Asia Cup 2023 Schedule: 2023ರ ಏಷ್ಯಾ ಕಪ್ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ
ಬುಧವಾರ, ಜುಲೈ 19ರಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಬಹು ನಿರೀಕ್ಷಿತ 2023ರ ಏಷ್ಯಾ ಕಪ್ ಪಂದ್ಯಾವಳಿಯ ಅಂತಿಮ ಹಾಗೂ ಸಂಪೂರ್ಣ ವೇಳಾಪಟ್ಟಿಯನ್ನು ಪ್ರಕಟಿಸಿತು.
ಈ ಬಾರಿಯ ಏಷ್ಯಾ ಕಪ್ ಪಂದ್ಯಾವಳಿಯು ಹೈಬ್ರಿಡ್ ಮಾದರಿಯಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ಆಯೋಜನೆಯಾಗಲಿದೆ. ಆಗಸ್ಟ್ 30ರಂದು ಪಾಕಿಸ್ತಾನ ಮುಲ್ತಾನ್‌ನಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದ್ದರೆ, ಫೈನಲ್ ಪಂದ್ಯ ಸೆಪ್ಟಂಬರ್ 17ರಂದು ಶ್ರೀಲಂಕಾದ ಕೊಲಂಬೊದಲ್ಲಿ ನಡೆಯಲಿದೆ.
ಎಸಿಸಿ ಪ್ರಕಟಿಸಿದ 2023ರ ಏಷ್ಯಾ ಕಪ್ ವೇಳಾಪಟ್ಟಿಯ ಪ್ರಕಾರ, ಪಾಕಿಸ್ತಾನ ಮತ್ತು ನೇಪಾಳ ತಂಡಗಳು ಪಾಕಿಸ್ತಾನದ ಮುಲ್ತಾನ್‌ನಲ್ಲಿ ಬುಧವಾರ, ಆಗಸ್ಟ್ 30ರಂದು ಮೊದಲ ಪಂದ್ಯದಲ್ಲಿ ಸೆಣಸಾಡಲಿದೆ.

ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ತನ್ನ 2023ರ ಏಷ್ಯಾ ಕಪ್ ಅಭಿಯಾನದ ಮೊದಲ ಪಂದ್ಯವನ್ನು ಶನಿವಾರ, ಸೆಪ್ಟೆಂಬರ್ 2ರಂದು ಶ್ರೀಲಂಕಾದ ಕ್ಯಾಂಡಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡದ ವಿರುದ್ಧ ಆಡಲಿದೆ.
ಸೋಮವಾರ, ಸೆಪ್ಟೆಂಬರ್ 4ರಂದು ಶ್ರೀಲಂಕಾದ ಕ್ಯಾಂಡಿಯಲ್ಲಿ ಭಾರತ ತಂಡವು ನೇಪಾಳ ತಂಡದ ವಿರುದ್ಧ ತಮ್ಮ ಅಂತಿಮ ಗುಂಪು ಹಂತದ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ.
2023ರ ಏಷ್ಯಾ ಕಪ್ ವೇಳಾಪಟ್ಟಿ (ಗುಂಪು ಹಂತ)
ಆಗಸ್ಟ್ 30: ಪಾಕಿಸ್ತಾನ vs ನೇಪಾಳ - ಮುಲ್ತಾನ್
ಆಗಸ್ಟ್ 31: ಶ್ರೀಲಂಕಾ vs ಬಾಂಗ್ಲಾದೇಶ - ಕ್ಯಾಂಡಿ
ಸೆಪ್ಟೆಂಬರ್ 2: ಭಾರತ vs ಪಾಕಿಸ್ತಾನ - ಕ್ಯಾಂಡಿ
ಸೆಪ್ಟೆಂಬರ್ 3: ಬಾಂಗ್ಲಾದೇಶ vs ಅಫ್ಘಾನಿಸ್ತಾನ - ಲಾಹೋರ್
ಸೆಪ್ಟೆಂಬರ್ 4: ಭಾರತ vs ನೇಪಾಳ - ಕ್ಯಾಂಡಿ
ಸೆಪ್ಟೆಂಬರ್ 5: ಶ್ರೀಲಂಕಾ vs ಅಫ್ಘಾನಿಸ್ತಾನ - ಲಾಹೋರ್
2023ರ ಏಷ್ಯಾ ಕಪ್ ವೇಳಾಪಟ್ಟಿ (ಸೂಪರ್4 ಹಂತ)
ಸೆಪ್ಟೆಂಬರ್ 6: A1 vs B2 - ಲಾಹೋರ್
ಸೆಪ್ಟೆಂಬರ್ 9: B1 vs B2 - ಕೊಲಂಬೊ
ಸೆಪ್ಟೆಂಬರ್ 10: A1 vs A2 - ಕೊಲಂಬೊ
ಸೆಪ್ಟೆಂಬರ್ 12: A2 vs B1 - ಕೊಲಂಬೊ
ಸೆಪ್ಟೆಂಬರ್ 14: A1 vs B1 - ಕೊಲಂಬೊ
ಸೆಪ್ಟೆಂಬರ್ 15: A2 vs B2 - ಕೊಲಂಬೊ
2023ರ ಏಷ್ಯಾ ಕಪ್ (ಫೈನಲ್)
ಸೆಪ್ಟೆಂಬರ್ 17: ಸೂಪರ್4 1 vs 2 - ಕೊಲಂಬೊ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications