಈ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸಿದ ಬಳಿಕ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ನಜಂ ಸೇಥಿ ಪ್ರತಿಕ್ರಿಯೆ ನೀಡಿದ್ದಾರೆ. ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಲಿರುವ ಈ ಟೂರ್ನಿಗಾಗಿ ಭಾರತ ಪಾಕಿಸ್ಥಾನಕ್ಕೆ ಪ್ರವಾಸ ಕೂಗೊಳ್ಳಲು ನಿರಾಕರಿಸಿರುವ ಹಿನ್ನೆಲೆಯಲ್ಲಿ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿಯನ್ನು ಆಯೋಜನೆ ಮಾಡುವಂತೆ ಪಿಸಿಬಿ ಮುಖ್ಯಸ್ಥ ಮನವಿ ಮಾಡಿದ್ದರು. ಇದೀಗ ಈ ಮನವಿಗೆ ಒಪ್ಪಿಕೊಂಡಿರುವ ಎಸಿಸಿ ಪಾಕಿಸ್ಥಾನದ ಲೀಗ್ ಹಂತದ ಪಂದ್ಯಗಳನ್ನು ತನ್ನ ನೆಲದಲ್ಲಿಯೇ ಆಡಲು ಅವಕಾಶ ನೀಡಿದೆ. ಹೀಗಾಗಿ ನಾಲ್ಕು ಪಂದ್ಯಗಳು ಪಾಕಿಸ್ಥಾನದಲ್ಲಿ ಆಯೋಜನೆಯಾಗಲಿದೆ.

Asia Cup 2023: PCB chief Najam Sethi thanked ACC president Jay shah after hybrid model accepted

ತಮ್ಮ ಬೇಡಿಕೆಯಂತೆ ಹೈಬ್ರಿಡಗ್ ಮಾದರಿಯಲ್ಲಿ ಏಷ್ಯಾ ಕಪ್‌ನ ವೇಳಾಪಟ್ಟಿಯನ್ನು ಸಿದ್ಧಪಡಿಸಲು ಅವಕಾಶ ನೀಡಿರುವುದಕ್ಕೆ ಎಸಿಸಿ ಅಧ್ಯಕ್ಷ ಜಯ್‌ಶಾಗೆ ಧನ್ಯವಾದ ಎಂದಿದ್ದಾರೆ. ಅಲ್ಲದೆ ದೇಶದ ಗಡಿಯಾಚೆ ತೆರಳಲು ಸರ್ಕಾರದ ಅನುಮತಿ ಬೇಕಿರುವ ಕಾರಣ ಬಿಸಿಸಿಐನ ಪರಿಸ್ಥಿತಿಯನ್ನು ನಾವು ಅರ್ಥ ಮಾಡಿಕೊಳ್ಳುತ್ತೇವೆ ಎಂದಿದ್ದಾರೆ ನಜಂ ಸೇಥಿ.

"ಹೈಬ್ರಿಡ್ ಮಾದರಿಯಲ್ಲಿ ಏಷ್ಯಾ ಕಪ್ ಟೂರ್ನಿಯನ್ನು ಆಯೋಜನೆ ಮಾಡಲು ಮಾಡಿರುವ ಮನವಿಯನ್ನು ಸ್ವೀಕರಿಸಿರುವುದಕ್ಕೆ ನಾನು ಸಂತಸವ್ಯಕ್ತಪಡಿಸುತ್ತೇನೆ. ಇದರರ್ಥ ಪಿಸಿಬಿ ಕಿಸ್ತಾನದಲ್ಲಿಮತ್ತಯ ಶ್ರೀಲಂಕಾ ತಟಸ್ಥ ಸ್ಥಳವನ್ನಾಗಿಸಿ ಟೂರ್ನಿಯನ್ನು ಆಯೋಜಿಸುತ್ತದೆ. ಭಾರತೀಯ ಕ್ರಿಕೆಟ್ ತಂಡವು ಪಾಕಿಸ್ತಾನಕ್ಕೆ ಪ್ರಯಾಣಿಸಲು ಅಸಾಧ್ಯವಾಗಿರುವ ಕಾರಣ ಇದು ಅನಿವಾರ್ಯವಾಗಿತ್ತು" ಎಂದಿದ್ದಾರೆ ನಜಂ ಸೇಥಿ.

"ನಮ್ಮ ಉತ್ಸಾಹಿ ಕ್ರಿಕೆಟ್ ಅಭಿಮಾನಿಗಳು 15 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತ ತಂಡ ಪಾಕಿಸ್ತಾನದಲ್ಲಿ ಆಡುವುದನ್ನು ನೋಡಲು ಕಾತರಿಸಿದ್ದರು. ಆದರೆ ನಾವು ಬಿಸಿಸಿಐಯನ್ನು ಅರ್ಥಮಾಡಿಕೊಳ್ಳುತ್ತೇವೆ. ಪಿಸಿಬಿ ರೀತಿಯಲ್ಲಿಯೇ ಬಿಸಿಸಿಐ ಕೂಡ ಗಡಿ ದಾಟುವ ಮೊದಲು ಸರ್ಕಾರದ ಅನುಮೋದನೆ ಅಗತ್ಯವಿದೆ" ಎಂದು ಅವರು ಹೇಳಿಕೆ ನೀಡಿದ್ದಾರೆ.

2008ರ ನಂತರ ಪಾಕಿಸ್ತಾನದಲ್ಲಿ ಇದೇ ಮೊದಲ ಬಾರಿಗೆ ಬಹುರಾಷ್ಟ್ರಗಳ ಕ್ರಿಕೆಟ್ ಪಂದ್ಯಾವಳಿಯ ನಡೆಯುತ್ತಿದೆ. ಹದಿನೈದು ವರ್ಷಗಳ ಹಿಂದೆ ಪಾಕಿಸ್ತಾನವು ಆರು ತಂಡಗಳ ಎಸಿಸಿ ಏಷ್ಯಾ ಕಪ್ 50-ಓವರ್ ಪಂದ್ಯಾವಳಿಯನ್ನು ಯಶಸ್ವಿಯಾಗಿ ಆಯೋಜನೆ ಮಾಡಿತ್ತು. ಈ ಬಾರಿ ಪೂರ್ಣಪ್ರಮಾಣದಲ್ಲಿ ಅಲ್ಲದಿದ್ದರೂ ನಾಲ್ಕು ಪಂದ್ಯಗಳನ್ನು ತನ್ನ ನೆಲದಲ್ಲಿ ಆಯೋಜನೆ ಮಾಡುವಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಯಶಸ್ವಿಯಾಗಿದೆ.

Story first published: Thursday, June 15, 2023, 20:50 [IST]
Other articles published on Jun 15, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+